• ಹೋಂ
  • »
  • ನ್ಯೂಸ್
  • »
  • ಗದಗ
  • »
  • Gadag: ಈ ಕಾಮ-ರತಿಗೆ ತೊಡಿಸಿದ ಬಂಗಾರ ಒಂದೇ ವರ್ಷದಲ್ಲಿ ಹೆಚ್ಚಾಗುತ್ತಂತೆ!

Gadag: ಈ ಕಾಮ-ರತಿಗೆ ತೊಡಿಸಿದ ಬಂಗಾರ ಒಂದೇ ವರ್ಷದಲ್ಲಿ ಹೆಚ್ಚಾಗುತ್ತಂತೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮದುವೆಯಾಗದ ಯುವಕ, ಯುವತಿಯರು ಕಾಮ-ರತಿಗೆ ಕಂಕಣ ಕಟ್ಟುವುದರಿಂದ ಶೀಘ್ರವೇ ವಿವಾಹವಾಗುತ್ತದೆ. ಮಕ್ಕಳಾಗದ ದಂಪತಿ ತೊಟ್ಟಿಲು ಕಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ನಿರುದ್ಯೋಗಿಗಳು ನೌಕರಿ ಸಿಗಲೆಂದು ಬೇಡಿಕೊಂಡರೆ ನೌಕರಿ ಸಿಗುತ್ತದೆ ಎಂದೇ ಭಕ್ತರು ನಂಬುತ್ತಾರೆ.

  • Share this:

    ವಿಜಯಪುರ: ಮೈತುಂಬೆಲ್ಲ ಬಂಗಾರದ ಆಭರಣ ಹಾಕಿಕೊಂಡಿರುವ ಕಾಮ-ರತಿ! ಇಷ್ಟಾರ್ಥ ಈಡೇರಿಸುವಂತೆ ಬಂಗಾರದ ಆಭರಣ (Gold Jewellery) ತೊಡಿಸಿ ಹರಕೆ ಕಟ್ಟುತ್ತಿರೋ ಭಕ್ತರು! ಬೇಡಿಕೊಂಡ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹಲವರ ಪ್ರಾರ್ಥನೆ. ಇದು ಗದಗ ಜಿಲ್ಲೆಯ (Gadag News) ಕಿಲ್ಲಾ ಓಣಿಯ ಕಾಮ-ರತಿಯರ (Kama Rati Temple) ವೈಶಿಷ್ಟ್ಯ! 


    1865ರಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳದಿಂದ ತಂದು ಗದಗ ಜಿಲ್ಲೆಯ ಕಿಲ್ಲಾ ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮ-ರತಿಗೆ ಈಗ 159 ವರ್ಷಗಳು ತುಂಬಿದೆ. ಪೂರ್ವಜರು ನಡೆಸಿಕೊಂಡ ಬಂದ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಇಲ್ಲಿಯ ನಿವಾಸಿಗಳು ಈಗಲೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ ಕಿಲ್ಲಾ ಓಣಿಯ ಜನರು.


    ಸರ್ಕಾರಿ ಕಾಮ-ರತಿ ಎಂದೇ ಫೇಮಸ್!
    1865ರಲ್ಲಿ ಈ ಸರ್ಕಾರಿ ಕಾಮ-ರತಿಯರ ಪ್ರತಿಷ್ಠಾಪನೆ ಮಾಡಲಾಯ್ತು. ಆಗ ಈ ಓಣಿಯ ಸಮೀಪದಲ್ಲೇ ಬ್ರಿಟಿಷರ ಕಚೇರಿಗಳು, ಪೊಲೀಸ್ ಠಾಣೆಗಳಿದ್ದವು. ಹೀಗಾಗಿ ಆಗಿನ ಬ್ರಿಟಿಷ್ ಅಧಿಕಾರಿಗಳು ಪ್ರತಿ ವರ್ಷ 5 ರೂಪಾಯಿ ದೇಣಿಗೆ ಕೊಟ್ಟು ಈ ಕಾಮ-ರತಿ ಪ್ರತಿಷ್ಠಾಪನೆಗೆ ಆರ್ಥಿಕ ನೆರವು ನೀಡುತ್ತಿದ್ದರು. ಬ್ರಿಟಿಷ್ ಸರ್ಕಾರ ಪ್ರತಿ ವರ್ಷ 5 ರೂಪಾಯಿ ದೇಣಿಗೆ ನೀಡುತ್ತಿದ್ದರಿಂದ ಸರ್ಕಾರಿ ಕಾಮ-ರತಿ ಎಂದೇ ಪ್ರಸಿದ್ಧಿ ಪಡೆದಿದೆ. ಅಲ್ಲದೇ ಇಷ್ಟಾರ್ಥ ಸಿದ್ಧಿ ಲಭಿಸುತ್ತೆ ಅನ್ನೋ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಇಷ್ಟಾರ್ಥ ಈಡೇರಿಸುವ ಶಕ್ತಿ ಈ ಸರ್ಕಾರಿ ಕಾಮ-ರತಿಗೆ ಇದೆ ಎನ್ನುವುದು ಭಕ್ತರ ನಂಬಿಕೆ.


    ಇದನ್ನೂ ಓದಿ: Gadag: ಬೆಳೆಯುತ್ತಿದೆಯಂತೆ ವಿಠ್ಠಲ ರುಕ್ಮಿಣಿ ವಿಗ್ರಹ! ಇದು ದೇವರ ಪವಾಡ ಅಂತಿದ್ದಾರೆ ಗದಗದ ಭಕ್ತರು!


    ಮದುವೆ, ಮಕ್ಕಳು ಆಗ್ದಿದ್ರೆ ಇಲ್ಲಿ ಫಲ ಸಿಗುತ್ತಂತೆ!
    ಮದುವೆಯಾಗದ ಯುವಕ, ಯುವತಿಯರು ಕಾಮ-ರತಿಗೆ ಕಂಕಣ ಕಟ್ಟುವುದರಿಂದ ಶೀಘ್ರವೇ ವಿವಾಹವಾಗುತ್ತದೆ. ಮಕ್ಕಳಾಗದ ದಂಪತಿ ತೊಟ್ಟಿಲು ಕಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ನಿರುದ್ಯೋಗಿಗಳು ನೌಕರಿ ಸಿಗಲೆಂದು ಬೇಡಿಕೊಂಡರೆ ನೌಕರಿ ಸಿಗುತ್ತದೆ ಎಂದೇ ಭಕ್ತರು ನಂಬುತ್ತಾರೆ.




    ಇದನ್ನೂ ಓದಿ: Gadag: ಈ 7 ಊರುಗಳಲ್ಲಿ ಹೋಳಿ ಆಚರಿಸುವಂತಿಲ್ಲ! ಹಬ್ಬ ಮಾಡಿದ್ರೆ ಅಪಾಯವಾಗುತ್ತಂತೆ!


    ಬಂಗಾರ ಹೆಚ್ಚಾಗುತ್ತಂತೆ!
    ಅಷ್ಟೇ ಅಲ್ಲ, ಬಂಗಾರದ ಆಭರಣಗಳನ್ನ ಕಾಮ-ರತಿಗೆ ತೊಡಿಸಿದರೆ ಒಂದು ವರ್ಷದಲ್ಲಿ ಹೆಚ್ಚಾಗುತ್ತೆ ಎಂಬ ನಂಬಿಕೆ ಭಕ್ತರದ್ದು, ಹೀಗಾಗಿ ಈ ರತಿ ಕಾಮರಿಗೆ 25-30 ಕೆಜಿ ಬಂಗಾರದ ಅಲಂಕಾರ ಹಾಕಲಾಗುತ್ತೆ. ಇನ್ನು ಗೋವಾ, ಮಹಾರಾಷ್ಟ್ರ, ಮುಂಬೈ, ಪುಣೆ, ಸೊಲ್ಲಾಪುರ, ಕೊಲ್ಲಾಪುರ ಸೇರಿದಂತೆ ಆಂಧ್ರ, ತಮಿಳುನಾಡಿನಿಂದ ಭಕ್ತರು ಆಗಮಿಸಿ ಕಾಮ-ರತಿಯ ದರ್ಶನ ಪಡೆಯುತ್ತಾರೆ.


    ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಗದಗ

    First published: