ಭಾರತೀಯ ವಿದ್ಯಾರ್ಥಿಗಳು ಮೆಡಿಕಲ್ ವಿದ್ಯಾಭ್ಯಾಸಕ್ಕೆ ಉಕ್ರೇನ್​ ದೇಶವನ್ನೇ ಆಯ್ಕೆ ಮಾಡಿಕೊಳ್ಳೋದು ಯಾಕೆ?

Medical Student: ಇನ್ನು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಶಿಕ್ಷಣ ಪಡೆದುಕೊಂಡ ನಂತರ ಭಾರತಕ್ಕೆ ಬಂದು ಕೆಲಸ ಮಾಡಬೇಕು ಎಂದರೆ NEXT (ನ್ಯಾಷನಲ್ ಎಕ್ಸಿಟ್ ಟೆಸ್ಟ್) ಎಂಬ ಬ್ರಿಡ್ಜ್ ಕೋರ್ಸ್-ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದರ ನಂತರ ಭಾರತದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಬಹುದು..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಷ್ಯಾ(Russia) ಉಕ್ರೇನ್(Ukraine) ನಡುವೆ ಆವರಿಸಿರುವ ಯುದ್ಧದ(war) ಕಾರ್ಮೋಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ರಷ್ಯಾ ಆಕ್ರಮಣದಿಂದ ತತ್ತರಿಸಿಹೋಗಿರುವ ಉಕ್ರೇನ್ ನಿಂದ ಜೀವ (Life)ಉಳಿಸಿಕೊಳ್ಳಲು ನೂರಾರು ಸಂಖ್ಯೆಯ ಜನರು ಮರಳಿ ಹೇಗಾದರೂ ಸರಿ ನಮ್ಮ ದೇಶಕ್ಕೆ ಹೋಗಬೇಕೆಂದು ಬಯಸುತ್ತಿದ್ದಾರೆ.. ಭಾರತೀಯರು(Indians) ಸೇರಿ ದೇಶ-ವಿದೇಶದ ಹಲವು ಜನ ನಾಗರಿಕರು ವಿದ್ಯಾರ್ಥಿಗಳು(Students) ಉಕ್ರೇನ್ ನಲ್ಲಿ ಸಿಲುಕಿ, ರಕ್ಷಣೆ ಮಾಡುವಂತೆ ವಿಡಿಯೋಗಳ(Video) ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.. ಅದರಲ್ಲೂ ಹೀಗೆ ಮನವಿ ಮಾಡಿಕೊಳ್ಳುತ್ತಿರುವ ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸ(medical Education) ಉಕ್ರೇನ್ ಹೋಗಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.. ಹಾಗಿದ್ರೆ ಉಕ್ರೇನ್ ನಲ್ಲಿ ಯುದ್ಧದ ಕಾರ್ಮೋಡ ಇದ್ದರೂ ಕರ್ನಾಟಕ ಸೇರಿ ಭಾರತ ಹಾಗೂ ವಿದೇಶದ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಯಾಕೆ ಹೋದ್ರು.. ಮತ್ತು ಹೆಚ್ಚಿನ ಜನರ ಆಯ್ಕೆ ಯಾಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

  ವೈದ್ಯಕೀಯ ವಿದ್ಯಾರ್ಥಿಗಳ ಆಯ್ಕೆ ಉಕ್ರೇನ್ ಯಾಕೆ..?

  ಪ್ರತಿಯೊಬ್ಬರಿಗೂ ತಮ್ಮ ವಿದ್ಯಾಭ್ಯಾಸ ಉತ್ತಮ ಕಾಲೇಜುಗಳಲ್ಲಿ ನಡೆಯಬೇಕು ಎಂಬ ಬಯಕೆ ಇರುತ್ತದೆ.. ಹೀಗಾಗಿ ಹಣವಿರುವ ಪೋಷಕರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ದೇಶ ಹಾಗೂ ವಿದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಓದಿಸುತ್ತಾರೆ.. ಇನ್ನು ಕೆಲವು ಪೋಷಕರು ಕಷ್ಟವಾದರೂ ಸರಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ಹಲವು ಕಾಲೇಜುಗಳನ್ನು ಆಯ್ಕೆ ಮಾಡುತ್ತಾರೆ.. ಆದರೆ ಮೆಡಿಕಲ್ ಕ್ಷೇತ್ರಕ್ಕೆ ಬಂದರೆ ಎಂಥವರಿಗೂ ತಮ್ಮ ಮಕ್ಕಳನ್ನು ಓದಿಸುವುದು ದೊಡ್ಡ ತಲೆನೋವು..

  ಇದನ್ನೂ ಓದಿ: ಭಾರತದ ವೈದ್ಯಕೀಯ ನೆರವು ಕೇಳಿದ ಉಕ್ರೇನ್ ಸಂಸದೆ..!

  ಭಾರತದಂತಹ ದೇಶದಲ್ಲಿ ಒಬ್ಬ ವಿದ್ಯಾರ್ಥಿ ಮೆಡಿಕಲ್ ಮುಗಿಸುವ ವೇಳೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ.. ಹೀಗಾಗಿ ಎಷ್ಟೋ ಜನ ತಂದೆತಾಯಿಗಳಿಗೆ ಹಾಗೂ ಮಕ್ಕಳಿಗೆ ಮೆಡಿಕಲ್ ಓದಬೇಕು ಎಂದು ಆಸೆ ಇದ್ದರೂ ದುಬಾರಿ ಶಿಕ್ಷಣ ವ್ಯವಸ್ಥೆಯಿಂದ ಮೆಡಿಕಲ್ ಓದುವುದು ಅಸಾಧ್ಯ.. ಒಂದು ವೇಳೆ ಮೆಡಿಕಲ್ ನಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೆ ಅಂತವರು ಪುಣ್ಯವಂತರು. ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಸಿಗದೆ ಇದ್ದವರು ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಮೆಡಿಕಲ್ ಓದಿಸಲು ಅಸಾಧ್ಯ ಆಗಿರುವುದರಿಂದ ಪರ್ಯಾಯ ಮಾರ್ಗವಾಗಿ ಎಂಜಿನಿಯರಿಂಗ್ ಸೇರಿ ಹಲವು ಕೋರ್ಸಗಳ ಆಯ್ಕೆ ಮಾಡಿಕೊಳ್ಳುತ್ತಾರೆ.. ಆದರೆ ಕೆಲವು ವಿದ್ಯಾರ್ಥಿಗಳು ತಮ್ಮ ಮೆಡಿಕಲ್ ಕನಸು ನನಸಾಗಿಸಿಕೊಳ್ಳಲು ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ದೇಶಗಳನ್ನು ಹುಡುಕಿ ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಾರೆ... ಇಂತಹ ದೇಶಗಳಲ್ಲಿ ಉಕ್ರೇನ್ ಸಹ ಒಂದು.

  ವೈದ್ಯಕೀಯ ವಿದ್ಯಾಭ್ಯಾಸದ ಶುಲ್ಕ ಕಡಿಮೆ

  ಭಾರತದಲ್ಲಿ ಅನೇಕ ಮೆಡಿಕಲ್‌ ಕಾಲೇಜುಗಳಿವೆ. ನೀಟ್‌ ಪರೀಕ್ಷೆ ಬರೆದು ಮೆಡಿಕಲ್‌ ಸೀಟ್‌ ಗಿಟ್ಟಿಸಿಕೊಳ್ಳಲು ಅವಕಾಶಗಳಿವೆ. ಜೊತೆಗೆ ಮೀಸಲಾತಿಯಡಿಯಲ್ಲೂ ಮೆಡಿಕಲ್‌ ಸೀಟ್‌ಗಳನ್ನು ನೀಡಲಾಗುತ್ತಿದೆ. ಹೀಗಿದ್ದರೂ ಯಾಕೆ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ.  ಇದಕ್ಕೆ ಕಾರಣ ಕಡಿಮೆ ಖರ್ಚಿನಲ್ಲಿ ಮೆಡಕಲ್‌ ಓದಬಹುದು ಅನ್ನೋದು. ಹೌದು, ಭಾರತದಲ್ಲಿ ಸರ್ಕಾರಿ ಕೋಟಾದಡಿ ನಾಲ್ಕೂವರೆ ವರ್ಷದ ಎಂಬಿಬಿಎಸ್‌ ಕೋರ್ಸ್‌ ಮಾಡಲು ಒಬ್ಬ ವಿದ್ಯಾರ್ಥಿ ವಾರ್ಷಿಕವಾಗಿ 20 ರಿಂದ 30 ಲಕ್ಷ ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ.

  ಆದರೆ ಖಾಸಗಿ ಕೋಟಾದಡಿ ಮೆಡಿಕಲ್ ವಿದ್ಯಾಭ್ಯಾಸ ಮಾಡಬೇಕು ಎಂದರೆ ವಾರ್ಷಿಕವಾಗಿ ಕೋಟ್ಯಾಂತರ ಹಣ ಮೀಸಲಿಡಬೇಕು.. ಆದರೆ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ವರ್ಷಕ್ಕೆ ಕೇವಲ 4-5 ಲಕ್ಷ ರೂಪಾಯಿ ಶುಲ್ಕವಿದೆ. ಭಾರತಕ್ಕೆ ಹೋಲಿಸಿಕೊಂಡದರೆ ಅದು ಮೂರರಿಂದ ನಾಲ್ಕು ಪಟ್ಟು ಕಡಿಮೆ. ಇದರ ಜೊತೆಗೆ ಹಾಸ್ಟೆಲ್‌ ಬಾಡಿಗೆ, ಇನ್ನಿತರೆ ಖರ್ಚುಗಳು ಕೂಡಾ ಕಡಿಮೆ ಇವೆ.ಹೀಗಾಗಿ ಬಹುತೇಕ ಭಾರತೀಯ ವಿದ್ಯಾರ್ಥಿಗಳ ಆಯ್ಕೆ ಉಕ್ರೇನ್ ಆಗಿದೆ. ಹೀಗಾಗಿ ಭಾರತಕ್ಕೆ ಹೋಲಿಕೆ ಮಾಡಿಕೊಂಡರೆ ಶೇಕಡಾ 70ರಷ್ಟು ವೆಚ್ಚ ಕಡಿಮೆ ಇದೆ. ಇನ್ನು ಉಕ್ರೇನ್ನ ವಿದೇಶಿ ವಿದ್ಯಾರ್ಥಿಗಳ ಪೈಕಿ ಶೇ.23.64ರಷ್ಟು ವಿದ್ಯಾರ್ಥಿಗಳು ಭಾರತೀಯರೇ ಆಗಿದ್ದಾರೆ.

  ಉಕ್ರೇನ್‌ ನಲ್ಲಿ ಪಡೆಯುವ ಎಂಬಿಬಿಎಸ್‌ ಪದವಿಗೆ ಜಾಗತಿಕ ಮಾನ್ಯತೆ

  ಒಂದೇ ವೇಳೆ ಭಾರತದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡರೆ ಉಕ್ರೇನ್​ನಲ್ಲಿ ಸೀಟ್ ಪಡೆಯುವುದು ತುಂಬಾ ಸುಲಭ.ಇಲ್ಲಿ ನೀಟ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಉಕ್ರೇನ್ ದೇಶದ ಕಾಲೇಜುಗಳು ನಡೆಸುವ ಮಾನ್ಯತಾ ಪರೀಕ್ಷೆಯಲ್ಲಿ ಪಾಸಾದರೆ ಸಾಕು. ಇನ್ನು ಉಕ್ರೇನ್‌ನಲ್ಲಿ ಭಾರತದಂತೆಯೇ ವಿದ್ಯಾರ್ಥಿಗಳಿಗೆ ವ್ಯಾಪಕವಾದ ಪ್ರಾಯೋಗಿಕ ಮಾನ್ಯತೆ ಇದೆ. ಜೊತೆಗೆ ಉಕ್ರೇನ್‌ನಲ್ಲಿ ಪಡೆಯುವ ಎಂಬಿಬಿಎಸ್‌ ಪದವಿಗೆ ಜಾಗತಿಕವಾಗಿ ಮಾನ್ಯತೆ ಇದೆ. ಇನ್ನು ಭಾರತಕ್ಕೆ ಹೋಲಿಸಿಕೊಂಡರೆ ಉಕ್ರೇನ್‌ನ ವೈದ್ಯಕೀಯ ಕಾಲೇಜುಗಳು ಉತ್ತಮ ಮೂಲಸೌಕರ್ಯವನ್ನು ಹೊಂದಿವೆ.  ಉತ್ತಮ ಪ್ರಾಯೋಗಿಕ ಲ್ಯಾಬ್‌ಗಳಿವೆ. ಹೀಗಾಗಿ ಎಲ್ಲರೂ ಉಕ್ರೇನ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

  ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಭಾರತೀಯರು.

  ಉಕ್ರೇನ್ ರಾಜಧಾನಿ ಕೈವ್‌ನಿಂದ ಸುಮಾರು 480 ಕಿಮೀ ದೂರದಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯವು ಉಕ್ರೇನ್ ನಲ್ಲಿ ಹೆಚ್ಚು ಬೇಡಿಕೆ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದ್ದು ಭಾರತ ಸೇರಿ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.. ಕರ್ನಾಟಕದ ಹಲವು ವಿದ್ಯಾರ್ಥಿಗಳು ಸಹ ಖಾರ್ಕಿವ್ ರಾಷ್ಟ್ರೀಯ ವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ..

  ಇದನ್ನೂ ಓದಿ: ಭಾರತೀಯರ ಸ್ಥಳಾಂತರಕ್ಕೆ ಉಕ್ರೇನ್ ಗಡಿಗೆ ತಂಡ ಕಳುಹಿಸಿದ ಕೇಂದ್ರ; ಸಂಪರ್ಕಿಸಲು ಎಲ್ಲಾ ಫೋನ್ ನಂಬರ್ಸ್ ಇಲ್ಲಿದೆ

  ಉಕ್ರೇನ್ ಅಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ NEXT ಪರೀಕ್ಷೆ

  ಇನ್ನು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಶಿಕ್ಷಣ ಪಡೆದುಕೊಂಡ ನಂತರ ಭಾರತಕ್ಕೆ ಬಂದು ಕೆಲಸ ಮಾಡಬೇಕು ಎಂದರೆ NEXT (ನ್ಯಾಷನಲ್ ಎಕ್ಸಿಟ್ ಟೆಸ್ಟ್) ಎಂಬ ಬ್ರಿಡ್ಜ್ ಕೋರ್ಸ್-ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದರ ನಂತರ ಭಾರತದಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಬಹುದು.. ಹಾಗೂ ಭಾರತದಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಬಹುದು.

  ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರು

  ಇನ್ನು ಉಕ್ರೇನ್ ಹೇಗೆ ವೈದ್ಯಕೀಯ ವಿದ್ಯಾಭ್ಯಾಸ ಮಾಡಬೇಕು ಎಂಬ ಬಡವರ ಮಕ್ಕಳ ಕನಸಿಗೆ ನೆರವಾಗಿದೆ ಎಂಬುದಕ್ಕೆ ಉದಾಹರಣೆ ರಾಯಚೂರು ಜಿಲ್ಲೆಯ ದೇವಸುಗೂರು ಗ್ರಾಮದ ಚನ್ನವೀರೇಶ್. ಚನ್ನ ವೀರೇಶ್ ಪಿಯುಸಿಯಲ್ಲಿದ್ದಾಗ ಶೇಕಡಾ 73 ರಷ್ಟು ಅಂಕ ಪಡೆದಿದ್ದ.. ಮೆಡಿಕಲ್ ಮಾಡಬೇಕು ಎಂಬ ಆಸೆಯಿಂದ ನೀಟ್ ಪರೀಕ್ಷೆ ಬರೆದ ಚನ್ನ ವೀರೇಶ್ 370ನೇ ಸ್ಥಾನ ಗಳಿಸಿದ್ದ.. ಹೀಗಾಗಿ ತಮ್ಮ ಸೀನಿಯರ್ ಗಳ ಸಹಾಯದಿಂದ ತಮ್ಮ ತಂದೆ ಸಾಂಬಶಿವ ಅವರ ಅನುಮತಿ ಪಡೆದು ಉಕ್ರೇನ್ ನ ಖಾರ್ಕಿವ್ ವೈದ್ಯಕೀಯ ವಿದ್ಯಾಲಯಕ್ಕೆ ಸೇರ್ಪಡೆಯಾದ..

  ಪ್ರಸ್ತುತ ಈತನಿಗೆ ವಾರ್ಷಿಕವಾಗಿ ಕೇವಲ ಐದು ಲಕ್ಷ ರೂಪಾಯಿಗಳ ಖರ್ಚು ಬೀಳುತ್ತದೆ.. ಇನ್ನು ಇದನ್ನು ಹೊರತುಪಡಿಸಿದರೆ ವಿದ್ಯಾರ್ಥಿಗಳು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಮೇಲೆ ಹೆಚ್ಚಿನ ಹಣ ಖರ್ಚಾಗಲಿದೆ.. ಅಲ್ಲದೇ ಉಕ್ರೇನ್ ದೇಶದಲ್ಲಿ ಸಂಪೂರ್ಣ ವಿದೇಶಿ ವಿದ್ಯಾರ್ಥಿಗಳು ಇರುವುದರಿಂದ ಬೋಧನಾ ಭಾಷೆ ಕೇವಲ ಇಂಗ್ಲೀಷ್-ಮಾತ್ರ ಆಗಿದೆ.

  ಇನ್ನು ಪೂರನ್ ಚಂದ್ರಶೇಖರ್ ಪ್ರಸ್ತುತ ಉಕ್ರೇನ್‌ನಲ್ಲಿ ಓದುತ್ತಿರುವ ಕರ್ನಾಟಕ ಮೂಲದ ಮತ್ತೊಬ್ಬರು. ಇವರ ಹೆತ್ತವರಾದ ಚಂದ್ರಶೇಖರ್ ಮತ್ತು ರಾಜೇಶ್ವರಿ ಅವರು 12 ವರ್ಷದ ಸಹೋದರ ಲೋಚನ್ ಅವರೊಂದಿಗೆ ಬೆಂಗಳೂರಿನ ಸುಂಕದಕಟ್ಟೆ ಬಳಿಯ ತುಂಗಾ ನಗರದಲ್ಲಿ ವಾಸಿಸುತ್ತಿದ್ದಾರೆ. ಪೂರನ್ ಪಿಯುಸಿಯಲ್ಲಿ ಶೇ.95 ಅಂಕ ಗಳಿಸಿದ್ದು, ವಿಜಯನಗರ ಎಎಸ್‌ಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಈತ ನೀಟ್ ನಲ್ಲಿ ನಲ್ಲಿ ಅರ್ಹತೆ ಪಡೆದಿದ್ದ. ಆದರೆ ಕೊವಿಡ್ -19 ಪರಿಸ್ಥಿತಿಯಿಂದಾಗಿ, ಅವರು ಒಂದು ವರ್ಷ ಕಳೆದುಕೊಳ್ಳುವ ಭಯದಲ್ಲಿದ್ದರು. ಆಗ ಅವನ ಪೋಷಕರು ಅವನನ್ನು ಉಕ್ರೇನ್‌ಗೆ ಕಳುಹಿಸಲು ನಿರ್ಧರಿಸಿದರು.

  ಇನ್ನು ಪೂರನ್‌ಗೆ ಚಿಕ್ಕಂದಿನಿಂದಲೂ ಸೇನೆ ಸೇರಬೇಕೆಂಬ ಆಸೆ ಇತ್ತು. ಆದರೆ ಅವರು ದೈಹಿಕವಾಗಿ ಗಟ್ಟಿಮುಟ್ಟಾಗಿಲ್ಲ. ಆದ್ದರಿಂದ, ಅವನು ಇನ್ನೊಂದು ಮಾರ್ಗವನ್ನು ಆರಿಸಿಕೊಂಡನು. ಅವರು ವೈದ್ಯಕೀಯವನ್ನು ಅಧ್ಯಯನ ಮಾಡಲು ನಿರ್ಧರಿಸಿದರು, ಅವರ ಸ್ಪೆಷಲೈಸ್ ಮಾಡಿದ ನಂತರ ಸೈನ್ಯಕ್ಕೆ ಸೇರುತ್ತಾರೆ. ಅವನು ತನ್ನ ಗುರಿಯ ಬಗ್ಗೆ ತುಂಬಾ ಸ್ಪಷ್ಟವಾಗಿದ್ದನು. ನನ್ನ ಪತಿ ಎಂಎನ್ ಸಿ ಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪೂರನ್‌ನ ಉನ್ನತ ವ್ಯಾಸಂಗಕ್ಕೆ ಯಾವ ದೇಶವು ಉತ್ತಮವಾಗಿದೆ ಎಂಬುದರ ಕುರಿತು ಆರು ತಿಂಗಳ ಕಾಲ ವ್ಯಾಪಕ ಸಂಶೋಧನೆ ನಡೆಸಿದ್ದರು ಎಂದು ಪೂರನ್ ಅವರ ತಾಯಿ ರಾಜೇಶ್ವರಿ ಹೇಳುತ್ತಾರೆ.

  ಇದನ್ನೂ ಓದಿ: ಇಂದು ಭಾರತದ ಸಹಾಯ ಬೇಡುತ್ತಿರುವ ಉಕ್ರೇನ್ 22 ವರ್ಷದ ಹಿಂದೆ ಭಾರತವನ್ನೇ ವಿರೋಧ ಮಾಡಿತ್ತು!

  ಉಕ್ರೇನ್ ನಲ್ಲಿರುವ 20 ಸಾವಿರ ಭಾರತೀಯರು

  ರಷ್ಯಾ ದಾಳಿಗೆ ತತ್ತರಿಸುತ್ತಿರುವ ಯುದ್ಧ ಪೀಡಿತ ಪ್ರದೇಶ ಉಕ್ರೇನ್ ನಲ್ಲಿ ವಿದ್ಯಾಭ್ಯಾಸಕ್ಕೆಂದು ತೆರಳಿರುವ ವಿದ್ಯಾರ್ಥಿಗಳು ಸೇರಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ.. ಸದ್ಯ ಇವರನ್ನ ಸುರಕ್ಷಿತವಾಗಿ ಕರೆತರಲು ಭಾರತ ಏರ್ ಇಂಡಿಯಾ ವಿಮಾನ ಸಂಚಾರ ಆರಂಭ ಮಾಡಿದೆ.. ಈಗಾಗಲೇ ಎರಡು ವಿಮಾನಗಳು ಉಕ್ರೇನ್ ನಿಂದ ಸುರಕ್ಷಿತವಾಗಿ ಹಲವು ಭಾರತೀಯರನ್ನು ಕರೆತಂದಿದೆ.. ಮತ್ತೊಂದು ವಿಮಾನ ಫೆಬ್ರವರಿ 26ರಂದು ಏರ್ ಇಂಡಿಯಾ ವಿಮಾನ ತನ್ನ ಕಾರ್ಯಾಚರಣೆ ನಡೆಸಲಿದೆ.
  Published by:ranjumbkgowda1 ranjumbkgowda1
  First published: