Gadag: ಗದಗದಲ್ಲಿದೆ ಯೋಗ ಗ್ರಾಮ! ಕಪ್ಪತಗುಡ್ಡದ ತಪ್ಪಲಿನ ಪಾಪನಾಶಿನಿ ಹಳ್ಳಿಯ ವಿಶೇಷ!

ಪಾಪನಾಶಿ ಹಳ್ಳಿಯಯಲ್ಲಿ ವಾಸ ಮಾಡುತ್ತಿರುವ ಎಲ್ಲಾ ರೈತರು ದಿನದ ಕೆಲಸವನ್ನು ಶುರು ಮಾಡುವ ಮೊದಲು ತಮ್ಮ ಯೋಗಾಭ್ಯಾಸವನ್ನು ಪೂರ್ಣಗೊಳಿಸುತ್ತಾರೆ. ಈ ಗ್ರಾಮಸ್ಥರು ತಮ್ಮ ಯೋಗಾಸನಗಳನ್ನು ದಿನಕ್ಕೆ ಬರೀ ಒಂದಲ್ಲ, ಎರಡು ಬಾರಿ ಅಭ್ಯಾಸ ಮಾಡುತ್ತಾರೆ. ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು 'ಯೋಗ ಗ್ರಾಮ' ಎಂಬ ಟ್ಯಾಗ್ ಅನ್ನು ಸಹ ಗಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿದಿನ ತಪ್ಪದೆ ಯೋಗಾಭ್ಯಾಸವನ್ನು (Yoga practice) ಮಾಡಿ, ಆರೋಗ್ಯವನ್ನು (Health) ಉತ್ತಮವಾಗಿರಿಸಿಕೊಳ್ಳಿರಿ ಅಂತ ನಾವು ಪ್ರತಿದಿನ ಟಿವಿಯಲ್ಲಿ ಬರುವ ಜನ ಹಿತವನ್ನು ಕಾಪಾಡುವ ಕುರಿತು ಜಾಹಿರಾತುಗಳನ್ನು ಮತ್ತು ಪತ್ರಿಕೆಯಲ್ಲಿ ಬರುವ ಅನೇಕ ಯೋಗದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಬರುವಂತಹ ಲೇಖನಗಳನ್ನು ನೋಡುತ್ತಲೇ ಇರುತ್ತೇವೆ. ಇದನ್ನೆಲ್ಲಾ ನೋಡಿದರೂ ಕೆಲವರು ಒಂದೆರಡು ದಿನ ಈ ಯೋಗಾಭ್ಯಾಸವನ್ನು ಮಾಡಿ ಮೂರನೆಯ ದಿನ ತಮ್ಮ ಕೆಲಸಗಳ (Work) ಹಿಂದೆ ಸ್ವಲ್ಪವೂ ಬಿಡುವಿಲ್ಲದೆ ಓಡುವುದನ್ನು ನಾವು ನೋಡುತ್ತೇವೆ. ಆದರೆ ಇನ್ನೂ ಕೆಲವರು ಈ ಯೋಗವನ್ನು (Yoga) ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ತುಂಬಾನೇ ಗಂಭೀರವಾಗಿ ತೆಗೆದುಕೊಂಡು ಪ್ರತಿದಿನ ತಪ್ಪದೆ ಮಾಡುತ್ತಿದ್ದಾರೆ.

ಈ ಮಹಾನಗರ ಪ್ರದೇಶಗಳಲ್ಲಿ ಈ ಯೋಗಾಭ್ಯಾಸವನ್ನು ಜನರಿಗೆ ತರಬೇತುದಾರರು ಹೇಳಿ ಕೊಡುವುದನ್ನು ನಾವು ಎಲ್ಲಾ ಏರಿಯಾಗಳಲ್ಲಿ ಸಹ ನೋಡುತ್ತೇವೆ. ಈ ಯೋಗಾಭ್ಯಾಸ ಬರೀ ನಗರ ಪ್ರದೇಶದ ಜನರನ್ನು ಮಾತ್ರ ಆಕರ್ಷಿಸಿಲ್ಲ. ಬದಲಾಗಿ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಜನರು ಸಹ ಪ್ರತಿದಿನ ತಮ್ಮ ಮನೆಯಲ್ಲಿಯೇ ಟಿವಿಯಲ್ಲಿ ಬರುವ ಯೋಗ ಕಾರ್ಯಕ್ರಮಗಳನ್ನು ನೋಡಿಕೊಂಡು ಯೋಗಾಭ್ಯಾಸ ಮಾಡುತ್ತಿರುವುದನ್ನು ನಾವು ನೋಡಬಹುದು. ಇವತ್ತೇಕೆ ಈ ಯೋಗಾಭ್ಯಾಸದ ಬಗ್ಗೆ ತುಂಬಾ ಮಾತಾಡುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಾಹುದಲ್ಲವೇ? ಇಲ್ಲಿದೆ ನೋಡಿ ಅದಕ್ಕೆ ಕಾರಣ.

ಗದಗದಲ್ಲೊಂದು ಯೋಗ ಗ್ರಾಮ
ಇಲ್ಲೊಂದು ಹಳ್ಳಿ ಇದೆ ನೋಡಿ, ಇದನ್ನು ‘ಯೋಗ ಗ್ರಾಮ’ ಅಂತಾನೆ ಕರಿತಾರಂತೆ. ಏಕೆಂದರೆ ಕರ್ನಾಟಕದಲ್ಲಿರುವ ಗದಗ ಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕಪ್ಪತಗುಡ್ಡದ ತಪ್ಪಲಿನಲ್ಲಿರುವ ಈ ಪಾಪನಾಶಿ ಹಳ್ಳಿಯ ನಿವಾಸಿಗಳು ತಮ್ಮ ಆರೋಗ್ಯದ ಬಗ್ಗೆ ಬೇರೆ ಹಳ್ಳಿಯ ನಿವಾಸಿಗಳಿಗಿಂತಲೂ ಸ್ವಲ್ಪ ಜಾಸ್ತಿಯೇ ಕಾಳಜಿ ವಹಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Chakrasana Benefits: ಚಕ್ರಾಸನ ಯೋಗದ ಪ್ರಯೋಜನಗಳು ಬಹಳಷ್ಟಿವೆ! ಆದರೂ ಇದನ್ನು ಕೆಲವರು ಮಾಡಲೇಬಾರದು

ಪಾಪನಾಶಿ ಹಳ್ಳಿಯಯಲ್ಲಿ ವಾಸ ಮಾಡುತ್ತಿರುವ ಎಲ್ಲಾ ರೈತರು ದಿನದ ಕೆಲಸವನ್ನು ಶುರು ಮಾಡುವ ಮೊದಲು ತಮ್ಮ ಯೋಗಾಭ್ಯಾಸವನ್ನು ಪೂರ್ಣಗೊಳಿಸುತ್ತಾರೆ. ಈ ಗ್ರಾಮಸ್ಥರು ತಮ್ಮ ಯೋಗಾಸನಗಳನ್ನು ದಿನಕ್ಕೆ ಬರೀ ಒಂದಲ್ಲ, ಎರಡು ಬಾರಿ ಅಭ್ಯಾಸ ಮಾಡುತ್ತಾರೆ. ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು 'ಯೋಗ ಗ್ರಾಮ' ಎಂಬ ಟ್ಯಾಗ್ ಅನ್ನು ಸಹ ಗಳಿಸಿದೆ.

ಔಷಧೀಯ ಸಸ್ಯಗಳ ಬಗ್ಗೆ ಜ್ಞಾನವನ್ನೂ ಹೊಂದಿರುವ ಹಳ್ಳಿಗರು 
ಹೇಗೋ ಕಪ್ಪತಗುಡ್ಡ ಇವರ ಗ್ರಾಮಕ್ಕೆ ತುಂಬಾನೇ ಹತ್ತಿರವಿರುವುದರಿಂದ ಅಲ್ಲಿರುವ ಔಷಧೀಯ ಸಸ್ಯಗಳ ಬಗ್ಗೆ ಈ ಹಳ್ಳಿಯ ಜನರಿಗೆ ಉತ್ತಮ ಜ್ಞಾನ ಸಹ ಇದೆ. ಶೇಕಡಾ 80ರಷ್ಟು ಹಳ್ಳಿಗರು ನಿಯಮಿತವಾಗಿ ಯೋಗ ಮಾಡುತ್ತಾರೆ. ಪಾಪನಾಶಿ ಗ್ರಾಮದ ನಿವಾಸಿಗಳು ತಮ್ಮ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದ ಸಸ್ಯಗಳನ್ನು ಬಳಸುತ್ತಾರೆ. ಏಕೆಂದರೆ ಅವರು ಕಪ್ಪತಗುಡ್ಡದ ಬಳಿ ವಾಸಿಸುತ್ತಾರೆ. ಅಲ್ಲಿನ ಔಷಧೀಯ ಸಸ್ಯಗಳ ಅನೇಕ ಪ್ರಯೋಜನಗಳನ್ನು ಅರಿತು ಕೊಂಡಿದ್ದಾರೆ.

ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಯೋಗ ತರಬೇತಿ
2020ರ ಫೆಬ್ರವರಿಯಲ್ಲಿ ಆಯುರ್ವೇದ ವೈದ್ಯ ಅಶೋಕ್ ಮತ್ತಿಕಟ್ಟಿ ಅವರು ಯೋಗ ತರಗತಿಗಳನ್ನು ಮೊದಲ ಬಾರಿಗೆ ಪ್ರಾರಂಭಿಸಿದರು, ಆದರೆ ಮಾರ್ಚ್ 2020 ರ ಕೋವಿಡ್ ಲಾಕ್ಡೌನ್ ನಿಂದಾಗಿ ಸ್ವಲ್ಪ ದಿನಗಳ ಕಾಲ ಎಲ್ಲವೂ ಮುಚ್ಚಲ್ಪಟ್ಟವು. ಸ್ವಲ್ಪ ದಿನಗಳ ನಂತರ ವೈದ್ಯರು ಎಲ್ಲಾ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ತಮ್ಮ ಹೊಲಗಳಲ್ಲಿ ಯೋಗಾಭ್ಯಾಸವನ್ನು ಮುಂದುವರಿಸಲು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ:  Caterpillar Chocolate: ಕಂಬಳಿ ಹುಳದ ಚಾಕಲೇಟ್! ನೀವ್ ತಿಂದಿದ್ದೀರಾ?

ಲಾಕ್ಡೌನ್ ನಂತರ, ಗ್ರಾಮಸ್ಥರು ವೈದ್ಯರ ಅಡಿಯಲ್ಲಿ ಉಚಿತವಾಗಿ ತರಬೇತಿಯನ್ನು ಪೂರ್ಣಗೊಳಿಸಿದರು ಮತ್ತು ಇದನ್ನು ಹಾಗೆಯೇ ಮುಂದುವರಿಸಿದರು. ಎರಡು ವರ್ಷಗಳ ಹಿಂದೆ ಮತ್ತಿಕಟ್ಟಿಯವರು ಮೊದಲು ಕೆಲವು ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದರು.

ಯೋಗ ಶಿಕ್ಷಕಿಯಾಗಿ ಸುಧಾ ಪಾಟೀಲ್ ಎಂಬ ಶಿಕ್ಷಕಿಯಾಗಿ ನೇಮಕ 
ಶೀಘ್ರದಲ್ಲಿಯೇ ಇತರ ಗ್ರಾಮಸ್ಥರು ಇದಕ್ಕೆ ಸೇರಿಕೊಂಡರು. ಸುಧಾ ಪಾಟೀಲ್ ಎಂಬ ಶಿಕ್ಷಕಿ ವೈದ್ಯರನ್ನು ಸಂಪರ್ಕಿಸಿ ಯೋಗ ಕಲಿಯಲು ಮತ್ತು ಇತರ ಗ್ರಾಮಸ್ಥರಿಗೆ ಕಲಿಸಲು ವಿನಂತಿಸಿದರು. ಆಯುಷ್ ಇಲಾಖೆಯು ಅವರನ್ನು ಯೋಗ ಶಿಕ್ಷಕಿಯಾಗಿ ನೇಮಿಸಿತು, ವಾರಕ್ಕೆ ಒಂದು ತರಗತಿಯನ್ನು ತೆಗೆದುಕೊಳ್ಳಲು ಸಹ ಇಲಾಖೆ ಇವರಿಗೆ ಹೇಳಿತು. ಆದರೆ ಗ್ರಾಮಸ್ಥರ ಆಸಕ್ತಿಯಿಂದಾಗಿ, ಸುಧಾ ದಿನಕ್ಕೆ ಎರಡು ಬಾರಿ ಯೋಗವನ್ನು ಕಲಿಸಲು ಪ್ರಾರಂಭಿಸಿದರು.ಈ ಮೊದಲು ಅವರಿಗೆ ಒಂದು ಸ್ಥಳದಲ್ಲಿ ಎಲ್ಲಾ ಜನರನ್ನು ಒಟ್ಟುಗೂಡುವುದು ಮತ್ತು ಯೋಗವನ್ನು ಕಲಿಸುವುದು ಕಷ್ಟಕರವಾಗಿತ್ತು. ಈಗ ಅವರು ರೈತರು, ದಿನಗೂಲಿಗಳು ಮತ್ತು ದಿನಗೂಲಿಗಳ ಗುಂಪುಗಳನ್ನು ರಚಿಸಿದ್ದಾರೆ. ಅವರು ಹಳ್ಳಿಯಿಂದ ಹೊರಗೆ ಹೋಗಿ ಹೊಲಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಮತ್ತು ಮನೆಗಳಲ್ಲಿ ಯೋಗ ಮಾಡುತ್ತಾರೆ. ಯೋಗ ಕಲಿತ 12 ರಿಂದ 18 ವರ್ಷ ವಯಸ್ಸಿನ ಹೆಚ್ಚಿನ ಮಕ್ಕಳು ಈಗ ಗ್ರಾಮಸ್ಥರಿಗೆ ವಿವಿಧ ಆಸನಗಳನ್ನು ಕಲಿಸುತ್ತಿದ್ದಾರೆ.

ಆರಂಭದಲ್ಲಿ ಕೆಲವು ಪೋಷಕರು ತಮಗೆ ಸಮಯವಿಲ್ಲ ಎಂದು ಹೇಳಿದರು. ಇತರ ಕಾರಣಗಳನ್ನು ನೀಡಿದರು. ಆದರೆ ಮಕ್ಕಳು ವಾರಕ್ಕೆ ಎರಡು ಬಾರಿ ಯೋಗವನ್ನು ಪ್ರಯತ್ನಿಸುವಂತೆ ಒತ್ತಾಯಿಸಿದಾಗ ಅವರು ಒಪ್ಪಿದರು. ನಾವು ಕಲಿಯಲು ಬಯಸಿದ್ದೆವು. ಆದರೆ ಗದಗ ನಗರಕ್ಕೆ ಹೋಗಿ ಕಲೆಯಬೇಕಾಗಿತ್ತು. ನಮ್ಮ ಹಳ್ಳಿಯಲ್ಲಿಯೇ ಉಚಿತ ಯೋಗ ತರಗತಿಗಳ ಬಗ್ಗೆ ಕೇಳಿದಾಗ, ನಾವು ಅದನ್ನು ತೆಗೆದುಕೊಳ್ಳಲು ನಿರ್ಧರಿಸಿದೆವು. ನಾವು ಈಗ ನಿಯಮಿತವಾಗಿ ಯೋಗ ಮಾಡುತ್ತೇವೆ. ನೆರೆಹೊರೆಯ ಗ್ರಾಮಸ್ಥರು ನಮ್ಮ ಪಾಪನಾಶಿಯನ್ನು 'ಯೋಗ ಗ್ರಾಮ' ಎಂದು ಕರೆಯುತ್ತಾರೆ" ಎಂದು ನಿವಾಸಿಯೊಬ್ಬರು ಹೇಳಿದರು.

ಹಳ್ಳಿ ಜನರ ಯೋಗದ ಉತ್ಸಾಹದ ಕುರಿತು ಶಿಕ್ಷಕಿ ಹೇಳಿದ್ದು ಹೀಗೆ
"ಪಾಪನಾಶಿ ನಿವಾಸಿಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ನಾವು ಅವರಿಗೆ ಬೆಳಿಗ್ಗೆ 5.30ಕ್ಕೆ ಮತ್ತು ಸಂಜೆ 5 ಗಂಟೆಗೆ ಎರಡು ಬಾರಿ ತರಬೇತಿ ನೀಡುತ್ತಿದ್ದೇವೆ. ತರಬೇತಿಗಾಗಿ ಬಂದ ಮಕ್ಕಳು ಸ್ನೇಹಿತರು, ಸಂಬಂಧಿಕರು ಮತ್ತು ಪೋಷಕರನ್ನು ಸಹ ಕರೆತಂದರು. ಈಗ ಎಲ್ಲಾ ಹಳ್ಳಿಗರು ಯೋಗಾಭ್ಯಾಸ ಮಾಡುತ್ತಿದ್ದಾರೆ" ಎಂದು ಸುಧಾ ಹೇಳಿದರು. ಜಾಗೃತಿ ಮೂಡಿಸುವಲ್ಲಿ ಅಂತರರಾಷ್ಟ್ರೀಯ ಯೋಗ ದಿನವು ಸಹ ಮುಖ್ಯವಾದ ಪಾತ್ರವನ್ನು ವಹಿಸಿದೆ ಎಂದು ಇವರು ಹೇಳಿದರು.

ಇದನ್ನೂ ಓದಿ: Baby Girl: 10 ತಿಂಗಳ ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ! ಲಕ್ಕಿ ಅಲ್ಲ ಕಣ್ರೀ, ಕಂದಮ್ಮನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

"ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನವನ್ನು ಪರಿಚಯಿಸಿದ ನಂತರ ಮತ್ತು ಜಗತ್ತಿಗೆ ಜಾಗೃತಿ ಮೂಡಿಸಿದ ನಂತರ, ನಾವು ಜೂನ್ 21 ರಂದು ಯೋಗ ಅಧಿವೇಶನವನ್ನು ನಡೆಸುತ್ತಿದ್ದೆವು. ಆದರೆ ಈಗ ಹೆಚ್ಚಿನ ಗ್ರಾಮಸ್ಥರು ಇದನ್ನು ತಮ್ಮ ದೈನಂದಿನ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ.  ಇನ್ನೂ ಅನೇಕರು ಭಾನುವಾರ ಮತ್ತು ರಜಾದಿನಗಳಲ್ಲಿ ನಮ್ಮೊಂದಿಗೆ ಯೋಗಾಭ್ಯಾಸವನ್ನು ಮಾಡಲು ಸೇರಿ ಕೊಳ್ಳುತ್ತಾರೆ" ಎಂದು ಮತ್ತಿಕಟ್ಟಿ ಅವರು ಹೇಳಿದರು.

ಜೊತೆಗೆ ಪ್ರತ್ಯೇಕ ತರಗತಿ ಆರಂಭ
ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಚೈತ್ರಾ ಮಾತನಾಡಿ "ನಾವು ಕಳೆದ ಎರಡು ವರ್ಷಗಳಿಂದ ಯೋಗವನ್ನು ಕಲಿಯುತ್ತಿದ್ದೇವೆ ಮತ್ತು ಅಭ್ಯಾಸ ಮಾಡುತ್ತಿದ್ದೇವೆ. ಕೆಲವು ಗ್ರಾಮಸ್ಥರು ಯೋಗವನ್ನು ಕಲಿಸಲು ನಮ್ಮನ್ನು ಕೇಳಿದರು. ಆದ್ದರಿಂದ ನಾವು ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ತರಗತಿಗಳನ್ನು ಸಹ ಇಲ್ಲಿ ಪ್ರಾರಂಭಿಸಿದ್ದೇವೆ. ಅನೇಕ ಜನರಿಗೆ ಯೋಗದ ಬಗ್ಗೆ ಇರುವಂತಹ ಆಸಕ್ತಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು" ಎಂದು ಹೇಳಿದರು.

ಕೇವಲ ನಾಲ್ವರಿಗೆ ಮಾತ್ರ ಕೋವಿಡ್-19 ಪಾಸಿಟಿವ್
ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದು ನಿಮಗೆ ಗೊತ್ತೇ ಇದೆ. ಕೋವಿಡ್ ಮೇಲೆ ಯೋಗದ ಪರಿಣಾಮಗಳು ಇನ್ನೂ ಅಷ್ಟಾಗಿ ದೃಢಪಟ್ಟಿಲ್ಲವಾದರೂ, ಪಾಪನಾಶಿ ಹಳ್ಳಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಕೇವಲ ನಾಲ್ಕೇ ನಾಲ್ಕು ಕೋವಿಡ್-19 ಸೋಂಕು ಪ್ರಕರಣಗಳು ಮಾತ್ರ ವರದಿ ಆಗಿವೆ. ದೈನಂದಿನ ಯೋಗವು ಗ್ರಾಮಸ್ಥರ ಯೋಗಕ್ಷೇಮ ಮತ್ತು ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು ಮತ್ತು ಅನೇಕ ಗ್ರಾಮಸ್ಥರು ತಾವು ಪ್ರತಿದಿನ ಯೋಗವನ್ನು ಮಾಡುವ ಮೂಲಕ ಕೋವಿಡ್ ಸಾಂಕ್ರಾಮಿಕ ರೋಗವನ್ನು ದೂರವಿಟ್ಟಿದ್ದೇವೆ ಎಂದು ಹೇಳುತ್ತಾರೆ.

ಆಯುಷ್ ವೈದ್ಯರು ಯೋಗದ ಜೊತೆಗೆ ಇನ್ನೊಂದು ಅಭ್ಯಾಸ ಹೇಳಿಕೊಟ್ಟರು
ಆಯುಷ್ ವೈದ್ಯರಾದ ಮತ್ತಿಕಟ್ಟಿ ಅವರು ಈ ಹಳ್ಳಿಯ ನಿವಾಸಿಗಳಿಗೆ ಯೋಗದೊಂದಿಗೆ ಮತ್ತೊಂದು ಜಲ ನೀತಿಯನ್ನು ಸಹ ಕಲಿಸಲು ನಿರ್ಧರಿಸಿ, ಅಲ್ಲಿನ ಜನರಿಗೆ ಈ ಮೂಗು ಕಟ್ಟುವಿಕೆಗೆ ಒಂದು ಪರಿಹಾರವನ್ನು ಹೇಳಿಕೊಟ್ಟರು. ಇದು ನಿಮ್ಮ ಮುಚ್ಚಿದ ಎಂದರೆ ಕಟ್ಟಿದ ಮೂಗಿನ ಲೋಳೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತು.

ಇದನ್ನೂ ಓದಿ:  Explained: ಜೇನುತುಪ್ಪದಲ್ಲೂ ಇದೆ ಅಪಾಯಕಾರಿ ಅಂಶಗಳು! ಏನೆಲ್ಲಾ ಡೇಂಜರ್ ಇದೆ ತಿಳಿಯಿರಿ

ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ಗ್ರಾಮಸ್ಥರು ಇದನ್ನು ಅಭ್ಯಾಸ ಮಾಡಿದರು ಮತ್ತು ಅದನ್ನು ಹಾಗೆಯೇ ಯೋಗಾಭ್ಯಾಸದೊಂದಿಗೆ ಮುಂದುವರಿಸಿದರು. ಜಲ ನೀತಿ ಕೂಡ ಯೋಗದ ಒಂದು ಭಾಗವಾಗಿದೆ ಮತ್ತು ಲೋಳೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಕೊಳೆ ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕುವ ಮೂಲಕ ಮೂಗಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಮತ್ತಿಕಟ್ಟಿ ಅವರು ಹೇಳಿದರು.
Published by:Ashwini Prabhu
First published: