World Food Safety Day 2022: ಈ ದಿನದ ಇತಿಹಾಸ, ಮಹತ್ವ ಹಾಗೂ ಸಂದೇಶದ ಕುರಿತು ನೀವೂ ತಿಳಿದುಕೊಳ್ಳಿ

ಆಹಾರ ಸುರಕ್ಷತೆ ಎಂಬುದು ಎಷ್ಟು ಮಹತ್ವವಾಗಿದೆ ಎಂದು ಜಗತ್ತಿನ ಪ್ರತಿಯೊಬ್ಬರಿಗೂ ತಿಳಿಯಲಿ ಎಂಬ ಸದುದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 7 ಅನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸುತ್ತ ಬಂದಿದೆ.

ವಿಶ್ವ ಆಹಾರ ಸುರಕ್ಷತಾ ದಿನ

ವಿಶ್ವ ಆಹಾರ ಸುರಕ್ಷತಾ ದಿನ

  • Share this:
ಹೀಗೂ ಒಂದು ದಿನವನ್ನು ಆಚರಿಸಲಾಗುತ್ತದೆಯೇ? ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಹೌದು, ಖಂಡಿತವಾಗಿಯೂ ಇಂತಹ ಒಂದು ವಿಶಿಷ್ಟ ದಿನವನ್ನೂ ಸಹ ಆಚರಿಸಲಾಗುತ್ತದೆ. ಮನುಷ್ಯನಿಗೆ ಜೀವಿಸಲು ಅಥವಾ ಬದುಕಲು ಬೇಕಾದ ಅವಶ್ಯಕ ವಸ್ತುಗಳಲ್ಲಿ ಆಹಾರವೂ (Food) ಸಹ ಒಂದು. ಆದರೆ, ಕಲುಶಿತಗೊಂಡ ಆಹಾರದಿಂದ ಮನುಷ್ಯನು ಅನಾರೋಗ್ಯಕ್ಕೆ (Illness) ಈಡಾಗಿ ಬದುಕಲು ಪರಿತಪಿಸಬೇಕಾಗುವುದು ನಿಶ್ಚಿತವಾಗುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ವಿಷ, ಕಲ್ಮಶ, ರಾಸಾಯನಿಕ ಪದಾರ್ಥಗಳಿಂದ (Chemical substance) ಮುಕ್ತವಾಗಿರುವುದು ಬಲು ಅವಶ್ಯಕ. ಅಂತೆಯೇ ಆಹಾರ ಸುರಕ್ಷತೆಯು (Food safety) ಪ್ರತಿಯೊಬ್ಬರ ಹಕ್ಕು ಎಂದರೂ ತಪ್ಪಾಗಲಿಕ್ಕಿಲ್ಲ.

ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡೇ ಆಹಾರ ಸುರಕ್ಷತೆ ಎಂಬುದು ಎಷ್ಟು ಮಹತ್ವವಾಗಿದೆ ಎಂದು ಜಗತ್ತಿನ ಪ್ರತಿಯೊಬ್ಬರಿಗೂ ತಿಳಿಯಲಿ ಎಂಬ ಸದುದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 7 ಅನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸುತ್ತ ಬಂದಿದೆ.

ಇತಿಹಾಸ
ಹಾಗೆ ನೋಡಿದರೆ ಈ ದಿನದ ಆಚರಣೆ ಸಾಕಷ್ಟು ಹಳೆಯ ಇತಿಹಾಸ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಹೀಗೆ ಆಹಾರ ಸುರಕ್ಷತೆಯ ಮಹತ್ವಕ್ಕೆ ಮೀಸಲಾದ ಈ ದಿನವನ್ನು ವಿಶ್ವ ಸಂಸ್ಥೆಯ ಜನರಲ್ ಅಸ್ಸೆಂಬ್ಲಿಯಲ್ಲಿ ಮೊದಲ ಬಾರಿಗೆ 2018 ಜೂನ್ 7 ರಂದು ಗುರುತಿಸಿ ಪ್ರಥಮ ಬಾರಿಗೆ ಆಚರಿಸಲಾಯಿತು. ತದನಂತರ ಈ ಬಗ್ಗೆ ಜನರಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮತ್ತು ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜೂನ್ ಏಳರಂದು ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸುತ್ತ ಬಂದಿದೆ.

ಈ ಬಾರಿಯ ಥೀಮ್
ಪ್ರತಿ ಬಾರಿ ವಿಶ್ವ ಆಹಾರ ಸುರಕ್ಷತಾ ದಿನವನ್ನು ಒಂದು ಥೀಮ್ ಅಡಿಯಲ್ಲಿ ಆಚರಿಸುತ್ತ ಬರಲಾಗಿದೆ. ಅಂತೆಯೇ ಈ ಬಾರಿಯ ಆಚರಣೆಯ ಹಿಂದೆಯೂ ಒಂದು ಥೀಮ್ ಇದೆ. ಈ ಬಾರಿಯ ಥೀಮ್ "ಸುರಕ್ಷಿತ ಆಹಾರ, ಉತ್ತಮ ಆರೋಗ್ಯ" ಎಂಬ ಪರಿಕಲ್ಪನೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಕಳೆದ ಬಾರಿಯ ಥೀಮ್ ಕೂಡ ಹೆಚ್ಚು ಕಡಿಮೆ ಈ ಬಾರಿಯ ಥೀಮ್ ರೀತಿಯಲ್ಲೇ ಇತ್ತು ಎಂದು ಹೇಳಬಹುದು. "ಇಂದಿನ ಸುರಕ್ಷಿತ ಆಹಾರ ಆರೋಗ್ಯಕರ ನಾಳೆ" ಎಂಬ ಪರಿಕಲ್ಪನೆಯಲ್ಲಿ ಕಳೆದ ಬಾರಿಯ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗಿತ್ತು.

ಆಶಯ
ಹೌದು, ಇಂದು ಜಗತ್ತು ರಭಸವಾಗಿ ಬೆಳೆಯುತ್ತಿದೆ. ತಂತ್ರಜ್ಞಾನವಂತೂ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಹಿಂದೆಂದಿಗಿಂತಲೂ ಇಂದು ಮನುಜ ಸಾಧನೆಯ ದೊಡ್ಡ ಮೆಟ್ಟಿಲುಗಳನ್ನೇ ಏರುತ್ತಿದ್ದಾನೆ. ಇವೆಲ್ಲ ಅಂಶಗಳು ನಮ್ಮ ಬಗ್ಗೆ ನಾವೇ ಹೆಮ್ಮೆ ಪಡಲು ಒಂದೆಡೆ ಕಾರಣವಾದರೆ ಇನ್ನೊಂದೆಡೆ ಇಂದಿನ ಮಾಲಿನ್ಯ, ಕಲುಶಿತಗೊಳ್ಳೂತ್ತಿರುವ ಜಲ ಹಾಗೂ ಆಹಾರಗಳು ನಾವು ತಲೆ ತಗ್ಗಿಸುವಂತೆ ಮಾಡುತ್ತಿದೆ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ:  Health Care: ದೇಹಕ್ಕೆ ಬಿ 12 ಏಕೆ ಬೇಕು? ಇದರ ಕೊರತೆ ಯಾವ ತೊಂದರೆ ಉಂಟು ಮಾಡುತ್ತದೆ?

ಅಭಿವೃದ್ಧಿ ಎಂಬುದು ಹೇಗೆ ಮುಖ್ಯವೋ ಅಷ್ಟೇ ಮುಖ್ಯವಾಗಿದೆ ಆರೋಗ್ಯ. ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕೆಂದರೆ ಆರೋಗ್ಯಕರವಾದ ಆಹಾರ ಸೇವನೆ ಬಲು ಮುಖ್ಯ. ಹಾಗಾಗಿ ಆಹಾರ ಸುರಕ್ಷತೆ ಎಂಬುದು ಬಲು ಮುಖ್ಯ ವಿಷ್ಯವಾಗಿದ್ದು ಈ ದಿನದ ಮೂಲಕ ನಾವೆಲ್ಲರೂ ಈ ಬಗ್ಗೆ ಅರಿತುಕೊಂಡು ಇನ್ನೊಬ್ಬರಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸೋಣ. ಅಭಿವೃದ್ಧಿ ಹೊಂದಿದ ನಾಡಿನ ಆರೋಗ್ಯಕರವಾದ ಜೀವನವೂ ನಮ್ಮದಾಗಲಿ ಎಂಬ ಆಶಯ ಹೊತ್ತು ಮುಂದೆ ಸಾಗೋಣ.

ಇದನ್ನೂ ಓದಿ:  Musk Melon Benefits: ಮಾನಸಿಕ ಆರೋಗ್ಯ ಸೇರಿ ಕರ್ಬೂಜ ಹಣ್ಣಿನಲ್ಲಿದೆ ಹಲವು ಪ್ರಯೋಜನ

ಈ ದಿನದ ನಿಮಿತ್ತ ವಿಶೇಷ ಸಂದೇಶಗಳು

  • ಉತ್ತಮ ಆಹಾರದ ಮೂಲಕ ಮಾತುಕತೆಗಳು ಉತ್ತಮವಾದ ರೀತಿಯಲ್ಲೇ ಅಂತ್ಯವಾಗುತ್ತವೆ - ಜೆಫರಿ ನೇಬರ್

  • ಆಹಾರ ಸುರಕ್ಷತೆ ಎಂಬುದು ಆಹಾರ ಸರಪಣಿಯಲ್ಲಿ ಪ್ರತಿಯೊಬ್ಬರನ್ನೂ ಒಳಗೊಂಡಿದೆ - ಮೈಕ್ ಜೋಹನ್ಸ್

  • ನನ್ನ ತಟ್ಟೆಯಲ್ಲಿ ಮಿತವಾದ ಪ್ರಮಾಣದಲ್ಲಿ ಆಹಾರ ಇದ್ದರೆ ನಾನು ಇನ್ನಷ್ಟು ಉತ್ತಮ ವ್ಯಕ್ತಿಯಾಗಿರುತ್ತೇನೆ - ಎಲಿಜಬೆತ್ ಗಿಲ್ಬರ್ಟ್

  • ಈ ಜಗತ್ತಿನಲ್ಲಿ ಕೆಲ ಜನರು ಎಷ್ಟೊಂದು ಹಸಿನಲ್ಲಿದ್ದಾರೆ ಎಂದರೆ ಅವರಿಗೆ ಆಹಾರದಲ್ಲೇ ಭಗವಂತ ಕಾಣಸಿಗುತ್ತಾನೆ - ಮಹಾತ್ಮಾ ಗಾಂಧಿ

  • ನೀವು ಏನನ್ನು ತಿನ್ನುವಿರಿ ಎಂಬುದನ್ನು ನನಗೆ ಹೇಳಿದರೆ ನಾನು ನೀವು ಏನು ಎಂಬುದನ್ನು ಹೇಳಬಲ್ಲೆ - ಅಂತ್ಲೀಮ್ ಬ್ರಿಲ್ಲಟ್ ಸವರಿನ್

  • ಇಂದು ನಾವು ಹೇಳಿಕೊಳ್ಳುವ ನಾಗರಿಕತೆ ಎಂಬುದು ಉತ್ತಮವಾದ ಆಹಾರ ಸರಬರಾಜು ಇಲ್ಲದೆ ಹೋಗಿದ್ದರೆ ವಿಕಸನವಾಗುವುದಿರಲಿ ಇಂದು ಉಳಿಯುತ್ತಲೂ ಇರಲಿಲ್ಲ - ನಾರ್ಮನ್ ಬೊರ್ಲೌಗ್

  • ಆಹಾರವೇ ನಿಮ್ಮ ಔಷಧಿಯಾಗಲಿ ಹಾಗೂ ನಿಮ್ಮ ಔಷಧಿಗಳೇ ಆಹಾರವಾಗಿರಲಿ - ಹಿಪ್ಪೊಕ್ರೇಟ್ಸ್

Published by:Ashwini Prabhu
First published: