ಬೆಂಗಳೂರು: ಸಂಸದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗಷ್ಟೇ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದರೆ ಇವರ ವಿರುದ್ಧ ಬಿಜೆಪಿಯಿಂದ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಸ್ಪರ್ಧೆ ಮಾಡಿದ್ದರು. ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೆ ಕೆಲವೆ ಸಾವಿರ ಮತಗಳ ಅಂತರದಿಂದ ಮಂಗಳಾ ಸುರೇಶ್ ಅವರು ಗೆಲವು ಸಾಧಿಸಿದರು. ಇದೀಗ ಸೋಲಿನಿಂದ ಸತೀಶ್ ಜಾರಕಿಹೊಳಿ ಭಾರೀ ಅಸಮಾಧಾನಗೊಂಡಿದ್ದಾರೆ. ಇದರ ಪರಿಣಾಮ ಬೆಳಗಾವಿ ಸಾಹುಕಾರ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿಯ ಸಿಡಿ ಪ್ರಕರ ಬಯರಂಗಗೊಂಡ ಮೇಲೆ ಪಕ್ಷ ಬೇರೆ ಆದರೂ ಕುಟುಂಬದ ಮರ್ಯಾದೆ ಕಾರಣಕ್ಕೆ ತೆರೆಮರೆಯಲ್ಲಿ ರಮೇಶ್ ಪರ ಸತೀಶ್ ಜಾರಕಿಹೊಳಿ ಅನುಕಂಪ ಹೂಂದಿ ಅವರಿಗೆ ಬೆಂಬಲವಾಗಿದ್ದರು. ಇದು ಕುಟುಂಬದ ಮರ್ಯಾದೆ ಪ್ರಶ್ನೆ ಎಂದುಕೊಂಡಿದ್ದರು. ಸಿಡಿ ಪ್ರಕರಣದಲ್ಲಿ ರಮೇಶ್ ಪರವಾಗಿ ನಿಂತ ಕಾರಣಕ್ಕೆ ರಮೇಶ್ ಜಾರಕಿಹೊಳಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪರವಾಗಿ ಪರೋಕ್ಷವಾಗಿ ಸಹಾಯ ಮಾಡುತ್ತಾರೆ. ಇದರಿಂದ ಉಪ ಚುನಾವಣೆ ಗೆಲುವು ಸುಲಭವಾಗಲಿದೆ ಎಂದುಕೊಂಡಿದ್ದರು ಸತೀಶ್ ಜಾರಕಿಹೊಳಿ. ಆದರೆ, ಇಲ್ಲಿ ಆಗಿದ್ದೆ ಬೇರೆ.!
ರಮೇಶ್ ಜಾರಕಿಹೊಳಿ ಅಣ್ಣಾ ಸತೀಶ್ ಪರ ಪರೋಕ್ಷವಾಗಿ ಚುನಾವಣೆಯಲ್ಲಿ ನಿಲ್ಲುತ್ತಾರೆ. ಗೋಕಾಕ್ ನಲ್ಲಿ ಸತೀಶ್ ಗೆ ಲೀಡ್ ಸಿಗುತ್ತೆ ಎಂದು ನಂಬಲಾಗಿತ್ತು. ಆದರೆ ಆಗಿದ್ದೇ ಬೇರೆ. ಸತೀಶ್ ಜಾರಕಿಹೊಳಿ ಪರ ರಮೇಶ್ ನಿಲ್ಲಲಿಲ್ಲ. ಬದಲಾಗಿದೆ. ಬಿಜೆಪಿಗೆ ಮತ ಹಾಕುವಂತೆ ಕೆಲಸ ಮಾಡಿದರು. ಇದು ಸತೀಶ್ ಜಾರಕಿಹೊಳಿ ಕೆರಳಿಸುವಂತೆ ಮಾಡಿದೆ. ರಮೇಶ್ ಜಾರಕಿಹೊಳಿ ಸಹಕಾರ ಕೊಟ್ಟಿದ್ದರೆ ಖಂಡಿತವಾಗಿ ಗೆಲ್ಲುತ್ತಿದ್ದೆ. ಕನಿಷ್ಠ ಹತ್ತು ಸಾವಿರ ಲೀಡ್ ಕೊಡಿಸಿದರೆ ಗೆಲ್ಲುತ್ತಿದ್ದೆ. ಸಿಡಿ ಪ್ರಕರದಲ್ಲಿ ಸಹೋದರ ಎಂಬ ಕಾರಣಕ್ಕೆ ಜೊತೆಗೆ ನಿಂತೆ. ಆದರೆ ರಮೇಶ್ ಚುನಾವಣೆಯಲ್ಲಿ ಕೈ ಕೊಟ್ಟ ಎಂಬ ಕಾರಣಕ್ಕೆ ಸತೀಶ್ ಈಗ ಸಿಟ್ಟಾಗಿದ್ದಾರೆ.
ಇದನ್ನು ಓದಿ: Coronavirus: ಸೋಂಕು ಹೆಚ್ಚಿರುವ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಸಿಎಂ ಸಭೆ; ಹಳ್ಳಿಗಳಲ್ಲಿ ಟೆಸ್ಟ್ ಹೆಚ್ಚಿಸುವಂತೆ ಸೂಚನೆ
ರಮೇಶ್ ಜಾರಕಿಹೊಳಿ ವಿರುದ್ಧ ಸಿಟ್ಟಿಗೆದ್ದಿರುವ ಸತೀಶ್ ಖುದ್ದು ಡಿ ಕೆ ಶಿವಕುಮಾರ ಭೇಟಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನ ಒಳಗೆ ಹಾಕಿಸಲ್ವಾ ಅಂತಾ ಕೇಳಿದ್ದಾರೆ?
ರೇಪ್ ಕೇಸ್ ಏನಾಯ್ತುಅಂದಿದ್ದಾರೆ? ನೀವು ಇದನ್ನ ಪ್ರಶ್ನೆ ಮಾಡಿ ಎಂದಿದ್ದಾರಂತೆ. ಸತೀಶ್ ಮಾತು ಕೇಳಿ ಏನಿದು ಎಂದು ಡಿಕೆಶಿ ದಂಗಾಗಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಹೇಳಿ ಎಂದಿದ್ದಾರಂತೆ ಡಿಕೆ ಶಿವಕುಮಾರ್. ಆ ಬಳಿಕ ಸತೀಶ್ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ರಮೇಶ್ ಸಿಡಿ ಪ್ರಕರಣ ಸೀರಿಯಸ್ ಆಗಿ ತಗೋಬೇಕು. ಪತ್ರಿಕಾಗೋಷ್ಠಿ ಕರೆದು ಪ್ರಶ್ನೆ ಮಾಡಿ ಬಂಧಿಸುವಂತೆ ಒತ್ತಡ ಹಾಕವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ