• ಹೋಂ
 • »
 • ನ್ಯೂಸ್
 • »
 • ಗದಗ
 • »
 • Gadag News: ಕೀಟಗಳಿಗೆ ಬಾಲಿವುಡ್ ಸಿನಿಮಾ ಪಾತ್ರಗಳ ಹೆಸರು! ಸಂಶೋಧಕರ ಹೊಸ ಪ್ರಯತ್ನ

Gadag News: ಕೀಟಗಳಿಗೆ ಬಾಲಿವುಡ್ ಸಿನಿಮಾ ಪಾತ್ರಗಳ ಹೆಸರು! ಸಂಶೋಧಕರ ಹೊಸ ಪ್ರಯತ್ನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಎರಡೂ ಕೀಟಗಳ ಗುಣಲಕ್ಷಣ ಈ ಸಿನಿಮಾ ಪಾತ್ರಗಳ ಜೊತೆ ಹೋಲುವ ಕಾರಣದಿಂದ ನಾವು ಈ ಹೆಸರಿಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಗದಗದ ಜೀವವೈವಿಧ್ಯ ಸಂಶೋಧಕ ಮಂಜುನಾಥ್. ಎಸ್.ನಾಯಕ್.

 • News18 Kannada
 • 2-MIN READ
 • Last Updated :
 • Gadag, India
 • Share this:

  ಗದಗ: ನೀವು ಬಾಲಿವುಡ್ ಸಿನಿಮಾ (Bollywood Film) ಪ್ರೇಮಿಗಳಾಗಿದ್ದಲ್ಲಿ ಮೊಗಾಂಬೊ, ರಾಮು ಕಾಕಾ ಅಂದ್ ತಕ್ಷಣ ನೆನಪಾಗೋದೇ ಅಮರೇಶ್ ಪುರಿ (Amrish Puri) ಮತ್ತು ಎ.ಕೆ ಹಂಗಲ್ (AK Hangal). ಈ ಇಬ್ಬರು ಫೇಮಸ್ ಕಲಾವಿದರು ತೆರೆಮೇಲೆ ಕಾಣಿಸಿಕೊಂಡ ಈ ಪಾತ್ರಗಳು ಇಂದಿಗೂ ಸಿನಿ ರಸಿಕರ (Film Lovers) ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ ಇದೀಗ ಈ ಹೆಸರುಗಳು ಕೀಟಗಳ ಹೆಸರಾಗಿ ಬದಲಾಗ್ತಿದೆ.


  ಹೌದು, ಗದಗದಲ್ಲಿ ಇಂತಹ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಹೊಸದಾಗಿ ಕಂಡುಹಿಡಿದ ಕೀಟಗಳಿಗೆ ಭಾರತದ ಪ್ರಸಿದ್ಧ ಸಿನಿಮಾಗಳ ಪಾತ್ರ, ಸಾಧಕರ ಹೆಸರು, ರಾಜಕಾರಣಿಗಳ ಹೆಸರನ್ನು ಇಡಲಾಗುತ್ತಿದೆ.
  ಹಲವು ಕೀಟಗಳಿಗೆ ಕನ್ನಡ ಹೆಸರಿಲ್ಲ
  ಯಾವುದೇ ಹೊಸ ಜೀವಿ ಪತ್ತೆಯಾದಾಗ ಲ್ಯಾಟಿನ್ ಅಥವಾ ಗ್ರೀಕ್ ಪದಗಳನ್ನು ಬಳಸಿ ವೈಜ್ಞಾನಿಕ ನಾಮಕರಣ ಮಾಡುವ ಪದ್ಧತಿಯಿದೆ. ಆದರೆ ಬಹುತೇಕ ಕೀಟಗಳಿಗೆ ಕನ್ನಡ ಹೆಸರುಗಳಿಲ್ಲ. ಇನ್ನೂ ಮುಖ್ಯವಾಗಿ ಭಾರತೀಯ ಹೆಸರುಗಳೂ ಸಹ ಇಲ್ಲ. ಈ ಕಾರಣದಿಂದ ಭಾರತೀಯರಿಗೆ ಹಲವು ಜೀವಿಗಳ, ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ನೆನಪಿಟ್ಟುಕೊಳ್ಳೋದು ಸಹ ಕಷ್ಟ. ಆದರೆ ಈ ಸಮಸ್ಯೆಗೆ ಮುಕ್ತಿ ಹಾಡೋಕೆ ಗದಗ ಜಿಲ್ಲೆಯ ಸಂಶೋಧಕರು ಕಂಡುಕೊಂಡಿದ್ದೇ ಈ ಹೊಸ ಪ್ರಯತ್ನ.
  ಸಾಧಕರನ್ನು ಗೌರವಿಸುವ ಪ್ರಯತ್ನ
  "ಸಂಶೋಧಕರಿಗೆ ಈ ವೈಜ್ಞಾನಿಕ ಹೆಸರುಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಇಂತಹ ಸಾಧಕರ ಹೆಸರಿಡುವುದರಿಂದ ಅವರಿಗೆ ಗೌರವ ತೋರಿದಂತಾಗುತ್ತದೆ. ಕೀಟಗಳು ಜೀವವೈವಿಧ್ಯದ ಆಧಾರ ಸ್ಥಂಭಗಳಿದ್ದಂತೆ. ಆದ್ದರಿಂದ ಕೀಟಗಳಿಗೆ ಕನ್ನಡ ಹೆಸರನ್ನಿಡುವ ಪ್ರಯತ್ನವನ್ನೂ ಸಹ 3 ವರ್ಷದಿಂದ ಮಾಡುತ್ತಿದ್ದೇವೆ. ಇತ್ತೀಚಿಗಷ್ಟೇ ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಸೋಲಿಗ ಎಂಬ ಹೆಸರಿಟ್ಟಿದ್ದೇವೆ" ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್. ನಾಯಕ.


  ಇದನ್ನೂ ಓದಿ: Gadag: ಗಾಂಧಿ ತತ್ವ ಬಳಸಿ ಪ್ರೈವೇಟ್ ಸ್ಕೂಲ್​​ಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ!
  ಸಿನಿಮಾ ಪಾತ್ರಕ್ಕೂ ಕೀಟಗಳಿಗೂ ಇದೆ ಹೋಲಿಕೆ!
  ಸ್ಕಿಂಕ್ ಬಗ್ (Stink Bug) ಎಂಬ ಕೀಟದ ಮರಿಗೆ ರಾಮು ಕಾಕಾ ಎಂದು ನಾಮಕರಣ ಮಾಡಲಾಗಿದೆ. ಏಫ್ ಫ್ಲೈ ಎಂಬ ಕೀಟಕ್ಕೆ ಅಮರೇಶ್ ಪುರಿ ಅವರ ಮೊಗಾಂಬೊ ಪಾತ್ರದ ಹೆಸರನ್ನು ಇಡಲಾಗಿದೆ. ಈ ಎರಡೂ ಕೀಟಗಳ ಗುಣಲಕ್ಷಣ ಈ ಸಿನಿಮಾ ಪಾತ್ರಗಳ ಜೊತೆ ಹೋಲುವ ಕಾರಣದಿಂದ ನಾವು ಈ ಹೆಸರಿಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಗದಗದ ಜೀವವೈವಿಧ್ಯ ಸಂಶೋಧಕ ಮಂಜುನಾಥ್. ಎಸ್.ನಾಯಕ್.


  ಇದನ್ನೂ ಓದಿ: Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು


  ಇನ್ನೂ ಹಲವು ಸಾಧಕರ ಹೆಸರಿಡುವ ಯೋಚನೆ
  ಒಟ್ಟಾರೆ ಜನಮಾನಸದಲ್ಲಿ ನೆಲೆನಿಂತಿದ್ದ ಫೇಮಸ್ ಪಾತ್ರಗಳ ಹೆಸರಿಂದ ಇನ್ಮುಂದೆ ಕೀಟಗಳೂ ಗುರುತಿಸಲ್ಪಡಲಿವೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಸೇರಿದಂತೆ ಇನ್ನೂ ಹಲವರ ಹೆಸರನ್ನು ಹೀಗೆ ಕೀಟಗಳಿಗೆ ನಾಮಕರಣ ಮಾಡುವ ಉದ್ದೇಶವನ್ನೂ ಈ ಸಂಶೋಧಕರು ಹೊಂದಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು