• Home
 • »
 • News
 • »
 • explained
 • »
 • Explained: 100 ಮಿಲಿಯನ್ ಡೋಸ್​ ಕೋವಿಶೀಲ್ಡ್ ಲಸಿಕೆ ನಾಶಪಡಿಸಿದ್ದೇಕೆ ಭಾರತ? ಕಾರಣಗಳೇನು?

Explained: 100 ಮಿಲಿಯನ್ ಡೋಸ್​ ಕೋವಿಶೀಲ್ಡ್ ಲಸಿಕೆ ನಾಶಪಡಿಸಿದ್ದೇಕೆ ಭಾರತ? ಕಾರಣಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಸಿಕೆ ಬೇಡಿಕೆಯಲ್ಲಿ ತೀವ್ರ ಕುಸಿತ ಕಂಡುಬಂದ ಹಿನ್ನಲೆಯಲ್ಲಿ ಅವಧಿ ಮುಗಿದ ಕೋವಿಡ್-19 ಲಸಿಕೆಯಾದ ಕೋವಿಶೀಲ್ಡ್‌ನ 100 ಮಿಲಿಯನ್ ಡೋಸ್‌ಗಳನ್ನು ಎಸೆಯಬೇಕಾಯಿತು ಎಂದು ತಿಳಿಸಿದೆ.

 • Trending Desk
 • Last Updated :
 • New Delhi, India
 • Share this:

  ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಲಸಿಕೆ ಬೇಡಿಕೆಯಲ್ಲಿ ತೀವ್ರ ಕುಸಿತ ಕಂಡುಬಂದ ಹಿನ್ನಲೆಯಲ್ಲಿ ಅವಧಿ ಮುಗಿದ ಕೋವಿಡ್-19 ಲಸಿಕೆಯಾದ ಕೋವಿಶೀಲ್ಡ್‌ನ 100 ಮಿಲಿಯನ್ ಡೋಸ್‌ಗಳನ್ನು ಎಸೆಯಬೇಕಾಯಿತು ಎಂದು ತಿಳಿಸಿದೆ. ಕೋವಿಡ್-19 ಕುರಿತು ಜನರು ನಿರಾಸಕ್ತಿಯನ್ನು ತಾಳಿರುವುದು ಹಾಗೂ ಲಸಿಕೆ ತೆಗೆದುಕೊಳ್ಳಲು ಉದಾಸೀನತೆ ತೋರಿರುವುದೇ ಲಸಿಕೆಗಳ ಅವಧಿ ಮೀರಲು ಕಾರಣವಾಗಿದೆ ಎಂಬುದು ಸಂಸ್ಥೆಯ ಅಭಿಪ್ರಾಯವಾಗಿದೆ.


  2021 ರಿಂದಲೇ ನಾವು ಕೋವಿಶೀಲ್ಡ್ ಉತ್ಪಾದನೆಯನ್ನು ನಿಲ್ಲಿಸಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ


  ಡಿಸೆಂಬರ್ 2021 ರಲ್ಲಿಯೇ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ ಎಂದು ಎಸ್‌ಐಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದಾರ್ ಪೂನಾವಾಲಾ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಡಿಸೆಂಬರ್ 2021 ರಿಂದಲೇ ನಾವು ಕೋವಿಶೀಲ್ಡ್ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ ಎಂಬುದಾಗಿ ಸ್ವತಃ ಪೂನಾವಾಲ್ಲಾ ಹೇಳಿಕೆಯನ್ನು ನೀಡಿದ್ದಾರೆ. ಆ ಸಮಯದಲ್ಲಿ ನಮ್ಮ ಬಳಿ ಸರಿಸುಮಾರು 100 ಮಿಲಿಯನ್ ಡೋಸ್‌ಗಳ ಸಂಗ್ರಹವಿತ್ತು ಈಗ ಆ 100 ಮಿಲಿಯನ್ ಡೋಸ್‌ಗಳ ಅವಧಿ ಮುಗಿದಿದೆ ಎಂದು ಆದಾರ್ ಪೂನಾವಾಲಾ ತಿಳಿಸಿದ್ದಾರೆ.


  ಇದನ್ನೂ ಓದಿ: ಯುಪಿ, ಮಹಾರಾಷ್ಟ್ರ, ಬಿಹಾರ ಸೇರಿದಂತೆ 5 ರಾಜ್ಯಗಳಲ್ಲಿ ಹೆಚ್ಚು ಕೊರೊನಾ ಲಸಿಕೆ ಬ್ಯಾಲೆನ್ಸ್- 10 ಕೋಟಿಗೂ ಹೆಚ್ಚು ಡೋಸ್ ಬಾಕಿ


  ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಶೀಲ ರಾಷ್ಟ್ರಗಳ ಲಸಿಕೆ ತಯಾರಕ ಜಾಲ (DCVMN) 23 ನೇ ಮೂರು ದಿನಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆದಾರ್ ಪೂನಾವಾಲಾ ಹೇಳಿಕೆ ನೀಡಿದ್ದಾರೆ.


  ಕೋವಿಡ್-19 ಲಸಿಕೆಗಳಿಗೆ ಬೇಡಿಕೆಗಳು ಏಕೆ ತಗ್ಗುತ್ತಿದೆ? ಲಸಿಕೆಗಳು ನಾಶಗೊಳ್ಳುತ್ತಿರುವುದು ಹೇಗೆ?


  ಬೂಸ್ಟರ್ ಡೋಸ್‌ಗೆ ಬೇಡಿಕೆ ಇಲ್ಲದಿರುವುದು


  ಆದಾರ್ ಪೂನಾವಾಲಾ ಹೇಳುವಂತೆ ಜನರಲ್ಲಿ ಇದೀಗ ಉದಾಸೀನತೆ ತಲೆದೋರಿದೆ ಎಂದಾಗಿದೆ. ಕೋವಿಡ್-19 ನಿಂದ ಬೇಸತ್ತಿರುವ ಜನರು ಒಂದು ರೀತಿಯ ಆಲಸ್ಯ ಮನೋಭಾವವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಬೂಸ್ಟರ್ ಶಾಟ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇನ್ನು ಕೆಲವರು ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಳ್ಳಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದಾರೆ ಹಾಗೂ ಬೂಸ್ಟರ್ ಶಾಟ್‌ಗಳ ಅಗತ್ಯವಿಲ್ಲವೆಂದು ನಂಬಿದ್ದಾರೆ ಎಂಬುದು ಪೂನಾವಾಲಾ ಮಾತಾಗಿದೆ.


  100 ಮಿಲಿಯನ್ ಕೋವಿಶೀಲ್ಡ್ ಲಸಿಕೆಗಳ ಅವಧಿ ಮುಗಿದಿದೆ


  100 ಮಿಲಿಯನ್ ಕೋವಿಶೀಲ್ಡ್ ಲಸಿಕೆಗಳ ಅವಧಿ ಒಂಭತ್ತು ತಿಂಗಳಾಗಿದ್ದು ಈ ವರ್ಷದ ಸಪ್ಟೆಂಬರ್‌ನಲ್ಲಿ ಅವಧಿ ಮುಗಿದು ನಿಷ್ಪ್ರಯೋಕ ಎಂದೆನಿಸಿವೆ. ಜನರಿಗೆ ಇದೀಗ ಕೋವಿಡ್-19 ಎಂಬುದು ಈ ಹಿಂದಿನಂತೆ ಭಯಭೀತ ಎಂದನ್ನಿಸುತ್ತಿಲ್ಲ ಅವರಿಗೆ ಅದೂ ಕೂಡ ಸರ್ವೇ ಸಾಮಾನ್ಯ ಕಾಯಿಲೆ ಎಂದೆನಿಸಿದೆ. ಹೀಗಾಗಿಯೇ ಲಸಿಕೆ ತೆಗೆದುಕೊಳ್ಳುವತ್ತ ಅವರು ಮನಸ್ಸು ಮಾಡುತ್ತಿಲ್ಲ ಇದರಿಂದ ಮಿಲಿಯನ್‌ಗಟ್ಟಲೆ ಲಸಿಕೆಗಳು ನಿಷ್ಪ್ರಯೋಕ ಎಂದೆನಿಸಿಬಿಟ್ಟಿದೆ ಎಂಬುದು ಪೂನಾವಾಲಾ ಅನಿಸಿಕೆಯಾಗಿದೆ.


  ನಾನು ಕೂಡ ಸೇರಿದಂತೆ ಕೋವಿಡ್-19 ನಿಂದ ಕಂಗೆಟ್ಟಿದ್ದೇವೆ ಹಾಗೂ ಬೇಸತ್ತಿದ್ದೇವೆ. ಇದು ಭಯದಿಂದ ಅಲ್ಲ ಏಕೆಂದರೆ ಈ ವೈರಸ್ ಕೂಡ ಜನರೆಡೆಯಲ್ಲಿ ಬೆರೆತು ಹೋಗಿರುವುದರಿಂದ ಎಂಬುದು ಪೂನಾವಾಲಾ ಮಾತಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಪ್ರಕಾರ, ಭಾರತದ ಜನಸಂಖ್ಯೆಯ 70% ದಷ್ಟು ಜನರು ಕೊರೋನವೈರಸ್ ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎಂದಾಗಿದೆ.


  ಆರೋಗ್ಯ ಸಚಿವಾಲಯದ ಅಂಕಿಅಂಶಗಳು ನೀಡಿರುವ ಮಾಹಿತಿ ಏನು?


  ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಯೋಜನೆಯಡಿಯಲ್ಲಿ ಭಾರತವು ಇದುವರೆಗೆ 219.50 ಕೋಟಿ ಆ್ಯಂಟಿ-ಕೋವಿಡ್ ಶಾಟ್‌ಗಳನ್ನು ಜನತೆಗೆ ಒದಗಿಸಿದೆ ಎಂದು ಅಕ್ಟೋಬರ್ 21 ರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳುತ್ತವೆ ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ. ಆದರೆ, ಇದುವರೆಗೆ ಕೇವಲ 29.8 ಕೋಟಿ ಬೂಸ್ಟರ್ ಅಥವಾ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.


  ಭಾರತ ಸರಕಾರವು ಈ ವರ್ಷದ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೆಲಸಗಾರರಿಗೆ ಮತ್ತು ಎರಡಕ್ಕಿಂತ ಹೆಚ್ಚು ರೋಗಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳಲು ಆದೇಶಿಸಿದೆ. ನಂತರ ಈ ಯೋಜನೆಯನ್ನು ಏಪ್ರಿಲ್ ನಂತರ ಎಲ್ಲಾ ವಯಸ್ಕರಿಗೆ ವಿಸ್ತರಿಸಲಾಯಿತು.


  ಇದನ್ನೂ ಓದಿ: ಫೆಬ್ರವರಿ ವೇಳೆಗೆ ಭಾರತಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ: IIT ವಿಜ್ಞಾನಿ ಎಚ್ಚರಿಕೆ


  ಜುಲೈನಲ್ಲಿ, ಭಾರತವು ತನ್ನ ಕೋವಿಡ್-19 ಬೂಸ್ಟರ್ ಡೋಸ್ ವ್ಯಾಪ್ತಿಯನ್ನು ಸುಧಾರಿಸಲು 75-ದಿನಗಳ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು ಈ ನಿಟ್ಟಿನಲ್ಲಿ ವಯಸ್ಕರಿಗೆ ಉಚಿತ ಶಾಟ್‌ಗಳನ್ನು ನೀಡಲಾಯಿತು. ಇದರಿಂದಾಗಿ ವ್ಯಾಪ್ತಿ 8% ದಿಂದ 27%ಕ್ಕೆ ಏರಿಕೆಯಾಗಿತ್ತು.


  ಲಸಿಕೆ ವ್ಯರ್ಥವಾಗುತ್ತಿರುವುದಕ್ಕೆ ತಜ್ಞರ ಅಭಿಪ್ರಾಯವೇನು?


  ಕೋವಿಡ್-19 ಲಸಿಕೆಗಳು ವ್ಯರ್ಥವಾಗುತ್ತಿರುವುದಕ್ಕೆ ಕಾರಣವೆಂದರೆ ಕೇಂದ್ರ ಸರಕಾರದ ಬೇಡಿಕೆ ಕುರಿತಂತೆ ಲಸಿಕೆ ತಯಾರಕರು ತಪ್ಪಾಗಿ ನಿರ್ಣಯ ತೆಗೆದುಕೊಂಡಿರುವುದೇ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜಾಗತಿಕ ಮಟ್ಟದಲ್ಲಿ ಅಂದಾಜು 1.1 ಬಿಲಿಯನ್ ಕೋವಿಡ್-19 ಲಸಿಕೆಗಳು ಜುಲೈ ಮಧ್ಯದಲ್ಲಿ ವ್ಯರ್ಥವಾಗಿದೆ ಎಂದು ಡೇಟಾ ವಿಶ್ಲೇಷಣಾ ಸಂಸ್ಥೆ ಏರ್‌ಫಿನಿಟಿ ಹೇಳಿದೆ.


  ಲಸಿಕೆಯ ವ್ಯರ್ಥವು ಅನಪೇಕ್ಷಿತವಾಗಿದ್ದರೂ ಲಕ್ಷಾಂತರ ಜೀವಗಳನ್ನು ಉಳಿಸಿದ ಲಸಿಕೆ ಉತ್ಪಾದನೆಯ ಫಲಿತಾಂಶವಾಗಿದೆ. ವೇಗವಾಗಿ ಪ್ರತಿಕ್ರಿಯಿಸುವ ಜಾಗತಿಕ ಲಸಿಕೆ ಪ್ರತಿಕ್ರಿಯೆ ವ್ಯವಸ್ಥೆಯನ್ನು ಬಯಸಿದಲ್ಲಿ, ಕೆಲವು ಮಟ್ಟದ ವ್ಯರ್ಥ ಡೋಸ್‌ಗಳನ್ನು ಸ್ವೀಕರಿಸಬೇಕಾಗುತ್ತದೆ. ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ ಏರ್‌ಫಿನಿಟಿ ಸಿಇಒ ರಾಸ್ಮಸ್ ಬೆಚ್ ತಿಳಿಸಿದ್ದಾರೆ.


  ಕೋವಿಡ್-19 ಲಸಿಕೆಗಳನ್ನು ಹೇಗೆ ನಾಶಪಡಿಸಲಾಗುತ್ತದೆ?


  ಲಸಿಕೆಗಳಲ್ಲಿ ಇರುವ ರೋಗನಿರೋಧಕ ಅಂಶಗಳಿಂದಾಗಿ ಅವುಗಳನ್ನು ಅತ್ಯಂತ ಸುರಕ್ಷತೆಯೊಂದಿಗೆ ವಿಸರ್ಜಿಸಬೇಕು ಎಂದು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯ (ಸಿಡಿಎಲ್) ಅಧಿಕಾರಿಯೊಬ್ಬರು ತಿಳಿಸಿರುವಂತೆ ಲಸಿಕೆಗಳನ್ನು ನಾಶಮಾಡಲು ಅದನ್ನು ಪುಡಿಮಾಡುವುದು, ಆಟೋಕ್ಲೇವಿಂಗ್ (ನೀರಿನ ಕುದಿಯು ಮಟ್ಟ ಹೆಚ್ಚಾಗುವ ವಿದ್ಯಮಾನ) ಹಾಗೂ ರಾಸಾಯನಿಕ ಪ್ರಕ್ರಿಯೆಗಳು ಸೇರಿದಂತೆ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು ಎಂದು ತಿಳಿಸಿದ್ದಾರೆ.


  ತಜ್ಞರೊಬ್ಬರು ಕೋವಿಡ್-19 ಲಸಿಕೆಗಳನ್ನು ಹೇಗೆ ನಾಶಗೊಳಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ದ್ರವರೂಪದ ಲಸಿಕೆಯನ್ನು ಅದನ್ನು ನಾಶಪಡಿಸುವ ಟ್ಯಾಂಕ್‌ಗೆ ಹಾಕಲಾಗುತ್ತದೆ ಅಲ್ಲಿ ಅದನ್ನು ರಾಸಾಯನಿಕಗಳು ಮತ್ತು ಶಾಖದಿಂದ ಸಂಸ್ಕರಿಸಲಾಗುತ್ತದೆ. ಈ ಸಂಸ್ಕರಿಸಿದ ದ್ರಾವಣವನ್ನು ಮುಂದಿನ ಪ್ರಕ್ರಿಯೆಗಾಗಿ ನೀರು ಉತ್ಪಾದಿಸಲು ಇದರಲ್ಲಿರುವ ರಾಸಾಯನಿಕಗಳನ್ನು ತೆಗೆದುಹಾಕಲು ಅದನ್ನು ಸಂಸ್ಕರಣಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಲಸಿಕೆಯ ಗಾಜಿನ ಬಾಟಲಿಯನ್ನು ಗಾಜುಪುಡಿ ಮಾಡುವ ಯಂತ್ರದಲ್ಲಿ ಪುಡಿಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


  Scammers posed as Adar Poonawalla name 1 crore fraud on Serum Institute
  ಅದಾರ್ ಪೂನಾವಾಲಾ


  ಭಗ್ನಗೊಳಿಸಿದ ಗಾಜು, ರಬ್ಬರ್ ಸ್ಟಾಪರ್ ಹಾಗೂ ಸೀಲ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


  ಕೋವಿಡ್-19 ಲಸಿಕೆ ತ್ಯಾಜ್ಯವನ್ನು ವಿಲೇವಾರಿ ಮಾಡುವುದು


  ಕೋವಿಡ್-19 ವ್ಯಾಕ್ಸಿನೇಷನ್ ಪೂರೈಕೆದಾರರ ಒಪ್ಪಂದವು, ಸ್ಥಳೀಯ ನಿಯಮಗಳು ಮತ್ತು ನಿಯಂತ್ರಿತ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪ್ರಸ್ತುತ ಬಳಸುತ್ತಿರುವ ಪ್ರಕ್ರಿಯೆಗಳಿಗೆ ಅನುಗುಣವಾಗಿ ಪೂರೈಕೆದಾರರು COVID-19 ಲಸಿಕೆ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದೆ.


  ಪೂರೈಕೆದಾರರು ಲಸಿಕೆ ಟ್ರ್ಯಾಕಿಂಗ್ ಸಿಸ್ಟಮ್ (VTrckS) ನಲ್ಲಿ ಲಸಿಕೆ ವ್ಯರ್ಥ ಮಾಹಿತಿಯನ್ನು ವರದಿ ಮಾಡುವ ಅಗತ್ಯವಿದೆ. ಸಿಡಿಸಿ ಮತ್ತು ಏಜೆನ್ಸಿ ಪಾಲುದಾರರು ಬಳಕೆಯಾಗದ ಲಸಿಕೆ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಮುತುವರ್ಜಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಲಸಿಕೆ ಬಿಡುಗಡೆ ಮುಂದುವರಿದಂತೆ ಲಸಿಕೆ ವ್ಯರ್ಥವು ಹೆಚ್ಚಾಗಬಹುದು ಎಂಬುದು ಸಿಡಿಸಿ ಅಭಿಪ್ರಾಯವಾಗಿದೆ ಎಂದು ವರದಿಯೊಂದು ಮಾಹಿತಿ ನೀಡಿದೆ.


  ಲಸಿಕೆ ಸಂಗ್ರಹವನ್ನು ಭಾರತ ನಿಲ್ಲಿಸಿದೆ ಕಾರಣಗಳೇನು?


  ಆರೋಗ್ಯ ಸಚಿವಾಲಯವು ಸದ್ಯಕ್ಕೆ ಕೋವಿಡ್-19 ಲಸಿಕೆಗಳನ್ನು ಖರೀದಿಸದಿರಲು ನಿರ್ಧರಿಸಿದೆ ಮತ್ತು 4,237 ಕೋಟಿ ರೂಪಾಯಿಗಳನ್ನು ಅಥವಾ ವ್ಯಾಕ್ಸಿನೇಷನ್ ಉದ್ದೇಶಗಳಿಗಾಗಿ 2022-23 ರ ಬಜೆಟ್ ಹಂಚಿಕೆಯ ಸುಮಾರು 85% ವನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯಕ್ಕೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸುಮಾರು 1.8 ಕೋಟಿ ಕೋವಿಡ್-19 ಲಸಿಕೆಗಳು ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಗ್ರಹಣೆಯಲ್ಲಿದೆ. ಇದು ಸುಮಾರು ಆರು ತಿಂಗಳವರೆಗೆ ಸಾಕಾಗುತ್ತದೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ.


  ಕೊರೋನಾ ಸ್ಥಿತಿ ಅವಲಂಬಿಸಿ ಮುಂದಿನ ನಿರ್ಧಾರ


  ಕೋವಿಡ್-19 ಲಸಿಕೆ ಡೋಸ್‌ಗಳನ್ನು ಸರಕಾರಿ ವಾಹಿನಿಗಳ ಮೂಲಕ ಸಂಗ್ರಹಿಸಬೇಕೇ ಅಥವಾ ಆರು ತಿಂಗಳ ನಂತರ ತಾಜಾ ಬಜೆಟ್ ಹಂಚಿಕೆಗಳನ್ನು ಪಡೆಯಬೇಕೇ ಎಂಬ ನಿರ್ಧಾರವು ಆ ಸಮಯದಲ್ಲಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಕೊರೋನಾ ವೈರಸ್ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಸುದ್ದಿಮೂಲಗಳು ತಿಳಿಸಿವೆ. ಇದನ್ನು ಪರಿಗಣಿಸಿ ಹಾಗೂ ದಾಸ್ತಾನಿನಲ್ಲಿರುವ ಲಸಿಕೆಗಳ ಮುಕ್ತಾಯ ದಿನಾಂಕವನ್ನು ನೋಡಿಕೊಂಡು ಲಸಿಕೆ ಸಂಗ್ರಹ ಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ಯಾವುದೇ ಲಸಿಕೆಗಳನ್ನು ಸಂಗ್ರಹಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.


  ಚಳಿಗಾದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ತಜ್ಞರು ತಿಳಿಸಿದ್ದಾರೆ. SARS-CoV-2 ನ ಓಮಿಕ್ರಾನ್ ರೂಪಾಂತರವು ರೋಗನಿರೋಧಕಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಕ್ಷೀಣಗೊಳ್ಳುತ್ತಿರುವ ನಿರೋಧಕ ಶಕ್ತಿಯಿಂದ ಕೆಲವೊಂದು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್-19 ಪ್ರಕರಣಗಳಿಗೆ ಕಾರಣವಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

  Published by:Precilla Olivia Dias
  First published: