• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಒಮಿಕ್ರಾನ್ ಐದನೇ ತಳಿ ಎಷ್ಟು ಅಪಾಯಕಾರಿ? ಎದುರಾಗುತ್ತಾ ಕೊರೊನಾದ ನಾಲ್ಕನೇ ಅಲೆ?

Explained: ಒಮಿಕ್ರಾನ್ ಐದನೇ ತಳಿ ಎಷ್ಟು ಅಪಾಯಕಾರಿ? ಎದುರಾಗುತ್ತಾ ಕೊರೊನಾದ ನಾಲ್ಕನೇ ಅಲೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Omicron XBB.1.16: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗತೊಡಗಿವೆ. ಹೊಸ ರೂಪಾಂತರದಿಂದಾಗಿ ತೊಂದರೆ ಮತ್ತು ಆತಂಕ ಹೆಚ್ಚಾಗುತ್ತಿವೆ. ಈ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ ಓದಿ...

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು (Covid Cases) ಮತ್ತೊಮ್ಮೆ ಅತ್ಯಂತ ವೇಗವಾಗಿ ಹೆಚ್ಚಾಗಲಾರಂಭಿಸಿವೆ. 24 ಗಂಟೆಗಳಲ್ಲಿ ಕೋವಿಡ್‌ನಿಂದ ಸುಮಾರು 3,000ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವಿನ (Death) ಸಂಖ್ಯೆಯೂ ಹೆಚ್ಚುತ್ತಿದೆ. ದೆಹಲಿ, ಕರ್ನಾಟಕ (Karnataka) ಮತ್ತು ಪಂಜಾಬ್‌ನಲ್ಲಿ ತಲಾ ಇಬ್ಬರು ರೋಗಿಗಳು, ಗುಜರಾತ್‌ನಲ್ಲಿ (Gujarat) ಒಬ್ಬ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರತಿದಿನ 2,000 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.


Omicron ಹೊಸ ರೂಪಾಂತರ XBB.1.16 ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೋವಿಡ್‌ನ ಐದನೇ ರೂಪಾಂತರ ಎಷ್ಟು ಡೇಂಜರಸ್​? ಅದು ಸಾರ್ವಜನಿಕರಿಗೆ ಎಷ್ಟು ಅಪಾಯಕಾರಿ ಎಂದು ಸಾಬೀತಾಗಬಹುದು ಎಂಬ ಕುರಿತು ತಜ್ಞರು ಕೊಟ್ಟ ಅಭಿಪ್ರಾಯ ಹೀಗಿದೆ.


ಇದನ್ನೂ ಓದಿ: Explained: ಪ್ರಸ್ತುತ ನಿರುದ್ಯೋಗ ಸಮಸ್ಯೆಯ ನೈಜ ಚಿತ್ರಣವೇನು? ಕೋವಿಡ್, ಇನ್ನಿತರ ಪರಿಸ್ಥಿತಿಗಳು ಇದಕ್ಕೆ ಕಾರಣವೇ?


XBB.1.16 ರೂಪಾಂತರ ಎಂದರೇನು


ಏಷ್ಯನ್ ಆಸ್ಪತ್ರೆಯ ಅಮೇರಿಹೆಲ್ತ್‌ನಲ್ಲಿ ವೈರಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಚಾರು ದತ್ ಅರೋರಾ ಈ ಬಗ್ಗೆ ವಿವರಿಸಿದ್ದು, XBB.1.16 ಒಮಿಕ್ರಾನ್‌ನ ಹೊಸ ರೂಪಾಂತರ ಎಂದು ತಿಳಿಸಿದ್ದಾರೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಇದ್ದಕ್ಕಿದ್ದಂತೆ ಕೋವಿಡ್ ಪ್ರಕರಣಗಳು ಹೆಚ್ಚಾಗತೊಡಗಿವೆ. ಇದರ ಮೊದಲ ಪ್ರಕರಣ ಫೆಬ್ರವರಿಯಲ್ಲಿ ದೇಶದಲ್ಲಿ ಬೆಳಕಿಗೆ ಬಂದಿದೆ.


XBB.1.16 ರೂಪಾಂತರವು ಅದರ ನ್ಯೂಕ್ಲಿಯೊಟೈಡ್‌ಗಳು ಮತ್ತು ಅಮೈನೋ ಆಮ್ಲಗಳಲ್ಲಿ ಹೆಚ್ಚುವರಿ ರೂಪಾಂತರಗಳೊಂದಿಗೆ ವೇಗವಾಗಿ ಹರಡುತ್ತದೆ. ಇದು ಲಸಿಕೆಯಿಂದ ಪಡೆದ ವಿನಾಯಿತಿ ಮತ್ತು ಸೋಂಕಿನ ನಂತರ ರೂಪುಗೊಂಡ ನೈಸರ್ಗಿಕ ವಿನಾಯಿತಿ ಎರಡನ್ನೂ ತಟಸ್ಥಗೊಳಿಸುತ್ತದೆ. ವ್ಯಾಕ್ಸಿನೇಷನ್ ಪಡೆದಿದ್ದರೂ ಇದು ಜನರಿಗೆ ಸೋಂಕು ತರುತ್ತದೆ. ಹೀಗಾಗಿ ಪ್ರತಿ ದಿನ ದೇಶದಲ್ಲಿ ಶೇಕಡ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದು ಈಗಾಗಲೇ ರೂಪುಗೊಂಡ ಇಮ್ಯುನಿಟಿಯನ್ನೂ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.


coronavirus outbreak, icus are filling up in china


XBB.1.16 ಸಾರ್ವಜನಿಕರಿಗೆ ಯಾಕಷ್ಟು ಅಪಾಯಕಾರಿ?


XBB.1.16 ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತದೆ. ಇದು ಹೈಬ್ರಿಡ್ ರೂಪಾಂತರವಾಗಿದ್ದು, ಇದು ಕೋವಿಡ್‌ನ XXB ವರ್ಗಕ್ಕೆ ಸೇರಿದೆ. ಇದು SARS CoV 2 ರ ರೂಪಾಂತರದಿಂದಾಗಿ ರೂಪುಗೊಂಡಿದ್ದು, ಇದು ಹರಡುವ ವೇಗವು ಅತೀ ಹೆಚ್ಚಿದೆ. ಈ ಬಗ್ಗೆ ವಿವರಿಸಿರುವ ಡಾ. ಅನುರಾಗ್ ಸಕ್ಸೇನಾ 'XBB ಓಮಿಕ್ರಾನ್‌ನ ಎರಡು ರೂಪಾಂತರಗಳಿಂದ ರೂಪುಗೊಂಡ ಹೈಬ್ರಿಡ್ ವೈರಸ್​ ಆಗಿದೆ. ಇದು ಈ ಹಿಂದೆ ಸೋಂಕಿತರಾಗಿ ಗುಣಮುಖರಾದ ಹಾಗೂ ವ್ಯಾಕ್ಸಿನೇಷನ್‌ ಪಡೆದವರಲ್ಲಿರುವ ರೋಗನಿರೋಧಕ ಶಕ್ತಿ ತಟಸ್ಥಗೊಳಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವೇಗವಾಗಿ ಹರಡುತ್ತದೆ ಎಂದಿದ್ದಾರೆ.


ಇದರ ಲಕ್ಷಣಗಳೇನು?


XBB.1.16 ರೂಪಾಂತರದ ರೋಗಲಕ್ಷಣಗಳು ಓಮಿಕ್ರಾನ್‌ನಂತೆಯೇ ಇರುತ್ತವೆ. ನಿಮಗೆ 48 ಗಂಟೆಗಳಿಗಿಂತ ಹೆಚ್ಚು ಕಾಲ ಜ್ವರ, ಕೆಮ್ಮು, ಗಂಟಲು ನೋವು ಮತ್ತು ದೇಹ ನೋವು, ಹೊಟ್ಟೆ ನೋವು, ಶೀತ ಇದ್ದರೆ ಅಗತ್ಯವಾಗಿ ನೀವು ಪರೀಕ್ಷಿಸಬೇಕು. ಅಂತಹ ರೋಗಲಕ್ಷಣಗಳನ್ನು ಕಂಡರೆ, ತಕ್ಷಣವೇ ಐಸೋಲೇಟ್​ ಆಗಿ,


ಇದನ್ನೂ ಓದಿ: The Vial: ಕೊರೊನಾ ವಿರುದ್ಧ ಭಾರತದ ಸಮರ, ಹಿಸ್ಟರಿ ಟಿವಿ 18ನ 'ದಿ ವೈಲ್' ಡಾಕ್ಯುಮೆಂಟರಿ ಅನಾವರಣ


XXB.1.16 ರೂಪಾಂತರ ಎಷ್ಟು ಅಪಾಯಕಾರಿ?


ಇತರ ಕಾಯಿಲೆಗಳಿಂದ ಬಳಲುತ್ತಿರುವವರು, ವಯಸ್ಸಾದವರು, ಹೃದ್ರೋಗಿಗಳು, ಆಸ್ತಮಾ, ಟಿಬಿ, ಸಕ್ಕರೆ ಕಾಯಿಲೆ ಮತ್ತು ಮೂತ್ರಪಿಂಡದ ಸಮಸ್ಯೆಗಳಿರುವ ರೋಗಿಗಳ ಪಾಲಿಗೆ ಈ ರೂಪಾಂತರವು ಅತ್ಯಂತ ಅಪಾಯಕಾರಿಯಾಗಿದೆ. ಇದನ್ನು ತಪ್ಪಿಸಲು ಇರುವ ಉತ್ತಮ ಮಾರ್ಗವೆಂದರೆ ವ್ಯಾಕ್ಸಿನೇಷನ್. ಲಸಿಕೆ ಅದರ ವಿರುದ್ಧ ಸರಿಯಾದ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.
ನಾಲ್ಕನೇ ಬೂಸ್ಟರ್ ಡೋಸ್ ಅಗತ್ಯವಿದೆಯೇ?


ಇಲ್ಲ, ಕೋವಿಡ್ ಲಸಿಕೆ ಎರಡೂ ಡೋಸ್ ಪಡೆದವರು ತಮ್ಮ ದೇಹದಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಹಿಂದಿನ ಲಸಿಕೆಯಿಂದಲೂ ರೋಗನಿರೋಧಕ ಶಕ್ತಿ ಅಭಿವೃದ್ಧಿಗೊಂಡಿರುತ್ತದೆ. ಹೀಗಿರುವಾಗ ತಜ್ಞರು ನಾಲ್ಕನೇ ಡೋಸ್​ ಪಡೆಯುವ ಸಲಹೆ ನೀಡುತ್ತಿಲ್ಲ.


ಇನ್ನು ರೂಪಾಂತರಗಳ ಹಾವಳಿ ನೇರವಾಗಿ ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವುದರಿಂದ ಜನರು ದೇಶದಲ್ಲಿ ಯಾವುದೇ ನಿಯಮಗಳಿಲ್ಲದಿದ್ದರೂ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ. ವೈದ್ಯರು ಕೂwಆ ಈ ಮೊದಲು ಅನುಸರಿಸುತ್ತಿದ್ದ ಕ್ರಮಗಳನ್ನು ಮುಂದುವರೆಸುವಂತೆ ಶಿಫಾರಸು ಮಾಡುತ್ತಿದ್ದಾರೆ.

First published: