ಗದಗ: ಗ್ರಾಮೀಣ ಪ್ರತಿಭೆಗಳಿಗೆ ಐಪಿಎಲ್ ಮಾದರಿಯ ಕ್ರಿಕೆಟ್ ಆಯೋಜನೆ. ಗದಗಕ್ಕೆ ಬಂದ್ರು ನೋಡಿ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ! ಹೌದು, ಕೆಎಚ್ ಪಾಟೀಲ್ ಕ್ರಿಕೆಟ್ ಲೀಗ್ಗೆ ಚಾಲನೆ ನೀಡೋಕೆ ಸ್ಟಾರ್ ಕ್ರಿಕೆಟಿಗ, ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ನಾಯಕ ಅಜಿಂಕ್ಯ ರಹಾನೆ ಗದಗಕ್ಕೆ ಆಗಮಿಸಿದ್ರು. ಮೈದಾನದಲ್ಲಿ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಲೀಗ್ಗೆ ಚಾಲನೆ ನೀಡಿದರು. ಅಜಿಂಕ್ಯ ರಹಾನೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರು.
ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ರಹಾನೆ ಕರೆ
ಪ್ರತಿಭಾವಂತ ಕ್ರಿಕೆಟ್ ಪಟುಗಳಿಗೆ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯಾ ರಹಾನೆ ತಿಳಿಸಿದ್ರು.
ಇದನ್ನೂ ಓದಿ: Gadag News: ಕೀಟಗಳಿಗೆ ಬಾಲಿವುಡ್ ಸಿನಿಮಾ ಪಾತ್ರಗಳ ಹೆಸರು! ಸಂಶೋಧಕರ ಹೊಸ ಪ್ರಯತ್ನ
ಭರ್ಜರಿ ಬಹುಮಾನದ ಆಕರ್ಷಣೆ
ಕೆ ಎಚ್ ಪಾಟೀಲ್ ಕ್ರಿಕೆಟ್ ಲೀಗ್ ಒಂದು ತಿಂಗಳ ಕಾಲ ಐಪಿಎಲ್ ಮಾದರಿಯಲ್ಲಿ ನಡೆಯಲಿದ್ದು ಒಟ್ಟು 14 ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಮೊದಲ ಬಹುಮಾನ 2 ಲಕ್ಷ 50 ಸಾವಿರ ಮತ್ತು ಟ್ರೋಫಿ, ಎರಡನೇ ಬಹುಮಾನವಾಗಿ 1 ಲಕ್ಷ 50 ಲಕ್ಷ ರೂ. ಹಾಗೂ ಟ್ರೋಫಿ ನೀಡಲಾಗುತ್ತೆ.
ಇನ್ನು ಸರಣಿ ಪುರುಷೋತ್ತಮ ಆಟಗಾರನಿಗೆ 15 ಸಾವಿರ ಮತ್ತು ಟ್ರೋಫಿ, ಬೆಸ್ಟ್ ಬ್ಯಾಟರ್ಗೆ 10 ಸಾವಿರ, ಬೆಸ್ಟ್ ಬಾಲರ್ಗೆ 10 ಸಾವಿರ ಬಹುಮಾನ ನೀಡಲಾಗುತ್ತೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೆ.ಎಚ್. ಪಾಟೀಲ್ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ.
ಇದನ್ನೂ ಓದಿ: Gadag: ಗಾಂಧಿ ತತ್ವ ಬಳಸಿ ಪ್ರೈವೇಟ್ ಸ್ಕೂಲ್ಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ!
ಒಟ್ಟಾರೆ ಗ್ರಾಮೀಣ ಭಾಗದ ಕ್ರಿಕೆಟ್ ಕ್ರೀಡಾಪಟುಗಳಿಗೆ ಎಂದೇ ನಡೆಯುತ್ತಿರೋ ಕೆ ಹೆಚ್ ಪಾಟೀಲ್ ಕ್ರಿಕೆಟ್ ಲೀಗ್ಗೆ ಅಜಿಂಕ್ಯ ರಹಾನೆ ಆಗಮನ ಈ ಭಾಗದಲ್ಲಿ ಕ್ರೀಡಾಪ್ರೇಮಿಗಳಲ್ಲಿ ಖುಷಿ ಹೆಚ್ಚಿಸಿತು.
ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18-ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ