ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಕೈಗೊಂಡು ಸುರಕ್ಷಿತವಾಗಿ ಮರಳಿ ಬಂದಿರುವ ಸುದ್ದಿ ನಮಗೆಲ್ಲಾ ಗೊತ್ತೇ ಇದೆ. ಈಗ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅಂತರಿಕ್ಷ ಉಡಾವಣೆ ನಡೆಸಲಿದ್ದು , ಇವರ ಜೊತೆ ಇನ್ನೂ ಮೂವರು ಬಾಹ್ಯಾಕಾಶದಲ್ಲಿ ಸಂಚರಿಸಲಿದ್ದಾರೆ. ಜುಲೈ 20ರಂದು ಜೆಫ್ ಬೆಜೋಸ್ ತಮ್ಮ ಸಹಯಾತ್ರಿಕರ ಜೊತೆ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ತನ್ನದೇ ಸಂಸ್ಥೆ ಬ್ಲೂ ಒರಿಜಿನ್ ನಿರ್ಮಿಸಿದ ರಾಕೆಟ್‌ನಲ್ಲಿ ಬಾಹ್ಯಾಕಾಶದ ಅಂಚಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಬಾಹ್ಯಾಕಾಶದಲ್ಲಿ ಏನೆಲ್ಲಾ ಪರಿವರ್ತನೆಗಳನ್ನು ತರಲಿದ್ದಾರೆ? ಯಾವ ರೀತಿಯ ಮಾರ್ಪಾಡುಗಳಿಗೆ ನಾಂದಿ ಹಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬೆಜೋಸ್ ಬಾಹ್ಯಾಕಾಶ ಯಾನವನ್ನು ಕೈಗೊಂಡಿರುವ ಕಾರಣವೇನು..?
ಬೆಜೋಸ್‌ಗೆ ಈ ಬಾಹ್ಯಾಕಾಶ ಯಾನ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಬೆಜೋಸ್ ಒಡೆತನದ ಬಾಹ್ಯಾಕಾಶ ಪರಿಶೋಧನಾ ಕಂಪೆನಿಯಾದ ಬ್ಲೂ ಒರಿಜಿನ್ ತಯಾರಿಸಿದ ನ್ಯೂ ಶೆಪರ್ಡ್ ರಾಕೆಟ್ ಹಾಗೂ ಕ್ಯಾಪ್ಸೂಲ್‌ನಲ್ಲಿ ಸಿಬ್ಬಂದಿಯ ತಂಡವನ್ನೊಳಗೊಂಡು ಪ್ರಯಾಣಿಸುತ್ತಿರುವ ಮೊದಲ ಕಾರ್ಯಾಚರಣೆಯಾಗಿದೆ. ಬಾಹ್ಯಾಕಾಶ ನೌಕೆಯು ಪರೀಕ್ಷಾರ್ಥವಾಗಿ 15 ಹಾರಾಟಗಳನ್ನು ನಡೆಸಿದ್ದರೂ ಮಾನವರೊಂದಿಗೆ ಇದುವರೆಗೆ ಹಾರಾಟ ನಡೆಸಿಲ್ಲ. ಬೆಜೋಸ್ ಸಹೋದರ ಮಾರ್ಕ್‌ರೊಂದಿಗೆ ಅತ್ಯಂತ ಕಿರಿಯ ಹಾಗೂ ಹಿರಿಯ ಪ್ರಯಾಣಿಕರಾದ 18 ರ ಹರೆಯದ ಓಲಿವರ್ ಡೇಸ್‌ಮೆನ್ ಹಾಗೂ 82 ರ ಹರೆಯದ ವಾಲ್ಲಿ ಫಾಂಕ್ ಎಂಬುವವರು ತೆರಳಲಿದ್ದಾರೆ.
ಬೆಜೋಸ್ ಪ್ರಯಾಣ ಮಾಡಲಿರುವ ನ್ಯೂ ಶೆಪರ್ಡ್ ಕ್ರಾಫ್ಟ್ ರಾಕೆಟ್ ಹಾಗೂ ಕ್ಯಾಪ್ಸೂಲ್ ಕಾಂಬೋ ಆಗಿದೆ. ಇದು 62 ಮೈಲಿಗಳಿಗಿಂತ ಹೆಚ್ಚು ದೂರವನ್ನು ಲಂಬವಾಗಿ ಭೂಮಿಯ ಮೇಲಿನ ಉಪಕಕ್ಷೆಯಲ್ಲಿ ಹಾರುವಂತೆ ವಿನ್ಯಾಸಗೊಳಿಸಲಾಗಿದೆ. ಈ ರಾಕೆಟ್‌ನಲ್ಲಿ ಆರು ಜನ ಪ್ರಯಾಣಿಸಬಹುದಾಗಿದೆ. ಗಗನ ಯಾತ್ರಿಗಳು ಹಾಗೂ ಸಂಶೋಧಕರನ್ನು ಬಾಹ್ಯಾಕಾಶದ ಗಡಿ ಎಂದು ಗುರುತಿಸಲಾದ ಕಾರ್ಮನ್ ರೇಖೆಯವರೆಗೆ ಕೊಂಡೊಯ್ಯಲು ವಿನ್ಯಾಸಗೊಳಿಸಲಾದ ಮರುಬಳಕೆ ಮಾಡಬಹುದಾದ ರಾಕೆಟ್ ವ್ಯವಸ್ಥೆ ಇದಾಗಿದೆ ಎಂದು ಬ್ಲೂಒರಿಜಿನ್ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಇದು ಎಷ್ಟು ಸುರಕ್ಷಿತವಾಗಿದೆ?
ಬ್ಲೂ ಒರಿಜಿನ್ ಹೇಳುವಂತೆ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆ ಸುರಕ್ಷಿತ ವ್ಯವಸ್ಥೆಗಳನ್ನೊಳಗೊಂಡಿದ್ದು 2012ರಿಂದ 15 ಪರೀಕ್ಷಾರ್ಥ ಹಾರಾಟಗಳನ್ನು ನಡೆಸಿ ಯಶಸ್ವಿಯಾಗಿದೆ. ಆದರೆ ಜೆಫ್ ಹಾಗೂ ಸಹೋದರ ಮತ್ತು ಇನ್ನಿಬ್ಬರು ಇದೇ ಮೊದಲ ಬಾರಿಗೆ ರಾಕೆಟ್‌ನಲ್ಲಿ ಉಡ್ಡಯನ ನಡೆಸುತ್ತಿದ್ದು ನ್ಯೂ ಶೆಪರ್ಡ್ ಇದುವರೆಗೆ ಮಾನವ ಉಡ್ಡಯನ ನಡೆಸಿಲ್ಲ.
ಬ್ಲೂ ಒರಿಜಿನ್ ಕಂಪೆನಿಯ ಸಿಬ್ಬಂದಿ ಹೇಳುವಂತೆ ಈ ರಾಕೆಟ್‌ನಲ್ಲಿ ಅವರ ಕಂಪೆನಿ ಬಾಸ್ ಹಾಗೂ ಸಹೋದರ ಹಾಗೂ ಮತ್ತಿಬ್ಬರು ಪ್ರಯಾಣಿಸಲಿದ್ದು ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ರಾಕೆಟ್ ಹೊಂದಿದೆ. ರಾಕೆಟ್ ಎಸ್ಕೇಪ್ ವ್ಯವಸ್ಥೆಯನ್ನು ಹೊಂದಿದ್ದು, ಮೂರು ಬಾರಿ ಯಶಸ್ವಿಯಾಗಿ ಪರಿಶೀಲಿಸಲಾಗಿದೆ. ರಾಕೆಟ್ ಲ್ಯಾಂಡಿಂಗ್ ಸಿಸ್ಟಮ್ ಅನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಕ್ಯಾಪ್ಸೂಲ್‌ನ ಕೆಳಭಾಗದಲ್ಲಿ ರೆಟ್ರೋ-ಥ್ರಸ್ಟ್ ವ್ಯವಸ್ಥೆ ಇದ್ದು, ಪಶ್ಚಿಮ ಟೆಕ್ಸಾಸ್‌ನಲ್ಲಿರುವ ಕಂಪನಿಯ ಲಾಂಚ್‌ಪ್ಯಾಡ್‌ನಲ್ಲಿ ಕೇವಲ 1.6 ಕಿ.ಮೀ ವೇಗದಲ್ಲಿ ಇಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಕ್ಯಾಪ್ಸೂಲ್ ಪ್ಯಾರಾಚ್ಯೂಟ್‌ಗಳನ್ನು ಒಳಗೊಂಡಿದೆ.
ಬ್ರಾನ್ಸನ್ ವಿಮಾನಕ್ಕಿಂತ ಹೇಗೆ ಭಿನ್ನವಾಗಿದೆ?
ಜುಲೈ 12ರಂದು, ವರ್ಜಿನ್ ಗ್ಯಾಲಕ್ಸಿಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಮತ್ತು ಇತರ ಐದು ಸಿಬ್ಬಂದಿ ಯುಎಸ್‌ನಲ್ಲಿರುವ ತಮ್ಮ ನೆಲೆಯಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಿದರು. ಆದರೆ ಬ್ರಾನ್ಸನ್ ಕಂಪನಿ ರೂಪಿಸಿದ ಸಿಸ್ಟಮ್ ಬ್ಲೂ ಒರಿಜಿನ್ ರಾಕೆಟ್‌ಗಿಂತ ಹೆಚ್ಚು ಭಿನ್ನವಾಗಿದೆ.
ಮೊದಲಿಗೆ, ವರ್ಜಿನ್ ಗ್ಯಾಲಕ್ಸಿ ಬಳಕೆಯು ರಾಕೆಟ್ ಅಲ್ಲ. ಎರಡು ವಿಮಾನಗಳ ಸಮೂಹವಾಗಿದೆ. ಬ್ರಾನ್ಸನ್ ಹಾಗೂ ಸಹಯಾತ್ರಿಗಳು ಸೂಪರ್‌ಸಾನಿಕ್ ಪ್ಲೇನ್‌ನಲ್ಲಿ ತನ್ನ ಬಾಹ್ಯಾಕಾಶ ಪ್ರಯಾಣವನ್ನು ಪೂರ್ಣಗೊಳಿಸಿದರು. 50,000 ಫೀಟ್ ಎತ್ತರಕ್ಕೆ ಸಣ್ಣ ವಿಮಾನ ಕೊಂಡೊಯ್ಯುವ ಇನ್ನೊಂದು ಪ್ಲೇನ್ ತನ್ನಷ್ಟಕ್ಕೆ ಬೇರ್ಪಡುವ ಮೊದಲು ಭೂಮಿಯಿಂದ ಸರಿಸುಮಾರು 90 ಕಿಮೀ ಎತ್ತರವನ್ನು ಸ್ಪರ್ಶಿಸುತ್ತದೆ. ಆದರೆ ಬ್ಲೂ ಒರಿಜಿನ್ ಹೇಳುವಂತೆ ಅದರ ರಾಕೆಟ್ ಭೂಮಿಯ ಮೇಲಿನಿಂದ 100 ಕಿಮೀ ಹೆಚ್ಚಿನ ವೇಗವನ್ನು ದಾಟುತ್ತದೆ. ಅಂತೆಯೇ ಇದು ದೊಡ್ಡ ಕಿಟಕಿಗಳನ್ನು ಹೊಂದಿದೆ. ವರ್ಜಿನ್ ಗ್ಯಾಲಕ್ಸಿಯು ವಿಮಾನಕ್ಕೆ ಹೋಲುವ ಸಣ್ಣ ಕಿಟಕಿಗಳನ್ನು ಹೊಂದಿದೆ. ಬ್ಲೂ ಒರಿಜಿನ್ ಹೇಳುವಂತೆ “ಲಿಕ್ವಿಡ್ ಹೈಡ್ರೋಜನ್ / ಲಿಕ್ವಿಡ್ ಆಕ್ಸಿಜನ್ ರಾಕೆಟ್ ಎಂಜಿನ್” “100ಕ್ಕಿಂತ ಕಡಿಮೆ ಓಝೋನ್ ನಷ್ಟವನ್ನು ಹೊಂದಿದೆ ಮತ್ತು ಗಾಳಿಯಿಂದ ಉಡಾವಣೆಯಾದ ಹೈಬ್ರಿಡ್ ಎಂಜಿನ್ಗಿಂತ 750ಕ್ಕಿಂತ ಕಡಿಮೆ ಹವಾಮಾನವನ್ನು ಹೊಂದಿದೆ” ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ