Explained: ಯಾವ್ಯಾವ ಧರ್ಮದಲ್ಲಿ ಮಹಿಳೆಯರಿಗೆ ಏನೇನು ಹಕ್ಕುಗಳಿವೆ?

Women Law: ಮಹಿಳೆಯರಿಗೆ ಅನ್ವಯಿಸುವ ಆಯಾ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ (Women Personal Law) ಖಾತರಿಪಡಿಸಲಾದ ವಿವಿಧ ಹಕ್ಕುಗಳ (Women Rights) ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ತಿಳಿಯಿರಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಸೂಕ್ಷ್ಮವಾಗಿ ಗಮನಿಸಿದರೆ ಜಗತ್ತಿನಾದ್ಯಂತ ಮಹಿಳೆಯರ ಪಾತ್ರ ಮತ್ತು ಹಕ್ಕುಗಳು ಸಾಕಷ್ಟು ಸಕ್ರಿಯವಾಗಿದೆ. ಭಾರತದಂತಹ ದೇಶದಲ್ಲಿ (Indian Women) ಆಗುತ್ತಿರುವ ಸಮಾಜದ ತ್ವರಿತ ಅಭಿವೃದ್ಧಿಯನ್ನು ಗಮನಿಸಿದರೆ, ಭಾರತದಲ್ಲಿ ಮಹಿಳೆಯರ ಕಾನೂನು ಹಕ್ಕುಗಳು (Rights) ಕಳೆದ ಹಲವು ವರ್ಷಗಳಿಂದ ವಿಕಸನಗೊಂಡಿರುವುದು ಕಂಡುಬರುತ್ತದೆ. ಈಗಾಗಲೇ ಜಾರಿಗೆ ಬಂದಿರುವ ವಿವಿಧ ಕಾಯ್ದೆಗಳು, ತಿದ್ದುಪಡಿಗಳು ಮತ್ತು ಲಿಂಗ-ತಟಸ್ಥ ಕಾನೂನುಗಳು (Indian Law) ಅನುಷ್ಠಾನಗೊಂಡಿದ್ದು ಇದು ದೇಶದಲ್ಲಿ ನ್ಯಾಯಾಂಗವು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ ಎಂದು ಭಾಸವಾಗುತ್ತದೆ. ಇದರ ಪರಿಣಾಮದಿಂದಾಗಿಯೇ ಇಂದು ಮಹಿಳೆಯರಿಗೆ ಹೆಚ್ಚು ಸಮಾನ ವಾತಾವರಣವಿದೆ. ಮಹಿಳೆಯರಿಗೆ ಅನ್ವಯಿಸುವ ಆಯಾ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ (Women Personal Law) ಖಾತರಿಪಡಿಸಲಾದ ವಿವಿಧ ಹಕ್ಕುಗಳ (Women Rights) ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ತಿಳಿಯಿರಿ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಆಸ್ತಿಯನ್ನು ಸ್ವತಃ ಖರೀದಿಸಬಹುದು; ಅಥವಾ ಅವರ ಪೋಷಕರಿಂದ ಅನುವಂಶಿಕವಾಗಿ, ಪಡೆಯಬಹುದು. ಒಬ್ಬ ವ್ಯಕ್ತಿಗೆ ಅನ್ವಯವಾಗುವ ವಿವಿಧ ವೈಯಕ್ತಿಕ ಕಾನೂನುಗಳಿಂದ ಉತ್ತರಾಧಿಕಾರತ್ವವನ್ನು ನಿಯಂತ್ರಿಸಲಾಗುತ್ತದೆ. ಒಂದು ವೇಳೆ ಆಸ್ತಿಗೆ ಸಂಬಂಧಿಸಿದಂತೆ ಮುಂಚೆಯೆ ವಿಲ್ ಬರೆದಿಡಲಾಗಿದ್ದರೆ ಅದರ ನಿರ್ದೇಶನಗಳನ್ನು ಅನುಸರಿಸಲಾಗುತ್ತದೆ. ಒಂದು ವೇಳೆ ವಿಲ್ ಇಲ್ಲದಿದ್ದಲ್ಲಿ ಯಾವ ಕಾನೂನು ಅನ್ವಯಿಸುತ್ತದೆ ಮತ್ತು ಮಹಿಳೆಯರಿಗೆ ಏನು ಅರ್ಹವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಹಿಂದೂ ಮಹಿಳೆಯರ ಹಕ್ಕುಗಳು:

ಹಿಂದೂ ಉತ್ತರಾಧಿಕಾರ ಕಾಯ್ದೆ, 1956, ಇದು, ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಉತ್ತರಾಧಿಕಾರ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ನಿಯಂತ್ರಿಸುತ್ತದೆ. ಇದರ ಸೆಕ್ಷನ್ 14 ಅಡಿಯಲ್ಲಿ ಮಹಿಳೆಯ ಆಸ್ತಿ ಏನು ಎಂಬುದನ್ನು ವಿವರಿಸಲಾಗಿದೆ. ಹಿಂದೂ ಮಹಿಳೆಯ ಆಸ್ತಿ ಅವಳ ಸಂಪೂರ್ಣ ಸ್ವತ್ತು ಎಂದು ಇದರಲ್ಲಿ ಹೇಳಲಾಗಿದೆ. ಇದು ಪಿತ್ರಾರ್ಜಿತ ಮತ್ತು ಸ್ವಯಂ-ಅರ್ಜಿತ ಆಸ್ತಿಯ ನಡುವೆ ವ್ಯತ್ಯಾಸ ಮಾಡುವುದಿಲ್ಲ, ಅಥವಾ ಚಲಿಸಬಲ್ಲ ಅಥವಾ ಸ್ಥಿರ ಆಸ್ತಿಯ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ. ಅಂದರೆ, ಇದು ಒಳಗೊಂಡಿರುವ ಆಸ್ತಿಗೆ ಸಂಬಂಧಿಸಿದ ವೈಅರಗಳು ಹೀಗಿವೆ:

ಅನುವಂಶಿಕವಾಗಿ ಅಥವಾ ಪಡೆದ ಆಸ್ತಿ, ವಿಭಜನೆಯಲ್ಲಿ ಬಂದ ಆಸ್ತಿ, ನಿರ್ವಹಣೆಯ ಬದಲಾಗಿ ಅಥವಾ ನಿರ್ವಹಣೆಗಾಗಿ ಬಂದ ಆಸ್ತಿ, ಯಾವುದೇ ವ್ಯಕ್ತಿಯಿಂದ ಉಡುಗೊರೆಯಾಗಿ ಬಂದ ಆಸ್ತಿ, ತನ್ನ ಸ್ವಂತ ಕೌಶಲ್ಯ ಅಥವಾ ಪರಿಶ್ರಮದಿಂದ ಬಂದ ಆಸ್ತಿ, ಖರೀದಿ ಮೂಲಕ ಅಥವಾ ಪ್ರಿಸ್ಕ್ರಿಪ್ಷನ್ ಮೂಲಕ ಬಂದ ಆಸ್ತಿ, ಬೇರೆ ಯಾವುದೇ ರೀತಿಯಲ್ಲಿ, ಮತ್ತು ಅವಳು ಹೊಂದಿರುವ ಯಾವುದೇ ಆಸ್ತಿ 'ಸ್ತ್ರೀಧನ' ಎಂದು ಕರೆಯಲಾಗಿದೆ. ಹಿಂದೂ ಮಹಿಳೆ ತನ್ನ ಆಸ್ತಿಯ ಏಕೈಕ ಮಾಲೀಕಳು. ಅವಳು ಆಸ್ತಿಗಳ ಮೇಲೆ ವಿಶೇಷ ಹಕ್ಕುಗಳನ್ನು ಹೊಂದಿದ್ದಾಳೆ, ಅಂತಹ ಸ್ವತ್ತುಗಳು ಗಳಿಸಿದ್ದಾಗಿರಬಹುದು, ಆನುವಂಶಿಕವಾಗಿ ಅಥವಾ ಉಡುಗೊರೆಯಾಗಿ ಬಂದಿರಬಹುದು.

ಇದನ್ನೂ ಓದಿ: Mysore Silk Sarees: ಮೈಸೂರು ಸಿಲ್ಕ್ ಸೀರೆಯ ಇತಿಹಾಸ ಗೊತ್ತಾ? ಮೈಸೂರು ಸಿಲ್ಕ್ ಯಾಕೆ ಅಷ್ಟೊಂದು ದುಬಾರಿ?

ಮದುವೆಯ ಸಂದರ್ಭದಲ್ಲಿ ಅಥವಾ ತದನಂತರ ಅವಳಿಗೆ ಅವರ ಸಂಬಂಧಿಕರಿಂದ ಬಂದಿರುವ ಉಡುಗೊರೆ ಅಥವಾ ಆಸ್ತಿಯು ಅವಳದ್ದೇ ಆಸ್ತಿಯಾಗಿದೆ ಎಂದು ಸೆಕ್ಷನ್ 14ರ ಅಡಿಯಲ್ಲಿ ಹೇಳಲಾಗಿದೆ. ಇದನ್ನು ಸ್ತ್ರೀಧನ ಎಂದು ಕರೆಯಲಾಗಿದ್ದು ಈ ಆಸ್ತಿಯ ಮೇಲೆ ಅವಳ ಗಂಡನಿಗಾಗಲಿಅಥವಾ ಗಂಡನ ಮನೆಯವರಿಗಾಗಲಿ ಯಾವುದೇ ಹಕ್ಕಿರುವುದಿಲ್ಲ. ವಿಚ್ಛೇದನವಾದರೆ ಆ ಆಸ್ತಿಯ ಸಂಪೂರ್ಣ ಹಕ್ಕು ಅವಳದ್ದೆ ಆಗಿರುತ್ತದೆ ಮತ್ತು ಆ ಆಸ್ತಿಯು ಆಕೆಗೆ ಸಿಗಬೇಕಾದ ಅಲೆಮನಿಯ ಭಾಗ ಆಗಿರುವುದಿಲ್ಲ.

ತಾರತಮ್ಯ ಮಾಡುವಂತಿಲ್ಲ
ಹಿಂದು ಮಹಿಳೆಯು ತನ್ನ ತೀರಿಹೋದ ಪೋಷಕರ ಆಸ್ತಿಯಲ್ಲಿ ಸಮಾನ ಭಾಗಕ್ಕೆ ಅರ್ಹಳಾಗಿರುತ್ತಾಳೆ. ಈ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಪುರುಷನಿಗೆ ಹೆಚ್ಚು ಹೆಣ್ಣು ಇದ್ದರೆ ಕಡಿಮೆ ಎಂಬ ಯಾವ ಕಾನೂನು ಇಲ್ಲಿರುವುದಿಲ್ಲ. ಸ್ತ್ರೀಗೆ ಸಂಬಂಧಿಸಿದಂತೆ ಕಾನೂನು ಎಷ್ಟು ಸ್ಪಷ್ಟವಾಗಿದೆ ಎಂದರೆ ಒಂದು ವೇಳೆ ತಾಯಿ ಬದುಕಿದ್ದಾಗಲೇ ಮದುವೆಯಾದ ಮಗ ತೀರಿ ಹೋದಲ್ಲಿ ಮಗನ ಆಸ್ತಿಯಲ್ಲಿ ಹೆಂಡತಿ-ಮಕ್ಕಳೊಂದಿಗೆ ಮಗನ ತಾಯಿಗೂ ಸಮಾನ ಹಕ್ಕನ್ನು ನೀಡಲಾಗಿದೆ.

ಇದನ್ನೂ ಓದಿ: Explained: ಏನಿದು Bulli Bai ಅಪ್ಲಿಕೇಶನ್? ಮುಸ್ಲಿಂ ಮಹಿಳೆಯರು ಇದರ ವಿರುದ್ಧ ಸಿಡಿದೆದ್ದಿರೋದು ಯಾಕೆ?

ಹಿಂದು ಅವಿಭಜಿತ ಕುಟುಂಬವಿದ್ದಲ್ಲಿ ಹೆಣ್ಣು ಮಗಳೂ ಸಹ ಉತ್ತರಾಧಿಕಾರತ್ವ ಪಡೆಯಬಹುದು. ಹಿಂದೊಮ್ಮೆ ಗಂಡು ಮಗ ಮಾತ್ರ ಉತ್ತರದಾಯಿತ್ವ ಪಡೆಯುತ್ತಿದ್ದ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಕುಟುಂಬದಲ್ಲಿ ಹಿರಿಯ ಸಂತಾನ ಮಗಳಾಗಿದ್ದಲಿ ಅವಳೇ ಉತ್ತರದಾಯಿತ್ವಕ್ಕೆ ಅರ್ಹಳಾಗಿರುತ್ತಾಳೆ.

ಮುಸ್ಲಿಮ್ ಮಹಿಳೆಯರ ಹಕ್ಕುಗಳು

ಮೊಹ್ಮದೀಯ ಕಾನೂನಿನಲ್ಲಿ ಅವಿಭಕ್ತ ಕುಟುಂಬವನ್ನು ಪರಿಗಣಿಸಲಾಗಿಲ್ಲ. ಪೂರ್ವಾರ್ಜಿತ ಹಾಗೂ ಸ್ವಯಂ ಆರ್ಜಿತದ ಬಗ್ಗೆ ಹೇಳಲಾಗಿಲ್ಲ. ಮುಸ್ಲಿಮ್ ಹೆಣ್ಣು ತನ್ನ ಗಂಡನ ಆಸ್ತಿಯಲ್ಲಿ ಸಂತಾನವಿಲ್ಲದಿದ್ದಲ್ಲಿ 1/4 ರಷ್ಟು ಹಾಗೂ ಮಕ್ಕಳಿದ್ದಲ್ಲಿ 1/8 ರಷ್ಟು ಆಸ್ತಿಗೆ ಹಕ್ಕು ಪಡೆಯಬಲ್ಲಳು.

ಪೋಷಕರು ತೀರಿಹೋದ ಸಂದರ್ಭದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ತನ್ನ ಪೋಷಕರ ಆಸ್ತಿಯಲ್ಲಿ ಹಕ್ಕನ್ನು ಹೊಂದಿರುತ್ತಾಳೆ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಅವರಿಗೆ ಪುರುಷರಿಗೆ ಹೋಲಿಸಿದರೆ ಅರ್ಧದಷ್ಟು ಮಾತ್ರ ಆಸ್ತಿ ಸಿಕ್ಕಿರುವ ಉದಾಹರಣೆಗಳಿವೆ.

ಮೆಹ್ರ್
ಮುಸ್ಲಿಮ್ ಮಹಿಳೆ ತನ್ನ ಮದುವೆಯ ನಂತರ ಮೆಹ್ರ್ ಹಾಗೂ ಗಂಡನಿಂದ ನಿರ್ವಹಣೆಯ ವೆಚ್ಚ ಪಡೆಯಬಹುದು. ವಿಚ್ಛೇದನವಾದ ಸಂದರ್ಭದಲ್ಲಿ ಮಹಿಳೆಯು ಮೆಹ್ರ್ ಅನ್ನು ತನ್ನ ಬಳಿಯೇ ಇಟ್ಟುಕೊಳ್ಳಬಹುದಾಗಿದೆ.

ಕ್ರೈಸ್ತ, ಪಾರ್ಸಿ, ಯಹೂದಿ ಹೆಣ್ಣುಮಕ್ಕಳ ಹಕ್ಕುಗಳು

ಭಾರತೀಯ ಸಕ್ಸೆಶನ್ ಕಾಯ್ದೆ, 1925, ಕ್ರಿಶ್ಚಿಯನ್, ಪಾರ್ಸಿ ಮತ್ತು ಯಹೂದಿ ಮಹಿಳೆಯರಿಗೆ ಅನ್ವಯಿಸುತ್ತದೆ. ಅವರಿಗೆ ಸಂತಾನವಿದ್ದರೆ ಮಕ್ಕಳು 2/3 ರಷ್ಟು ಪಾಲನ್ನು ಪಡೆದರೆ ಮಹಿಳೆ ಹಿಂದಿನ ಗಂಡನ ಆಸ್ತಿಯಲ್ಲಿ 1/3 ಭಾಗಕ್ಕೆ ಅರ್ಹರಾಗಿರುತ್ತಾರೆ. 2/3 ರಷ್ಟು ಬಂದ ಆಸ್ತಿಯನ್ನು ಮಕ್ಕಳಲ್ಲಿ ಗಂಡು-ಹೆಣ್ಣು ವ್ಯತ್ಯಾಸ ಮಾಡದೆ ಸಮಾನವಾಗಿ ವಿತರಿಸಬೇಕು. ಮಕ್ಕಳಿಲ್ಲದ ಸಂದರ್ಭಗಳಲ್ಲಿ, ವಿಧವೆಯು ಪತಿಯ ಆಸ್ತಿಯಲ್ಲಿ 50 ಪ್ರತಿಶತವನ್ನು ಪಡೆಯಲು ಅರ್ಹಳಾಗಿರುತ್ತಳೆ ಮತ್ತು ಮಗನ ಹೆತ್ತವರು ಉಳಿದ 50 ಪ್ರತಿಶತಕ್ಕೆ ಅರ್ಹರಾಗಿರುತ್ತಾರೆ.
Published by:guruganesh bhat
First published: