Ig Nobel Prize 2021: ಇಗ್ನೋಬೆಲ್ ಪ್ರಶಸ್ತಿ ಎಂದರೇನು? ಈ ವರ್ಷ ಯಾವೆಲ್ಲ ಸಂಶೋಧನೆಗಳಿಗೆ ಈ ಗೌರವ ಸಿಕ್ಕಿದೆ ಗೊತ್ತಾ?

ಮುಖದ ಮೇಲೆ ಜೋರಾದ ಹೊಡೆತ ಬೀಳದಿರಲಿ ಎಂಬ ಕಾರಣಕ್ಕೆ ಗಂಡಸರು ಗಡ್ಡ ಬೆಳೆಸಿಕೊಳ್ಳುತ್ತಾರೆ ಎಂಬ ಸಂಶೋಧನೆಗೆ ಮಾಡಿದ ಈತನ್‌ ಬೆಸರಿಸ್‌, ಸ್ಟೀವನ್‌ ನೇಲ್‌ವೇ ಮತ್ತು ಡೇವಿಡ್‌ ಕ್ಯಾರಿಯರ್‌ ಅವರಿಗೆ ಈ ವರ್ಷದ ಇಗ್ನೋಬೆಲೆ ಶಾಂತಿ ಪ್ರಶಸ್ತಿ ಲಭಿಸಿದೆ.

ಇಗ್ನೋಬೆಲೆ ಪ್ರಶಸ್ತಿ 2021

ಇಗ್ನೋಬೆಲೆ ಪ್ರಶಸ್ತಿ 2021

  • Share this:
    ಹಾಸ್ಯಾಸ್ಪದ ಎನಿಸುವ ವಿಚಿತ್ರವಾದ ಸಂಶೋಧನೆಗಳಿಗೆ ಇಗ್ನೋಬೆಲ್ ಪ್ರಶಸ್ತಿ (Ig Nobel Award) ನೀಡಲಾಗುತ್ತದೆ. ಜಾಗತಿಕವಾಗಿ ನೊಬೆಲ್​ ಪ್ರಶಸ್ತಿಗೆ ಶ್ರೇಷ್ಠ ಘನತೆ ಇರುವಂತೆ ವಿಚಿತ್ರ ಅಧ್ಯಯನಗಳಿಗೆ ಕೊಡುವ ಈ ಇಗ್ನೋಬೆಲ್ ಪ್ರಶಸ್ತಿಗೂ ಜಾಗತಿಕವಾಗಿ ವಿಶಿಷ್ಠ ಸ್ಥಾನವಿದೆ. ನೊಬೆಲ್ ಪ್ರಶಸ್ತಿ ನೀಡುವ ಮಾದರಿಯಲ್ಲಿಯೇ ಪ್ರತಿವರ್ಷ ವಿವಿಧ ವಿಭಾಗಗಳ ವಿಚಿತ್ರ ಅಧ್ಯಯನ ಮಾಡುವ ಸಂಶೋಧನೆಗೆ ಇಗ್ನೋಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಇಂಪ್ರಾಬಬಲ್‌ ಎಂಬ ಸಂಸ್ಥೆ ಈ ಪ್ರಶಸ್ತಿ ನೀಡುತ್ತದೆ. 2021ನೇ ಸಾಲಿನ 31ನೇ ಇಗ್ನೋಬೆಲ್‌ ಪ್ರಶಸ್ತಿಗಳು ಘೋಷಣೆಯಾಗಿದೆ. ಯಾವ ವಿಭಾಗದಲ್ಲಿ, ಯಾವ ಸಂಶೋಧನೆಗೆ ಪ್ರಶಸ್ತಿ ಬಂದಿದೆ ಎಂಬ ವಿವರಗಳು, ಇಲ್ಲಿದೆ.

    ಬೊಜ್ಜಿಗೂ ದೇಶದ ಭ್ರಷ್ಟಾಚಾರಕ್ಕೆ ಸಂಬಂಧವಿದೆ (ಅರ್ಥಶಾಸ್ತ್ರ ವಿಭಾಗ)

    ಬೊಜ್ಜಿಗೂ ದೇಶದ ಭ್ರಷ್ಟಚಾರಕ್ಕೂ ಸಂಬಂಧವಿದೆ. ಆಯಾ ದೇಶದ ರಾಜಕಾರಣಿಗಳ ಬೊಜ್ಜಿಗೂ ಭ್ರಷ್ಟಚಾರಕ್ಕೂ ಸಂಬಂಧವಿದೆ ಎಂದು ಪಾವ್ಲೋ ಬ್ಲಾವಾಟ್‌ಸ್ಕಿ ಅವರು ನಡೆಸಿರುವ ಅಧ್ಯಯನ ಸಾಬೀತು ಮಾಡಿದೆ! ಫ್ರಾನ್ಸ್‌, ಸ್ವಿಟ್ಜರ್‌ಲೆಂಡ್‌, ಆಸ್ಟ್ರೇಲಿಯಾ, ಆಸ್ಟ್ರೀಯಾ, ಚೆಕ್‌ ಗಣರಾಜ್ಯದ ಮತ್ತು ಇಂಗ್ಲೆಂಡ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿದೆ ಇದೆ ಎಂಬುದನ್ನು ಅರಿಯುವುದಕ್ಕೆ ರಾಜಕಾರಣಿಗಳ ಬೊಜ್ಜು ನೆರವಾಗುತ್ತದೆಯಂತೆ! ಈ ಅಧ್ಯಯನಕ್ಕೆ ಈ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಇಗ್ನೋಬೆಲ್ ಪ್ರಶಸ್ತಿ ನೀಡಲಾಗಿದೆ.

    ಥಿಯೇಟರ್ ಒಳಗಿನ ವಾಸನೆಯಿಂದ ಸಿನಿಮಾ ಹೇಗೆ ಎಂದು ನಿರ್ಧರಿಸಬಹುದು (ರಾಸಾಯನಶಾಸ್ತ್ರ ವಿಭಾಗ)

    ಚಿತ್ರಮಂದಿರದೊಳಗಿನ ಗಾಳಿಯಲ್ಲಿ ಇರುವ ವಾಸನೆಯಿಂದ, ಪ್ರೇಕ್ಷಕರು ನೋಡುತ್ತಿರುವ ಚಿತ್ರದಲ್ಲಿರುವ ಹಿಂಸೆ, ಸೆಕ್ಸ್‌, ಸಮಾಜ ಬಾಹಿರ ಚಟುವಟಿಕೆಗಲು, ಮಾದಕ ವಸ್ತುಗಳ ಬಳಕೆ ಮತ್ತು ಅಶ್ಲೀಲ ಭಾಷೆಯ ಬಳಕೆಯನ್ನು ಅರಿಯುವ ಅಧ್ಯಯನಕ್ಕೆ ಈ ಬಾರಿಯ ಇಗ್ನೋಬೆಲ್ ಪ್ರಶಸ್ತಿ ಲಭಿಸಿದೆ. ಜರ್ಮನಿ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಗ್ರೀಸ್‌, ಸೈಪ್ರಸ್‌ ಮತ್ತು ಆಸ್ಟ್ರಿಯಾಗಳಲ್ಲಿ ಈಕುರಿತು ಯಾರ್ಗ್‌ ವಿಕರ್, ನಿಕೊಸ್‌ ಕ್ರಾಟರ್‌ ಅವರ ತಂಡ ಅಧ್ಯಯನ ನಡೆಸಿ ಪ್ರಶಸ್ತಿಗೆ ಭಾಜನವಾಗಿದೆ.

    ಸೆಕ್ಸ್ ಮಾಡಿದರೆ ಕಟ್ಟಿರುವ ಮೂಗು ಸರಿಹೋಗುತ್ತದೆ (ವೈದ್ಯಕೀಯ ವಿಭಾಗ)

    ಮೂಗು ಕಟ್ಟಿದೆಯೇ? ವಿಕ್ಸ್‌ ಆಕ್ಷನ್‌ ತಗೊಳ್ಳುವುದು ಒಂದು ದಾರಿ. ಆದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಕಟ್ಟಿರುವ ಮೂಗು ಸರಿಹೋಗುತ್ತದೆ ಮತ್ತು ಉಸಿರಾಟ ಸಲೀಸಲಾಗುತ್ತದೆ ಎಂದು ಆಲ್ಕೆ ಸೆಮ್‌ ಬುಲತ್‌ ಅವರ ತಂಡ ಪತ್ತೆ ಮಾಡಿದೆಯಂತೆ. ಅವರ ಈ ಸಂಶೋಧನೆಗೆ ಈ ಬಾರಿಗೆ ಇಗ್ನೋಬೆಲ್ ಪ್ರಶಸ್ತಿ ಸಿಕ್ಕಿದೆ.

    ಮುಖದ ಹೊಡೆತ ಬೀಳದಿರಲು ಗಡ್ಡ ಬೆಳೆಸುತ್ತಾರೆ (ಶಾಂತಿ ಪ್ರಶಸ್ತಿ)

    ಮುಖದ ಮೇಲೆ ಜೋರಾದ ಹೊಡೆತ ಬೀಳದಿರಲಿ ಎಂಬ ಕಾರಣಕ್ಕೆ ಗಂಡಸರು ಗಡ್ಡ ಬೆಳೆಸಿಕೊಳ್ಳುತ್ತಾರೆ ಎಂಬ ಸಂಶೋಧನೆಗೆ ಮಾಡಿದ ಈತನ್‌ ಬೆಸರಿಸ್‌, ಸ್ಟೀವನ್‌ ನೇಲ್‌ವೇ ಮತ್ತು ಡೇವಿಡ್‌ ಕ್ಯಾರಿಯರ್‌ ಅವರಿಗೆ ಈ ವರ್ಷದ ಇಗ್ನೋಬೆಲೆ ಶಾಂತಿ ಪ್ರಶಸ್ತಿ ಲಭಿಸಿದೆ.

    ಫುಟ್​ಪಾತ್​ ಮೇಲೆ ನಡೆಯುವ ಪಾದಚಾರಿಗೆ ವಾಹನ ಗುದ್ದುವುದಿಲ್ಲ (ಭೌತಶಾಸ್ತ್ರ ವಿಭಾಗ)

    ರಸ್ತೆ ಮೇಲೆ ಸಂಚರಿಸುವ ವಾಹನಗಳು ಡಿಕ್ಕಿ ಹೊಡೆಯುವುದು ಮಾಮೂಲಿ. ಆದರೆ ಫುಟ್‌ಪಾತ್‌ ಮೇಲೆ ನಡೆಯುವ ಪಾದಚಾರಿಗಳೇಕೆ ವಾಹನಗಳು ಡಿಕ್ಕಿ ಹೊಡೆಯುವುದಿಲ್ಲ? ಇದರ ಹಿಂದಿರಬಹುದಾದ ಭೌತಶಾಸ್ತ್ರೀಯ ಅಂಶವನ್ನು ಕಂಡುಕೊಳ್ಳುವುದಕ್ಕೆ ಅಧ್ಯಯನ ನಡೆಸಿದ ಅಲೆಸಾಂಡ್ರೋ ಕಾರ್ಬೆಟ್ಟಾ, ಜಾಸ್ಪರ್‌ ಮೂಸೆನ್‌ ಮತ್ತು ತಂಡಕ್ಕೆ ಭೌತಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

    ಸಾರಿಗೆ ವಿಭಾಗ ಪ್ರಶಸ್ತಿ

    ಖಡ್ಗ ಮೃಗವನ್ನು ತಲೆಕೆಳಗಾಗಿ ನೇತು ಹಾಕಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸುರಕ್ಷಿತ ಎಂಬುದನ್ನು ಕಂಡುಕೊಂಡ ರಾಬಿನ್‌ ರಾಡ್‌ಕ್ಲಿಫ್‌ ಮತ್ತ ತಂಡಕ್ಕೆ ಸಾರಿಗೆ ವಿಭಾಗದಲ್ಲಿ ಪ್ರಸಸ್ತಿ ಲಭಿಸಿದೆ.

    ಎಂಟೋಮಾಲಜಿ ವಿಭಾಗ ಪ್ರಶಸ್ತಿ

    ಜಲಂತಗಾರ್ಮಿಗಳಲ್ಲಿ ಜಿರಲೆಗಳನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಕಂಡುಕೊಂಡ ಜಾನ್‌ ಮುಲ್‌ರೆನನ್‌ ಮತ್ತು ತಂಡಕ್ಕೆ ಪ್ರಶಸ್ತಿ ಲಭಿಸಿದೆ.
    Published by:HR Ramesh
    First published: