Explained: ರೋಗಿಗಳು ವಿದೇಶದಿಂದ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೇ ಹೆಚ್ಚು ಏಕೆ ಬರುತ್ತಾರೆ ಗೊತ್ತಾ..?

ಶಸ್ತ್ರಚಿಕಿತ್ಸೆ, ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ವಿದೇಶಗಳಿಂದ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಏಷ್ಯಾದಲ್ಲೇ ಭಾರತಕ್ಕೆ ಹೆಚ್ಚು ರೋಗಿಗಳು ಭೇಟಿ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನುಷ್ಯರಲ್ಲಿ ಒಬ್ಬರಲ್ಲ ಒಬ್ಬರಿಗೆ ಸಾಮಾನ್ಯವಾಗಿ ಒಂದಲ್ಲಾ ಒಂದು ರೀತಿಯ ಕಾಯಿಲೆ (Health Problems) ಇರುತ್ತದೆ. ಅದರಲ್ಲೂ, ಕೆಲ ಭೀಕರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ (Disease) ಹಲವರು ಬಲಿಯಾಗುತ್ತಾರೆ. ಇನ್ನು, ಹಲವರು ಕಾಯಿಲೆಯಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಹಲವರು ದುಬಾರಿ ಚಿಕಿತ್ಸೆಯ (Costly Treatment) ಮೊರೆ ಹೋದರೆ, ಇನ್ನು ಹಲವರು ಕಡಿಮೆ ಬೆಲೆಯ ಚಿಕಿತ್ಸೆಗಾಗಿ ಹುಡುಕುತ್ತಿರುತ್ತಾರೆ. ಇದೇ ರೀತಿ, ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ವಿದೇಶದಿಂದ (Foreign) ಇತರೆ ದೇಶಗಳಿಗೆ ಹೋಗಿ ಆಪರೇಷನ್‌ ಮಾಡಿಸಿಕೊಳ್ಳುವವರೂ ಇರುತ್ತಾರೆ. ಉತ್ತಮ ಟ್ರೀಟ್ಮೆಂಟ್‌ಗಾಗಿ ನಮ್ಮ ದೇಶದಿಂದ ಅಮೆರಿಕ, ಯುಕೆ, ಯುರೋಪ್, ಸೀಮಗಾಪುರದಂತಹ ದೇಶಗಳಿಗೆ ಹೋಗುವುದನ್ನು ನೀವು ಕೇಳಿರುತ್ತೀರಲ್ಲ. ಆದರೀಗ, ಹಲವು ದೇಶಗಳಿಂದ ನಮ್ಮ ದೇಶಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಹಲವರು ಧಾವಿಸುತ್ತಿದ್ದಾರೆ.

  ಇದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ..

  ಜುವಾನ್ ಫ್ರಾನ್ಸಿಸ್ಕೋ ​​​​ಪಲಾಡಿನ್ಸ್ ಎಂಬುವರು ತಮಗೆ ಎರಡೆರಡು ವಸ್ತುಗಳು ಕಾಣಿಸಲು ಪ್ರಾರಂಭಿಸಿದಾಗ ತನಗೇನೋ ಸಮಸ್ಯೆ ಆಗಿದೆ ಎಂಬುದನ್ನು ಅರಿತುಕೊಂಡರು. ಏಕೆಂದರೆ, 10 ವರ್ಷಗಳ ಹಿಂದೆ ಅವರಿಗೆ ಅದೇ ರೀತಿಯ ಸಮಸ್ಯೆ ಕಾಣಿಸಿಕೊಂಡಾಗ ಮೆದುಳಿನ ಗೆಡ್ಡೆಯಿಂದ ಉಂಟಾಗುತ್ತಿದೆ ಎಂದು ವೈದ್ಯರು ಹೇಳಿದ್ದರು.

  ಚಿಲಿಯ ಸ್ಯಾಂಟಿಯಾಗೊದ 56 ವರ್ಷದ ಕೈಗಾರಿಕಾ ಎಂಜಿನಿಯರ್ ಆದ ಇವರು, ಆ ಗೆಡ್ಡೆಯನ್ನು ನಾಶಮಾಡಲು ವಿಕಿರಣ ಚಿಕಿತ್ಸೆಯ ಮೊರೆ ಹೋಗಿದ್ದರು. ಆ ಲಕ್ಷಣಗಳೂ ಹೋಗಿತ್ತು.ಆದರೆ, 2019ರಲ್ಲಿ ಅವರಿಗೆ ಮತ್ತೆ ಡಬಲ್‌ ದೃಷ್ಟಿಯ ಸಮಸ್ಯೆ ಕಾಣಿಸಿಕೊಂಡಾಗ, ಅವರು ವಿಕಿರಣ ಚಿಕಿತ್ಸೆಗೆ ಪರ್ಯಾಯಗಳನ್ನು ಹುಡುಕಲು ಪ್ರಾರಂಭಿಸಿದರು. ಅದಕ್ಕೆ, ಇತ್ತೀಚಿನ ವರ್ಷಗಳಲ್ಲಿ ನೀಡುತ್ತಿರುವ ಪ್ರೋಟಾನ್ ಬೀಮ್ ಥೆರಪಿ ಎಂಬ ಹೊಸ ಕ್ಯಾನ್ಸರ್ ಚಿಕಿತ್ಸೆ ಉತ್ತಮ ಎಂದು ಅವರು ಹಲವು ಸಂಶೋಧನೆಗಳನ್ನು ನಡೆಸಿದ ನಂತರ ಅರಿತುಕೊಂಡರು. ಆದರೆ ಚಿಲಿಯಲ್ಲಿ ಅಥವಾ ಯಾವುದೇ ನೆರೆಯ ದೇಶಗಳಲ್ಲಿ ಪ್ರೋಟಾನ್ ಕಿರಣ ಚಿಕಿತ್ಸೆಯು ಲಭ್ಯವಿರಲಿಲ್ಲ.

  ಇದನ್ನೂ ಓದಿ: Explained: ಹೈಪರ್‌ಸಾನಿಕ್‌ ಕ್ಷಿಪಣಿಗಳು ಅಂದರೇನು? ರಷ್ಯಾ ಇದನ್ನು ಉಕ್ರೇನ್‌ನಲ್ಲಿ ಬಳಸುತ್ತಿರುವುದೇಕೆ?

  ನಂತರ ಅವರು ವಿವಿಧ ದೇಶಗಳ ಆಸ್ಪತ್ರೆಗಳನ್ನು ಹುಡುಕಲು ವ್ಯಾಪಕ ಸಂಶೋಧನೆ ನಡೆಸಿದ್ದರು. ಅನೇಕ ಆಯ್ಕೆಗಳು ತುಂಬಾ ದುಬಾರಿ ಅಥವಾ ಅವರಿಗೆ ಸೂಕ್ತವಲ್ಲ ಎನಿಸಿತು. ಅಂತಿಮವಾಗಿ ಅವರು ಭಾರತದ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಯ ಕೇಂದ್ರವನ್ನು ಕಂಡುಕೊಂಡರು.

  ಈ ಬಗ್ಗೆ ಹೇಳುವ ಜುವಾನ್ ಫ್ರಾನ್ಸಿಸ್ಕೋ ​​​​ಪಲಾಡಿನ್ಸ್, "ಇದು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.ನವೆಂಬರ್ 2021 ರಲ್ಲಿ ಅವರು ಭಾರತಕ್ಕೆ ಬರುವ ಮುನ್ನ ವಸತಿ ಮತ್ತು ಸಾರಿಗೆಯನ್ನು ಹುಡುಕಲು ಆಸ್ಪತ್ರೆಯೇ ಅವರಿಗೆ ಸಹಾಯ ಮಾಡಿತ್ತು ಎಂದೂ ತಿಳಿದುಬಂದಿದೆ.ಅವರು ಚಿಲಿಗೆ ವಾಪಸಾದ ಬಳಿಕ, ಈಗಲೂ ಚೆನ್ನೈನಲ್ಇ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ಪಲಾಡಿನ್ಸ್‌ ಹೇಳಿದರು. ಹೀಗೆ, ವೈದ್ಯಕೀಯ ಚಿಕಿತ್ಸೆಗಾಗಿ ಪ್ರತಿ ವರ್ಷ ಭಾರತಕ್ಕೆ ಭೇಟಿ ನೀಡುವ ಸಾವಿರಾರು ಜನರಲ್ಲಿ ​​​​ಪಲಾಡಿನ್ಸ್ ಒಬ್ಬರು.

  2019ರಲ್ಲಿ 7 ಲಕ್ಷ ವಿದೇಶಿ ರೋಗಿಗಳು ಭಾರತಕ್ಕೆ..!

  ಹೌದು, 2016 ಮತ್ತು 2019 ರ ನಡುವೆ, ಭಾರತಕ್ಕೆ ಪ್ರಯಾಣಿಸಿರುವ ಸಾಗರೋತ್ತರ ರೋಗಿಗಳ ಸಂಖ್ಯೆ 430,000 ರಿಂದ 700,000 ಕ್ಕೆ ಏರಿದೆ. ಈ ವಲಯವು 2019 ರ ವೇಳೆಗೆ 9 ಬಿಲಿಯನ್‌ ಡಾಲರ್‌ (£6.7bn) ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ, ಭಾರತೀಯ ರೂಪಾಯಿಗಳಲ್ಲಿ 6,86,48,62,50,000ಮೌಲ್ಯ.

  ಆದರೆ ಸಾಂಕ್ರಾಮಿಕ ಸಮಯದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳಿಂದಾಗಿ ಮೆಡಿಕಲ್‌ ಟೂರಿಸಂ ವಲಯವನ್ನು ಬಹುತೇಕ ಸ್ಥಗಿತಗೊಳಿಸಿದೆ. ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ 2021 ರಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಸುಮಾರು 183,000 ಪ್ರವಾಸಿಗರು ಆಗಮಿಸಿದ್ದಾರೆ, ಇದು 2019 ಕ್ಕಿಂತ 73% ಕಡಿಮೆಯಾಗಿದೆ.

  ವೈದ್ಯಕೀಯ ಪ್ರವಾಸೋದ್ಯಮಕ್ಕೆ ಜನಪ್ರಿಯವಾಗಿರುವ ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷ್ಯಾ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಿಗೂ ಬಹುತೇಕ ಈ ಸಂಖ್ಯೆಯಷ್ಟೇ ಜನರು ಚಿಕಿತ್ಸೆಗೆ ಹೋಗುತ್ತಾರೆ.

  ದಕ್ಷಿಣ ಏಷ್ಯಾದಲ್ಲಿ ಭಾರತವೇ ಬೆಸ್ಟ್‌..!

  "ದಕ್ಷಿಣ ಏಷ್ಯಾದಲ್ಲಿ ಭಾರತವು ಅತಿದೊಡ್ಡ ಚಿಕಿತ್ಸಕರನ್ನು ಹೊಂದಿದೆ" ಎಂದು ಇಂಟರ್‌ನ್ಯಾಷನಲ್‌ ಅಪೋಲೋ ಹಾಸ್ಪಿಟಲ್ ಎಂಟರ್‌ಪ್ರೈಸಸ್‌ನ ಗ್ರೂಪ್ ಆಂಕೊಲಾಜಿ ಅಧ್ಯಕ್ಷ ದಿನೇಶ್ ಮಾಧವನ್ ವಿವರಿಸುತ್ತಾರೆ. "ನಮ್ಮ ಆತಿಥ್ಯ ಮತ್ತು ಶ್ರೀಮಂತ ಸಂಸ್ಕೃತಿ ಇದಕ್ಕೆ ಕಾರಣ. ಇದರೊಂದಿಗೆ ಆಧುನಿಕ ಮತ್ತು ಸಾಂಪ್ರದಾಯಿಕ ಔಷಧ ಹಾಗೂ ಚಿಕಿತ್ಸೆಯೊಂದಿಗೆ ನಾವು ಅನನ್ಯವಾಗಿ ಸ್ಥಾನ ಪಡೆದಿದ್ದೇವೆ" ಎಂದು ಅವರು ಹೇಳುತ್ತಾರೆ.

  ಮತ್ತು ಕ್ಯಾನ್ಸರ್‌ನಂತಹ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ಮಾತ್ರವಲ್ಲ. ಲಿಪೋಸಕ್ಷನ್ (ದೇಹದ ಕೊಬ್ಬನ್ನು ತೆಗೆಯುವುದು) ಅಥವಾ ಬೋಳು ತಲೆ ಹೊಂದಿದವರಿಗೆ ಕೂದಲು ಕಸಿ ಮಾಡುವಂತಹ ಕಾಸ್ಮೆಟಿಕ್ ಸರ್ಜರಿ ವಿಧಾನಗಳಿಗಾಗಿ ಭಾರತಕ್ಕೆ ಆಗಮಿಸುವ ರೋಗಿಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

  "ನಾವು ಯುಎಸ್, ಆಫ್ರಿಕಾ ಮತ್ತು ಗಲ್ಫ್ ಪ್ರದೇಶಗಳಿಂದ ರೋಗಿಗಳನ್ನು ಪಡೆಯುತ್ತೇವೆ" ಎಂದು ಮುಂಬೈನ ಚರ್ಮರೋಗ ವೈದ್ಯ ಮತ್ತು ಚರ್ಮದ ಶಸ್ತ್ರಚಿಕಿತ್ಸಕ ಡಾ. ಸತೀಶ್ ಭಾಟಿಯಾ ಹೇಳುತ್ತಾರೆ. ಡರ್ಮಲ್ ಫಿಲ್ಲರ್‌ಗಳು ಅಥವಾ ಬೊಟೋಕ್ಸ್‌ನಂತಹ ತ್ವರಿತ, ಆಕ್ರಮಣಶೀಲವಲ್ಲದ ಕಾಸ್ಮೆಟಿಕ್ ವಿಧಾನಗಳಿಗಾಗಿ ವಿದೇಶದಿಂದ ಅನೇಕರು ಬರುವುದನ್ನು ನೋಡುತ್ತೇವೆ ಎಂದೂ ಡಾ. ಭಾಟಿಯಾ ಮಾಹಿತಿ ನೀಡಿದ್ದಾರೆ.

  US, ಯೂರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಸೌಂದರ್ಯವರ್ಧಕ ವಿಧಾನಗಳ ಬೆಲೆಯು ಭಾರತಕ್ಕಿಂತ ಕನಿಷ್ಠ 50% ಹೆಚ್ಚಾಗಿದೆ ಎಂದೂ ಅವರು ಹೇಳಿದ್ದಾರೆ.  ಪ್ರಯಾಣ ವಲಯದಂತೆ, ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಪ್ರವಾಸೋದ್ಯಮವು ಸ್ಥಗಿತಗೊಂಡಿತ್ತು. ಆದರೆ ವ್ಯಾಪಾರವು ಮತ್ತೆ ಹೆಚ್ಚುತ್ತಿದೆ ಮತ್ತು ಅದು ಬೆಳೆಯುತ್ತಲೇ ಇರುತ್ತದೆ ಎಂದು ವಿಶ್ವಾಸ ಹೊಂದಿರುವುದಾಗಿ ಡಾ. ಭಾಟಿಯಾ ಹೇಳುತ್ತಾರೆ.

  ಅಣಬೆಗಳಂತೆ ಹುಟ್ಟಿಕೊಂಡಿರುವ ಚಿಕಿತ್ಸಾಲಯಗಳಿಂದ ದುಷ್ಪರಿಣಾಮ..!

  ಇನ್ನು, ಸಾಗರೋತ್ತರ ರೋಗಿಗಳು ಹೀಗೆ ಭಾರತಕ್ಕೆ ಬರುವ ಸಂಖ್ಯೆಯ ಈ ಉತ್ಕರ್ಷವು ಅದರದ್ದೇ ಆದ ದುಷ್ಪರಿಣಾಮಗಳನ್ನು ಹೊಂದಿದೆ. "ಭಾರತದಾದ್ಯಂತ ಹೊಸ ಸೌಂದರ್ಯದ ಚಿಕಿತ್ಸಾಲಯಗಳು ಅಣಬೆಗಳಂತೆ ಹುಟ್ಟಿಕೊಂಡಿವೆ. ದುಃಖಕರವೆಂದರೆ, ಇದು ಸುಲಭವಾಗಿ ಹಣ ಸಂಪಾದಿಸಲು ಬಯಸುವ ಅನರ್ಹ ಮತ್ತು ತರಬೇತಿ ಪಡೆಯದ ವೈದ್ಯರನ್ನು ಆಕರ್ಷಿಸುತ್ತದೆ" ಎಂದು ಡಾ. ಭಾಟಿಯಾ ಹೇಳುತ್ತಾರೆ.

  ಇದನ್ನೂ ಓದಿ: Explained: ಅಲ್ಲೂ ಇಲ್ಲ, ಇಲ್ಲೂ ಆಗುತ್ತೋ ಗೊತ್ತಿಲ್ಲ! ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು?

  ಈ ಹಿನ್ನೆಲೆ, ನಿಮ್ಮ ಅಪಾಯಿಂಟ್ಮೆಂಟ್ ಅನ್ನು ಫಿಕ್ಸ್‌ ಮಾಡಿಕೊಳ್ಳುವ ಮೊದಲು ನಿಮ್ಮ ವೈದ್ಯರ ಅನುಭವ, ಅವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದಾರೆಂದು ಸಂಶೋಧಿಸಿ ಎಂದು ಅವರು ಸಲಹೆ ನೀಡುತ್ತಾರೆ. ಇನ್ನೊಂದೆಡೆ, ಚಿಕಿತ್ಸೆಯ ನಂತರದ ಆರೈಕೆಗಾಗಿ ಸಾಕಷ್ಟು ವ್ಯವಸ್ಥೆಗಳಿವೆ ಎಂದು ರೋಗಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಚೆನ್ನೈನ ಅಪೋಲೋ ಕ್ಯಾನ್ಸರ್ ಕೇಂದ್ರದ ವಿಕಿರಣ ಆಂಕೊಲಜಿಯ ಹಿರಿಯ ಸಲಹೆಗಾರ ಡಾ. ಶಂಕರ್ ವಾಂಗಿಪುರಂ ಹೇಳುತ್ತಾರೆ.

  "ಭಾರತದಲ್ಲಿ ಚಿಕಿತ್ಸೆಯ ನಂತರದ ಆರೈಕೆ - ಕೆಲವೊಮ್ಮೆ ಅರ್ಹ ವೈದ್ಯರು ಮತ್ತು ರೋಗನಿರ್ಣಯದ ಸಾಧನಗಳ ಕೊರತೆಯಿಂದಾಗಿ - ಪ್ರತಿಕ್ರಿಯೆಗಳು ಮತ್ತು ವಿಷತ್ವಗಳನ್ನು ಪತ್ತೆಹಚ್ಚುವಲ್ಲಿ ನಾವು ಕಷ್ಟವನ್ನು ಎದುರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

  ನಿಯಂತ್ರಣ ಅಗತ್ಯ..!

  ಮೆಡಿಕಲ್‌ ಪ್ರವಾಸೋದ್ಯಮ ವಲಯಕ್ಕೆ ಬಿಗಿಯಾದ ನಿಯಂತ್ರಣದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. "ಭಾರತೀಯ ವೈದ್ಯಕೀಯ ಪ್ರವಾಸೋದ್ಯಮವು ತನ್ನ ವಲಯವನ್ನು ನಿಯಂತ್ರಿಸಲು ಪರಿಣಾಮಕಾರಿ ನಿಯಮಾವಳಿಗಳನ್ನು ಹೊಂದಿಲ್ಲ. ಇದು ಅಸಂಘಟಿತ ಮತ್ತು ಮೇಲ್ವಿಚಾರಣೆಯ ಕೊರತೆಯನ್ನು ಬಿಟ್ಟುಬಿಡುತ್ತದೆ" ಎಂದು ಭಾರತದ ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಕುಮಾರ್ ವರ್ಮಾ ಹೇಳುತ್ತಾರೆ.

  ವೈದ್ಯರು ಕಾಲೇಜಿನಲ್ಲಿ ವರ್ಷಗಳ ಕಾಲ ಓದಿ ತರಬೇತಿಯನ್ನು ಪೂರ್ಣಗೊಳಿಸುತ್ತಾರೆ, ಅದನ್ನು ನಾವು ಪರಿಶೀಲಿಸಬಹುದು. ಆದರೆ, ಸಾಗರೋತ್ತರ ರೋಗಿಗಳೊಂದಿಗೆ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆಗಳನ್ನು ನಿರ್ವಹಿಸುವ ಮಧ್ಯವರ್ತಿಗಳ ಪರಿಶೀಲನೆ ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸುತ್ತಾರೆ.

  ಮಧ್ಯವರ್ತಿಗಳು, ಅಥವಾ ಫೆಸಿಲಿಟೇಟರ್‌ಗಳನ್ನು ವೈದ್ಯಕೀಯ ಪ್ರವಾಸಿಗರಿಗೆ ಟ್ರಾವೆಲ್ ಏಜೆಂಟ್‌ಗಳೆಂದು ಪರಿಗಣಿಸಬಹುದು. "[ಅವರು] ಪ್ರಮುಖ ಪಾತ್ರವನ್ನು ಹೊಂದಿದ್ದಾರೆ ಆದರೆ ಅವರು ಉತ್ತಮವಾಗಿ ಸಂಘಟಿತರಾಗಿಲ್ಲ. ಈ ಏಜೆಂಟ್‌ಗಳು ಒದಗಿಸುವ ಸೇವೆಗಳ ಗುಣಮಟ್ಟವನ್ನು ನಿಯಂತ್ರಿಸಲಾಗುವುದಿಲ್ಲ ಎಂದು ವರ್ಮಾ ಎಚ್ಚರಿಸಿದ್ದಾರೆ. ಹಾಗೂ, ಆಸ್ಪತ್ರೆಗಳಲ್ಲಿ ಬೆಲೆಗಳು ಸ್ಥಿರವಾಗಿಲ್ಲ, ಇದರಿಂದ ಕೆಲವು ಏಜೆಂಟರು ರೋಗಿಗಳಿಗೆ ಹೆಚ್ಚು ಶುಲ್ಕ ವಿಧಿಸಲು ಸುಲಭಗೊಳಿಸುತ್ತದೆ ಎಂದೂ ತಿಳಿದುಬಂದಿದೆ.

  ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮದಲ್ಲಿ ವೃತ್ತಿಪರತೆಯನ್ನು ತರಲು ಆಸ್ಪತ್ರೆಗಳು, ಸುಗಮಗೊಳಿಸುವವರು ಮತ್ತು ಇತರ ಬೆಂಬಲ ಸೇವೆಗಳು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಸರ್ಕಾರವು ಹೊಂದಿಸುವ ಬಲವಾದ ಅವಶ್ಯಕತೆಯಿದೆ ಎಂದು ವೈದ್ಯಕೀಯ ಪ್ರಯಾಣ ಏಜೆನ್ಸಿಯಾದ ಮೆಡ್‌ಸರ್ಜ್‌ನಲ್ಲಿ ನಿರ್ದೇಶಕಿಯಾಗಿರುವ ಗರಿಮಾ  ಹೇಳುತ್ತಾರೆ.

  ಆಸ್ಪತ್ರೆಗಳನ್ನು ಬದಲಿಸುವ ರೋಗಿಗಳು..!

  ಇನ್ನು, ಆಸ್ಪತ್ರೆಗಳಿಗೆ, ಮರುಕಳಿಸುತ್ತಿರುವ ಸಮಸ್ಯೆಯೆಂದರೆ, ವಿದೇಶಿ ರೋಗಿಗಳು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಭಾರತಕ್ಕೆ ಆಗಮಿಸಿದ ನಂತರ ಮತ್ತೊಂದು ಅಗ್ಗದ ಆಸ್ಪತ್ರೆಗೆ ಶಿಫ್ಟ್‌ ಆಗುತ್ತಾರೆ. ಇದರಿಂದ ಆ ಆಸ್ಪತ್ರೆ ಸಿಬ್ಬಂದಿಯ ಸಮಯ ಮತ್ತು ಸಂಪನ್ಮೂಲಗಳು ವ್ಯರ್ಥವಾಗುತ್ತದೆ.

  ಈ ಹಿನ್ನೆಲೆ ಸರ್ಕಾರವು ಚಿಕಿತ್ಸೆಗಳಿಗೆ ಪ್ರಮಾಣಿತ ದರಗಳನ್ನು ನಿಗದಿಪಡಿಸುವ ಮೂಲಕ ಮತ್ತು ರೋಗಿಗಳು ದೇಶಕ್ಕೆ ಆಗಮಿಸುವ ಮೊದಲು ಆಸ್ಪತ್ರೆಗೆ ಠೇವಣಿ ವರ್ಗಾಯಿಸುವ ಮೂಲಕ ಇದನ್ನು ಸುಲಭವಾಗಿ ಪರಿಹರಿಸಬಹುದು ಎಂದೂ ಗರಿಮಾ ಹೇಳುತ್ತಾರೆ.
  Published by:Kavya V
  First published: