• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ, ಸಮೀಕ್ಷೆ ವರದಿಯಿಂದ ಬಿಜೆಪಿಗೆ ಟೆನ್ಶನ್, ತಮಿಳುನಾಡಿನಿಂದ ಸ್ಪರ್ಧಿಸ್ತಾರಾ ಮೋದಿ?

Explained: ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ, ಸಮೀಕ್ಷೆ ವರದಿಯಿಂದ ಬಿಜೆಪಿಗೆ ಟೆನ್ಶನ್, ತಮಿಳುನಾಡಿನಿಂದ ಸ್ಪರ್ಧಿಸ್ತಾರಾ ಮೋದಿ?

ನರೇಂದ್ರ ಮೋದಿ-ಅಮಿತ್ ಶಾ (ಸಂಗ್ರಹ ಚಿತ್ರ)

ನರೇಂದ್ರ ಮೋದಿ-ಅಮಿತ್ ಶಾ (ಸಂಗ್ರಹ ಚಿತ್ರ)

Loksabha Elections: ದಕ್ಷಿಣದ ಕೋಟೆಗೆ ನುಸುಳಲು ಇದುವರೆಗೂ ವಿಫಲವಾಗಿರುವ ಬಿಜೆಪಿ ಹೊಸ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ತಮಿಳುನಾಡಿನಿಂದ ಪ್ರಧಾನಿ ಚುನಾವಣೆಗೆ ಸ್ಪರ್ಧಿಸುವ ವಿಷಯವನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Chennai [Madras], India
 • Share this:

  ಸಿ ವೋಟರ್ ಸಮೀಕ್ಷೆಯಲ್ಲಿ (C-Voter Survey), ಮಹಾರಾಷ್ಟ್ರ, ಕರ್ನಾಟಕ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನವು ದುರ್ಬಲವಾಗಿದೆ ಎಂದು ಊಹಿಸಲಾಗಿದೆ. ಆದರೀಗ ತಮಿಳುನಾಡು ಬಿಜೆಪಿ (Tamil Nadu BJP) ಮುಖ್ಯಸ್ಥರ ಹೇಳಿಕೆಯ ನಂತರ, ಪ್ರಧಾನಿ ಮೋದಿ (PM Narebdra Modi) ತಮಿಳುನಾಡಿನಿಂದ ಸ್ಪರ್ಧಿಸುತ್ತಾರೆಯೇ ಎಂಬ ಚರ್ಚೆ ಪ್ರಾರಂಭವಾಗಿದೆ. ಹೌದು 2024ರ ಲೋಕಸಭೆ ಚುನಾವಣೆಗೆ (Loksabha Elections 2024) ಇನ್ನೂ 390 ದಿನಗಳು ಬಾಕಿ ಇವೆ. ಹೀಗಿರುವಾಗ ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಆಟವಾಡಲು ಸಿದ್ಧತೆ ನಡೆಸಿವೆ. ದಕ್ಷಿಣದ ಕೋಟೆಗೆ ನುಸುಳಲು ಇದುವರೆಗೂ ವಿಫಲವಾಗಿರುವ ಬಿಜೆಪಿ ಹೊಸ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ತಮಿಳುನಾಡಿನಿಂದ ಪ್ರಧಾನಿ ಚುನಾವಣೆಗೆ ಸ್ಪರ್ಧಿಸುವ ವಿಷಯವನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.


  ತಮಿಳುನಾಡಿನಲ್ಲಿ ಕೆಲವರು ನರೇಂದ್ರ ಮೋದಿ ಅವರನ್ನು ಹೊರಗಿನವರು ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಅಣ್ಣಾಮಲೈ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರು ಪ್ರಾದೇಶಿಕ ತಡೆಗೋಡೆ ದಾಟಿದ್ದು, ತಮಿಳುನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 2024ರ ಚುನಾವಣೆ ವಿಭಿನ್ನ ರೀತಿಯ ಲೋಕಸಭೆ ಚುನಾವಣೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.


  ಇದನ್ನೂ ಓದಿ: Delhi Rajpath: ರಾಜಪಥದ ಹೆಸರನ್ನು ಕರ್ತವ್ಯ ಪಥವನ್ನಾಗಿ ಬದಲಾವಣೆಗೆ ಕೇಂದ್ರದ ಪ್ಲ್ಯಾನ್! ಪ್ರತಿಪಕ್ಷಗಳ ನಾಯಕರಿಂದ ಭಾರಿ ಟೀಕೆ


  ತಮಿಳುನಾಡಿನಿಂದ ಸ್ಪರ್ಧಿಸುತ್ತಾರಾ ಪ್ರಧಾನಿ ಮೋದಿ?


  ಬಿಜೆಪಿಯಲ್ಲಿ ಯಾವುದಾದರೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಕ್ರಿಯೆ ನಡೆಯುತ್ತದೆ. ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಪ್ರತಿ ಕ್ಷೇತ್ರಗಳ ಬಗ್ಗೆ ಚರ್ಚಿಸಿದ ನಂತರ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. 2019 ರಲ್ಲೂ, ಪ್ರಧಾನಿ ಮೋದಿ ಒಡಿಶಾದ ಪುರಿ ಮತ್ತು ಯುಪಿಯ ವಾರಣಾಸಿಯಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಸಂಸದೀಯ ಮಂಡಳಿಯು ವಾರಾಣಸಿಯಿಂದ ಮಾತ್ರ ಅವರ ಹೆಸರನ್ನು ಘೋಷಿಸಿತ್ತು. ಆದರೀಗ ಪ್ರಧಾನಿ ಮೋದಿ ತಮಿಳುನಾಡಿನಿಂದಲೂ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಬಹುದೊಡ್ಡ ಕಾರಣ ದಕ್ಷಿಣದಲ್ಲಿ ಹೆಚ್ಚುತ್ತಿರುವ ಕಾಂಗ್ರೆಸ್‌ನ ಜನಬಲ.


  according to the c voter survey narendra modi will become the prime minister if the elections are held now
  ನರೇಂದ್ರ ಮೋದಿ


  ಮೋದಿ ಸ್ಪರ್ಧಿಸಿದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬಹುದು?


  ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮಾತನಾಡಿ, ರಾಜ್ಯದ ರಾಮನಾಥಪುರಂ ಲೋಕಸಭಾ ಕ್ಷೇತ್ರದ ಜನರೂ ಪ್ರಧಾನಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಹೇಳಿರುವ ವದಂತಿ ಸದ್ಯ ಭಾರೀ ಚರ್ಚೆ ಹುಟ್ಟಿಸಿದೆ. ಆದರೆ ವಾಸ್ತವ ಚಿತ್ರಣ ನೋಡುವುದಾದರೆ 2019ರಲ್ಲಿ ತಮಿಳುನಾಡಿನ 39 ಸ್ಥಾನಗಳ ಪೈಕಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಲ್ಲಿಂದ ಬಿಜೆಪಿ ಮೋದಿಯನ್ನು ಕಣಕ್ಕಿಳಿಸುವ ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಆದರೆ 2014ರಲ್ಲಿ ಕನ್ಯಾಕುಮಾರಿ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.


  ಇದನ್ನೂ ಓದಿ: Bihar Politics: ಬಿಹಾರದಲ್ಲಿ ಸರ್ಕಾರ ಬದಲಾವಣೆಯಿಂದ NDAಗೆ ಭಾರೀ ನಷ್ಟ, 286 ಸ್ಥಾನ ಗೆಲ್ಲೋದು ಡೌಟ್​!


  ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಚುನಾವಣೆಗೆ ಸ್ಪರ್ಧಿಸಿದರೆ ಕನ್ಯಾಕುಮಾರಿ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಇನ್ನು 2019 ರಲ್ಲಿ ಕೊಯಮತ್ತೂರು, ಶಿವಗಂಗೈ, ರಾಮನಾಥಪುರಂ, ಕನ್ಯಾಕುಮಾರಿ ಮತ್ತು ತೂತಿಕುಡಿ ಕ್ಷೇತ್ರಗಳು ಸೇರಿದಂತೆ ತಮಿಳುನಾಡಿನ 5 ಸ್ಥಾನಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿತ್ತು. ಹೀಗಾಗಿ ಕನ್ಯಾಕುಮಾರಿ ಹೊರತುಪಡಿಸಿ ಈ ನಾಲ್ಕು ಸ್ಥಾನಗಳಲ್ಲಿ ಯಾವುದಾದರೂ ಒಂದು ಸ್ಥಾನದಿಂದ ಪ್ರಧಾನಿ ಸ್ಪರ್ಧಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.


  ದೆಹಲಿ ಬಿಜೆಪಿಯ ಟೆನ್ಷನ್ ಹೆಚ್ಚಿಸಿದೆ ಆ 2 ವಿವಾದಗಳು


  1. ಭಾಷಾ ವಿವಾದ - ಏಪ್ರಿಲ್ 2022 ರಲ್ಲಿ ಕಾರ್ಯಕ್ರಮವೊಂದರಲ್ಲಿ, ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲಿಗೆ ಹಿಂದಿಯಲ್ಲಿ ಪರಸ್ಪರ ಮಾತನಾಡಬೇಕೆಂದು ಅಮಿತ್ ಶಾ ಹೇಳಿದ್ದರು. ಶಾ ಅವರ ಈ ಹೇಳಿಕೆಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಆಡಳಿತ ಪಕ್ಷ ಡಿಎಂಕೆ ಕಾರ್ಯಕರ್ತರು ಹಲವೆಡೆ ಪ್ರತಿಭಟನೆ ನಡೆಸಿದ್ದರು. ಅಮಿತ್ ಶಾ ಅವರ ಈ ಹೇಳಿಕೆ ದೇಶದ ಏಕತೆಯನ್ನು ಒಡೆಯಲು ಹೂಡಿರುವ ತಂತ್ರ ಎಂದು ಖುದ್ದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೇ ಹೇಳಿದ್ದಾರೆ. ದೆಹಲಿಯ ಜನರು ದೇಶದ ವೈವಿಧ್ಯತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ, ಅದನ್ನು ನಾವು ಮಾಡಲು ಬಿಡುವುದಿಲ್ಲ ಎಂದೂ ಸ್ಟಾಲಿನ್ ಹೇಳಿದ್ದರು.


  amit Shah meeting with belagavi leader
  ಅಮಿತ್ ಶಾ


  ವಾಸ್ತವವಾಗಿ, 1944 ರಲ್ಲಿ, ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ, ದ್ರಾವಿಡ ನಾಡು ದೇಶ ಮತ್ತು ತಮಿಳಿಗೆ ಪ್ರತ್ಯೇಕ ರಾಷ್ಟ್ರ ಭಾಷೆಯ ಬೇಡಿಕೆ ಇತ್ತು. ಆದಾಗ್ಯೂ, ಸಂವಿಧಾನದಲ್ಲಿ ಹಿಂದಿಯೊಂದಿಗೆ, ತಮಿಳು ಸೇರಿದಂತೆ ಹಲವು ಭಾಷೆಗಳನ್ನು ಎಂಟನೇ ಶೆಡ್ಯೂಲ್‌ಗೆ ಸೇರಿಸಲಾಗಿದೆ. ಆದರೆ ಇದಾದ ಬಳಿಕ 1960ರ ದಶಕದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ವಿಚಾರ ಪ್ರಸ್ತಾಪವಾದಾಗ ತಮಿಳುನಾಡಿನಲ್ಲಿ ಉಗ್ರ ಪ್ರತಿಭಟನೆಗಳು ನಡೆದಿದ್ದವು, ನಂತರ ಅಂದಿನ ಸರ್ಕಾರ ಅದನ್ನು ಅಲ್ಲಿಗೇ ನಿಲ್ಲಿಸಿತ್ತು.


  ಇದನ್ನೂ ಓದಿ: Explained: ರಾಜಕಾರಣಕ್ಕೆ ಮರಳಿದ ಬಿಎಸ್​ವೈ, ಸಿದ್ದುಗೆ ಟೆನ್ಶನ್, ಬೊಮ್ಮಾಯಿ ಕತೆ ಏನು? ಒಗಟಾದ ಕರ್ನಾಟಕ ರಾಜಕೀಯ!


  2. ತಮಿಳಗಂ ವಿವಾದ- ಇತ್ತೀಚೆಗೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ತಮಿಳಗಂ ವಿವಾದವನ್ನು ಎತ್ತಿದ್ದರು. ತಮಿಳುನಾಡು ಎಂದರೆ ತಮಿಳರ ದೇಶ ಅಥವಾ ರಾಷ್ಟ್ರ ಎಂದು ಹೇಳಿದ್ದರು. ಆದರೆ ತಮಿಳಗಂ ಎಂದರೆ ತಮಿಳು ಜನರ ಮನೆ ಎಂದರ್ಥ. ರಾಜ್ಯಪಾಲರ ಈ ಹೇಳಿಕೆಯಿಂದ ಕೆರಳಿದ ಆಡಳಿತ ಪಕ್ಷದ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ದ್ರಾವಿಡ ರಾಜಕೀಯದಿಂದಾಗಿ 1967 ರಲ್ಲಿ ಮದ್ರಾಸ್ ಅನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಲಾಯಿತು. ಅಲ್ಲದೇ ದ್ರಾವಿಡ ಮಾದರಿಯನ್ನು ಉಲ್ಲೇಖಿಸುವಾಗ ಡಿಎಂಕೆ ಸ್ಥಾಪಕ ಮತ್ತು ಅಂದಿನ ಸಿಎಂ, ಈ ಹೆಸರನ್ನು ಭಾವನಾತ್ಮಕ ಎಂದು ಬಣ್ಣಿಸಿದ್ದರು. ಇತ್ತೀಚೆಗಿನ ಈ ಎರಡು ವಿವಾದಗಳು ತಮಿಳುನಾಡಿನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದು, ಇತ್ತ ಬಿಜೆಪಿ ಟೆನ್ಶನ್ ಹೆಚ್ಚಿಸಿವೆ.


  ದಕ್ಷಿಣದ ರಾಜಕೀಯ ಸಮೀಕರಣ ಮೇಲೆ ಬಿಜೆಪಿ ತೀವ್ರ ನಿಗಾ


  ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ಒಟ್ಟು 129 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಒಂದು ಸ್ಥಾನವಿದೆ. ಹೀಗೆ ಒಟ್ಟು ಸ್ಥಾನಗಳ ಸಂಖ್ಯೆ 130 ಆಗುತ್ತದೆ. 2019 ರಲ್ಲಿ 303 ಸ್ಥಾನಗಳನ್ನು ಗೆದ್ದ ಬಿಜೆಪಿ, ಈ 130 ಸ್ಥಾನಗಳಲ್ಲಿ ಕೇವಲ 29 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಇದರಲ್ಲಿ ಕರ್ನಾಟಕದ 25 ಸ್ಥಾನಗಳೂ ಸೇರಿವೆ. ಅಂದರೆ ದಕ್ಷಿಣದ 3 ರಾಜ್ಯಗಳಲ್ಲಿ (ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ) ಬಿಜೆಪಿ ಖಾತೆ ತೆರೆಯಲೇ ಇಲ್ಲ ಎನ್ನಬಹುದು.


  No candidates for bjp in two wards vijayapur mrq
  ಸಾಂದರ್ಭಿಕ ಚಿತ್ರ


  ಆದರೀಗ ಸಿ-ವೋಟರ್ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಮಹಾರಾಷ್ಟ್ರ, ಕರ್ನಾಟಕ, ಬಿಹಾರ ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವು ಈ ರಾಜ್ಯಗಳಲ್ಲಿ ಕಡಿಮೆಯಾಗಬಹುದಾದ ಸ್ಥಾನಗಳನ್ನು ದಕ್ಷಿಣದ ಇತರ ರಾಜ್ಯಗಳಲ್ಲಿ ಪ್ರಬಲವಾಗಿ ಹೋರಾಡುವ ಮೂಲಕ ಸರಿದೂಗಿಸುವ ಲೆಕ್ಕಾಚಾರದಲ್ಲಿದೆ.


  ಇದನ್ನೂ ಓದಿ: BJP Tweet: ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ; ಬಿಜೆಪಿ ವ್ಯಂಗ್ಯ


  ತಮಿಳುನಾಡೇ ಯಾಕೆ ಬಿಜೆಪಿ ಟಾರ್ಗೆಟ್? ಹೀಗಿದೆ ಪ್ರಮುಖ ಕಾರಣಗಳು


  * ತಮಿಳುನಾಡಿನ ಗಡಿಯು ದಕ್ಷಿಣ ಭಾರತದ 3 ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಇವುಗಳಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳ ಸೇರಿವೆ.


  * ಜಯಲಲಿತಾ ಅವರ ನಿಧನದ ನಂತರ ಪ್ರತಿಪಕ್ಷಗಳು ಸಂಪೂರ್ಣ ದುರ್ಬಲಗೊಂಡಿವೆ. ಬಿಜೆಪಿಗೆ ತನ್ನ ಬೇರುಗಳನ್ನು ಸ್ಥಾಪಿಸಲು ಇದು ಸುಲಭ ಅವಕಾಶ.


  ದಕ್ಷಿಣ ಭಾರತಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿದ ಗಣ್ಯ ನಾಯಕರ ಸ್ಥಿತಿ ಏನಾಗಿದೆ?


  * 1980 ರಲ್ಲಿ, ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿ ಅವರು ಆಂಧ್ರಪ್ರದೇಶದ ಮೇದಕ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅವರು ಭಾರೀ ಅಂತರದಿಂದ ಗೆದ್ದು, ರಾಜಕೀಯ ಮರುಜನ್ಮ ಪಡೆದಿದ್ದರು.


  .
  * ಅತ್ತೆಯ ಹಾದಿಯಲ್ಲೇ ಹೆಜ್ಜೆ ಇಟ್ಟ ಸೋನಿಯಾ ಗಾಂಧಿ ಕೂಡ 1999ರಲ್ಲಿ ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಬಿಜೆಪಿಯು ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರನ್ನು ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಈ ಚುನಾವಣೆಯಲ್ಲಿ ಸುಷ್ಮಾ ಸೋಲನುಭವಿಸಿದ್ದರೆ, ಸೋನಿಯಾ ಗೆಲುವಿನ ನಗೆ ಬೀರಿದ್ದರು. ಇದು ಸೋನಿಯಾ ಗಾಂಧಿಗೆ ರಾಜಕೀಯವಾಗಿ ಮತ್ತೊಂದು ಇನ್ನಿಂಗ್ಸ್​ ಪ್ರಾರಂಭಿಸಲು ಸಹಾಯ ಮಾಡಿತ್ತು.


  ಇದನ್ನೂ ಓದಿ: Congress Vs BJP: ಎಲ್ಲವೂ ಪೇಮೆಂಟ್ ವ್ಯವಹಾರವೇ ಎಂದ ಕಾಂಗ್ರೆಸ್; ಬಿಜೆಪಿ ನಾಯಕರ ತಿರುಗೇಟು ಹೀಗಿತ್ತು


  * 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದೇ ಸಂದರ್ಭದಲ್ಲಿ ಅವರು ತಮ್ಮ ತವರು ಕ್ಷೇತ್ರ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದಲೂ ಅಭ್ಯರ್ಥಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಅಮೇಥಿಯಲ್ಲಿ ಸೋಲನುಭವಿಸಿದ್ದರು

  Published by:Precilla Olivia Dias
  First published: