• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ಮರಾಠರ ಕಾಲದ ಬಹುತೇಕ ಕೋಟೆಗಳು ಬೆಟ್ಟಗಳ ಮೇಲೇ ಯಾಕಿದ್ದವು, ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

Explainer: ಮರಾಠರ ಕಾಲದ ಬಹುತೇಕ ಕೋಟೆಗಳು ಬೆಟ್ಟಗಳ ಮೇಲೇ ಯಾಕಿದ್ದವು, ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ ರಾಜ್ಯ ಅದ್ಭುತವಾದ ಐತಿಹಾಸಿಕ ಕೋಟೆಗಳಿಗೆ ನೆಲೆಯಾಗಿದೆ. 17ನೇ ಶತಮಾನದಲ್ಲಿ ಯೋಧ, ರಾಜ ಛತ್ರಪತಿ ಶಿವಾಜಿ ನೇತೃತ್ವದಲ್ಲಿ ಮರಾಠ ಸಾಮ್ರಾಜ್ಯದ ವೈಭವದ ಆಳ್ವಿಕೆಯನ್ನು ಪ್ರತಿಬಿಂಬಿಸುವ, ಅನೇಕ ಅದ್ಭುತ ಐತಿಹಾಸಿಕ ತಾಣಗಳಿಗೆ ಮಹಾರಾಷ್ಟ್ರ ನೆಲೆಯಾಗಿದೆ.

  • Trending Desk
  • 5-MIN READ
  • Last Updated :
  • Maharashtra, India
  • Share this:

    ನಮ್ಮ ದೇಶದಲ್ಲಿ ಅಪರಿಮಿತ ಸಂಖ್ಯೆಯಲ್ಲಿ ಇತಿಹಾಸ (Historical) ಪ್ರಸಿದ್ಧ ಕೋಟೆಗಳು (Fort), ಕಟ್ಟಡಗಳು, ಅರಮನೆಗಳಿವೆ (Palaces). ಅದರಲ್ಲೂ ಈ ಕೋಟೆಗಳು ನಮ್ಮ ದೇಶದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿವೆ. ಭಾರತದಲ್ಲಿ ಸಾಮಾನ್ಯವಾಗಿ ಬೆಟ್ಟದ ಮೇಲೊಂದು ಕೋಟೆ ಇದ್ದೇ ಇರುತ್ತದೆ. ಇಂದಿನ ಕಾಲದ ಹಾಗೆ ಮುಂದುವರೆದ ವಿಜ್ಞಾನ (Science), ಆಧುನಿಕ ನಿರ್ಮಾಣ ಉಪಕರಣಗಳು, ಸಾಮಗ್ರಿಗಳು ಆ ದಿನಗಳಲ್ಲಿ ಇರಲಿಲ್ಲ. ಹಾಗಂತ ಆಗಿನ ಜನ ಸುಮ್ಮನಿರಲಿಲ್ಲ, ತಮ್ಮ ರಕ್ಷಣೆ, ಶತ್ರುಗಳ ದಾಳಿ ವಿರುದ್ಧ ಎಲ್ಲಾ ಮಾರ್ಗಗಳನ್ನು ಅವರು ವಿನ್ಯಾಸ ಮಾಡಿಕೊಂಡಿದ್ದರು.


    ಇತಿಹಾಸದಲ್ಲಿ ದೀರ್ಘ ಕಾಲದವರೆಗೆ, ಸೇನಾ ತಂತ್ರಗಳು ಮತ್ತು ಕಾರ್ಯತಂತ್ರಗಳಲ್ಲಿ ವಾಯುಶಕ್ತಿಯು ಪ್ರಧಾನವಾಗುವುದಕ್ಕೂ ಮೊದಲು, ದೇಶದ ರಕ್ಷಣೆಯಲ್ಲಿ ಈ ಕೋಟೆಗಳು, ಫಿರಂಗಿಗಳು, ಮದ್ದು-ಗುಂಡುಗಳು, ಯುದ್ಧ ತಂತ್ರಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಆಗಿನ ಕಾಲದಲ್ಲಿ ಬೇರೆ ರಾಜ್ಯದ ರಾಜರು ಪದೇ ಪದೇ ದಂಡೆತ್ತಿ ಬರುತ್ತಿದ್ದರು. ಈ ದಾಳಿಯಿಂದ ರಕ್ಷಿಸಿಕೊಳ್ಳಲು, ಪ್ರದೇಶಗಳನ್ನು ರಕ್ಷಿಸಲು ಈ ಕೋಟೆಗಳನ್ನು ನಿರ್ಮಾಣ ಮಾಡುತ್ತಿದ್ದರು.


    ರಕ್ಷಕರಿಗೆ ಬಲವಾಗಿ, ನಾಗರಿಕರಿಗೆ ಸುರಕ್ಷಿತ ಆಶ್ರಯವಾಗಿ, ದಾಸ್ತಾನು ಕೇಂದ್ರವಾಗಿಯೂ ಈ ಕೋಟೆಗಳು ಕಾರ್ಯನಿರ್ವಹಿಸುತ್ತಿದ್ದವು. ಕೆಲವೊಮ್ಮೆ ಇಲ್ಲೇ ಯುದ್ಧ ಕೂಡ ನಡೆಯುತ್ತಿದ್ದವು.


    ಇದನ್ನೂ ಓದಿ: Army: ಹಿಮಪಾತದ ನಡುವೆ ಗರ್ಭಿಣಿಯನ್ನು ಭುಜದ ಮೇಲೆ ಹೊತ್ತು ಸಾಗಿದ ಯೋಧರು, 5 ಕಿಲೋ ಮೀಟರ್ ನಡೆದು ತಾಯಿ-ಮಗು ಉಳಿಸಿದ ಸೈನಿಕರು


    ಮರಾಠಾ ಸಾಮ್ರಾಜ್ಯ


    ದೇಶವನ್ನು ಹಲವಾರು ರಾಜಮನೆತನಗಳು ಆಳಿ ಹೋಗಿವೆ. ಅದರಲ್ಲಿ ಮುಖ್ಯವಾದದ್ದು ಮರಾಠಾ ಸಾಮ್ರಾಜ್ಯ, ಈ ಮನೆತನದ ಆಳ್ವಿಕೆಯ ಅವಧಿಯಲ್ಲಿ ಹಲವು ಐತಿಹಾಸಿಕ ಕೋಟೆಗಳು, ಪ್ರದೇಶಗಳು ನಿರ್ಮಾಣವಾಗಿವೆ. ಅದರಲ್ಲೂ ಛತ್ರಪತಿ ಶಿವಾಜಿ ಮಹಾರಾಜ್ ಕಾಲದಲ್ಲಿ ಹಲವು ಕೋಟೆಗಳು ತಲೆ ಎತ್ತಿದವು. ಈ ಎಲ್ಲಾ ಕೋಟೆಗಳು ಹೆಚ್ಚಾಗಿ ಬೆಟ್ಟದ ಮೇಲಿರುವುದೇ ಮತ್ತೊಂದು ವಿಶೇಷ.


    ಮಹಾರಾಷ್ಟ್ರ ರಾಜ್ಯ ಅದ್ಭುತವಾದ ಐತಿಹಾಸಿಕ ಕೋಟೆಗಳಿಗೆ ನೆಲೆಯಾಗಿದೆ. 17ನೇ ಶತಮಾನದಲ್ಲಿ ಯೋಧ, ರಾಜ ಛತ್ರಪತಿ ಶಿವಾಜಿ ನೇತೃತ್ವದಲ್ಲಿ ಮರಾಠ ಸಾಮ್ರಾಜ್ಯದ ವೈಭವದ ಆಳ್ವಿಕೆಯನ್ನು ಪ್ರತಿಬಿಂಬಿಸುವ, ಅನೇಕ ಅದ್ಭುತ ಐತಿಹಾಸಿಕ ತಾಣಗಳಿಗೆ ಮಹಾರಾಷ್ಟ್ರ ನೆಲೆಯಾಗಿದೆ.


    200ಕ್ಕೂ ಹೆಚ್ಚಿನ ಕೋಟೆಗಳ ನಿಯಂತ್ರಣ ಹೊಂದಿದ್ದ ಛತ್ರಪತಿ ಶಿವಾಜಿ


    ಛತ್ರಪತಿ ಶಿವಾಜಿ ಮಹಾರಾಜ್ ಅವರ ಮರಣದ ಸಮಯದಲ್ಲಿ, ಅವರ ಪ್ರಾಂತ್ಯಗಳಾದ್ಯಂತ 200ಕ್ಕೂ ಹೆಚ್ಚು ಕೋಟೆಗಳ ನಿಯಂತ್ರಣವನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ, ಕೆಲವು ಇತಿಹಾಸ ತಜ್ಞರು, ಅವರು 300 ಕ್ಕಿಂತ ಹೆಚ್ಚಿನ ಕೋಟೆಗಳನ್ನು ಹೊಂದಿದ್ದರು ಎಂದಿದ್ದಾರೆ.




    ಮರಾಠಾ ಕಾಲದಲ್ಲಿ ಕೋಟೆಗಳಿಗೆ ವಿಶೇಷ ಒತ್ತು


    ಅನೇಕ ವಿಧಗಳಲ್ಲಿ, ಮರಾಠರು ಕೋಟೆ-ಕಟ್ಟಡವನ್ನು ಅದರ ಉತ್ತುಂಗಕ್ಕೆ ಕೊಂಡೊಯ್ದರು, ದೀರ್ಘಾವಧಿಯ ಮುತ್ತಿಗೆಗಳು ಮತ್ತು ಯುದ್ಧಗಳ ಆಚೆಯೂ ಉಳಿದುಕೊಳ್ಳುವ ಸಾಮರ್ಥ್ಯವಿರುವ ಕೋಟೆಗಳನ್ನು ನಿರ್ಮಿಸುವುದು ಮಾತ್ರವಲ್ಲದೆ ಅವುಗಳ ಸ್ಥಾನ ಮತ್ತು ಸ್ಥಳಗಳಿಗೆ ವಿಶೇಷ ಒತ್ತು ನೀಡುತ್ತಿದ್ದರು.


    ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಮತ್ತು ಮರಾಠರ ಮೊದಲ ಸಮಗ್ರ ಇತಿಹಾಸಕಾರ ಗ್ರಾಂಟ್ ಡಫ್ "ಸೇನಾ ರಕ್ಷಣಾ ದೃಷ್ಟಿಕೋನದಿಂದ ಡೆಕ್ಕನ್‌ಗಿಂತ ಪ್ರಬಲವಾದ ದೇಶ ಬಹುಶಃ ಜಗತ್ತಿನಲ್ಲಿ ಇಲ್ಲ." ಎಂದು ಹೊಗಳಿ ಬರೆದಿದ್ದಾರೆ.


    ಮರಾಠರು ಈ ಕೋಟೆಗಳನ್ನು ಸುಖಾಸುಮ್ಮನೇ ನಿರ್ಮಿಸಿಲ್ಲ. ಇವು ಸಾಮ್ರಾಜ್ಯಕ್ಕೆ ಸೇನಾ ಶಕ್ತಿ ಕೂಡ ಆಗಿದ್ದವು. ಹಾಗಾದರೆ ಮರಾಠಾ ಸಾಮ್ರಾಜ್ಯದ ಬಲವರ್ಧನೆಯಲ್ಲಿ ಕೋಟೆಗಳು ಏಕೆ ಬಹಳ ಮುಖ್ಯವಾಗಿವೆ ಮತ್ತು ಈ ಕೋಟೆಗಳ ವಿಶಿಷ್ಟತೆ ಏನು? ಎಂಬುದನ್ನು ಇಲ್ಲಿ ನೋಡೋಣ.


    ಬೆಟ್ಟದ ಕೋಟೆಗಳು


    ಮರಾಠ ಸಾಮ್ರಾಜ್ಯದ ಭೂಪ್ರದೇಶವು ವಿಭಿನ್ನವಾಗಿತ್ತು. ಒಂದು ಬದಿಯಲ್ಲಿ ಅರಬ್ಬೀ ಸಮುದ್ರ, ಮಧ್ಯದಲ್ಲಿ ಕೊಂಕಣ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟಗಳು ಬಯಲು ಸೀಮೆಯ ಮೇಲಿದ್ದು, 17ನೇ ಶತಮಾನದಲ್ಲಿ ಹೆಚ್ಚಿನ ಪ್ರದೇಶವು ದಟ್ಟ ಕಾಡುಗಳಿಂದ ತುಂಬಿತ್ತು.


    ಸಹಜವಾಗಿ ಇಂತಹ ಭೂ ಪ್ರದೇಶದಲ್ಲಿ ಯುದ್ಧ ಕೂಡ ಒಂದು ಸವಾಲಿನ ಕೆಲಸ. ದೊಡ್ಡ ಸೈನ್ಯಗಳನ್ನು ದಟ್ಟವಾದ ಕಾಡಲ್ಲಿ ನಿಭಾಯಿಸುವುದು ಕಷ್ಟ. ಹೀಗಾಗಿ, ಶಿವಾಜಿಯು ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಕ್ರೋಢೀಕರಿಸಲು ಮತ್ತು ವಿಸ್ತರಿಸಲು ಪ್ರಾರಂಭಿಸಿದಾಗ, ಅವನ ಕಾರ್ಯತಂತ್ರಗಳು ಆ ಕಾಲದ ಸಾಮಾನ್ಯ ಮಿಲಿಟರಿ ಸಿದ್ಧಾಂತಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿ ವಿಕಸನಗೊಂಡಿತು. ಹೀಗೆ ವಿಕಸನಗೊಂಡ ಕಾರ್ಯತಂತ್ರಗಳಲ್ಲಿ ಈ ಬೆಟ್ಟದ ಕೋಟೆಗಳು ಪ್ರಮುಖವಾಗಿದೆ.


    ಇತಿಹಾಸಕಾರ ಗುಣಕರ್ ಮುಲೆ ಶಿವಾಜಿಯನ್ನು "ಕೋಟೆಗಳ ಸರದಾರ" ಎಂದು ಕರೆದಿದ್ದಾರೆ.


    ಶಿವನೇರಿಯ ಬೆಟ್ಟದ ಕೋಟೆಯಲ್ಲಿ ಜನಿಸಿದ ಶಿವಾಜಿ


    ಮರಾಠರ ದೊರೆ ಶಿವಾಜಿ ಮಹಾರಾಜ ಶಿವನೇರಿಯ ಬೆಟ್ಟದ ಕೋಟೆಯಲ್ಲಿ ಜನಿಸಿದರು. ಇದು ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇದೆ. ಮುಖ್ಯ ನಗರದಿಂದ ಸುಮಾರು 100 ಕಿಮೀ ಕಿ,ಮೀ ದೂರದಲ್ಲಿದ್ದು, ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.


    ಈ ಶಿವನೇರಿ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ಸ್ಥಳ ಎನ್ನಲಾಗುತ್ತದೆ. ಈ ಭದ್ರವಾದ ಕೋಟೆಯು ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರು ನಿರ್ಮಿಸಿದರು. ಶಿವನೇರಿ ಕೋಟೆಯನ್ನು ತ್ರಿಕೋನ ಆಕಾರದಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಸಣ್ಣದಾದ ಕೋಟೆಯಾದರೂ ತುಂಬಾ ಭದ್ರವಾಗಿದೆ.


    ಹೀಗೆ, ಪುಣೆಯ ಸುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಬೆಳೆದ ಶಿವಾಜಿ, ಸಾಮ್ರಾಜ್ಯವನ್ನು ನಿಯಂತ್ರಿಸುವಲ್ಲಿ ಬೆಟ್ಟದ ಕೋಟೆಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದರು. ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯ ಕೇವಲ 16 ನೇ ವಯಸ್ಸಿನಲ್ಲಿಯೇ ರಾಜ್‌ಗಢ್, ಸಿಂಹಗಡ ಮತ್ತು ಪುರಂದರ ಸೇರಿದಂತೆ ಅನೇಕ ಕೋಟೆಗಳನ್ನು ವಶಪಡಿಸಿಕೊಂಡಿದ್ದರು.


    ಶಿವಾಜಿಯ ಪ್ರಸಿದ್ಧ ಗೆರಿಲ್ಲಾ ತಂತ್ರಗಳು


    ಛತ್ರಪತಿ ಶಿವಾಜಿ ಭಾರತದಲ್ಲಿ ಮೊದಲ ಬಾರಿಗೆ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಅವರ ಯುದ್ಧ ನೀತಿಯಿಂದ ಪ್ರೇರಿತರಾದ ವಿಯೆಟ್ನಾಮೀಸ್ ಅಮೆರಿಕದೊಂದಿಗಿನ ಯುದ್ಧವನ್ನು ಗೆದ್ದರು ಎನ್ನಲಾಗುತ್ತದೆ.


    ಆ ಕಾಲದಲ್ಲಿ ರಚಿತವಾದ 'ಶಿವಸೂತ್ರ'ದಲ್ಲಿ ಈ ಯುದ್ಧ ತಂತ್ರದ ಉಲ್ಲೇಖ ಕಂಡುಬರುತ್ತದೆ. ಗೆರಿಲ್ಲಾ ಯುದ್ಧವು ಒಂದು ರೀತಿಯ ಯುದ್ಧವಾಗಿದೆ. ಸಾಮಾನ್ಯವಾಗಿ ಗೆರಿಲ್ಲಾ ಯುದ್ಧದಲ್ಲಿ ಅರೆಸೈನಿಕ ಅಥವಾ ಅನಿಯಮಿತ ಪಡೆಗಳ ಘಟಕಗಳು ಶತ್ರು ಸೇನೆಯ ಹಿಂದಿನಿಂದ ದಾಳಿ ಮಾಡುತ್ತವೆ.


    ಶಿವಾಜಿಯ ಸಶಸ್ತ್ರ ಪಡೆಗಳು ಕೆಲವು ಪ್ರಮುಖ ಮಿತಿಗಳನ್ನು ಹೊಂದಿದ್ದವು. ಶತ್ರುಗಳು ಹೆಚ್ಚಿದ್ದರೂ ಶಿವಾಜಿಯ ಸೇನೆಯಲ್ಲಿ ಸೈನಿಕರು ಮತ್ತು ಅಶ್ವದಳ ಕಡಿಮೆ ಇತ್ತು. ಇವರು ಯುರೋಪಿಯನ್ನರಿಂದ ಮುಖ್ಯವಾಗಿ ಪೋರ್ಚುಗೀಸರಿಂದ ಮಸ್ಕೆಟ್‌ಗಳು ಮತ್ತು ಗನ್‌ಪೌಡರ್‌ಗಳಂತಹ ಸರಬರಾಜುಗಳನ್ನು ಪಡೆಯುವಲ್ಲಿ ಹೆಚ್ಚು ಅವಲಂಬಿತರಾಗಿದ್ದರು.


    ನಂತರದ ದಿನಗಳಲ್ಲಿ ಶಿವಾಜಿ ಗೆರಿಲ್ಲಾ ತಂತ್ರಗಳನ್ನು ಅಳವಡಿಸಿಕೊಂಡರು. ಈ ಯುದ್ಧ ತಂತ್ರದಿಂದಾಗಿ ಮೊಘಲ್ ಅಥವಾ ಆದಿಲ್ ಶಾಹಿ ಸೈನ್ಯವನ್ನು ಹಲವು ಬಾರಿ ಶಿವಾಜಿ ಬಗ್ಗು ಬಡಿದಿದ್ದಾರೆ.


    ಈ ಗೆರಿಲ್ಲಾ ಯೋಜನೆಗಳಿಗೆ ಬೆಟ್ಟದ ಕೋಟೆಗಳು ನಿರ್ಣಾಯಕವಾಗಿದ್ದವು. ಈ ಕೋಟೆಗಳನ್ನು ಅಪಾಯದ, ದಾಳಿ ಬಗ್ಗೆ ನಿಗಾ ಇಡಲು ಪರಿಪೂರ್ಣವಾದ ತಾಣಗಳಾಗಿ ನೋಡಲಾಗುತ್ತಿತ್ತು. ಶಿವಾಜಿ ಕಾಲದಲ್ಲಿ ದೊಡ್ಡ ಬೆಟ್ಟಗಳಿದ್ದರೆ ಅಲ್ಲಿ ಕೋಟೆಗಳನ್ನು ನಿರ್ಮಿಸಲಾಗುತ್ತಿತ್ತು.


    ಬೆಟ್ಟದ ಕೋಟೆಗಳ ಸಹಾಯದಿಂದ ಸಾಮ್ರಾಜ್ಯವನ್ನು ರಚಿಸುವುದು ಬೆಟ್ಟದ ಕೋಟೆಗಳು ಶಿವಾಜಿಯನ್ನು ಅಪಾಯಕಾರಿ ಮತ್ತು ಬಲಿಷ್ಠ ಚರ್ಕವರ್ತಿಯನ್ನಾಗಿಸಿತು. ಸಾಂಪ್ರದಾಯಿಕ ವಿಧಾನಗಳು ಸಾಧಿಸಿಲ್ಲದನ್ನು ಶಿವಾಜಿಯ ಕೋಟೆ ತಂತ್ರವು ಸಾಧ್ಯ ಮಾಡಿತ್ತು.


    ಇದನ್ನೂ ಓದಿ: Indian Army: ಕಾಲು ಮುರಿದುಕೊಂಡು ನರಳುತ್ತಿರುವ ಆನೆ ನೆರವಿಗೆ ಬಂದ ಸೇನೆ, ಮೋತಿಯನ್ನು ನಿಲ್ಲಿಸಲು ಹರಸಾಹಸ


    ಮರಾಠ ಮಿಲಿಟರಿ ವ್ಯವಸ್ಥೆಯಲ್ಲಿ ಈ ತಂತ್ರವು ಅವರ ಸಾಮ್ರಾಜ್ಯ ವಿಸ್ತಾರವಾಗುತ್ತಿದ್ದಂತೆ ಈ ಕೋಟೆಗಳು ಸ್ಥಳೀಯ ಭದ್ರಕೋಟೆಗಳು ಮತ್ತು ಸ್ಥಳೀಯ ಆಡಳಿತದ ಸ್ಥಾನಗಳಾಗಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡವು. ಹೀಗೆ ಶಿವಾಜಿ ಎತ್ತರದ ಮೇಲಿರುವ ಕೋಟೆಗಳಿಂದ, ಸುತ್ತಲಿನ ಎಲ್ಲಾ ಸಾಮ್ರಾಜ್ಯವನ್ನು ಆಳುತ್ತಿದ್ದರು.


    ಶತ್ರುಗಳ ಚಲನ ವಲನ ಹಾಗೂ ಆಕ್ರಮಣಗಳನ್ನು ತಡೆಯುವ ನಿಟ್ಟಿನಿಂದ ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳಿಂದ ವಿಶಾಲವಾಗಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ಈ ಕೋಟೆಗಳು ಶತ್ರುಗಳು ದಾಳಿಯನ್ನು ಸುಲಭವಾಗಿ ಗಮನಿಸಲು ಸಹಕಾರಿಯಾಗಿತ್ತು. ಶತ್ರುಗಳೂ ಕೂಡ ಎತ್ತರದಲ್ಲಿರುವ ಕೋಟೆಯನ್ನು ಪ್ರವೇಶಿಸಲು ಹಿಂದೆಮುಂದೆ ನೋಡುತ್ತಿದ್ದರು. ಇದು ಆ ರಾಜ್ಯಗಳಿಗೆ ಧನಾತ್ಮಕವಾದ ಪ್ರಯೋಜನಗಳನ್ನು ನೀಡುತ್ತಿತ್ತು.


    ಮರಾಠ ಚಕ್ರವರ್ತಿಯ ಸಾಧನೆ ಹೇಳುತ್ತವೆ ಕೋಟೆಗಳು


    ಒಟ್ಟಾರೆ ಕೊಂಕಣ ಕರಾವಳಿಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಹಲವಾರು ಪ್ರಬಲ ಕೋಟೆಗಳು ಮಹಾನ್ ಮರಾಠ ಚಕ್ರವರ್ತಿಯ ಕಥೆಗಳನ್ನು ಹೇಳುತ್ತವೆ.


    .




    ಹಲವಾರು ಕೋಟೆಗಳಲ್ಲಿನ ಕಾಲುದಾರಿಗಳು, ಬಂದೀಖಾನೆಗಳು ಮತ್ತು ಗೋಡೆಗಳು ಈಗಲೂ ಯುದ್ಧಕಾಲದ ಕಥೆಗಳು ಮತ್ತು ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿಯ ಶೌರ್ಯವನ್ನು ಪ್ರತಿಧ್ವನಿಸುತ್ತವೆ ಎನ್ನಬಹುದು. ರಾಯಗಢ ಕೋಟೆ, ಸಿಂಹಗಡ ಕೋಟೆ, ಶಿವನೇರಿ ಕೋಟೆ, ​ಪ್ರತಾಪಗಡ ಕೋಟೆ, ತೋರ್ನಾ ಕೋಟೆ, ಕರಿಗಡ ಕೋಟೆ ಹೀಗೆ ಈ ಎಲ್ಲಾ ಕೋಟೆಗಳು ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಇತಿಹಾಸ ಪ್ರಸಿದ್ಧ ಕೋಟೆಗಳಾಗಿವೆ.

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು