ಗದಗ: ಮದುವೆ ಮನೆಯಲ್ಲಿ ಅಲಂಕೃತಗೊಂಡಗೊಂಡ ಮದುಮಕ್ಕಳು, ನೆಂಟರು, ಬಂಧುಗಳ ಜೊತೆ ಲಕಲಲಕ ಮಿಂಚುತ್ತಿರುವ ಹೋರಿ. ಅರೇ! ಮದುವೆ (Marriage) ಮನೆಗೆ ಈ ಎತ್ತು ಹೊಸ ಬಟ್ಟೆ (New Dress) ತೊಟ್ಟು ಬಂದಿದ್ದಾದ್ರೂ ಏಕೆ ಅಂದ್ಕೊಂಡ್ರಾ? ಅಲ್ಲೇ ಇದೆ ಮ್ಯಾಟರ್!
ಹಾವೇರಿ ಕಿಲಾರಿ ಹೋರಿಗೆ ಮನಸೋತ ಗದಗಿನ ಮದುಮಗನೋರ್ವ ತನ್ನ ಮದುವೆಗೆ ವಿಶೇಷ ಅತಿಥಿಯಾಗಿ ಹೋರಿಯನ್ನೇ ಕರೆಸಿದ್ದಾರೆ. ಈ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಅಂತರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿ ಹುಲಿಗಿನಕೊಪ್ಪದ ನಾಯಕ ಎಂದೇ ಫೇಮಸ್ ಆಗಿದೆ.
ಹೀರೋ ಇದ್ದಂಗೆ ಈ ಹೋರಿ
ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಬಹುಮಾನ ಪಡೆದಿದ್ದು ಹತ್ತಾರು ವರ್ಷಗಳಿಂದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ರಾಜನಾಗಿ ಮೆರೆದಿದೆ. ಪರ್ವತಗೌಡ ಕುಟುಂಬ ಈ ಹೋರಿಯ ಅಭಿಮಾನಿಯಾಗಿತ್ತು. ಹೀಗಾಗಿ ಮದುವೆಗೆ ಕಿಲಾರಿ ಹೋರಿಯನ್ನು ಕರೆಸಲು ಪರ್ವತಗೌಡ ಕುಟುಂಬ ನಿರ್ಧರಿಸಿದೆ.
ಸೆಲ್ಫಿ ವಿಥ್ ಹೋರಿ!
ಶರವೇಗದ ಸರದಾರ ನಾಯಕನ ಆಗಮನದಿಂದ ಮದುವೆ ಮಂಟಪದಲ್ಲಿ ಸಂಭ್ರಮ ಮನೆ ಮಾಡಿದೆ. ಮದುವೆಗೆ ಬಂದ ಬಂಧು ಬಳಗದವರು ಹೋರಿ ಜೊತೆಗೆ ಸೆಲ್ಪಿ ತೆಗೆದುಕೊಂಡು ಖುಷಿ ಅನುಭವಿಸಿದ್ದಾರೆ. ಆಹ್ವಾನ ಮನ್ನಿಸಿ ಆಗಮಿಸಿದ ಕಿಲಾರಿ ಹೋರಿ ಪರ್ವತಗೌಡ ಕುಟುಂಬದ ಮಕ್ಕಳ ಮದುವೆಗೆ ಬಂದು ವಧುವರರಿಗೆ ಆಶೀರ್ವಾದ ನೀಡಿದೆ.
ಇದನ್ನೂ ಓದಿ: Dog Blood Donation: ಜಿಮ್ಮಿಗೆ ರಕ್ತ ನೀಡಿದ ಜಿಪ್ಪಿ! ಇದು ಹೃದಯಸ್ಪರ್ಶಿ ನಾಯಿ ಕಥೆ!
ಜಪ್ಪಯ್ಯ ಅಂದ್ರೂ ಮಾರಲ್ಲ!
ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗುವ ಹೋರಿಗಳಿಗೆ ಭಾರಿ ಬೆಲೆಯಿದೆ. ಹೀಗಾಗಿ ಈ ಕಿಲಾರಿ ಹೋರಿಯನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದರೂ ಮಾಲೀಕರು ಮಾರಾಟ ಮಾಡಿಲ್ಲ.
ಇದನ್ನೂ ಓದಿ: Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!
ಈ ಹಿಂದೆ ತಮಿಳುನಾಡಿನಿಂದ ಸುಮಾರು 2 ಲಕ್ಷಕ್ಕೆ ಕೊಂಡು ತಂದಿದ್ದ ಕಿಲಾರಿ ಹೋರಿಗೆ ಈಗ 15 ಲಕ್ಷದವರೆಗೂ ಬೆಲೆ ಕಟ್ಟಿದರೂ ಮಾಲೀಕರು ಮಾರಾಟ ಮಾಡಲು ಮುಂದಾಗಿಲ್ಲ. ಅಷ್ಟು ಫೇಮಸ್ ಹೋರಿಯ ಆಶೀರ್ವಾದ ಪಡೆದು ಮದುಮಕ್ಕಳು ಖುಷಿಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ