• Home
  • »
  • News
  • »
  • gadag
  • »
  • Uttara Karnataka: ಉತ್ತರ ಕರ್ನಾಟಕದ ಜನರಿಗೆ ಸಂತಸದ ಸುದ್ದಿ; ಗದಗ-ಯಳವಗಿ ರೈಲ್ವೆ ಯೋಜನೆಗೆ 600 ಕೋಟಿ

Uttara Karnataka: ಉತ್ತರ ಕರ್ನಾಟಕದ ಜನರಿಗೆ ಸಂತಸದ ಸುದ್ದಿ; ಗದಗ-ಯಳವಗಿ ರೈಲ್ವೆ ಯೋಜನೆಗೆ 600 ಕೋಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಯೋಜನೆಯಿಂದ ತ್ರಿಕೋಟೇಶ್ವರ, ಕಲ್ಲುಮುಳಗುಂದದ ದಾವಲ್‌ ಮಲ್ಲಿಕ್‌ ದರ್ಗಾ, ಲಕ್ಷ್ಮೇಶ್ವರ ದೂದ್‌ ನಾನಾ ದರ್ಗಾ, ಮುಕ್ತಿಮಂದಿರ ಯಾತ್ರಾ ಸ್ಥಳಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ದೊರೆಯಲಿದೆ.

  • Share this:

    ಉತ್ತರ ಕರ್ನಾಟಕದ ಜನರಿಗೆ (Uttara Karnataka) ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಗದಗ-ಯಳವಗಿ ರೈಲ್ವೆ ಯೋಜನೆಯನ್ನು (Gadag Yelavagi Railway Project)  ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರವು  600 ಕೋಟಿ ನೀಡಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai)  ಮಂಗಳವಾರ ತಿಳಿಸಿದ್ದಾರೆ.  ಆ ರೈಲು ಶಿರಹಟ್ಟಿ (Shirahatti) ಮೂಲಕ ಹಾದು ಹೋಗುವಂತೆ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.


    ಗದಗ-ಯಲವಗಿ ರೈಲು ಸಂಚರಿಸುವ ಮಾರ್ಗ ಇಲ್ಲಿದೆ
    52 ಕಿಲೋ ಮೀಟರ್ ದೂರದ ಗದಗ-ಯಲವಗಿ ರೈಲು ಯಲವಗಿ-ಮಂಜಲಾಪುರ, ಮಾಗಡಿ, ಮುಳಗುಂದ ಹಾಗೂ ಗದಗ ರೈಲ್ವೆ ನಿಲ್ದಾಣ ತಲುಪುತ್ತದೆ. ಗದಗ-ಯಲವಗಿ ರೈಲು ಮಾರ್ಗದದ ನಿರ್ಮಾಣವಾದರೆ ಬಾಗಲಕೋಟೆ ಮತ್ತು ಯಲವಗಿ ಭಾಗದ ಪ್ರಯಾಣಿಕರು ಬೆಂಗಳೂರು ತಲುಪಲು 100 ಕಿ.ಮೀ. ದೂರ ಕಡಿಮೆಯಾಗಲಿದೆ. ಅಲ್ಲದೇ ಪ್ರಯಾಣದ ದರವೂ ಸಹ ಕಡಿಮೆಯಾಗಲಿದೆ.


    ಈ ಕ್ಷೇತ್ರಗಳ ಯಾತ್ರಾತ್ರಿಗಳಿಗೆ ಅನುಕೂಲ
    ಜೊತೆಗೆ ತ್ರಿಕೋಟೇಶ್ವರ, ಕಲ್ಲುಮುಳಗುಂದದ ದಾವಲ್‌ ಮಲ್ಲಿಕ್‌ ದರ್ಗಾ, ಲಕ್ಷ್ಮೇಶ್ವರ ದೂದ್‌ ನಾನಾ ದರ್ಗಾ, ಮುಕ್ತಿಮಂದಿರ ಯಾತ್ರಾ ಸ್ಥಳಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ದೊರೆಯಲಿದೆ.


    ಹಲವು ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ
    ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ‘ತಮಗೊಂಡ ಯೋಜನೆಗೆ ಶೀಘ್ರ ಮಂಜೂರಾತಿ ನೀಡಿ, ಜಾಲವಾಡಗಿ ನೀರಾವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


    ಇದನ್ನೂ ಓದಿ: Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ


    ಶಿರಹಟ್ಟಿ ಹಾಗೂ ಮುಂಡರಗಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು. ಒಂದು ತಿಂಗಳೊಳಗೆ ಎಲ್ಲ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು. ಜೊತೆಗೆ ಒಂದು ತಿಂಗಳಲ್ಲಿ ತಾಂಡಾದ ಪ್ರತಿ ಮನೆಗೆ ಹಕ್ಕುಪತ್ರ ವಿತರಿಸಿ, ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


    ಗದಗ ಜಿಲ್ಲೆಯ 1.2 ಲಕ್ಷ ರೈತರಿಗೆ ಪರಿಹಾರ ವಿತರಣೆ
    ಮಳೆಯಿಂದ ಬೆಳೆ ನಷ್ಟಕ್ಕೆ ಗದಗ ಜಿಲ್ಲೆಯ 1.2 ಲಕ್ಷ ರೈತರಿಗೆ ಸರ್ಕಾರ ಈಗಾಗಲೇ ₹ 209 ಕೋಟಿ ಇನ್‌ಪುಟ್ ಸಬ್ಸಿಡಿ ವಿತರಿಸಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರಹಟ್ಟಿಯ ಕನಕದಾಸರ ಸಭಾಂಗಣಕ್ಕೆ ₹ 1 ಕೋಟಿ ಬೇಡಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.


    ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


    ಜೊತೆಗೆ ಗದಗ ಜಿಲ್ಲೆಗೆ ₹97 ಕೋಟಿ ಬೆಳೆ ವಿಮೆ ಹಣ ವಿತರಿಸಲಾಗಿದ್ದು, ಪಿಎಂ ಕಿಸಾನ್ ಯೋಜನೆಯಡಿ ಗದಗಕ್ಕೆ ₹159 ಕೋಟಿ ಬಂದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.


    ಬಾಗಲಕೋಟೆ-ವಿಜಯನಗರ ಜಿಲ್ಲೆಯ ಜನರಿಗೂ ಶುಭಸುದ್ದಿ
    ಬೆಂಗಳೂರು ಟು ಪುಣೆ ನಡುವೆ ಸೂಪರ್ ಎಕ್ಸ್ ಪ್ರೆಸ್ ಹೈವೇ ನಿರ್ಮಾಣವನ್ನ ಮಾಡಲು ಕೇಂದ್ರ ಸರ್ಕಾರನಿರ್ಧರಿಸಿದೆ. ಅಂದಾಜು 50 ಸಾವಿರ ಕೋಟಿ ರೂಪಾಯಿ ಖರ್ಚಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಕಡಿಮೆ ಸಮಯದಲ್ಲಿ ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ತಲುಪಲು, ಮತ್ತು ರಸ್ತೆ ಅಪಘಾತವನ್ನ ತಪ್ಪಿಸಲು, ಅಲ್ಲಲ್ಲಿ ಆಗುತ್ತಿದ್ದ ಟ್ರಾಫಿಕ್ ಜಾಮ್, ಮುಂತಾದ ಕಿರಿಕಿರಿಗಳನ್ನು ತಪ್ಪಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇದರಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು