ಗದಗ: ಕೆಂಪು ಮೆಣಸಿನಕಾಯಿಗೆ ಈಗ ಮತ್ತೆ ಭಾರಿ ಬೆಲೆ ಬಂದಿದೆ. ಅತಿಯಾದ ಮಳೆಗೆ ಕೆಂಪು ಮೆಣಸಿನಕಾಯಿ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಆದ್ರೆ ಕೆಂಪು ಸುಂದರಿಯನ್ನು ಜೋಪಾನ ಮಾಡಿ ಬೆಳೆದ ಅನ್ನದಾತರ ಬದುಕು (Farmer's Life) ಬಂಗಾರವಾಗಿದೆ. ಹೌದು, ಗದಗ ಎಪಿಎಂಸಿಯಲ್ಲಿ (Gadag APMC) ರೈತರ ಮಹಿಳೆ ಬೆಳೆದ ಮೆಣಸಿನಕಾಯಿ (Chilli Price In Gadag) ಹಿಂದಿನ ದಾಖಲೆ ಉಡೀಸ್ ಮಾಡಿ, ದಾಖಲೆ ಬೆಲೆಗೆ ಮಾರಾಟವಾಗಿದೆ.
ಸಂಕ್ರಾಂತಿ ಸುಗ್ಗಿ ಹಬ್ಬದ ಹೊಸ್ತಿಲಲ್ಲಿ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ದಂಪತಿ ಬೆಳೆದ ಕೆಂಪು ಮೆಣಸಿನಕಾಯಿಗೆ ‘ಸಂಕ್ರಾಂತಿ ಬಂಪರ್ ಗಿಫ್ಟ್’ ಸಿಕ್ಕಂತಾಗಿದೆ.
ಕ್ವಿಂಟಲ್ಗೆ 72,999 ಸಾವಿರ
ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಮೀರಿಸುವ ಬೆಲೆ ಸಿಕ್ಕಿದೆ. ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಬರೋಬ್ಬರಿ 72,999 ಸಾವಿರ ರೇಟ್ ಸಿಕ್ಕಿದೆ. ಹೀಗಾಗಿ ರೈತ ದಂಪತಿ ಫುಲ್ ಖುಷಿಯಾಗಿದ್ದಾರೆ.
ಎಲ್ಲಾ ದಾಖಲೆ ಮುರಿದ ದಂಪತಿ
ಕಳೆದ ತಿಂಗಳ ಗದಗ ತಾಲೂಕಿನಲ್ಲಿ ಕೋಟುಮಚಗಿ ಗ್ರಾಮದ ರೈತ ಶರಣಪ್ಪ ಜಗ್ಗಲ್ ಬೆಳೆದಿದ್ದ ಮೆಣಸಿನಕಾಯಿಗೆ 70,199 ರೂಪಾಯಿ ಸಿಕ್ಕಿತ್ತು. ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿ ಕೋಟುಮಚಗಿ ರೈತ ಫುಲ್ ಖುಷಿಯಾಗಿದ್ರು. ಆದ್ರೆ ಈಗ ಕೊಪ್ಪಳ ಜಿಲ್ಲೆಯ ದಂಪತಿಗಳು ಬೆಳೆದ ಕೆಂಪು ಸುಂದರಿ ಗದಗನ ಎಪಿಎಂಸಿ ಮಾರುಕಟ್ಟೆಯ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಮಾರಾಟವಾಗಿದ್ದು, ಈ ಹಿಂದಿನ ಬೆಲೆ ಉಡೀಸ್ ಮಾಡಿ ಈಗ 72,999 ರೂಪಾಯಿಗೆ ಕ್ವಿಂಟಾಲ್ಗೆ ಮಾರಾಟವಾಗಿದೆ.
ಇದನ್ನೂ ಓದಿ: Emotional Story: 8 ರೂಪಾಯಿ 36 ಪೈಸೆಗೆ 205 ಕೆಜಿ ಈರುಳ್ಳಿ ಮಾರಾಟ ಮಾಡಿದ ಗದಗದ ರೈತ!
ಗದಗನ ಎಪಿಎಂಸಿ ಮಾರುಕಟ್ಟೆಯ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಹರಾಜಿನಲ್ಲಿ ಭರ್ಜರಿ ಬೆಲೆ ಸಿಕ್ಕಿದೆ. ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ದೈಹಿಕ ಶಿಕ್ಷಕಿ. ಪತಿ ರೈತ ಉಮೇಶ ನಾಗರಡ್ಡಿ ಬಿಎ, ಟಿಸಿಎಚ್ ಪದವೀಧರ. ಈ ದಂಪತಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದಾರೆ. ಕಡಿಮೆ ಗೌರವಧನದಿಂದ ಸಂಸಾರ ಬಂಡಿ ಸಾಗಲ್ಲ ಅಂತ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಇವರಿಬ್ಬರೂ. ಸಾವಯವ ಗೊಬ್ಬರವನ್ನೇ ಹೆಚ್ಚಾಗಿ ಬಳಕೆ ಮಾಡಿ, ಉತ್ತಮ ಮೆಣಸಿನಕಾಯಿ ಬೆಳೆದಿದ್ದೇವೆ ಅಂತಾರೆ ರೈತ ದಂಪತಿ.
ಇದನ್ನೂ ಓದಿ: Gadag: ಲಾರಿ ಚಾಲಕರಿಂದ ಕನ್ನಡ ಶಾಲೆ ಅಭಿವೃದ್ಧಿ! ಗದಗ 'ರಾಜರತ್ನ ವೇದಿಕೆ'ಯಿಂದ ಮಾದರಿ ಕಾರ್ಯ
ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಅಭಿನಂದಿಸಿದ್ದಾರೆ.
ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ