Explained: ಪದೇ ಪದೇ ಬದಲಾಗುವ ಕೆಲಸದ ಶಿಫ್ಟ್ ತರಬಲ್ಲದು ಆಪತ್ತು! ಹೊಸ ಅಧ್ಯಯನ ಹೇಳುವುದೇನು ನೋಡಿ

ನಿಮ್ಮ ಕೆಲಸದ ಶಿಫ್ಟ್ ಸಮಯ ಪದೇ ಪದೇ ಬದಲಾಗುತ್ತಿದ್ದರೆ, ಇದು ನಿಮಗೆ ಅರಿವಿಲ್ಲದಂತೆ ನಿಮ್ಮ ಸ್ಮರಣೆಯ ಮೇಲೆ ಮತ್ತು ನೀವು ಮಾಡುವ ಕೆಲಸದ ವೇಗದ ಮೇಲೂ ಸಹ ಭಾರಿ ಪರಿಣಾಮವನ್ನು ಬೀರಬಹುದು ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಕೆಲಸದ ಶಿಫ್ಟ್ (Shift) ಸಮಯ ಪದೇ ಪದೇ ಬದಲಾಗುತ್ತಿದ್ದರೆ, ಇದು ನಿಮಗೆ ಅರಿವಿಲ್ಲದಂತೆ ನಿಮ್ಮ ಸ್ಮರಣೆಯ ಮೇಲೆ ಮತ್ತು ನೀವು ಮಾಡುವ ಕೆಲಸದ ವೇಗದ (Speed) ಮೇಲೂ ಸಹ ಭಾರಿ ಪರಿಣಾಮವನ್ನು ಬೀರಬಹುದು ಎಂದು ಇತ್ತೀಚಿನ ಅಧ್ಯಯನ (Study) ತಿಳಿಸಿದೆ. ಈ ಅಧ್ಯಯನವನ್ನು 'ಅಕ್ಯೂಪೇಷನಲ್ ಅಂಡ್ ಎನ್ವಿರಾನ್ಮೆಂಟಲ್ ಮೆಡಿಸಿನ್' ದಲ್ಲಿ ಪ್ರಕಟಿಸಲಾಗಿದೆ. ನನ್ನದು ಇಂದು ಬೆಳಗಿನ (Morning) ಶಿಫ್ಟ್, ಮುಂದಿನ ವಾರ ಮಧ್ಯಾಹ್ನದ ಶಿಫ್ಟ್ ಕೆಲಸ ಇದೆ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ ಮತ್ತು ನಾವೇ ಸ್ವತಃ ಬೇರೆಯವರಿಗೆ ಹೇಳಿರುತ್ತೇವೆ. ಇದು ಹೇಳಲು ಮತ್ತು ಕೇಳಲು ತುಂಬಾ ಮಜಾ ಎನಿಸಿದರೂ, ಇದನ್ನು ಮಾಡುವವರಿಗೆ ಗೊತ್ತು ಇದರಿಂದಾಗುವ ಪರಿಣಾಮ.

ಕಾಲಕ್ರಮೇಣದಲ್ಲಿ ಈ ಶಿಫ್ಟ್ ಕೆಲಸವು ನಿಮ್ಮ ಜಾಗರೂಕತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಣ್ಣಿನ ಮೇಲೆಯೂ ಪರಿಣಾಮ ಬೀರುತ್ತದೆ ಮತ್ತು ಯಾವುದೇ ಒಂದು ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಸೂಚಿಸುತ್ತಾರೆ.

ಆರೋಗ್ಯ ಸಮಸ್ಯೆಗೆ ಕಾರಣ:

ಆಂತರಿಕ ದೇಹದ ಗಡಿಯಾರ (ಸಿರ್ಕಾಡಿಯನ್ ರಿದಂ) ಸಾಮಾನ್ಯವಾಗಿ ಈ ಬೆಳಕು ಮತ್ತು ರಾತ್ರಿ ಚಕ್ರದೊಂದಿಗೆ ಸರಿಯಾಗಿ ಹೊಂದಾಣಿಕೆ ಆಗದ ಕಾರಣ ಶಿಫ್ಟ್ ಕೆಲಸವನ್ನು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜೋಡಿಸಲಾಗಿದೆ. ಇವುಗಳಲ್ಲಿ ನಿದ್ರೆಯ ಅಸ್ವಸ್ಥತೆಗಳು, ಹೃದಯ ರಕ್ತನಾಳದ ಕಾಯಿಲೆ, ಬೊಜ್ಜು, ಮಧುಮೇಹ ಮತ್ತು ಮನಸ್ಥಿತಿಯ ಅಸ್ವಸ್ಥತೆಗಳು ಸೇರಿವೆ.

ಆದರೆ ನೀವು ಮಾಡುವ ಕೆಲಸದಲ್ಲಿ ವೇಗವನ್ನು ಕಳೆದುಕೊಳ್ಳುವುದು ಮತ್ತು ಸ್ಮರಣೆಯಂತಹ ಹೆಚ್ಚಿನ ಮೆದುಳಿನ ಕಾರ್ಯದ ಮೇಲೆ ಅದರ ಸಂಭಾವ್ಯ ಪರಿಣಾಮವು ಇನ್ನೂ ಅಷ್ಟೊಂದು ಸ್ಪಷ್ಟವಾಗಿಲ್ಲ. ಈ ಅನಿಶ್ಚಿತತೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಸಂಶೋಧಕರು ಕೆಲಸ ಮಾಡುತ್ತಿದ್ದು, ವಯಸ್ಕರಲ್ಲಿ ಅರಿವಿನ ಕಾರ್ಯಕ್ಷಮತೆಯ ಮೇಲೆ ಶಿಫ್ಟ್ ಕೆಲಸದ ಪರಿಣಾಮವನ್ನು ನೋಡುವ ಅಧ್ಯಯನಗಳಿಗಾಗಿ ಸಂಶೋಧನಾ ಡೇಟಾಬೇಸ್‌ಗಳನ್ನು ಜಾಲಾಡುತ್ತಿದ್ದಾರೆ.

ಇದನ್ನೂ ಓದಿ: Night Shift: ನೈಟ್‌ ಶಿಫ್ಟ್‌ ಅನಿವಾರ್ಯವೇ, ಆದ್ರೆ ಆರೋಗ್ಯ ಮರೆಯಬೇಡಿ..

18,802 ಜನರನ್ನು ಒಳಗೊಂಡ ಅಧ್ಯಯನ:

ಒಟ್ಟಾರೆಯಾಗಿ ಹೇಳುವುದಾದರೆ 2005 ಮತ್ತು 2020 ರ ನಡುವೆ ಪ್ರಕಟವಾದ 18 ಅಧ್ಯಯನಗಳು, ಸರಾಸರಿ 35 ವರ್ಷ ವಯಸ್ಸಿನವರಾದ 18,802 ಜನರನ್ನು ಒಳಗೊಂಡಿವೆ ಮತ್ತು ಔಪಚಾರಿಕ ಪರೀಕ್ಷೆಗಳಿಂದ 6 ವಿಭಿನ್ನ ಫಲಿತಾಂಶಗಳು ಬಂದಿವೆ. ಈ ಫಲಿತಾಂಶಗಳಿಂದ ತಿಳಿದು ಬಂದ ಸಮಸ್ಯೆಗಳು ಕೆಲಸ ಮಾಡುವ ವೇಗ, ಸ್ಮರಣೆ, ಜಾಗರೂಕತೆ, ಸನ್ನಿವೇಶದ ಪ್ರತಿಕ್ರಿಯೆ, ದೃಶ್ಯ ಗಮನ ಮತ್ತು ಕೆಲಸದ ನಡುವೆ ನಮಗೆ ಅರಿವಿಲ್ಲದಂತೆ ಬದಲಾಗುವ ಸಾಮರ್ಥ್ಯ ಆಗಿವೆ.

ಸ್ಥಿರ ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಾಮಾನ್ಯ ಕಚೇರಿ ಸಮಯಗಳಲ್ಲಿ ಕೆಲಸ ಮಾಡುವವರೊಂದಿಗೆ ಐದು ಅಧ್ಯಯನಗಳು ಹೋಲಿಸಿದರೆ, 11 ಜನರು ಈ ಬದಲಾಗುವ ಶಿಫ್ಟ್‌ಗಳಲ್ಲಿನ ಕಾರ್ಮಿಕರನ್ನು ಸಾಮಾನ್ಯ ಕಚೇರಿ ಸಮಯಗಳಲ್ಲಿ ಕೆಲಸ ಮಾಡುವವರೊಂದಿಗೆ ಹೋಲಿಸಿದ್ದಾರೆ. ಅರ್ಧದಷ್ಟು ಅಧ್ಯಯನಗಳು ಆರೋಗ್ಯ ಆರೈಕೆ ವೃತ್ತಿಪರರನ್ನು ಒಳಗೊಂಡಿದ್ದರೆ, ಉಳಿದ ಅರ್ಧದಷ್ಟು ಪೊಲೀಸ್ ಅಧಿಕಾರಿಗಳು, ಐಟಿ ಸಿಬ್ಬಂದಿ ಮುಂತಾದ ವಿಭಿನ್ನ ವೃತ್ತಿಗಳ ಮೇಲೆ ಕೇಂದ್ರೀಕರಿಸಿವೆ.

ಶಿಫ್ಟ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಗಮನಾರ್ಹ ಬದಲಾವಣೆ:

ಈ ಎಲ್ಲಾ ಅಧ್ಯಯನಗಳ ಫಲಿತಾಂಶಗಳನ್ನು ಒಟ್ಟುಗೂಡಿಸಲಾಯಿತು. ಮೌಲ್ಯಮಾಪನ ಮಾಡಿದ 6 ಫಲಿತಾಂಶಗಳಲ್ಲಿ ಐದಕ್ಕೆ ಇತರ ರೀತಿಯ ಕಾರ್ಮಿಕರಿಗಿಂತ ಈ ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಗಮನಾರ್ಹವಾಗಿ ಕೆಟ್ಟ ಕಾರ್ಯಕ್ಷಮತೆಯನ್ನು ಸೂಚಿಸಿತ್ತು. ಇದರಲ್ಲಿ ಸನ್ನಿವೇಶದ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವು ಕುಗ್ಗುವುದನ್ನು ಭಾರಿ ಪರಿಣಾಮವಾಗಿ ನೋಡಲಾಯಿತು. ಆದರೆ ಕೆಲಸ ಮಾಡುವ ವೇಗ, ಸ್ಮರಣೆ ಮತ್ತು ಜಾಗರೂಕತೆ ಕಡಿಮೆ ಆಗುವುದು ಸಹ ಗಮನಾರ್ಹವಾಗಿದೆ, ಆದರೆ ಚಿಕ್ಕ ಪ್ರಮಾಣದಲ್ಲಿತ್ತು.

ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸ:

ಸಾಮಾನ್ಯವಾಗಿ ಈ ಹಗಲು ಮತ್ತು ರಾತ್ರಿ ಚಕ್ರಕ್ಕೆ ವಿರುದ್ಧವಾಗಿ ಕೆಲಸ ಮಾಡುವುದು ಸಿರ್ಕಾಡಿಯನ್ ಲಯ ಮತ್ತು ಅದನ್ನು ನಿಯಂತ್ರಿಸುವ ಹಾರ್ಮೋನುಗಳ ಅಭಿವ್ಯಕ್ತಿಗೆ ಅಡ್ಡಿಪಡಿಸುತ್ತದೆ. ಇದು ಕಾರ್ಟಿಸೋಲ್ ಮತ್ತು ಮೆಲಟೋನಿನ್ ಅನ್ನು ನಿಯಂತ್ರಿಸುತ್ತದೆ. ಇದು ನಿದ್ರೆ ಮತ್ತು ಎಚ್ಚರದ ಚಕ್ರವನ್ನು ಅಡ್ಡಿಪಡಿಸುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

ಇದನ್ನೂ ಓದಿ: Health Tips: ನೀವು Night Shiftsನಲ್ಲಿ ಕೆಲಸ ಮಾಡ್ತಾ ಇದ್ದೀರಾ..? ಹಾಗಾದ್ರೆ ಆರೋಗ್ಯದ ಬಗ್ಗೆ ಎಚ್ಚರ...!

ಬೇಡಿಕೆಗಳು ಮತ್ತು ಕೆಲಸದ ಹೊರೆಗಳ ವಿಷಯದಲ್ಲಿ ಉದ್ಯೋಗಗಳು ಭಿನ್ನವಾಗಿರುವುದರಿಂದ, ಫಲಿತಾಂಶಗಳು ನಿರ್ದಿಷ್ಟ ರೀತಿಯ ವೃತ್ತಿಯಲ್ಲಿ ಶಿಫ್ಟ್ ಕೆಲಸದ ಪರಿಣಾಮದಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವನ್ನು ನಾವು ನೋಡಬಹುದು. ಶಿಫ್ಟ್ ಬದಲಾಗುವ ಕೆಲಸವು ಹೆಚ್ಚಿನ ಮೆದುಳಿನ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ನೈಟ್ ಶಿಫ್ಟ್  ಆದರೆ ನಿಮ್ಮ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ:

ಸರಿಯಾದ ನಿದ್ರೆ ಮುಖ್ಯ:

ಶಿಫ್ಟ್ ಬದಲಾಗುವ ಕೆಲಸಗಾರರಲ್ಲಿ ಕಡಿಮೆಯಾದ ನರ ವರ್ತನೆಯ ಕಾರ್ಯಕ್ಷಮತೆಯು ಕೆಲಸದ ಸಂಬಂಧಿತ ಗಾಯಗಳು ಮತ್ತು ದೋಷಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಬರೆದಿದ್ದಾರೆ.

ಆದ್ದರಿಂದ ಪ್ರತಿಕೂಲ ಆರೋಗ್ಯ ಮತ್ತು ಕೆಲಸಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡಲು ಶಿಫ್ಟ್ ಕಾರ್ಮಿಕರ ನರವರ್ತನೆಯ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಲು ರಕ್ಷಣಾತ್ಮಕ ಪ್ರತಿಕ್ರಮಗಳು ಎಂದರೆ ನಿದ್ರೆ, ಚೇತರಿಕೆ ಯೋಜನೆಗಳು, ನಿಯಮಿತ ಮೇಲ್ವಿಚಾರಣೆಯನ್ನು ಹೆಚ್ಚಾಗಿ ಉತ್ತೇಜಿಸಬೇಕು ಎಂದು ಹೇಳಿದರು.

ರಾತ್ರಿ ತಡವಾಗಿ ಆಹಾರ ಸೇವಿಸಬೇಡಿ:

ರಾತ್ರಿ ತಡವಾಗಿ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಹೀಗಾಗಿ ಹಗಲು ಹೊತ್ತಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಹಗಲಿನಲ್ಲಿ ಸೂರ್ಯಸ್ತದ ಮೊದಲೇ ಆರೋಗ್ಯಕರ ಆಹಾರ ಸೇವಿಸಿ.

ಬೆಳಗ್ಗಿನ ತಿಂಡಿ ಉತ್ತಮವಾಗಿರಲಿ:

ಬೆಳಗ್ಗೆ ಆರೋಗ್ಯಕರ ಆಹಾರವನ್ನುಸೇವಿಸುವಂತೆ ಡಾಕ್ಟರ್ ಗಳು ಸಲಹೆ ನೀಡುತ್ತಾರೆ. ರಾತ್ರಿ ಪಾಳಿಯ ನಂತರ ನಾವು ಬೆಳಗ್ಗೆ ಮನೆಗೆ ತಲುಪಿದಾಗ, ಕ್ರೋಸೆಂಟ್ಸ್ ಅಥವಾ ಇತರೆ ಕೊಬ್ಬಿನ ಆಹಾರಗಳನ್ನು ಬಯಸುತ್ತೇವೆ. ಹೀಗಾಗಿ ಅವುಗಳನ್ನು ದೂರ ಮಾಡಿ ಒಳ್ಳೆಯ ಆಹಾರಗಳನ್ನು ಹೆಚ್ಚು ಸೇವಿಸಬೇಕು.
Published by:shrikrishna bhat
First published: