ಈಗಂತೂ ಎಲ್ಲೆಲ್ಲೂ ಚಿರತೆ ಊರಿಗೆ ಬಂದಿರೋ ಸುದ್ದಿ, ಆದ್ರೆ ನಮ್ ಗದಗಕ್ಕೆ ಕಾಡಿನ ರಾಜ ಸಿಂಹ (Lion) ಬಂದಿದೆ ಕಣ್ರೀ! ಹೌದು, ಈ ಸಿಂಹಗಳನ್ನು 1070 ಕಿಲೋಮೀಟರ್ ದೂರದ ಮಧ್ಯಪ್ರದೇಶದ (Madhya Pradesh) ಇಂದೋರ್ನ ಕಮಲಾ ಮೃಗಾಲಯದಿಂದ ಗದಗಕ್ಕೆ (Gadag) ಕರೆತರಲಾಗಿದೆ. ಇನ್ಮೇಲೆ ಗದಗದಲ್ಲಿ ಶಿವ ಮತ್ತು ಗಂಗಾ ಸಿಂಹಗಳ ಘರ್ಜನೆ ಆಗಾಗ ಕೇಳಿಸೋದಂತೂ ಖರೆ!
ಇದನ್ನು ಓದಿ:Positive Story: ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ! ಇವರ ಸಾಹಸ ನೀವೇ ನೋಡಿ
ಸದ್ಯ ಶಿವ ಮತ್ತು ಗಂಗಾ ಸಿಂಹಗಳನ್ನು 15 ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಈ ಅವಧಿ ಮುಗಿದ ನಂತರ ಗದಗನ ಬಿಂಕದಕಟ್ಟಿ ಕಿರು ಮೃಗಾಲಯಯದಲ್ಲಿ ಈಗಾಗಲೇ ಇರುವ ಅರ್ಜುನ ಹಾಗೂ ಧರ್ಮ ಸಿಂಹಗಳಿಗೆ ಹೊಸ ಸಿಂಹಗಳು ಸಾಥ್ ನೀಡಲಿವೆ.
ಇದನ್ನೂ ಓದಿ: Soil Prasad: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!
ಸಿಂಹಗಳ ಆಗಮನದಿಂದ ಮೃಗಾಲಯಕ್ಕೆ ಪ್ರವಾಸ ಕೈಗೊಂಡಿದ್ದ ಶಾಲಾ ಮಕ್ಕಳಂತೂ ಫುಲ್ ಖುಷ್ ಆಗಿದ್ದಾರೆ. ಒಟ್ನಲ್ಲಿ ಉತ್ತರ ಕರ್ನಾಟಕದ ನಾಗರಿಕರಿಗೆ ಸಿಂಹ ದರ್ಶನ ಮಾಡೋಕೆ ಸಖತ್ ಚಾನ್ಸ್ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ