• ಹೋಂ
 • »
 • ನ್ಯೂಸ್
 • »
 • ಗದಗ
 • »
 • Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!

Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೆಲ ವರ್ಷದ ಹಿಂದೆ ಒಂದೂವರೆ ಮೀಟರ್​ ಬಟ್ಟೆಯಲ್ಲು ವಿಠ್ಠಲ ಮೂರ್ತಿಗೆ  ವಸ್ತ್ರ ಹೊಲೆಯುತ್ತಿದ್ದರಂತೆ. ಆದರೆ ಈಗ 2 ಮೀಟರ್ ಬಟ್ಟೆ ಬೇಕಾಗುತ್ತಂತೆ.

 • News18 Kannada
 • 3-MIN READ
 • Last Updated :
 • Gadag, India
 • Share this:

  ಗದಗ: ಮುದ್ರಣ ಕಾಶಿಯಲ್ಲಿರುವ  (Gadag News) ವಿಠ್ಠಲ ರುಕ್ಮಿಣಿ ವಿಗ್ರಹಗಳು ದಿನದಿಂದ ದಿನಕ್ಕೆ ಬೆಳೆಯುತ್ತಿಯಂತೆ. ಕಲ್ಲಿನ ವಿಗ್ರಹಗಳು ಬೆಳೆಯುತ್ತಿರೋದು ಭಕ್ತರಿಗೆ ಕುತೂಹಲ ಮೂಡಿಸಿವೆಯಂತೆ! ಅರೇ! ಈ ವಿಗ್ರಹಗಳು (Vitthal Rukmini Temple)  ಇರೋದಾದ್ರು ಎಲ್ಲಿ ಅಂತಿರಾ ಹಾಗಾದ್ರೆ ಈ ಸ್ಟೋರಿ ನೋಡಿ.


  ಗದಗ ನಗರದ ದಾಸರ ಓಣಿಯಲ್ಲಿನ ವಿಠ್ಠಲ ರುಕ್ಮಿಣಿ ದೇವಸ್ಥಾನದ ವಿಗ್ರಹಗಳು ಬೆಳೆದಿವೆ ಅಂತಿದ್ದಾರೆ ಭಕ್ತರು. ದೇವರಿಗೆ ಉಡಿಸುವ ಬಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಾಗಿದ್ದು, ಮೂರ್ತಿಗಳು ಬೆಳೆದಿದೆ ಎಂದು ಅರ್ಚಕರು ತಿಳಿಸಿದ್ದಾರೆ. ವಿಠ್ಠಲ ಮೂರ್ತಿ ರುಕ್ಮಿಣಿ ಮೂರ್ತಿ ಬರೋಬ್ಬರಿ ಒಂದೊಂದು ಇಂಚು ಬೆಳೆದಿವೆಯಂತೆ!


  ಮೂರ್ತಿ ಬೆಳೆದಿವೆ ಎಂದು ಗೊತ್ತಾಗಿದ್ದು ಹೇಗೆ?
  ಪ್ರತಿ ವರ್ಷ ವಿಠ್ಠಲ ರುಕ್ಮಿಣಿ ದೇವರ ಮೂರ್ತಿಗಳಿಗೆ ಸೀರೆ, ಧೋತಿ, ಜುಬ್ಬಾ ಹೊಲಿಸಲಾಗುತ್ತೆ. 1990 ರಿಂದ ನಿರಂತರವಾಗಿ ಮೂರ್ತಿಗಳಿಗೆ ಬಟ್ಟೆ ಹೊಲೆಯಲಾಗ್ತಿದೆ. ಕೆಲ ವರ್ಷದ ಹಿಂದೆ ಒಂದೂವರೆ ಮೀಟರ್​ ಬಟ್ಟೆಯಲ್ಲು ವಿಠ್ಠಲ ಮೂರ್ತಿಗೆ  ವಸ್ತ್ರ ಹೊಲೆಯುತ್ತಿದ್ದರಂತೆ. ಆದರೆ ಈಗ 2 ಮೀಟರ್ ಬಟ್ಟೆ ಬೇಕಾಗುತ್ತಂತೆ. ಒಂಭತ್ತು ಇಂಚು ಸೀರೆಯನ್ನ ರುಕ್ಮಿಣಿಗೆ ಉಡಿಸುತ್ತಿದ್ದರಂತೆ.  ಆದರೆ ಈಗ 10 ಇಂಚು ಬೇಕಾಗುತ್ತಿದೆ ಅಂತಾರೆ ಇಲ್ಲಿನ ಅರ್ಚಕರು.


  ಇದನ್ನೂ ಓದಿ: Gadag: ಗಾಂಧಿ ತತ್ವ ಬಳಸಿ ಪ್ರೈವೇಟ್ ಸ್ಕೂಲ್​​ಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ!  ಪಂಡರಾಪುರದಿಂದ ಬಂದ ವಿಠ್ಠಲ ರುಕ್ಮಿಣಿ ಮೂರ್ತಿಗಳು
  1960 ರಲ್ಲಿ ಇಲ್ಲಿ ವಿಠ್ಠಲ ರುಕ್ಮಿಣಿ  ದೇವರ ಮೂರ್ತಿಗಳ ಸ್ಥಾಪನೆಯಾಗಿದೆ. ಗದಗ ನಗರದ ಮಾನು ಸಾ ಬಾಂಡಗೆ ಅನ್ನೋರು ಈ ಮೂರ್ತಿಗಳನ್ನ ದಾನ ಕೊಟ್ಟಿದ್ದಾರೆ. ಮಾನು ಸಾ ಬಾಂಡಗೆ ಅವರು ಸಂತಾನಕ್ಕಾಗಿ ವಿಠ್ಠಲ ರುಕ್ಮಿಣಿ ದೇವರಿಗೆ ಹರಕೆ ಕಟ್ಟಿಕೊಂಡಿದ್ರು. ಸಂತಾನ ಪ್ರಾಪ್ತಿಯಾಗಿದ್ರಿಂದ ಪಂಡರಾಪುರದಿಂದ ವಿಠ್ಠಲ ರುಕ್ಮಿಣಿ ಕಲ್ಲಿನ ಮೂರ್ತಿಗಳನ್ನ ತರೆಸಿ ದೇವಸ್ಥಾನಕ್ಕೆ ನೀಡಿದ್ರು.  ಅಲ್ಲಿಯವರೆಗೆ ಲೋಹದ ಮೂರ್ತಿಗಳನ್ನ ಪೂಜಿಸುತ್ತಿದ್ದೆವು, ನಂತರದ ದಿನಗಳಲ್ಲಿ ಕಲ್ಲಿನ ಮೂರ್ತಿಗಳನ್ನ ಪೂಜಿಸಲಾಗ್ತಿದೆ.


  ಇದನ್ನೂ ಓದಿ: Ajinkya Rahane: ಗದಗದಲ್ಲಿ ರಹಾನೆ ಮಿಂಚು! ಕೆಎಚ್ ಪಾಟೀಲ್ ಕ್ರಿಕೆಟ್ ಲೀಗ್​ಗೆ ಚಾಲನೆ ನೀಡಿದ ಸ್ಟಾರ್ ಕ್ರಿಕೆಟಿಗ


  ಒಟ್ಟಾರೆ ವಿಠ್ಠಲ ರುಕ್ಮಿಣಿ ದೇಗುಲದಲ್ಲಿ  ದೇವರ ಮೂರ್ತಿ ಬೆಳವಣಿಗೆ ಆಗ್ತಿದೆ ಅನ್ನೋ ಮಾತನ್ನು ಕೇಳಿ ಅನೇಕ ರಾಜಕೀಯ ನಾಯಕರು ಸಹ ದೇವಸ್ಥಾನಕ್ಕೆ ಭೇಟಿ ನೀಡ್ತಿದಾರೆ.


  ವರದಿ:ಸಂತೋಷ ಕೊಣ್ಣೂರ, ನ್ಯೂಸ್ 18 ಗದಗ

  Published by:ಗುರುಗಣೇಶ ಡಬ್ಗುಳಿ
  First published: