• Home
  • »
  • News
  • »
  • explained
  • »
  • Explained: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಡಿ. ವೈ ಚಂದ್ರಚೂಡ್, ಈ ಆಯ್ಕೆ ಹೊಸ ಭರವಸೆ ಮೂಡಿಸಲು ಇದೇ ಕಾರಣ!

Explained: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಡಿ. ವೈ ಚಂದ್ರಚೂಡ್, ಈ ಆಯ್ಕೆ ಹೊಸ ಭರವಸೆ ಮೂಡಿಸಲು ಇದೇ ಕಾರಣ!

ಡಿ. ವೈ ಚಂದ್ರಚೂಡ್

ಡಿ. ವೈ ಚಂದ್ರಚೂಡ್

ಸುಪ್ರೀಂ ಕೋರ್ಟ್‌ನ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿರುವ ಧನಂಜಯ ಚಂದ್ರಚೂಡ್, ನ್ಯಾಯನಿಷ್ಠತೆ ಹಾಗೂ ಕರ್ತವ್ಯಪರತೆಗೆ ಹೆಸರುವಾಸಿಯಾಗಿದ್ದಾರೆ. ರಜಾ ಸಮಯದಲ್ಲೂ ಯಾವುದೇ ತುರ್ತು ಅಗತ್ಯಗಳಿದ್ದರೆ ಧನಂಜಯ ಚಂದ್ರಚೂಡ್ ತಮ್ಮ ಕರ್ತವ್ಯಪರತೆಯನ್ನು ಮೆರೆದವರು.

  • News18 Kannada
  • Last Updated :
  • New Delhi, India
  • Share this:

ಸುಪ್ರೀಂ ಕೋರ್ಟ್‌ನ (Supreme Court) 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿರುವ ಧನಂಜಯ ಚಂದ್ರಚೂಡ್ (Dhananjaya Chandrachud), ನ್ಯಾಯನಿಷ್ಠತೆ ಹಾಗೂ ಕರ್ತವ್ಯಪರತೆಗೆ ಹೆಸರುವಾಸಿಯಾಗಿದ್ದಾರೆ. ರಜಾ ಸಮಯದಲ್ಲೂ ಯಾವುದೇ ತುರ್ತು ಅಗತ್ಯಗಳಿದ್ದರೆ ಧನಂಜಯ ಚಂದ್ರಚೂಡ್ ತಮ್ಮ ಕರ್ತವ್ಯಪರತೆಯನ್ನು ಮೆರೆದವರು. ತಮ್ಮ ಹುಟ್ಟುಹಬ್ಬದ (Birthday) ದಿನ ಕೂಡ ತುರ್ತು ಜಾಮೀನು ವಿಷಯವಾಗಿ ಸಂಪೂರ್ಣ ದಿನವನ್ನೇ ವಿಚಾರಣೆಯ ಸಲುವಾಗಿ ಕಳೆದಾಗ ವಕೀಲರೊಬ್ಬರು ನಿಮ್ಮ ಜನ್ಮದಿನವನ್ನು ಸಂಭ್ರಮವಾಗಿ ಆಚರಿಸುವ ಬದಲಿಗೆ ಕೆಲಸ (Work) ಮಾಡುವಂತಾಯಿತು ಇದೊಂದು ಕೆಟ್ಟ ದಿನ ಅಲ್ಲವೇ ಧನಂಜಯ ಚಂದ್ರಚೂಡ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ ಧನಂಜಯ ಚಂದ್ರಚೂಡ್ ನನ್ನ ಜನ್ಮದಿನವನ್ನು ಇದಕ್ಕಿಂತ ಉತ್ತಮವಾಗಿ ನಾನು ಕಳೆಯಬಹುದು ಎಂದು ನನಗನ್ನಿಸುವುದಿಲ್ಲ.


ನನ್ನ ವೃತ್ತಿಯಲ್ಲಿ ಖುಷಿ ಕಾಣುವುದು ಹಾಗೂ ನಾನು ಅದರಲ್ಲೇ ಸಂಭ್ರಮವನ್ನು ಮಾಡುತ್ತೇನೆ ಎಂದು ತಿಳಿಸಿದ್ದರು. ಇದರಿಂದಲೇ ಚಂದ್ರಚೂಡರು ತಮ್ಮ ವೃತ್ತಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.


ಅಸಾಧಾರಣ ಬುದ್ಧಿವಂತರಾಗಿದ್ದ ಧನಂಜಯ ಚಂದ್ರಚೂಡ್
ಚಂದ್ರಚೂಡರ ತಂದೆ ವೈ.ವಿ ಚಂದ್ರಚೂಡರು ಕೂಡ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದವರು ಹಾಗೂ ವಿದ್ಯಾರ್ಥಿ ದಿನಗಳಿಂದಲೂ ಚಂದ್ರಚೂಡರು ಅಸಾಧಾರಣ ಬುದ್ಧಿವಂತರಾಗಿದ್ದರು ಹಾಗೂ ಅಪಾರ ಜ್ಞಾನವನ್ನು ಹೊಂದಿದವರಾಗಿದ್ದರು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾದ ತಾಹಿರ್ ಮಹಮೂದ್ ಅಭಿಪ್ರಾಯವಾಗಿದೆ.


1974 ರಲ್ಲಿ ತಾಹಿರ್ ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗಕ್ಕೆ ಯುವ ಶಿಕ್ಷಕರಾಗಿ ಸೇರ್ಪಡೆಗೊಂಡ ದಿನದಿಂದ ವಿದ್ಯಾರ್ಥಿಯಾಗಿದ್ದ ಚಂದ್ರಚೂಡರನ್ನು ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ. ಇವರ ತಂದೆ ವೈ.ವಿ ಚಂದ್ರಚೂಡರು ತಾಹಿರ್ ಅವರ ಸಂಪರ್ಕದಲ್ಲಿದ್ದರು ಎಂಬುದಾಗಿ ಇಲ್ಲಿ ಸ್ಮರಿಸಿದ್ದಾರೆ.


ವೈ.ವಿ ಚಂದ್ರಚೂಡರು 1980 ರಲ್ಲಿ ತಾಹಿರ್ ಅವರು ಆರಂಭಿಸಿದ್ದ ಇಸ್ಲಾಮಿಕ್ ಕಾನೂನಿನ ಪತ್ರಿಕೆಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಕಳುಹಿಸುತ್ತಿದ್ದರು ಹಾಗೂ 1985 ರಲ್ಲಿ ತಮ್ಮ ಅಧಿಕಾರವನ್ನು ತ್ಯಜಿಸುವ ಮುನ್ನ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಪೋಷಣೆ ಹಕ್ಕುಗಳ ಕುರಿತಾದ ಖ್ಯಾತ ಶಾ ಬಾನೊ ಬೇಗಂ ಪ್ರಕರಣದಲ್ಲಿ ತಾಹಿರ್ ಅವರ ಎರಡು ಕೃತಿಗಳನ್ನು ಉಲ್ಲೇಖಿಸಿ ವೈ.ವಿ ಚಂದ್ರಚೂಡರು ತಮ್ಮನ್ನು ಗೌರವಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.


ಜನರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿರುವ ನ್ಯಾಯಪಾಲಕರು
ಇದೇ ಸಂದರ್ಭದಲ್ಲಿಯೇ ವೈ.ವಿ ಚಂದ್ರಚೂಡರ ಪುತ್ರ ಧನಂಜಯ ಚಂದ್ರಚೂಡರ ಬೆಳವಣಿಗೆಯನ್ನು ಗಮನಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಪ್ರತಿಷ್ಠಿತ ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಉನ್ನತ ಕಾನೂನು ಶಿಕ್ಷಣವನ್ನು ಪೂರೈಸಿದ ಧನಂಜಯ ಚಂದ್ರಚೂಡರು ಅಸಾಧಾರಣ ಪ್ರಗತಿ ಕಂಡ ನ್ಯಾಯಪಾಲಕರಾಗಿದ್ದರು ಎಂದು ತಾಹಿರ್ ಹೊಗಳಿದ್ದಾರೆ.


ಇದನ್ನೂ ಓದಿ:  Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


ಬಾಂಬೆ ಬಾರ್‌ನಲ್ಲಿ ಕಾನೂನು ಸಮವಸ್ತ್ರವನ್ನು ಧರಿಸಿ ಕಾನೂನು ತಾಲೀಮು ನಡೆಸಿದ ಚಂದ್ರಚೂಡರು ಬಾಂಬೆ ಹೈಕೋರ್ಟ್ ಪೀಠದಲ್ಲಿ ಸೇವೆ ಸಲ್ಲಿಸಿ ನಂತರ ಉತ್ತರ ಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಅಂತಿಮವಾಗಿ ದೇಶದ ಅತ್ಯುನ್ನತ ನ್ಯಾಯ ದೇವಾಲಯದ ಪೀಠವನ್ನೇರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ತಾಹಿರ್.


ಆರು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಧನಂಜಯ, ತಮ್ಮ ಉನ್ನತ ಸ್ವಭಾವದಿಂದ ಹಾಗೂ ನಿಷ್ಪಕ್ಷಪಾತ ನ್ಯಾಯ ನಿರ್ಧಾರಗಳಿಂದ ಜನರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಧನಂಜ ನ್ಯಾಯಶಾಸ್ತ್ರದ ಕುಶಾಗ್ರಮತಿಯನ್ನೊಳಗೊಂಡ ಜ್ಞಾನವನ್ನು ಹೊಂದಿದವರು ಎಂಬುದು ತಾಹಿರ್ ಅಭಿಪ್ರಾಯವಾಗಿದೆ. ಕೆಲವು ಪ್ರಮುಖ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ಒಂದೆರಡು ಹಳೆಯ ನಿರ್ಧಾರಗಳನ್ನು ರದ್ದುಗೊಳಿಸಿದ ಸಾಹಸಿ ಎಂದು ಅವರು ತಿಳಿಸಿದ್ದಾರೆ. ದಿವಂಗತ ತಂದೆಯವರು ವೈಯಕ್ತಿಕವಾಗಿ ಬರೆದಿರುವ ಇಲ್ಲವೇ ತೀರ್ಪು ನೀಡುವ ಪೀಠದ ಸದಸ್ಯರಾಗಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸಿದ್ದಾರೆ.


ತಂದೆಯ ನಿರ್ಧಾರಗಳನ್ನೇ ಬದಲಾಯಿಸಿದ ಸಾಹಸಿ
ಈ ಪ್ರಕರಣಗಳಲ್ಲಿ ಮೊದಲನೆಯದು ಕುಖ್ಯಾತ ಹೇಬಿಯಸ್ ಕಾರ್ಪಸ್ ಪ್ರಕರಣವಾಗಿದ್ದು (ADM ಜಬಲ್‌ಪುರ್, 1976) ತುರ್ತು ದಿನಗಳನ್ನು ಘೋಷಿಸಿದ ನ್ಯಾಯಾಲಯ ಸಾಂವಿಧಾನಿಕ ಪೀಠದಲ್ಲಿ ಅವರ ತಂದೆಯವರದೇ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದ್ದರು.


ಎರಡು ವರ್ಷಗಳ ನಂತರ 16 ನೇ CJI ಆಗಿ ನೇಮಕಗೊಂಡ ನಂತರ, ಸಂವಿಧಾನದ ಉಲ್ಲಂಘಿಸಲಾಗದೇ ಇರುವ ಮೂರ ರಚನೆಯನ್ನು ಆಧರಿಸಿಕೊಂಡೇ ಮಿನರ್ವ ಮಿಲ್ಸ್ (1980) ನಲ್ಲಿ ಸರಿಯಾದ ತೀರ್ಪು ನೀಡುವ ಮೂಲಕ ಕಳಂಕವನ್ನು ತೊಡೆದು ಹಾಕುವಲ್ಲಿ ಕೈಲಾದ ಪ್ರಯತ್ನವನ್ನು ಮಾಡಿದ್ದಾರೆ ಎಂಬುದ ತಾಹಿರ್ ಅವರ ಮಾತಾಗಿದೆ.


ನ್ಯಾಯಾಲಯದಿಂದ ನಿವೃತ್ತರಾದ ಸಂದರ್ಭದಲ್ಲಿ, ತಾಹಿರ್ ಹಾಜರಿದ್ದಂತಹ ಶೈಕ್ಷಣಿಕ ಸಮಾರಂಭದಲ್ಲಿ ADM ಜಬಲ್‌ಪುರದ ನಿರ್ಧಾರವು ತಪ್ಪಾದ ನಿರ್ಧಾರವಾಗಿತ್ತು ಎಂದೇ ತಿಳಿಸಿದ್ದರು.


ನ್ಯಾಯಾಂಗ ನಿರ್ಧಾರಗಳೇ ಪ್ರಸ್ತುತ
ತೀರ್ಪು ನೀಡಿದ ಸುಮಾರು ಅರ್ಧಶತಮಾನದ ನಂತರ, ADM ಜಬಲ್‌ಪುರದ ಪ್ರಕರಣವನ್ನು ತಿರಸ್ಕರಿಸಲಾಯಿತು. ಪ್ರಜೆಗಳ ಖಾಸಗಿತನದ ಮೂಲಭೂತ ಹಕ್ಕಿಗೆ ಸಂಬಂಧಿಸಿದ 2017 ರ ಕೆಎಸ್ ಪುಟ್ಟಸ್ವಾಮಿ ಪ್ರಕರಣವನ್ನು ಧನಂಜಯ ಚಂದ್ರಚೂಡರು ಗಂಭೀರವಾಗಿ ದೋಷಪೂರಿತ ಎಂದೇ ಉಲ್ಲೇಖಿಸಿದ್ದಾರೆ. ದೇಶದ ಇತಿಹಾಸದ ಬಗ್ಗೆ ಉಲ್ಲೇಖಿಸುವಾಗ ಹಾಗೂ ವಿಮರ್ಶಿಸುವಾಗ ನ್ಯಾಯಾಂಗ ನಿರ್ಧಾರಗಳು ಸ್ವಾತಂತ್ರ್ಯಕ್ಕೆ ಅಗ್ರಭಾಗದಲ್ಲಿರುತ್ತವೆ ಎಂದು ತಿಳಿಸಿದ್ದರು.


2018 ರಲ್ಲಿ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಎರಡು ವಿಭಿನ್ನ ನಿಬಂಧನೆಗಳ ಮೇಲೆ ಧನಂಜಯ ಕ್ರಾಂತಿಕಾರಿ ನಿರ್ಧಾರಗಳನ್ನು ಪ್ರಕಟಿಸಿದರು. ವ್ಯಭಿಚಾರಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ರ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ತಮ್ಮ ಅನುಭವಿ ತಂದೆಯ 33 ವರ್ಷಗಳ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ:  APJ Abdul Kalam: ಯುವಕರಿಗೆ ಸ್ಫೂರ್ತಿ ತುಂಬುತ್ತೆ ಕಲಾಂರ ಸಾಧನೆ! ಭಾರತದ ಕ್ಷಿಪಣಿ ಮನುಷ್ಯನ ಹೆಜ್ಜೆ ಗುರುತು ಇಲ್ಲಿದೆ


ಈ ತೀರ್ಪು ತಂದೆ ಹಾಗೂ ಮಗನ ನಡುವಿನ ಪೀಳಿಗೆಯ ಅಂತರವನ್ನು ಪ್ರತಿಬಿಂಬಿಸುತ್ತದೆ ಎಂಬುದು ತಾಹಿರ್ ಹೇಳಿಕೆಯಾಗಿದೆ. ವಿವಾಹಿತ ಮಹಿಳೆಯ ಅಕ್ರಮ ಸಂಬಂಧವು ಕೌಟುಂಬಿಕ ಕಾನೂನಿಗೆ ಒಳಪಡುವ ಸಮಸ್ಯೆಯಾಗಿರುವುದರಿಂದ ಅದನ್ನು ಕ್ರಿಮಿನಲ್ ಕಾನೂನಿನ ವ್ಯಾಪ್ತಿಗೆ ತರಬಾರದು ಎಂದು ಧನಂಜಯ್ ತಿಳಿಸಿದರು. ಇದು ಧನಂಜಯ ಅವರ ತಾರ್ಕಿಕ ನಿರ್ಧಾರ ಎಂದು ತಾಹಿರ್ ಸ್ಪಷ್ಟಪಡಿಸಿದ್ದಾರೆ.


ತೀರ್ಪು ಜನರ ಜೀವನ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಬಾರದು
ನವತೇಜ್ ಜೋಹರ್‌ನ ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯವು ತನ್ನ ಹಿಂದಿನ ತೀರ್ಪನ್ನು ತ್ಯಜಿಸಿ, ಸಲಿಂಗಕಾಮವು ಅಪರಾಧವಲ್ಲ ಎಂಬುದಾಗಿ ಒಪ್ಪಿಕೊಂಡಿತು. ಜನರ ಜೀವನ ಹಾಗೂ ಖಾಸಗಿತನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಂತೆ ನ್ಯಾಯಾಲಯ ತೀರ್ಪು ನೀಡಬಾರದು ಎಂದು ಧನಂಜಯ್ ಚಂದ್ರಚೂಡರು ಅಭಿಪ್ರಾಯಿಸಿದ್ದರು.


2018 ರಲ್ಲಿ, ವ್ಯಕ್ತಿಗಳ ವೈವಾಹಿಕ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕೇರಳದ ಶಫಿನ್ ಜಹಾನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ಧರಿಸಿದ್ದ ತೀರ್ಪಿಗೆ ವಿರುದ್ಧವಾಗಿ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾದ ತೀರ್ಪನ್ನು ನೀಡಿತು.


ವೈವಾಹಿಕ ಪರಿಹಾರಗಳ ಕುರಿತಾದ ಕಾನೂನನ್ನು ಆಧರಿಸಿ ತೀರ್ಪು ನೀಡಿದ ಧನಂಜಯ್ ಅವರು, ವೈವಾಹಿಕ ಬಂಧನದಲ್ಲಿ ಪರಸ್ಪರರನ್ನು ಮೆಚ್ಚಿಕೊಳ್ಳುವುದು ಹಾಗೂ ವೈವಾಹಿಕ ಬಂಧನವಲ್ಲಿ ಮುಂದುವರಿಯುವುದು ಇಬ್ಬರ ಇಚ್ಛೆಗೆ ಬಿಟ್ಟ ವಿಚಾರವಾಗಿದೆ. ಸಂಗಾತಿಗಳ ನಿರ್ಧಾರವನ್ನು ನಿರ್ಧರಿಸುವಲ್ಲಿ ಸಮಾಜವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ತಿಳಿಸಿದ್ದರು.


ನಾಗರಿಕರ ರಕ್ಷಣೆಗೆ ಸುಪ್ರೀಂ ಕೋರ್ಟ್ ಇದೆ ಎಂದು ಎಚ್ಚರಿಕೆ ನೀಡಿದ್ದ ಚಂದ್ರಚೂಡ್
2020 ರ ರಹನಾ ಜಲ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ 2019 ರ ಅಡಿಯಲ್ಲಿ ಧನಂಜಯ ಮಾಡಿರುವ ನಿರ್ಧಾರವನ್ನು (2017) ಶಾಯರಾ ಬಾನೋ (ತ್ರಿವಳಿ ತಲಾಖ್) ಅಭ್ಯಾಸದ ಕುರಿತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ ಅಂಗೀಕರಿಸಲಾಯಿತು.


ಈ ಕಾಯ್ದೆ ಅಡಿಯಲ್ಲಿ ಆರೋಪಿ ಪತಿಯು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂಬ ಕೇರಳ ಹೈಕೋರ್ಟ್‌ನ ತೀರ್ಪನ್ನು ತಳ್ಳಿಹಾಕಿದ ಧನಂಜಯ, ಜಾಮೀನು ನೀಡುವ ನ್ಯಾಯಾಲಯದ ಅಧಿಕಾರವು ಎಲ್ಲಾ ಪ್ರಕರಣಗಳಲ್ಲಿ ವ್ಯಕ್ತಿಯ ಮುಗ್ಧತೆಯ ಊಹೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೌಲ್ಯವನ್ನು ಗುರುತಿಸುತ್ತದೆ ಎಂದು ತಿಳಿಸಿದರು. 2019 ರ ಕಾಯಿದೆಯು ನಿರೀಕ್ಷಣಾ ಜಾಮೀನಿಗಾಗಿ CrPC ನಿಬಂಧನೆಯನ್ನು ಅತಿಕ್ರಮಿಸುವುದಿಲ್ಲ ಎಂದು ವಾದಿಸಿದರು.


ಇದನ್ನೂ ಓದಿ:  Gyaneshwer Chaubey: ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡು ಹಿಡಿದು ಜಗತ್ತನ್ನೇ ಬೆರಗುಗೊಳಿಸಿದ ವಿಜ್ಞಾನಿ!


ಮೇಲೆ ಉಲ್ಲೇಖಿಸಿರುವ ಪ್ರಕರಣದಲ್ಲಿ ಜಾಮೀನು ನೀಡುವ ವಿಷಯದಲ್ಲಿ ಕೂಡ ರಾಜ್ಯ ಅಧಿಕಾರದ ಪಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದ ಚಂದ್ರಚೂಡರು, ವೈಯಕ್ತಿಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ತೀರ್ಪು ನೀಡಿದಲ್ಲಿ, ಅವರನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಇದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಖಾರವಾಗಿಯೇ ತಿಳಿಸಿದ್ದರು. ನಾಗರಿಕರ ಮೂಲಭೂತ ಹಕ್ಕುಗಳ ಪ್ರಾಮುಖ್ಯತೆಗೆ ಒತ್ತು ನೀಡುವ ಸಿಜೆಐ ಅವರ ಉತ್ಸಾಹಭರಿತ ಬದ್ಧತೆಯು ಇದೀಗ ಭವಿಷ್ಯದಲ್ಲಿ ನ್ಯಾಯವನ್ನರಸುವ ಹಾಗೂ ನ್ಯಾಯಕ್ಕಾಗಿ ಹೋರಾಡುವವರಿಗೆ ಭರವಸೆಯ ಹೊಂಗಿರಣವಾಗಿದೆ.


ನವೆಂಬರ್ 9 ರಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಡಿ.ವೈ ಚಂದ್ರಚೂಡ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ್ ಲಲಿತ್ ಸುಪ್ರೀಂ ಕೋರ್ಟ್‌ನ ಅತಿ ಹಿರಿಯ ನ್ಯಾಯಪಾಲಕರಾಗಿರುವ ನ್ಯಾ.ಚಂದ್ರಚೂಡ್ ಹೆಸರನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು.

Published by:Ashwini Prabhu
First published: