HOME » NEWS » Explained » ZOOM FATIGUE IS AFFECTING MORE WOMEN THAN MEN FINDS A STANFORD STUDY STG HG

Zoom ಮೀಟಿಂಗ್ ಪುರುಷರಿಗಿಂತ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ; ಅಧ್ಯಯನ

ಮೈಂಡ್ ಆ್ಯಂಡ್ ಬಿಹೇವಿಯರ್‌ ಎಂಬ ಜರ್ನಲ್ ಟೆಕ್ನಾಲಜಿಯಲ್ಲಿ ಉಲ್ಲೇಖಿಸಿದ ಪ್ರಕಾರ, ಯಾಕೆ ವಿಡಿಯೋ ಕಾನ್ಫರೆನ್ಸ್‌ ಕಾಲ್‍ನಿಂದ ಆಯಾಸಗೊಳ್ಳುತ್ತಾರೆ ಎಂದು ಅಧ್ಯಯನ ಮಾಡಲಾಯಿತು. ಅದರಂತೆ ಯಾರು ದಣಿವಾಗುತ್ತಾರೆ ಎಂಬ ಮಾಹಿತಿಯು ದೊರೆಯಿತು.

news18-kannada
Updated:April 16, 2021, 2:41 PM IST
Zoom  ಮೀಟಿಂಗ್ ಪುರುಷರಿಗಿಂತ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತಿದೆ; ಅಧ್ಯಯನ
Photo: Google
  • Share this:
ಕೊರೋನಾ ವೈರಸ್ ಕಾಣಿಸಿಕೊಂಡ ದಿನದಿಂದ ಇಂದಿನವರೆಗೂ ಆನ್‍ಲೈನ್ ಮೀಟಿಂಗ್, ಆನ್‍ಲೈನ್ ತರಗತಿಗಳು, ಆನ್‍ಲೈನ್ ತರಬೇತಿಗಳು ಇವೆಲ್ಲವೂ ಜೂಮ್ ಆ್ಯಪ್ ಮೂಲಕವೇ ನಡೆಯುತ್ತಿವೆ. ಈ ಜೂಮ್ ಮೀಟಿಂಗ್ ವೈಯಕ್ತಿಕ ಜೀವನದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರು ಜೂಮ್ ಮೀಟಿಂಗ್‍ನಿಂದ ಬಳಲುತ್ತಿದ್ದಾರೆ ಎಂದು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾನಿಲಯದ ಸಂಶೋಧನೆಯಿಂದ ತಿಳಿದುಬಂದಿದೆ.

ಶೇ 13.8ರಷ್ಟು ಮಹಿಳೆಯರು ಅಂದರೆ 7 ಮಹಿಳೆಯರಲ್ಲಿ ಒಬ್ಬರು, 20 ಪುರುಷರಲ್ಲಿ ಒಬ್ಬರು ( ಶೇ 5.5ರಷ್ಟು ) ಮಂದಿ ಜೂಮ್ ಮೀಟಿಂಗ್‍ನಿಂದ ಹೈರಾಣಾಗುತ್ತಿದ್ದಾರೆ. ಅಂದರೆ ಪುರುಷರ ಶೇಕಡಾ ಪ್ರಮಾಣಕ್ಕೆ ಹೋಲಿಸಿದರೆ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನ ಮೂಲಕ ತಿಳಿಸಿದೆ.

ಮೈಂಡ್ ಆ್ಯಂಡ್ ಬಿಹೇವಿಯರ್‌ ಎಂಬ ಜರ್ನಲ್ ಟೆಕ್ನಾಲಜಿಯಲ್ಲಿ ಉಲ್ಲೇಖಿಸಿದ ಪ್ರಕಾರ, ಯಾಕೆ ವಿಡಿಯೋ ಕಾನ್ಫರೆನ್ಸ್‌ ಕಾಲ್‍ನಿಂದ ಆಯಾಸಗೊಳ್ಳುತ್ತಾರೆ ಎಂದು ಅಧ್ಯಯನ ಮಾಡಲಾಯಿತು. ಅದರಂತೆ ಯಾರು ದಣಿವಾಗುತ್ತಾರೆ ಎಂಬ ಮಾಹಿತಿಯು ದೊರೆಯಿತು. ನಂತರವೂ ಅಧ್ಯಯನ ಮುಂದುವರೆಸಲಾಯಿತು. ಇದರಂತೆ 10,322 ಮಂದಿಯನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಜೂಮ್ ಬಳಲಿಕೆ ಮತ್ತು ಆಯಾಸದ ಪ್ರಮಾಣ ಎಂಬ ಆಧಾರದ ಮೇಲೆ ಅಧ್ಯಯನಕ್ಕೊಳಪಡಿಸಲಾಯಿತು. ಇದರಿಂದ ಪರಸ್ಪರವಿದ್ದ ವೈಯಕ್ತಿಕ ವ್ಯತ್ಯಾಸಗಳನ್ನು ಹೊರಹಾಕಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.

ಈ ಮೇಲಿನ ಎಲ್ಲಾ ಅಧ್ಯಯನಗಳು ಪ್ರತಿಯೊಂದು ಅಂಶಗಳನ್ನು ಗಮನಿಸಿದಾಗ ಮಹಿಳೆಯರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಅಂಶ ತಿಳಿದು ಬಂದಿದೆ. ಜೂಮ್ ವಿಡಿಯೋ ಕಾಲ್‍ಗಳು ಮಹಿಳೆಯರನ್ನು ಚಿಂತಕ್ರಾಂತ ಸ್ಥಿತಿಗೆ ತಳ್ಳುತ್ತದೆ ಎಂಬ ಅಂಶ ಸಾಬೀತಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ರೀತಿ ಯಾಕೆ ಆಗುತ್ತಿದೆ ಎಂದು ತಿಳಿದಿದೆ ಎಂದು ಹ್ಯಾನ್‍ಕಾಕ್ ಹೇಳಿದರು.

ಈ ಕುರಿತು ವಿಡಿಯೋ ಕಾನ್ಫರೆನ್ಸ್‌ನಿಂದ ನಿಮ್ಮನ್ನು ನೀವು ಎಷ್ಟರ ಮಟ್ಟಿಗೆ ಕಂಡುಕೊಂಡಿರಿ? ಎಷ್ಟು ಮಂದಿಗೆ ನಿಮ್ಮ ಗಮನ ಬೇರೆಡೆ ಸೆಳೆಯಿತು ಎಂಬ ಪ್ರಶ್ನೆಗೆ ಬಹುತೇಕ ಮಹಿಳೆಯರು ಪುರುಷರಿಗಿಂತ ಸ್ವಯಂ ವೀಕ್ಷಣೆಯ ಮೇಲೆ ಒಲವು ತೋರಿದರು ಎಂಬ ಅಂಶ ತಿಳಿಯಿತು. ಸ್ವಯಂ ಗಮನವೂ ಹೆಚ್ಚಾಗಿ ನಕಾರಾತ್ಮಕ ಚಿಂತನೆಗಳು ಬೆಳೆಯಬಹುದು ಅಥವಾ ಸಂಶೋಧನಾಕಾರರು ಹೇಳಿದಂತೆ ಮಿರರ್ ಆಂಗ್ಸೈಟಿ ಎಂಬ ಕಾಯಿಲೆಯಿಂದ ಬಳಲೂಬಹುದು ಎಂದು ತಿಳಿದು ಬಂದಿತು.

ಜೊತೆಗೆ ಸ್ವಯಂ ವೀಕ್ಷಣೆಯು ತಮ್ಮನ್ನು ತಾವು ತೆರೆದುಕೊಳ್ಳುವುದು ಹೇಗೆ ಅಥವಾ ಮತ್ತೊಬ್ಬರೊಂದಿಗೆ ಮಾತುಕತೆ ಸಂವಾದಗಳು ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ಸ್ವಯಂ ವೀಕ್ಷಣೆಯ ಕುರಿತಾಗಿ ನಮ್ಮ ಭಾವನೆಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳುವುದೇ ನಿಜವಾದ ಉಪಾಯ ಎನ್ನುತ್ತಾರೆ ಹ್ಯಾನ್‍ಕಾಕ್.
ಜೂಮ್ ಮೀಟಿಂಗ್‍ನಿಂದ ಬಳಲುವವರನ್ನು ಹೊರಗೆ ತರಬೇಕಾದರೆ ವಿಡಿಯೋ ಮೀಟಿಂಗ್‍ನ್ನು ಆದಷ್ಟು ಕಡಿಮೆ ಮಾಡಬೇಕು, ಅಕಸ್ಮಾತ್ ಭಾಗವಹಿಸಲೇ ಬೇಕಾದಲ್ಲಿ ಮಿಟೀಂಗ್ ವಿಡಿಯೋವನ್ನು ನಮ್ಮ ಮುಖ ಕಾಣದಂತೆ ಟರ್ನ್ ಆಫ್ ಮಾಡಿಕೊಳ್ಳಬಹುದು. ಜೊತೆಗೆ ಯಾರು ವಿಡಿಯೋ ಮೀಟಿಂಗ್‍ನಿಂದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅರಿತು ಪರಿಹಾರ ನೀಡಬಹುದು.
First published: April 16, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories