Lakhimpur Kheri Violence Explained: ಮೊದಲು ಪ್ರವೇಶ ನಿರಾಕರಿಸಿ ಈಗ ಲಖಿಂಪುರ್​ಗೆ ವಿರೋಧ ಪಕ್ಷದ ನಾಯಕರು ತೆರಳಲು ಯುಪಿ ಸರ್ಕಾರ ಅನುಮತಿ ನೀಡಿದ್ದು ಏಕೆ?

ಸ್ಥಳೀಯ ಆಡಳಿತವು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿದೆ. ಈಗ ಐದು ಜನರ ಗುಂಪು ಮಾತ್ರ ಹೋಗಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರವು ಶಾಂತಿಯನ್ನು ಕಾಪಾಡಲು ಬಯಸುತ್ತದೆ. ಹೀಗಾಗಿ ಕೆಲವು ನಿರ್ಬಂಧಗಳನ್ನು ಹಾಕಲಾಗಿದೆ,” ಎಂದು ಅವರು ಹೇಳಿದರು.

ದೆಹಲಿಯಿಂದ ವಿಮಾನದ ಮೂಲಕ ಉತ್ತರಪ್ರದೇಶದ ಲಖಿಂಪುರ್ ಖೇರಿಗೆ ತೆರಳುತ್ತಿರುವ ರಾಹುಲ್ ಗಾಂಧಿ ನೇತೃತ್ವದ ನಿಯೋಗ.

ದೆಹಲಿಯಿಂದ ವಿಮಾನದ ಮೂಲಕ ಉತ್ತರಪ್ರದೇಶದ ಲಖಿಂಪುರ್ ಖೇರಿಗೆ ತೆರಳುತ್ತಿರುವ ರಾಹುಲ್ ಗಾಂಧಿ ನೇತೃತ್ವದ ನಿಯೋಗ.

  • Share this:
ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence) ಅಸುನೀಗಿದ ಎಲ್ಲ 8 ಜನರ ಸಂಪೂರ್ಣ ಅಂತ್ಯಕ್ರಿಯೆ (Cremation) ಮುಗಿದ ಬಳಿಕ ಉತ್ತರ ಪ್ರದೇಶ ಸರ್ಕಾರ (Uttara Pradesh Government) ಅಂತಿಮವಾಗಿ ರಾಜಕಾರಣಿಗಳು ಲಖಿಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಲಖಿಂಪುರ್ ಖೇರಿ ಘಟನೆಯ ಸ್ಥಳಕ್ಕೆ ರಾಜಕಾರಣಿಗಳು ಭೇಟಿ ನೀಡುವ ಮುನ್ನ ಘಟನೆಯಲ್ಲಿ ಅಸುನೀಗಿದ ಅಷ್ಟು ಜನರ ಸಂಪೂರ್ಣ ಅಂತ್ಯಕ್ರಿಯೆ ಮುಗಿದಿರಬೇಕು ಮತ್ತು 48ರಿಂದ 72 ಗಂಟೆಯಲ್ಲಿ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಬೇಕು ಎಂಬುದು ಉತ್ತರ ಪ್ರದೇಶ ಸರ್ಕಾರ ಬಯಕೆಯಾಗಿತ್ತು.

ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ಕು ರೈತರಲ್ಲಿ, ಮೂರು ಮೃತದೇಹಗಳನ್ನು ಅಕ್ಟೋಬರ್ 5 ರಂದು (ಮಂಗಳವಾರ) ದಹನ ಮಾಡಲಾಯಿತು. ಮತ್ತೊಂದು ಮೃತದೇಹವನ್ನು ಬುಧವಾರ ಬೆಳಿಗ್ಗೆ ಬಹ್ರೈಚ್‌ನಲ್ಲಿ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ಮುಗಿದ ನಂತರ ಅಂತ್ಯಕ್ರಿಯೆ ಮಾಡಲಾಯಿತು. ಇದಕ್ಕೂ ಮುನ್ನ ಅಂದರೆ ಸೋಮವಾರ ನ್ಯೂಸ್ 18 ನೊಂದಿಗೆ ಮಾತನಾಡಿದ್ದ ಉತ್ತರ ಪ್ರದೇಶದ ಹಿರಿಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು, 48 ಗಂಟೆ ಕಳೆದ ಬಳಿಕ ಲಖಿಂಪುರ್ ಖೇರಿಗೆ ರಾಜಕಾರಣಿಗಳು ಹೋಗುವುದನ್ನು ಯಾರೂ ತಡೆಯುವುದಿಲ್ಲ. ಆದರೆ, ಅಲ್ಲಿಯವರೆಗೆ ಅಲ್ಲಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿರುವುದರಿಂದ ಈ ಸಮಯದಲ್ಲಿ ಯಾರೂ ಹೋಗದಿರುವುದು ಉತ್ತಮ ಎಂದು ಹೇಳಿದ್ದರು.

ಪಂಜಾಬ್ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್ ಮತ್ತು ಚರಣಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಧ್ಯಾಹ್ನ ಲಕ್ನೋ ವಿಮಾನ ನಿಲ್ದಾಣವನ್ನು ತಲುಪಿದರು. ಅವರಿಗೆ ಲಖಿಂಪುರಕ್ಕೆ ಹೋಗಲು ಅನುಮತಿ ನೀಡಲಾಗಿದೆ. ಸೋಮವಾರದಿಂದ ಸೀತಾಪುರದಲ್ಲಿ ಬಂಧನದಲ್ಲಿದ್ದ ಪ್ರಿಯಾಂಕಾ ಗಾಂಧಿಗೆ ಇಂದು ಲಖಿಂಪುರಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಇಂದು ಲಖಿಂಪುರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಲಖಿಂಪುರ್ ಖೇರಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.

ಸದ್ಯದ ಮಾಹಿತಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ಜೊತೆಗೆ ರಾಹುಲ್ ಗಾಂಧಿ ಮತ್ತು ಇತರರು ಲಖಿಂಪುರ್ ಘಟನೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಈಗ ಲಖಿಂಪುರಕ್ಕೆ ತೆರಳಿದ್ದಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, "ರೈತರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ರೂ. 45 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 8 ಲಕ್ಷ ರೂ. ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗವನ್ನೂ ಘೋಷಿಸಲಾಗಿದೆ. ಇದಲ್ಲದೇ ಇಡೀ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಲು  ಆದೇಶ ನೀಡಲಾಗಿದೆ. ಜೊತೆ್ಗೆ ಯಾವುದೇ ರೀತಿಯ ವದಂತಿಗಳು ಹರಡುವುದನ್ನು ತಪ್ಪಿಸಲು  ಹೆಚ್ಚುವರಿ ಎಸ್‌ಪಿ ನೇತೃತ್ವದಲ್ಲಿ ಒಂದು ಸ್ಥಳೀಯ ಸಮಿತಿಯನ್ನು ರಚಿಸಲಾಗಿದೆ. ಒಂದು ಸಹಾಯವಾಣಿ ಸಂಖ್ಯೆ ಮತ್ತು ಒಂದು ಇ- ಮೇಲ್ ಅನ್ನು ಸಹ ನೀಡಲಾಗಿದೆ. ಇವುಗಳ ಮೂಲಕ ಯಾರೂ ಬೇಕಾದರೂ ಘಟನೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯವನ್ನು ಹಂಚಿಕೊಳ್ಳಬಹುದು. ಯಾವುದೇ ಕಾರಣಕ್ಕೂ  ಮಾಹಿತಿ ನೀಡಿದ ವ್ಯಕ್ತಿಯ ಗುರುತು ಬಹಿರಂಗಪಡಿಸುವುದಿಲ್ಲ." ಎಂದು ತಿಳಿಸಿದ್ದಾರೆ.

"ಅಕ್ಟೋಬರ್ 5 ರಂದು ಮೂರು ಮೃತ ದೇಹಗಳ ಕೊನೆಯ ಮರಣೋತ್ತರ ಪರೀಕ್ಷೆ ನಂತರ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಮೊದಲ ಮರಣೋತ್ತರ ಪರೀಕ್ಷೆ ಬಗ್ಗೆ ಮೃತರ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ ಕಾರಣ ಒಂದು ಮೃತದೇಹವನ್ನು ವಿಶೇಷ ವೈದ್ಯರ ತಂಡದಿಂದ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಬಹ್ರೈಚ್‌ಗೆ ಕಳುಹಿಸಲಾಗಿದೆ. ಸ್ಥಳೀಯ ಆಡಳಿತವು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿದೆ. ಈಗ ಐದು ಜನರ ಗುಂಪು ಮಾತ್ರ ಹೋಗಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರವು ಶಾಂತಿಯನ್ನು ಕಾಪಾಡಲು ಬಯಸುತ್ತದೆ. ಹೀಗಾಗಿ ಕೆಲವು ನಿರ್ಬಂಧಗಳನ್ನು ಹಾಕಲಾಗಿದೆ,” ಎಂದು ಅವರು ಹೇಳಿದರು.

ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್​ನನ್ನು ವಿಚಾರಣೆಗೆ ಕರೆಯುವ ಪ್ರಶ್ನೆಗೆ, ಎಡಿಜಿ, "ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಸ್ಥಳೀಯ ಅಧಿಕಾರಿಗಳ ನೆರವಿನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಂತಿ ಕಾಪಾಡಲಾಗಿದೆ. ತನಿಖೆಯ ವಿಷಯಕ್ಕೆ ಬಂದರೆ, ಈಗ ನಾವು ಎಲ್ಲಾ ಶವಗಳನ್ನು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಸದ್ಯದ ಮಟ್ಟಿಗೆ ಶಾಂತಿ ಕಾಪಾಡಲಾಗಿದೆ ಎಂದು ಹೇಳಬಹುದು. ಪೊಲೀಸರು ತನಿಖೆ ಪ್ರಕ್ರಿಯೆಯನ್ನು ಚುರುಕುಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: Lakhimpur Kheri Case Explained: ವಿವಾದದ ಕೇಂದ್ರಬಿಂದು ಕೇಂದ್ರ ಸಚಿವ ಅಜಯ್​ ಮಿಶ್ರಾ ಯಾರು?

ಏತನ್ಮಧ್ಯೆ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಬೆಳಿಗ್ಗೆ ದೆಹಲಿಗೆ ತೆರಳಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಸಭೆ ನಡೆಸಿದರು.
Published by:HR Ramesh
First published: