• ಹೋಂ
  • »
  • ನ್ಯೂಸ್
  • »
  • Explained
  • »
  • Karnataka Politics: ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಸುಧಾರಿಸುತ್ತಾ ಮೈಸೂರಿನ ಆರ್ಥಿಕತೆ?

Karnataka Politics: ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಸುಧಾರಿಸುತ್ತಾ ಮೈಸೂರಿನ ಆರ್ಥಿಕತೆ?

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಆದರೀಗ ಸಿದ್ದರಾಮಯ್ಯ ಸಿಎಂ ಆದ ನಂತರ ಮೈಸೂರಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವುದೇ ಎಂಬುದು ಸದ್ಯ ಈಗ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.

  • Trending Desk
  • 5-MIN READ
  • Last Updated :
  • Bangalore [Bangalore], India
  • Share this:

ಕರ್ನಾಟಕದ ನೂತನ ಸಿಎಂ (Chief Minister Of Karnataka) ಆಯ್ಕೆಯ ಕಸರತ್ತಿಗೆ ತೆರೆ ಬಿದ್ದು, ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಆಗಿ ಡಿ. ಕೆ. ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರೊಂದಿಗೆ ಎಂಟು ಮಂದಿ ಶಾಸಕರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


2023ರ ಮುಖ್ಯಮಂತ್ರಿಯಾಗಿ ಮೈಸೂರಿನ ಸಿದ್ದರಾಮಯ್ಯ:


ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅಧಿಕಾರಾವಧಿಯಲ್ಲಿ, ಶ್ರೀ ಸಿದ್ದರಾಮಯ್ಯ ಅವರು ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಮಂಡಳಿಗಳು ಮತ್ತು ಕಂಪನಿಗಳನ್ನು ರಚಿಸುವುದರ ಜೊತೆಗೆ ಅನ್ನ ಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯದಂತಹ ವಿವಿಧ ಭಾಗ್ಯ ಯೋಜನೆಗಳ ಮೂಲಕ ವಿಶಾಲ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದರು.  ಆದರೀಗ ಸಿದ್ದರಾಮಯ್ಯ ಸಿಎಂ ಆದ ನಂತರ ಮೈಸೂರಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವುದೇ ಎಂಬುದು ಸದ್ಯ ಈಗ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.


ಸಿದ್ದರಾಮಯ್ಯ ಸಿಎಂ ಆದ ನಂತರ ಮೈಸೂರಿನ ಆರ್ಥಿಕತೆ ಸುಧಾರಿಸುವುದೇ?


ಈಗಾಗಲೇ ಮೈಸೂರು ನಗರದ ಮಹಾರಾಣಿ ಕಾಲೇಜಿಗೆ ಹೊಸ ಕಟ್ಟಡ ಮತ್ತು ಕ್ಯಾಂಪಸ್‌ನ ನಿರ್ಮಾಣದ ಹೊರತಾಗಿ ಹಲವಾರು ಆಸ್ಪತ್ರೆಗಳನ್ನು ಮಂಜೂರು ಮಾಡಿ ಪೂರ್ಣಗೊಳಿಸಲಾಗಿದೆ, ನಂಜನಗೂಡಿನಲ್ಲಿ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸಲಾಗಿದೆ.


ಈ ನಡುವೆ 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರವಾಸೋದ್ಯಮ ಅಥವಾ ಪರಂಪರೆಯ ಖ್ಯಾತಿಯ ಮೈಸೂರು ಕುರಿತು ಸಿದ್ದರಾಮಯ್ಯ ಯಾವುದೇ ಅಭಿವೃದಿ ಕ್ರಮವನ್ನು ಕೈಗೊಂಡಿಲ್ಲ ಎಂದು ಕೆಲವು ಮಧ್ಯಸ್ಥಗಾರರ ವಾದ.


ಹಾಗಾಗಿ ಅವರ ಎರಡನೇ ಅವಧಿಯು ಮೈಸೂರಿಗೆ ಯೋಜನೆಗಳನ್ನು ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹಲವು ಮೂಲಗಳು ತಿಳಿಸಿವೆ. ಆದರೆ ಶ್ರೀ ಸಿದ್ದರಾಮಯ್ಯನವರ ಉದಯದೊಂದಿಗೆ ಮೈಸೂರಿನ ರಾಜಕೀಯ ಪ್ರಾಮುಖ್ಯತೆ ಮತ್ತು ಪ್ರಭಾವವು ಹೆಚ್ಚಾಗಬಹುದಾದರೂ, ಅದು ಸ್ವಯಂಚಾಲಿತವಾಗಿ ಮೈಸೂರು ನಗರದಲ್ಲಿ ನಿರ್ದಿಷ್ಟ ಪ್ರದೇಶದ ಬೆಳವಣಿಗೆ ಅಥವಾ ಅಭಿವೃದ್ಧಿಗೆ ಸೀಮಿತವಾಗುವುದಿಲ್ಲ ಏಕೆಂದರೆ ಅವರು ಮುಖ್ಯಮಂತ್ರಿಯಾಗಿ ಇಡೀ ರಾಜ್ಯಕ್ಕೆ ಸೇವೆ ಸಲ್ಲಿಸಬೇಕಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.




ದೇವರಾಜ ಅರಸು ಹಾಗೂ ಸಿದ್ದರಾಮಯ್ಯನವರನ್ನು ಸಿಎಂ ಅಗಿ ಕೂಡುಗೆ ನೀಡಿದ ಹೆಗ್ಗಳಿಕೆ ಮೈಸೂರಿಗೆ:


ಕಲಹಳ್ಳಿಯ ಡಿ.ದೇವರಾಜ ಅರಸು ರವರು (ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದರು 1972-77 ಮತ್ತು 1978-80) ನಂತರ ಈ ಭಾಗದ ಎರಡನೇ ಸಿಎಂ ಆಗಿ ಸಿದ್ದರಾಮಯ್ಯನವರು ಎಂಬ ಹೆಗ್ಗಳಿಕೆಗೆ ಪಾತ್ರದಾರಿದ್ದಾರೆ. ತಮ್ಮ “ಪ್ರದೇಶದ ಮಣ್ಣಿನ ಮಗ” ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಗ್ಗೆ ಜನ ಹೆಮ್ಮೆ ಪಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಆದರೆ ಮುಖ್ಯಮಂತ್ರಿಗಳ ತವರು ಅಥವಾ ಊರಿನ ಅಭಿವೃದ್ಧಿ ಸ್ವಯಂಪ್ರೇರಿತವಾಗಿಲ್ಲ ಎಂಬುದಕ್ಕೆ ಕಲಹಳ್ಳಿ ಸೂಚಕವಾಗಿದೆ. ಈ ಊರು ಪ್ರಸಿದ್ಧ ಮುಖ್ಯಮಂತ್ರಿಗಳಾದ ಅರಸು ರವರನ್ನು ರಾಜ್ಯಕ್ಕೆ ಕೂಡುಗೆಯಾಗಿ ನೀಡಿದ್ದರೂ ಸಹ, ಕಲಹಳ್ಳಿಯು ಯಾವುದೇ ಮುಂದವರೆದ ತಂತ್ರಜ್ಞಾನದಿಂದ ಅಭಿವೃದ್ಧಿ ಹೊಂದಿಲ್ಲ, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಹಿಂದುಳಿದ ಜನರು ಕಲಹಳ್ಳಿಯಲ್ಲಿ ಇದ್ದಾರೆ ಎಂದು ವರದಿಗಳು ಸೂಚಿಸಿವೆ.


2015ರಲ್ಲಿ ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಆಚರಿಸಿದಾಗ ಈ ಗ್ರಾಮ ಬೆಳಕಿಗೆ ಬಂದಿತ್ತು ಆದರೆ ಮತ್ತೆ ಮರೆಯಾಯಿತು. ಶ್ರೀ ಸಿದ್ದರಾಮಯ್ಯನವರು ನೆಲೆಸಿರುವ ಸಿದ್ದರಾಮನಹುಂಡಿಯು ಸಹ ತನ್ನ ಗ್ರಾಮೀಣ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಆದರೆ ಮೈಸೂರಿಗೆ ಹತ್ತಿರವಾಗಿರುವುದರಿಂದ ಕಲಹಳ್ಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಉತ್ತಮವಾಗಿದೆ.


ಇದನ್ನೂ ಓದಿ:  Karnataka Weather Today: ಇಂದು ರಾಜ್ಯದಲ್ಲಿ ಮಳೆ ಆಗುತ್ತಾ? ಇಲ್ಲಿದೆ ಮಾಹಿತಿ

top videos


    ಮೈಸೂರಿನ ರಾಜಕೀಯ ಪ್ರಭಾವ ಹೆಚ್ಚಾಗಲಿದೆಯಾದರೂ, ಆರ್ಥಿಕ ಸಂಪತ್ತಿನಲ್ಲೂ ಅದಕ್ಕೆ ಅನುಗುಣವಾದ ಏರಿಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    First published: