Sri Lanka: ಕಿಂಗ್ ಮೇಕರ್ ಆಗ್ತಾರಾ ಸಜಿತ್? ರನಿಲ್, ರಾಜಪಕ್ಸೆಗೆ ಆಗುತ್ತಾ ಮುಖಭಂಗ?

ಮಾಜಿ ಸಚಿವ ಡಲ್ಲಾಸ್ ಅಲ್ಲಾಪೆರುಮಾ ಅವರನ್ನು ಬೆಂಬಲಿಸಿದ ಸುಜಿತ್ ಪ್ರೇಮದಾಸ್, ಕೊನೆಯ ಕ್ಷಣದಲ್ಲಿ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿಯುವ ಮೂಲಕ ತಮ್ಮ ರಾಜಕೀಯ ಬುದ್ಧಿವಂತಿಕೆಯನ್ನು ಸಾಬೀತುಪಡಿಸಿದ್ದಾರೆ. ಇದೀಗ ಅವರೇ ಶ್ರೀಲಂಕಾದ ಕಿಂಗ್ ಮೇಕರ್ ಆಗ್ತಾರಾ?

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ

  • Share this:
ಆರ್ಥಿಕವಾಗಿ (Financially Crisis), ರಾಜಕೀಯವಾಗಿ (Political Crisis) ಕಂಗೆಟ್ಟಿರುವ ಶ್ರೀಲಂಕಾದಲ್ಲಿ (Sri Lanka) ಇಂದು ಅಧ್ಯಕ್ಷೀಯ ಚುನಾವಣೆ (Presidential Election) ನಡೆಯುತ್ತಿದೆ. ಗೋತಬಯ ರಾಜಪಕ್ಸೆ (Gotabaya Rajapaksa) ರಾಜೀನಾಮೆ (Resign) ನಂತರ ರನಿಲ್‌ ವಿಕ್ರಮಸಿಂಘೇ (Ranil Wickremesinghe) ಹಂಗಾಮಿ ಅಧ್ಯಕ್ಷರಾಗಿದ್ದರು. ಶ್ರೀಲಂಕಾದ 9ನೇ ಅಧ್ಯಕ್ಷರಾಗಲು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಸಂಸದರಾದ ಡಲ್ಲಾಸ್ ಅಲಹಪ್ಪೆರುಮಾ (Dallas Alahapperuma) ಮತ್ತು ಅನುರ ಕುಮಾರ ಡಿಸಾನಾಯಕೆ ನಿನ್ನೆ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ನಾಮಪತ್ರ ಹಿಂಪಡೆದಿದ್ದರು. ಇದೀಗ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಸಿಂಹಳದ ಸಿಂಹಾಸನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.  

ಈ ಹಿಂದೆಯೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಜಿತ್

ಸಜಿತ್ ಪ್ರೇಮದಾಸ್ ಅವರ ಅಧ್ಯಕ್ಷೀಯ ಮಹತ್ವಾಕಾಂಕ್ಷೆಗಳು ಈ ಹಿಂದೆಯೇ ಸ್ಪಷ್ಟವಾಗಿತ್ತು ಮತ್ತು ಅವರು ನವೆಂಬರ್ 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಕ್ಕು ಸಾಧಿಸಲು ರನಿಲ್ ಅವರ ವರ್ಚಸ್ಸು ಕುಗ್ಗಿಸುವಲ್ಲಿ ಯಶಸ್ವಿಯಾದರು. ಆದರೆ, ಅವರು ಪ್ರಬಲ ರಾಜಪಕ್ಸೆ ವಂಶವನ್ನು ಮತ್ತು ಅವರ ಸಿಂಹಳೀಯ ಐಡೆಂಟಿಟಿ ಕಾರ್ಡ್‌ಗೆ ಕುಂದುಂಟು ಮಾಡಲು ಸಾಧ್ಯವಾಗಲಿಲ್ಲ.

ಗೋತಬಯ ವಿರುದ್ಧ ಅಂದು ಸೋಲು

ಸಜಿತ್ ಪ್ರೇಮದಾಸ್ ಅವರು ಗೋತಬಯ ರಾಜಪಕ್ಸೆ ವಿರುದ್ಧ ಸೋತರು.  ಅವರ ಸೋಲಿನಿಂದ ಸಂತಸಗೊಂಡವರು ಬೇರೆ ಯಾರೂ ಅಲ್ಲ, ಯುಎನ್‌ಪಿ ನಾಯಕ ರನಿಲ್ ವಿಕ್ರಮಸಿಂಘೆ. ಎಂಟು ತಿಂಗಳ ನಂತರ ಆಗಸ್ಟ್ 2020 ರಲ್ಲಿ, ಯುಎನ್‌ಪಿ ಅಧಿಕಾರಕ್ಕೆ ಬಂದರೆ ವಿಕ್ರಮಸಿಂಘೆ ಅವರನ್ನು ಪಿಎಂ ಹುದ್ದೆಗೆ ಹೆಸರಿಸಲು ನಿರಾಕರಿಸಿದ ನಂತರ ಸಜಿತ್ ತಮ್ಮದೇ ಆದ ಎಸ್‌ಎಲ್‌ಪಿಪಿಯನ್ನು ರಚಿಸುವ ಉದ್ದೇಶದಿಂದ ಯುಎನ್‌ಪಿಯಿಂದ ಹೊರನಡೆದರು.

54 ಸ್ಥಾನಗಳೊಂದಿಗೆ ಗೆಲುವು

ಮತ್ತೆ ರಾಜಪಕ್ಸೆ ನೇತೃತ್ವದ SLPP ಸಂಸತ್ತಿನಲ್ಲಿ 2/3 ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೆ, ಸಜಿತ್ ಅವರು 225 ಸದಸ್ಯರ ಶ್ರೀಲಂಕಾ ಸಂಸತ್ತಿನಲ್ಲಿ 54 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆದರೆ ಅವರ ರಾಜಕೀಯ ವಿರೋಧಿ ವಿಕ್ರಮಸಿಂಘೆ ಅವರ ಸಂಪೂರ್ಣ ಸೋತರು. .

ಇದನ್ನೂ ಓದಿ: Sri Lanka Crisis: ಧಗಧಗಿಸುತ್ತಿರುವ ಸಿಂಹಳದ ಸಿಂಹಾಸನ ಯಾರಿಗೆ? ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ!

 ಸದನದ ಒಳಗೂ ಹೊರಗೂ ಕಾಡಿದ ಸಜಿತ್

ಸಜಿತ್ ಪ್ರೇಮದಾಸ್ ಸಂಸತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಜಪಕ್ಸೆ ವಂಶದವರನ್ನು ಕಾಡಿದರು. ಅತ್ತ ಸದನದ ಹೊರಗೂ ರಾಜಪಕ್ಸೆ ವಂಶಸ್ಥರಿಗೆ ಪ್ರತಿಸ್ಪರ್ಧಿಯಾದರು.

ಗೋತಾಬಯ ವಿರುದ್ಧ ನಿರಂತರ ಹೋರಾಟ

ಸಜಿತ್ ಪ್ರೇಮದಾಸ್ ವಿಪಕ್ಷ ನಾಯಕರಾಗಿ ಸುಮ್ಮನೆ ಕೂರಲಿಲ್ಲ. ಗೋತಾಬಯ ವಿರುದ್ಧ ಕೇವಲ 100 ದಿನಗಳಲ್ಲಿ ಪ್ರತಿಭಟನೆ ನಡೆಸಿದ್ರು. ಆಧಾರ ಸಹಿತರಾಗಿ ರಾಜಕೀಯವಾಗಿ ಗೋತಬಯ ವಿರುದ್ಧ ಆರೋಪ ಮಾಡಿದ್ರು. ಸೋತೆ ಅಂತ ಕೈಕಟ್ಟಿ ಕೂರದೇ ಸಾರ್ವಜನಿಕವಾಗಿ ಹೆಚ್ಚೆಚ್ಚು ಕಾಣಿಸಿಕೊಂಡರು, ಜನಪ್ರಿಯವಲ್ಲದ ಸರ್ಕಾರವನ್ನು ಉರುಳಿಸುವ ಜನರ ಹಕ್ಕನ್ನು ರಕ್ಷಿಸಲು ನಾನು ಸಿದ್ಧ ಎಂಬ ಸಂದೇಶ ರವಾನಿಸುತ್ತಿದ್ದರು.

ಇಂದು ಕಿಂಗ್ ಮೇಕರ್ ಆದ ಸಜಿತ್

ಮಾಜಿ ಸಚಿವ ಡಲ್ಲಾಸ್ ಅಲ್ಲಾಪೆರುಮಾ ಅವರನ್ನು ಬೆಂಬಲಿಸಿದ ಸುಜಿತ್ ಪ್ರೇಮದಾಸ್, ಕೊನೆಯ ಕ್ಷಣದಲ್ಲಿ ಅಧ್ಯಕ್ಷ ರೇಸ್‌ನಿಂದ ಹಿಂದೆ ಸರಿಯುವ ಮೂಲಕ ತಮ್ಮ ರಾಜಕೀಯ ಬುದ್ಧಿವಂತಿಕೆಯನ್ನು ಸಾಬೀತುಪಡಿಸಿದ್ದಾರೆ.ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದರಾ?

ರಾನಿಲ್ ಅವರನ್ನು ಸೋಲಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸಜಿತ್‌ಗೆ ಸ್ವತಃ ತಿಳಿದಿದೆ. ಜೊತೆಗೆ ಈಗಿರುವ ಸಂಸತ್ತಿನೊಳಗೆ ರನಿಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಸಜಿತ್ ಅವ್ರಿಗೆ ಮನವರಿಕೆ ಆದಂತಿದೆ. ಏಕೆಂದರೆ ಹೆಚ್ಚಿನ ಸಂಸದರು ರಾಜಪಕ್ಸ ಅಭಿಮಾನಿಗಳ ಸಂಘದಿಂದ ಬಂದವರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಾದ ಎಸ್‌ಎಲ್‌ಪಿಪಿ ನಾಯಕನನ್ನು ಬೆಂಬಲಿಸುವುದು ನಂತರ ಪ್ರಧಾನಿ ಹುದ್ದೆಗೆ ಹಕ್ಕು ಸಾಧಿಸುವುದೇ ಅವರ ಉದ್ದೇಶ ಎನ್ನಲಾಗಿದೆ. ಈ ಮೂಲಕ ಅವರು ರಾಜಪಕ್ಸೆ ಮನೆತನ ಮತ್ತು ವಿಕ್ರಮಸಿಂಘೆ ಇಬ್ಬರನ್ನೂ ಮೂಲೆಗುಂಪು ಮಾಡಿದ್ದಾರೆ.

ಪ್ರಧಾನಿಯಾಗ್ತಾರಾ ಸಜಿತ್?

ಅಧ್ಯಕ್ಷೀಯ ರೇಸ್‌ನಲ್ಲಿ ಡಲ್ಲಾಸ್ ಗೆದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಸ್ತುತ ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ರದ್ದುಪಡಿಸಿದ ನಂತರ ಸಜಿತ್ ಕಾರ್ಯಕಾರಿ ಅಧಿಕಾರದೊಂದಿಗೆ ಪ್ರಧಾನಿಯಾಗುತ್ತಾರೆ. ಇದೇ ಇವರ ತಂತ್ರಗಾರಿಕೆ.

ರಾಜಕೀಯ ಪರಂಪರೆಯಿಂದ ಬಂದ ಸುಜಿತ್

55 ವರ್ಷದ ಸಜಿತ್ ಪ್ರೇಮದಾಸ ಶ್ರೀಲಂಕಾದ ಅತ್ಯಂತ ಸುಧಾರಣಾವಾದಿ ಅಧ್ಯಕ್ಷ ರಣಸಿಂಗ್ ಪ್ರೇಮದಾಸ ಅವರ ಮಗ. ಅವರ ತಂದೆಯನ್ನು ಶಂಕಿತ ಎಲ್‌ಟಿಟಿಇ ಆತ್ಮಹತ್ಯಾ ಬಾಂಬರ್‌ ಮೇ 1, 1993 ರಂದು ಕೊಲಂಬೊದಲ್ಲಿ ಹತ್ಯೆ ಮಾಡಲಾಯಿತು. ಆಗ ಸಜಿತ್ ಕೇವಲ 25 ವರ್ಷ ವಯಸ್ಸಿನವರಾಗಿದ್ದರು.

ಜನಪರ ಯೋಜನೆ ತಂದಿದ್ದ ಪ್ರೇಮದಾಸ್

ಸಜಿತ್ ಅವರ ತಂದೆ ಆರ್ ಪ್ರೇಮದಾಸ ಅವರು ಹಲವು ಯೋಜನೆಗಳ ಮೂಲಕ ಜನಪ್ರಿಯರಾಗಿದ್ದರು. 1980-90 ರ ದಶಕದಲ್ಲಿ ದೇಶದಾದ್ಯಂತ 10,000 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಗಾರ್ಮೆಂಟ್ ಫ್ಯಾಕ್ಟರಿಗಳನ್ನು ತೆರೆಯಲಾಯಿತು. ಆ ಮೂಲಕ ಇಂದಿಗೂ ದೇಶವು ವಿದೇಶೀ ವಿನಿಮಯದ ಸಮಂಜಸವಾದ ಒಳಹರಿವನ್ನು ಅವು ನಿರ್ವಹಿಸುತ್ತಿವೆ.

ಬಹುಮುಖ ಪ್ರತಿಭೆಯ ಸಜಿತ್

ಸಜಿತ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. ಉತ್ತಮ ಗಿಟಾರ್ ವಾದಕ ಮತ್ತು ವನ್ಯಜೀವಿ ಛಾಯಾಗ್ರಾಹಕ. 1999 ರಲ್ಲಿ ಜಲನಿ ಎಂಬುವರನ್ನು ವಿವಾಹವಾದರು.

ಕ್ಲೀನ್ ಹ್ಯಾಂಡ್ ಎಂಬ ಹೆಚ್ಚುಗಾರಿಕೆ

ವಸತಿ ಸಚಿವರಾಗಿ ಅವರು ಶ್ರೀಲಂಕಾದಾದ್ಯಂತ ಲಕ್ಷಗಟ್ಟಲೆ ನಿರಾಶ್ರಿತರಿಗೆ ಮನೆಗಳನ್ನು ಒದಗಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇಷ್ಟಾದರೂ ಯಾವುದೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿಲ್ಲ. ಹೀಗಾಗಿ ಸಜಿತ್ ಆಡಳಿತವನ್ನು ಶ್ರೀಲಂಕನ್ನರು ಬಯಸುತ್ತಿದ್ದಾರೆ.

ಇದನ್ನೂ ಓದಿ: Sri Lanka: ಶ್ರೀಲಂಕಾದ ಬಲಿಷ್ಠ ರಾಜಪಕ್ಸೆ ಕುಟುಂಬದ ಅಧಿಕಾರ ಪತನದ ಹಿಂದಿದ್ದಾರೆ ನಾಲ್ವರು! ಯಾರವರು ಅಂತ ನೋಡಿ

ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ

ಸದ್ಯ ಇದೀಗ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ರಾನಿಲ್ ವಿಕ್ರಮಸಿಂಘೆ, ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಬಂಡಾಯ ನಾಯಕ ಡಲ್ಲಾಸ್ ಅಲಹಪ್ಪೆರುಮ ಮತ್ತು ಎಡಪಕ್ಷವಾದ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ಡಿಸಾನಾಯಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇದೀಗ ತೀವ್ರ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ.
Published by:Annappa Achari
First published: