Explainer: ಡೆಂಗ್ಯೂ ಸಮಯದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗೋದು ಏಕೆ ಗೊತ್ತಾ..? ಇಲ್ಲಿದೆ ಡೀಟೈಲ್ಸ್​ ..

Dengue: ಡೆಂಗ್ಯೂ ಸೊಳ್ಳೆಯಿಂದ ಹರಡುವ ಜ್ವರವಾಗಿದ್ದು ಅದು ಭಾರತದಾದ್ಯಂತ ಸಾಮಾನ್ಯವಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಬಿಡುಗಡೆ ಮಾಡಿದ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳಲ್ಲಿ ಇದನ್ನು "ಅತ್ಯಂತ ಪ್ರಮುಖವಾದ ಸೊಳ್ಳೆ ಹರಡುವ ವೈರಲ್ ರೋಗ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕಾಳಜಿ" ಎಂದು ವಿವರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ(Manmohan Singh) ಡೆಂಗ್ಯೂ (Dengue) ಬಂದಿರುವ ಬಗ್ಗೆ ವರದಿಗಳನ್ನು ಓದಿರುತ್ತೀರಿ ಅಥವಾ ನೋಡಿರುತ್ತೀರಿ. ಇದೇ ರೀತಿ, ದೇಶದ ಹಲವೆಡೆ ಮಾತ್ರವಲ್ಲದೆ ಜಗತ್ತಿನ ಹಲವೆಡೆ ಇತ್ತೀಚೆಗೆ ಡೆಂಗ್ಯೂ, ಮಲೇರಿಯಾಕ್ಕೊಳಗಾದ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಡೆಂಗ್ಯೂ ಬಗ್ಗೆ ಹಾಗೂ ಡೆಂಗ್ಯೂ ಬಂದಾಗ ರೋಗಿಗಳ ದೇಹದಲ್ಲಿ ಪ್ಲೇಟ್‌ಲೆಟ್‌ಗಳ (Platelets) ಸಂಖ್ಯೆ ಕಡಿಮೆಯಾಗೋದಕ್ಕೆ ಹಾಗೂ ಮುಂತಾದ ವಿವರಗಳ ಕುರಿತು ಕೆಲವು ಪ್ರಮುಖ ಅಂಶಗಳನ್ನು ಈ ಲೇಖನದಲ್ಲಿ ಉತ್ತರಿಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಡೆಂಗ್ಯೂ ಬಗ್ಗೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ನೋಡಿ..

ಫೋರ್ಟಿಸ್‌ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ನಿರ್ದೇಶಕರಾದ ಡಾ. ವಿಕಾಸ್ ಭೂತಾನಿ, ಡೆಂಗ್ಯೂನಲ್ಲಿ ಪ್ಲೇಟ್‌ಲೆಟ್‌ ಎಣಿಕೆ ಮತ್ತು ಪ್ಲೇಟ್‌ಲೆಟ್‌ಗಳನ್ನು ಯಾರು ದಾನ ಮಾಡಬಹುದು ಎಂಬುದರ ಕುರಿತು ಕೆಲವು ಪ್ರಮುಖ ಅಂಶಗಳನ್ನು ಉತ್ತರಿಸಿದ್ದಾರೆ.

ಡೆಂಗ್ಯೂನಲ್ಲಿ ಪ್ಲೇಟ್‌ಲೆಟ್‌ ಎಣಿಕೆಯಲ್ಲಿ ಈ ಕೆಳಗಿನ ಕಾರಣಗಳಿಂದಾಗಿ ಇಳಿಕೆಯುಂಟಾಗುತ್ತದೆ.

ಡೆಂಗ್ಯೂ ತಗುಲಿದ ವೇಳೆ ನಮ್ಮ ದೇಹದ ಪ್ಲೇಟ್‌ಲೆಟ್‌ ಉತ್ಪಾದಿಸುವ ಪ್ರದೇಶವಾದ ಮೂಳೆ ಮಜ್ಜೆಯನ್ನು ನಿಗ್ರಹಿಸುವುದರಿಂದ ಪ್ಲೇಟ್‌ಲೆಟ್‌ ಎಣಿಕೆಯಲ್ಲಿ ಇಳಿಕೆಯುಂಟಾಗುತ್ತದೆ.
ಡೆಂಗ್ಯೂ ರೋಗ ತಗುಲಿದ ವೇಳೆ ನಮ್ಮ ದೇಹದ ರಕ್ತಕಣಗಳು ರೋಗದಿಂದ ಪ್ರಭಾವಿತರಾಗಿರುತ್ತವೆ. ಈ ಕಾರಣದಿಂದಲೂ ಪ್ಲೇಟ್‌ಲೆಟ್‌ ಎಣಿಕೆ ಕಡಿಮೆಯಾಗುತ್ತದೆ.
ಈ ಅವಧಿಯಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳಿಂದಲೂ (Anti bodies) ಡೆಂಗ್ಯೂ ತಗುಲಿದ ವೇಳೆ ಪ್ಲೇಟ್‌ಲೆಟ್‌ಗಳ ಬೃಹತ್‌ ನಾಶಕ್ಕೆ ಕಾರಣವಾಗುತ್ತವೆ.
ಹಾಗಾದ್ರೆ, ನಮ್ಮ ದೇಹದಲ್ಲಿ ಸಾಮಾನ್ಯವಾಗಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಎಷ್ಟಿರಬೇಕು..?

ಮಾನವನ ದೇಹದಲ್ಲಿ ಸಾಮಾನ್ಯವಾಗಿ 1.5 ಲಕ್ಷದಿಂದ 4 ಲಕ್ಷದವರೆಗೆ ಪ್ಲೇಟ್‌ಲೆಟ್‌ ಇರುತ್ತದೆ.

ಡೆಂಗೆ ಜ್ವರದ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ನ ಇಳಿಕೆ ಹೇಗೆ ಕಂಡುಬರುತ್ತದೆ..? ತೊಡಕುಗಳು ಯಾವುವು..?

ರೋಗಿಯು ಲಕ್ಷಣರಹಿತವಾಗಿರಬಹುದು ಅಥವಾ ರಕ್ತಸ್ರಾವದ ಅಭಿವ್ಯಕ್ತಿಗಳನ್ನು ಹೊಂದಿರಬಹುದು, ಅವುಗಳೆಂದರೆ:

# ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ

# ಮೂತ್ರ, ಮಲ ಅಥವಾ ವಾಂತಿಯಲ್ಲಿ ರಕ್ತ

# ಚರ್ಮದ ಕೆಳಗೆ ರಕ್ತಸ್ರಾವ, ಇದು ಮೂಗೇಟುಗಳಂತೆ ಕಾಣಿಸಬಹುದು

# ಕೆಲವು ಸಂದರ್ಭಗಳಲ್ಲಿ ಪ್ರಮುಖ ಆಂತರಿಕ ಅಂಗ ರಕ್ತಸ್ರಾವ

ಪ್ಲೇಟ್‌ಲೆಟ್‌ ವರ್ಗಾವಣೆ (Platelet Transfusion) ಯಾವಾಗ ಅಗತ್ಯ..?

ಪ್ಲೇಟ್‌ಲೆಟ್‌ಗಳು 10,000ಕ್ಕಿಂತ ಕೆಳಗೆ ಇಳಿಯುವ ಸಂದರ್ಭಗಳಲ್ಲಿ, ಪ್ಲೇಟ್‌ಲೆಟ್‌ಗಳ ಟ್ರ್ಯಾನ್ಸ್‌ಫ್ಯೂಶನ್‌ ಅಗತ್ಯವಿರುತ್ತದೆ. ಆದರೆ ರಕ್ತಸ್ರಾವದ ಸಂದರ್ಭದಲ್ಲಿ, 10,000ಕ್ಕಿಂತ ಹೆಚ್ಚಿನ ಕಟ್-ಆಫ್ ಮೌಲ್ಯ ಇದ್ದರೂ ಪ್ಲೇಟ್‌ಲೆಟ್ ವರ್ಗಾವಣೆ ಮಾಡಬಹುದು.

ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಲು ಹಲವು ಮನವಿಗಳಿವೆ. ಪ್ಲೇಟ್‌ಲೆಟ್‌ಗಳನ್ನು ಯಾರು ದಾನ ಮಾಡಬಹುದು..? ಮತ್ತು ಪ್ಲೇಟ್‌ಲೆಟ್‌ಗಳು ಕೇವಲ ಐದು ದಿನಗಳು ಮಾತ್ರ ಬಾಳಿಕೆ ಬರುವ ಕಾರಣ, ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು ಯಾವುವು..?

ಇದನ್ನೂ ಓದಿ: ಭಾರತದಲ್ಲಿ ತಯಾರಾದ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ರಫ್ತಿಗೆ ಕೇಂದ್ರದ ಒಪ್ಪಿಗೆ

ದಾನಿಗಳ ಅರ್ಹತಾ ಮಾನದಂಡಗಳು ಪ್ಲೇಟ್‌ಲೆಟ್‌ ಮತ್ತು ಸಂಪೂರ್ಣ ರಕ್ತದಾನಿಗಳಿಗೆ ಒಂದೇ ಆಗಿರುತ್ತವೆ. ಯಾವುದೇ ಆರೋಗ್ಯವಂತ ವಯಸ್ಕರು ಪ್ಲೇಟ್‌ಲೆಟ್‌ ದಾನಕ್ಕಾಗಿ ರಕ್ತ ಬ್ಯಾಂಕಿನ ಸ್ಕ್ರೀನಿಂಗ್ ಪ್ರಕ್ರಿಯೆಯಲ್ಲಿ ಯಶಸ್ವಿಯಾದರೆ, ಅವರು ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಬಹುದು. ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಲು ಒಂದರಿಂದ ಎರಡು ಗಂಟೆಗಳ ಮೊದಲು ನಿಯಮಿತವಾಗಿ ಊಟ ಮಾಡಿ ಮತ್ತು ಸಾಕಷ್ಟು ದ್ರವಗಳನ್ನು ಕುಡಿಯಿರಿ. ಪ್ಲೇಟ್‌ಲೆಟ್‌ ದಾನಕ್ಕೆ ಕನಿಷ್ಠ 72 ಗಂಟೆಗಳ ಮೊದಲು ಆಸ್ಪಿರಿನ್ ಅಥವಾ ಆಸ್ಪಿರಿನ್ ಹೊಂದಿರುವ ಉತ್ಪನ್ನಗಳನ್ನು ತೆಗೆದುಕೊಳ್ಳಬೇಡಿ.

ಪ್ರಸ್ತುತ ಡೆಂಗ್ಯೂ ಪ್ರಕರಣಗಳ ಕುರಿತು ಏನಾದರೂ ಪ್ರತಿಫಲನವಿದೆಯೇ..?

ಈ ಋತುವಿನಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಈಡಿಸ್ ಕುಲದೊಳಗೆ ಹಲವಾರು ಜಾತಿಯ ಸೊಳ್ಳೆಗಳಿಂದ ಡೆಂಗ್ಯೂ ಹರಡುತ್ತದೆ. ಇದರ ರೋಗಲಕ್ಷಣಗಳು ಜ್ವರ, ತಲೆನೋವು, ಸ್ನಾಯು ಮತ್ತು ಕೀಲು ನೋವು, ಹಾಗೂ ದಡಾರವನ್ನು ಹೋಲುವ ವಿಶಿಷ್ಟವಾದ ಚರ್ಮದ ದದ್ದುಗಳನ್ನು ಒಳಗೊಂಡಿರುತ್ತದೆ.

ಇನ್ನು, ನಾಲ್ಕು ವಿಧದ ಡೆಂಗ್ಯೂ ತಳಿಗಳಿವೆ, ಮತ್ತು ಟೈಪ್ II ಹಾಗೂ IV ಅನ್ನು ಹೆಚ್ಚು ತೀವ್ರವಾಗಿ ಪರಿಗಣಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಆಸ್ಪತ್ರೆಗೆ ಅಡ್ಮಿಟ್‌ ಮಾಡುವ ಅಗತ್ಯವಿರುತ್ತದೆ.

ತಜ್ಞರ ಪ್ರಕಾರ, ಈಡಿಸ್ ಸೊಳ್ಳೆ ಶುದ್ಧವಾದ ನಿಂತ ನೀರಿನಲ್ಲಿ ಹುಟ್ಟುತ್ತದೆ. ಈ ಮಧ್ಯೆ, ಮಳೆಗಾಲದಲ್ಲಿ ಮಲೇರಿಯಾ, ಚಿಕೂನ್ ಗುನ್ಯಾ ಮತ್ತು ವೈರಲ್ ಜ್ವರದ ಪ್ರಕರಣಗಳು ಸಹ ವ್ಯಾಪಕವಾಗಿ ಹರಡುತ್ತವೆ ಎಂದು ಫೋರ್ಟಿಸ್‌ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ನಿರ್ದೇಶಕರಾದ ಡಾ. ವಿಕಾಸ್ ಭೂತಾನಿ ವಿವರಿಸಿದ್ದಾರೆ.

ದೇಶದಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಹಾಗೂ ಸಾವುಗಳಿಗೆ ಕಾರಣವೇನು..?

ಹಲವಾರು ರಾಜ್ಯಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡೆಂಗ್ಯೂ ಪ್ರಕರಣಗಳು ಏಕಾಏಕಿ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು,, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣದಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹಾಗೂ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ರಾಜ್ಯಗಳಲ್ಲಿ ಒಂದಾಗಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುವ ಪ್ರಯತ್ನಗಳ ನಡುವೆ, ಡೆಂಗ್ಯೂ ಪ್ರಕರಣಗಳ ಹೆಚ್ಚಳಕ್ಕೆ ಪ್ರತಿಕ್ರಿಯಿಸಲು ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿDENV2 ಅಥವಾ D2ಎಂಬ ಡೆಂಗ್ಯೂ ಪ್ರಭೇದದಿಂದಾಗಿ ಹೆಚ್ಚಿನ ಪ್ರಕರಣಗಳು ಹಾಗೂ ಸಾವುಗಳುಂಟಾಗಿದೆ ಎಂದು ಸೂಚಿಸಿದ್ದರು.

ಹಾಗಾದ್ರೆ D2 ಡೆಂಗ್ಯೂ ಅಂದರೇನು..?

ಡೆಂಗ್ಯೂ ಸೊಳ್ಳೆಯಿಂದ ಹರಡುವ ಜ್ವರವಾಗಿದ್ದು ಅದು ಭಾರತದಾದ್ಯಂತ ಸಾಮಾನ್ಯವಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಬಿಡುಗಡೆ ಮಾಡಿದ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳಲ್ಲಿ ಇದನ್ನು "ಅತ್ಯಂತ ಪ್ರಮುಖವಾದ ಸೊಳ್ಳೆ ಹರಡುವ ವೈರಲ್ ರೋಗ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕಾಳಜಿ" ಎಂದು ವಿವರಿಸಲಾಗಿದೆ.

ಇದನ್ನೂ ಓದಿ: ನಗರ ಹಾಗೂ ಗ್ರಾಮೀಣ ಭಾರತದ ನಡುವಿನ ಅಂತರಕ್ಕೆ ಕಾರಣ ಇದು

ಈ ರೋಗವು ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನಗಳಲ್ಲಿ ಕಂಡುಬರುತ್ತದೆ ಮತ್ತು ಇದು ಮುಖ್ಯವಾಗಿ ನಗರ ಮತ್ತು ಸೆಮಿ ಅರ್ಬನ್‌ ಪ್ರದೇಶಗಳಲ್ಲಿ ಹೆಚ್ಚಾಗಿ ಪತ್ತೆಯಾಗಿದೆ ಎಂದು ಕಂಡುಬಂದಿದೆ.

ಇದು DENV ಎಂದು ಹೆಸರಿಸಲಾದ ಡೆಂಗ್ಯೂ ವೈರಸ್ ಆಗಿದ್ದರೂ, ವಾಸ್ತವವಾಗಿ ನಾಲ್ಕು, ನಿಕಟ ಸಂಬಂಧಿತ ರೋಗ ಉಂಟುಮಾಡುವ ರೂಪಗಳಿವೆ. ಈ ನಾಲ್ಕು ಸಿರೊಟೈಪ್‌ಗಳು-DENV-1, DENV-2, DENV-3, DENV-4-ಅಂದರೆ ಡೆಂಗ್ಯೂ ಒಬ್ಬ ವ್ಯಕ್ತಿಗೆ ನಾಲ್ಕು ಬಾರಿ ತಗುಲಬಹುದು ಎಂದು ಹೇಳಲಾಗುತ್ತದೆ.
Published by:Sandhya M
First published: