Zero to Zerodha: ಶಿವಮೊಗ್ಗದ ಕಾಮತ್ ಸೋದರರ ವಾರ್ಷಿಕ ಆದಾಯ ತಲಾ ₹100 ಕೋಟಿ !

ಅಣ್ಣ-ತಮ್ಮ, ಅತ್ತಿಗೆ ಮೂವರು ವಾರ್ಷಿಕವಾಗಿ 300 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸಾಧನೆಯ ಹಿಂದೆ ಎಂದಿಗೂ ಹಣ ಹರಿದು ಬರುತ್ತದೆ ಎಂಬುವುದಕ್ಕೆ ಇದೇ ಸಾಕ್ಷಿ.

ನಿಖಿಲ್​​ & ನಿತಿನ್​ ಕಾಮತ್​

ನಿಖಿಲ್​​ & ನಿತಿನ್​ ಕಾಮತ್​

  • Share this:
ಶಿವಮೊಗ್ಗ ಮೂಲಕ ಕಾಮತ್​ ಸಹೋದರರು ಇಡೀ ದೇಶವೇ ಅವರತ್ತ ನೋಡುವಂತೆ ಮಾಡಿದ್ದಾರೆ. ಜರೋದಾ ಸ್ಟಾರ್​ ಬ್ರೋಕರ್​ ಕಂಪನಿಗೆ ಸಹ ಸಂಸ್ಥಾಪಕರಾದ ನಿತಿನ್​​ ಕಾಮತ್​ ಹಾಗೂ ನಿಖಿಲ್​​ ಕಾಮತ್​​​ ಈಗ ಯಶಸ್ವಿ ಜೋಡಿ ಎನಿಸಿಕೊಂಡಿದೆ. 2010ರಲ್ಲಿ ಬೆಂಗಳೂರಲ್ಲಿ ಕಂಪನಿ ಶುರು ಮಾಡಿದ ಕಾಮತ್​ ಸಹೋದರರು ಇಂದು ತಲಾ 100 ಕೋಟಿ ಆದಾಯ ಗಳಿಸುತ್ತಿದ್ದಾರೆ. ಜರೋದಾ ಕಂಪನಿಯಲ್ಲಿ ನಿತಿನ್​ ಕಾಮತ್​ ಪತ್ನಿ ಸಹ ಉದ್ಯೋಗಿಯಾಗಿದ್ದು, ಅಣ್ಣ-ತಮ್ಮ ಹಾಗೂ ಅತ್ತಿಗೆಯ ಒಟ್ಟು ವಾರ್ಷಿಕ ಆದಾಯ 300 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗದ ಕೊಂಕಣಿ ಕುಟುಂಬದಲ್ಲಿ ಜನಿಸಿದ ನಿತಿನ್​ಗೆ ಈಗ 41ರ ಪ್ರಾಯ. ಆದರೆ ಅವರ ವಯಸ್ಸಿಗೂ ಅವರ ಸಾಧನೆ, ಸಂಬಳಕ್ಕೂ ಸಂಬಂಧವೇ ಇಲ್ಲ. ನಿತಿನ್​​ ತಂದೆ ಯು.ಆರ್​.ಕಾಮತ್​ಗ ಬ್ಯಾಂಕ್​ ಉದ್ಯೋಗಿಯಾಗಿದ್ದು, ದೇಶದ ಹಲವೆಡೆ ಕೆಲಸ ಮಾಡಿದ್ದಾರೆ. ತಾಯಿ ವೀಣೆಯನ್ನು ನುಡಿಸುತ್ತಾರೆ. ತಂದೆಯ ಉದ್ಯೋಗದಿಂದ ದೇಶದ ಅನೇಕ ಭಾಗಗಳಲ್ಲಿ ನಿತಿನ್​ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. 1996ರಲ್ಲಿ ಬೆಂಗಳೂರಿನ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ಕೇವಲ 17 ವರ್ಷದವರಿದ್ದಾಗಲೇ ನಿತಿನ್​ ಅವರ ತಂದೆಯ ಸ್ಟಾಕ್​ ಮಾರ್ಕೆಟ್​ ಟ್ರೇಡಿಂಗ್​ಗಳನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಂದಲೇ ಅವರಿಗೆ ಷೇರು ಮಾರುಕಟ್ಟೆ ಬಗ್ಗೆ ಅತೀವ ಆಸಕ್ತಿ ಬೆಳೆಯುತ್ತಾ ಹೋಯಿತು.

2006ರಲ್ಲಿ ರಿಲಯನ್ಸ್​​ ಮನಿಯಲ್ಲಿ ಸಬ್​ ಬ್ರೋಕರ್​ ಆಗಿ ಕೆಲಸ ಆರಂಭಿಸುವ ನಿತಿನ್​ ಷೇರು ಮಾರುಕಟ್ಟೆಯ ಪಟ್ಟುಗಳಲ್ಲಿ ಪಳಗಿದರು. 2009ರಲ್ಲಿ ರಿಲಯನ್ಸ್​ ತೊರೆಯುವ ನಿತಿನ್​ 2010ರಲ್ಲಿ ತಮ್ಮದೇ ಬ್ರೋಕೇಜ್​​ ಕಂಪನಿ ಜರೋದಾ ಕಂಪನಿಯಲ್ಲಿ ಶುರು ಮಾಡುತ್ತಾರೆ. ಸ್ನೇಹಿತರಿಂದ ಹಣ ಪಡೆದು ಬರೋಬ್ಬರಿ 2 ಸಾವಿರ ಕೋಟಿ ಮೊತ್ತವನ್ನು ಜರೋದಾಗೆ ಹೂಡಿಕೆ ಮಾಡುತ್ತಾರೆ. ನಂತರ ನಿತಿನ್​ ಹಿಂತಿರುಗಿ ನೋಡಲೇ ಇಲ್ಲ. ಯಶಸ್ಸು ಅವರ ಕಾಲಿಡಿಯಲ್ಲೇ ಕುಳಿತು ಬಿಟ್ಟಿದೆ.

ಜರೋದಾದಲ್ಲಿ ವ್ಯವಹಾರ ಮಾಡಿದರೆ ಬ್ರೋಕರ್​ ಚಾರ್ಜ್​ ಕೇವಲ 1. ರೂಪಾಯಿ. ವಿಶ್ವದಲ್ಲೇ ಆನ್​ಲೈನ್​ ಬ್ರೋಕೇಜ್​​ ದರ ಇಷ್ಟು ಕಡಿಮೆ ತೆಗೆದುಕೊಳ್ಳುವುದು ಜರೋದಾ ಮಾತ್ರ. ಇದೇ ಇವರ ಯಶಸ್ಸಿನ ಗುಟ್ಟು ಎಂದರೂ ತಪ್ಪಾಗಲ್ಲ. ಈಗ ಕಂಪನಿ ಬೃಹದಾಕಾರವಾಗಿ ಬೆಳೆದು ನಿಂತಿದ್ದು. ನಿತಿನ್​​ ಸಹೋದರ ನಿಖಿಲ್​​ ಸಹ ಜರೋದಾದ ಸಹ ಸಂಸ್ಥಾಪಕರಾಗಿದ್ದಾರೆ. ನಿತಿನ್​ ಪತ್ನಿ ಸೀಮಾ ಪಾಟೀಲ್​ ಸಹ ಜರೋದಾದ ಸಲಗೆಗಾರರಾಗಿದ್ದು, ಸಹೋದರರಿಗೆ ಸರಿ ಸಮನಾದ ವೇತನ ಪಡೆಯುತ್ತಿದ್ದಾರೆ. ಅಣ್ಣ-ತಮ್ಮ, ಅತ್ತಿಗೆ ಮೂವರು ವಾರ್ಷಿಕವಾಗಿ 300 ಕೋಟಿ ರೂಪಾಯಿಗೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ. ಸಾಧನೆಯ ಹಿಂದೆ ಎಂದಿಗೂ ಹಣ ಹರಿದು ಬರುತ್ತದೆ ಎಂಬುವುದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ: Double Mask: ಡಬಲ್ ಮಾಸ್ಕ್ ಧಾರಣೆಗೆ ಮಾಸ್ಕ್​​ಗಳ ಆಯ್ಕೆ ಹೇಗಿರಬೇಕು? ಈ ತಪ್ಪುಗಳನ್ನು ಮಾಡಬೇಡಿ!

ಇನ್ನು ದೇಶಾದ್ಯಂತ 24 ಗಂಟೆಗಳ ಅವಧಿಯಲ್ಲಿ  1,86,364 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,75,55,457ಕ್ಕೆ ಏರಿಕೆ ಆಗಿದೆ.‌ ಗುರುವಾರ 3,660 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,18,895ಕ್ಕೆ ಏರಿಕೆ ಆಗಿದೆ. ಈವರೆಗೆ 2,48,93,410 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 23,43,152 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ.‌ ಈವರೆಗೆ 20,57,20,660 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: