• Home
  • »
  • News
  • »
  • explained
  • »
  • US Recession: ಅಮೆರಿಕದ ಆರ್ಥಿಕ ಹಿನ್ನಡೆ ಭಾರತದ ಐಟಿ ಉದ್ಯಮಕ್ಕೆ ಕೊಡಲಿಪೆಟ್ಟು ಕೊಡುತ್ತಾ?

US Recession: ಅಮೆರಿಕದ ಆರ್ಥಿಕ ಹಿನ್ನಡೆ ಭಾರತದ ಐಟಿ ಉದ್ಯಮಕ್ಕೆ ಕೊಡಲಿಪೆಟ್ಟು ಕೊಡುತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಾಗಲೇ ಜಾಗತಿಕವಾಗಿ ಮತ್ತೊಂದು ಆರ್ಥಿಕ ಹಿನ್ನಡೆತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪರಿಣಿತರ ಅಭಿಪ್ರಾಯವಾಗಿದೆ. ಹಣಕಾಸು ತಜ್ಞರು ಮುಂದಿನ ಒಂದು ವರ್ಷದಲ್ಲಿ ಅಮೆರಿಕ ಮತ್ತೊಮ್ಮೆ ಆರ್ಥಿಕ ಹಿನ್ನಡೆತ ಅನುಭವಿಸಲಿದೆ ಎಂದು ಹೇಳುತ್ತಿದ್ದು ಇದರ ಪರಿಣಾಮವು ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಮೇಲೆಯೂ ಬೀಳಲಿದ್ದು ಆ ಕಾರಣದಿಂದಾಗಿ ಭಾರತದ ಐಟಿ ದೈತ್ಯಗಳಾದ ಟಿಸಿಎಸ್. ಹೆಚ್.ಸಿ.ಎಲ್ ಹಾಗೂ ಇನ್ಫೋಸಿಸ್ ಸಂಸ್ಥೆಗಳ ಮೇಲೆಯೂ ಬಂದೊದಗಲಿದೆ ಎನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ಈಗಾಗಲೇ ಜಾಗತಿಕವಾಗಿ ಮತ್ತೊಂದು ಆರ್ಥಿಕ ಹಿನ್ನಡೆತ (Financial setback) ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಪರಿಣಿತರ ಅಭಿಪ್ರಾಯವಾಗಿದೆ. ಹಣಕಾಸು ತಜ್ಞರು (Financial Expert) ಮುಂದಿನ ಒಂದು ವರ್ಷದಲ್ಲಿ ಅಮೆರಿಕ (America) ಮತ್ತೊಮ್ಮೆ ಆರ್ಥಿಕ ಹಿನ್ನಡೆತ ಅನುಭವಿಸಲಿದೆ ಎಂದು ಹೇಳುತ್ತಿದ್ದು ಇದರ ಪರಿಣಾಮವು ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ (Technology) ಮೇಲೆಯೂ ಬೀಳಲಿದ್ದು ಆ ಕಾರಣದಿಂದಾಗಿ ಭಾರತದ ಐಟಿ ದೈತ್ಯಗಳಾದ ಟಿಸಿಎಸ್. ಹೆಚ್.ಸಿ.ಎಲ್ ಹಾಗೂ ಇನ್ಫೋಸಿಸ್ ಸಂಸ್ಥೆಗಳ ಮೇಲೆಯೂ ಬಂದೊದಗಲಿದೆ ಎನ್ನಲಾಗುತ್ತಿದೆ. ಭಾರತದ ಐಟಿ ಕಂಪನಿಗಳ (Indian IT Company) ಆದಾಯದಲ್ಲಿ ಶೇ. 40 ರಷ್ಟು ಪ್ರಮಾಣವು ಅಮೆರಿಕದ ಮಾರುಕಟ್ಟೆಯ ಮೇಲೆಯೇ ಅವಲಂಬಿತವಾಗಿರುವುದೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗುತ್ತಿದೆ.


ಅಮೆರಿಕ ಆರ್ಥಿಕ ಹಿಂಜರಿತದ ಬಗ್ಗೆ ವರದಿ ಏನು ಹೇಳಿದೆ?
ಅಮೆರಿಕದಲ್ಲಿ ಆಗಬಹುದಾದ ಆರ್ಥಿಕ ಹಿಂಜರಿತಕ್ಕೆ ಸಂಬಂಧಿಸಿದಂತೆ ಯುಎಸ್ ಮೂಲದ ಬ್ರೋಕರೇಜ್ ಸಂಸ್ಥೆಯಾದ ಗೋಲ್ಡ್ ಮನ್ ಸ್ಯಾಕ್ಸ್ ಈಗಾಗಲೇ ವರದಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ ಅದು ಅಮೆರಿಕವು ಮುಂದಿನ ವರ್ಷದವರೆಗೆ ಆರ್ಥಿಕ ಹಿಂಜರಿತಕ್ಕೆ ತಳ್ಳಲ್ಪಡುವ ಸಾಧ್ಯತೆ 30% ರಷ್ಟು ಸಂಭವವಿದ್ದು ಒಂದು ವೇಳೆ ಅದು ಸಂಭವಿಸದೆ ಹೋದಲ್ಲಿ ತದನಂತರದ ವರ್ಷದಲ್ಲಿ ಷರತ್ತುಬದ್ಧ ಹಿಂಜರಿತಕ್ಕೆ ಒಳಗಾಗುವ 25% ರಷ್ಟು ಸಾಧ್ಯತೆಯಿರುವುದಾಗಿ ಹೇಳಿದೆ. ಹಣದುಬ್ಬರವು ಇಳಿಯದೆ ಬ್ಯಾಂಕ್ ಆಫ್ ಅಮೆರಿಕದ ಸೆಕ್ಯೂರಿಟಿಗಳೂ ಸಹ ಶೇ. 40 ರಷ್ಟು ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದೆನ್ನಲಾಗಿದೆ.


ಅಮೆರಿಕದ ಆರ್ಥಿಕ ಹಿನ್ನಡೆತ ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ
ವಿಜನ್ ನೆಟ್ ಇಂಡಿಯಾ ಸಂಸ್ಥೆಯ ಎಂಡಿ ಹಾಗೂ ಜಾಗತಿಕ ಮುಖ್ಯಸ್ಥರಾಗಿರುವ ಅಲೋಕ್ ಬನ್ಸಾಲ್ ಅವರು, "ಅಕ್ಟೋಬರ್ 2020ರ ನಂತರ ಇದೇ ಮೊದಲ ಬಾರಿಗೆ ಈ ವರ್ಷ ಮಾರ್ಚ್ ನಲ್ಲಿ ಭಾರತವು 6.95 ಪ್ರತಿಶತದಷ್ಟು ನೆಗೆತ ಕಂಡ ಹಣದುಬ್ಬರವನ್ನು ಕಂಡಿದೆ. ಅಮೆರಿಕದ ಆರ್ಥಿಕ ಹಿನ್ನಡೆತದ ಪರಿಣಾಮಗಳು ಭಾರತದ ಮೇಲೆಯೂ ಆಗುವುದನ್ನು ಅಲ್ಲಗಳೆಯುವಂತಿಲ್ಲ" ಎಂದು ಹೇಳುತ್ತಾರೆ.


ತಮ್ಮ ಅಭಿಪ್ರಾಯವನ್ನು ಮುಂದುವರೆಸುತ್ತ ಅವರು ಭಾರತದ ಐಟಿ ಕಂಪನಿಗಳ ಆದಾಯದ ಪ್ರಮಾಣದಲ್ಲಿ ಕನಿಷ್ಠ 40 ಪ್ರತಿಶತದಷ್ಟು ಆದಾಯವು ಅಮೆರಿಕದ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿದೆ. ಇದಲ್ಲದೆ ಆದಾಯದ ಒಂದು ದೊಡ್ಡ ಭಾಗವೂ ಸಹ ಯುಕೆ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಂದ ಭಾರತದ ಐಟಿ ಕಂಪನಿಗಳಿಗೆ ಬರುತ್ತದೆ ಎನ್ನುವ ಅವರು "ಆರ್ಥಿಕ ಹಿಂಜರಿತ ಉಂಟಾದಲ್ಲಿ ಐಟಿ ಮೇಲೆ ಮಾಡಲಾಗುವ ವ್ಯಯವು ಕಡಿತವಾಗಲಿದೆ. ಈಗಾಗಲೇ ನಾವು 2008 ರಲ್ಲಿ ಉಂಟಾಗಿದ್ದ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮದಿಂದಾಗಿ ಐಟಿ ಮೇಲೆ ಯಾವ ರೀತಿ ಪರಿಣಾಮ ಉಂಟಾಗಿತ್ತು ಎಂಬುದನ್ನು ನೋಡಿದ್ದೇವೆ, ಹಾಗಾಗಿ ಮುಂದಿನ ಈ ಸಮಯವು ತುಂಬಾ ಪರೀಕ್ಷಾ ಸಮಯದಂತಿದ್ದು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಭಾರತದ ಟೆಕ್ ದೈತ್ಯಗಳ ಮೇಲೆ ಇದು ಹೇಗೆ ಪರಿಣಾಮ ಬೀರಿದೆ 
ಜೂನ್ 2022 ರ ತ್ರೈಮಾಸಿಕದಲ್ಲಿ ಟಿಸಿಎಸ್ ಸಂಸ್ಥೆಯು ನಿವ್ವಳ ಲಾಭ 9,478 ಕೋಟಿ ರೂಪಾಯಿ ದಾಖಲಿಸಿದ್ದು ಏಪ್ರಿಲ್-ಜೂನ್ ವರೆಗಿನ ಅವಧಿಯಲ್ಲಿ ಒಟ್ಟು ನಿವ್ವಳ ಲಾಭ 52,758 ಕೋಟಿ ರೂ. ದಾಖಲಿಸಿದೆ. ಕಳೆದ ವರ್ಷ ಇದೇ ಪ್ರಮಾಣವು 45,411 ಕೋಟಿ ರೂ. ಗಳಾಗಿತ್ತು.


ಇದನ್ನೂ ಓದಿ: MultiBagger Stock: ಒಂದೇ ವರ್ಷದಲ್ಲಿ ಈ ಷೇರಿನ ಬೆಲೆ ಶೇಕಡಾ 961ರಷ್ಟು ಏರಿಕೆ! ನೀವೂ ಇಲ್ಲಿ ಹೂಡಿಕೆ ಮಾಡಿದ್ದೀರಾ?


ಇದೇ ರೀತಿ ಭಾರತದ ಮತ್ತೊಂದು ಐಟಿ ದಿಗ್ಗಜವಾದ ಹೆ.ಸಿ.ಎಲ್ ಜೂನ್ 2022 ರ ತ್ರೈಮಾಸಿಕದಲ್ಲಿ 3,283 ಕೋಟಿ ರೂಪಾಯಿ ದಾಖಲಿಸಿದೆ. ಈ ಸಂದರ್ಭದಲ್ಲಿ ವಿಪ್ರೋ ಸಂಸ್ಥೆಯು ತನ್ನ ವಾರ್ಷಿಕ ಆದಾಯದಲ್ಲಿ 20.9% ರಷ್ಟು ಇಳಿಕೆಯಾಗಿರುವುದನ್ನು ಹೇಳಿದ್ದು ಜೂನ್ ತ್ರೈಮಾಸಿಕದಲ್ಲಿ ತನ್ನ ಆದಾಯವು 2,563 ಕೋಟಿ ರೂ. ಎಂದು ದಾಖಲಿಸಿದೆ.


ಕೋಟಕ್ ಸೆಕ್ಯೂರಿಟೀಸ್ ಸಂಸ್ಥೆಯ ವಿಪಿಯಾಗಿರುವ ಸುಮಿತ್ ಪೋಖರ್ನಾ ಹೇಳುವಂತೆ, "ಈ ಪ್ರಕ್ಷುಬ್ಧ ವಾತಾವರಣದ ಸಂದರ್ಭದಲ್ಲೂ ಜಾಗತಿಕವಾಗಿ ಐಟಿ ಸೇವೆಗಳ ಬೇಡಿಕೆಗೆ ಸಂಬಂಧಿಸಿದಂತೆ ಭಾರತದ ಹಲವು ಐಟಿ ಉದ್ಯಮಗಳು ಧನಾತ್ಮಕ ಧೋರಣೆಯನ್ನು ಹೊಂದಿವೆ. ಅದರಲ್ಲೂ ಕೆಲ ಸಂಸ್ಥೆಗಳು 2023ರ ತಮ್ಮ ಒಪ್ಪಂದಗಳು ಈಡೇರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು ನಿಜಕ್ಕೂ ಭಾರತದ ಸಂಸ್ಥೆಗಳ ಈ ಧನಾತ್ಮಕ ಧೋರಣೆಯ ಪರೀಕ್ಷೆ ಮುಂದಿನ ಕೊನೆಯ ಅರ್ಧ ಭಾಗದ ಆರ್ಥಿಕ ವರ್ಷದಲ್ಲಿ ನೋಡಬೇಕಾಗಿದೆ" ಎಂದು ಹೇಳುತ್ತಾರೆ.


ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ವಿವಿಧ ದೇಶಗಳ ಮೇಲೂ ಪ್ರಭಾವ ಬೀರಲಿದ್ಯಂತೆ
ಗ್ರ್ಯಾಂಟ್ ಥಾರ್ನ್ ಟನ್ ಭಾರತ್ ಸಂಸ್ಥೆಯ ಪಾಲುದಾರರಾಗಿರುವ ವಿವೇಕ್ ಐಯ್ಯರ್ ಅವರು, "ಅಮೆರಿಕದಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು ಟೆಕ್ ದೈತ್ಯಗಳ ಮಾರುಕಟ್ಟೆ ಕಡಿಮೆಯಾಗಲಿದೆ, ಏಕೆಂದರೆ ಈ ಸಂದರ್ಭದಲ್ಲಿ ಅಮೆರಿಕದ ಜಾಗತಿಕ ಐಟಿ ಕಂಪನಿಗಳು ಹೆಚ್ಚಿನ ಹಣ ವ್ಯಯಿಸುವ ಬದಲು ತಮ್ಮ ಉತ್ಪನ್ನ ಹಾಗೂ ರಕ್ಷಣಾತ್ಮಕವಾದ ಸಂರಚನೆಯ ಮೇಲೆ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ" ಎಂದು ಹೇಳುತ್ತಾರೆ.


ಇದನ್ನೂ ಓದಿ:  Bank Lunch Hour: ಲಂಚ್​ ಹೆಸರಿನಲ್ಲಿ ಬ್ಯಾಂಕ್ ನೌಕರರು ಗಂಟೆಗಟ್ಟಲೆ ಕಾಯಿಸುತ್ತಿದ್ದಾರಾ? ಹೀಗ್​ ಮಾಡಿ ಲಾಕ್​ ಮಾಡ್ಸಿ!


ಒಟ್ಟಿನಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದೇ ಆದಲ್ಲಿ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳ ಮೇಲೆ ಅದು ಪ್ರಭಾವ ಬೀರುವ ಸಾಧ್ಯತೆಯಿದ್ದು ಅದರಲ್ಲೂ ಐಟಿ ಉದ್ಯಮದ ಸೇವೆಗಳನ್ನು ಅಪಾರವಾಗಿ ಒದಗಿಸುವ ಭಾರತದ ಐಟಿ ಕಂಪನಿಗಳ ಮೇಲೆ ಇದರ ಪರಿಣಾಮ ಬೀಳುವ ಸಾಧ್ಯತೆ ತುಸು ಹೆಚ್ಚೇ ಎಂದು ಹೇಳಬಹುದಾಗಿದ್ದು ಅಷ್ಟಕ್ಕೂ ಕಾದು ನೋಡಬೇಕಾಗಿದೆ ಅಷ್ಟೆ.

Published by:Ashwini Prabhu
First published: