Laal Singh Chaddha Controversy: ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ವಿವಾದ ಎದುರಾಗಿದ್ದೇಕೆ? ಅಷ್ಟಕ್ಕೂ ಆ ಸಿನಿಮಾದಲ್ಲಿ ಏನಿದೆ?

‘ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ’ ಅಭಿಯಾನ ಜೋರಾಗಿದೆ. ಆಮೀರ್ ಖಾನ್ ಹಾಗೂ ಕರೀನಾ ಕಪೂರ್ ಸಿನಿಮಾಗಳನ್ನು ನೋಡದಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಹಾಗಾದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಏನಿದೆ? ಆಮೀರ್ ಚಿತ್ರ ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುವುದೇಕೆ? ಕರೀನಾ ಕಪೂರ್ ಮೇಲೆ ನೆಟ್ಟಿಗರಿಗೆ ಕೋಪವೇಕೆ? ಈ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಲಾಲ್ ಸಿಂಗ್ ಚಡ್ಡಾ ಸಿನಿಮಾಕ್ಕೆ ವಿರೋಧ

ಲಾಲ್ ಸಿಂಗ್ ಚಡ್ಡಾ ಸಿನಿಮಾಕ್ಕೆ ವಿರೋಧ

  • Share this:
ಬಾಲಿವುಡ್‌ನ (Bollywood) ಖ್ಯಾತ ನಟ (Famous Actro), ಮಿಸ್ಟರ್ ಪರ್ಫೆಕ್ಟನಿಸ್ಟ್ (Mister Perfectionist) ಆಮೀರ್ ಖಾನ್ (Aamir Khan) ಅಭಿನಯದ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ (Laal Singh Chaddha) ನಾಳೆ ರೀಲಿಸ್ (Release)  ಆಗಲಿದೆ. ವಿಶ್ವದಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಈ ಚಿತ್ರ ಪ್ರಾರಂಭದಿಂದಲೂ ವಿವಾದಗಳನ್ನು (Controversy) ಮೈಮೇಲೆ ಹೊತ್ತುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಸಿನಿಮಾದಲ್ಲಿ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಬಾಯ್ಕಾಟ್ ಲಾಲ್‌ ಸಿಂಗ್ ಚಡ್ಡಾ ಅಭಿಯಾನ (Boycott Laal Sing Chaddha Campaign) ಜೋರಾಗಿದೆ. ಆಮೀರ್‌ ಖಾನ್ ಹಾಗೂ ಕರೀನಾ ಕಪೂರ್ (Kareena Kapoor) ಸಿನಿಮಾಗಳನ್ನು ನೋಡದಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಹಾಗಾದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಏನಿದೆ? ಆಮೀರ್ ಚಿತ್ರ ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುವುದೇಕೆ? ಕರೀನಾ ಕಪೂರ್ ಮೇಲೆ ನೆಟ್ಟಿಗರಿಗೆ ಕೋಪವೇಕೆ? ಈ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಲಾಲ್ ಸಿಂಗ್‌ಗಾಗಿ ಭರ್ಜರಿ ತಯಾರಿ ನಡೆಸಿದ್ದ ಆಮೀರ್ ಖಾನ್

ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ಅಮೀರ್‌ ನಟಿಸಿದ್ದು, ಚಿತ್ರಕ್ಕಾಗಿ ಈಗಾಗಲೇ ಕಠಿಣ ಡಯೆಟ್‌ ಹಾಗೂ ವ್ಯಾಯಾಮದ ಮೂಲಕ 20 ಕೆ.ಜಿ ತೂಕವನ್ನು ಕಳೆದುಕೊಂಡು ಸಣ್ಣಗಾಗಿದ್ದರು. ಈ ಚಿತ್ರವು ನಾಯಕನ ಜೀವನಪಯಣದ ಕುರಿತಾಗಿದ್ದು, ಹಾಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.ಅಯೋಧ್ಯೆ ವಿವಾದದ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದ್ಯಾ?

ಹೌದು, ಹೀಗೊಂದು ಮಾತುಗಳು ಕೇಳಿ ಬರುತ್ತಿವೆ. ಲಾಲ್‌ ಸಿಂಗ್‌ ಛಡ್ಡಾ' ಚಿತ್ರದಲ್ಲಿ ವಿವಾದಿತ ಬಾಬ್ರಿ ಮಸೀದಿ ಕುರಿತು ಕಥೆ ಇದ್ಯಂತೆ. ಇದೇ ವಿವಾದದ ಚಿತ್ರೀಕರಣ ನಡೆದಿದ್ದು, ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ಟರ್ಕಿ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದ ಆಮೀರ್ ಖಾನ್

ಲಾಲ್ ಸಿಂಗ್ ಚಡ್ಡಾ ಸಿನಿಮಾ ಚಿತ್ರೀಕರಣದ ವೇಳೆ ನಟ ಆಮೀರ್ ಖಾನ್ ಟರ್ಕಿ ದೇಶದ ಮಹಿಳೆಯೊಂದಿಗೆ ತೆಗೆಸಿಕೊಂಡಿದ್ದ ಫೋಟೋ ಭಾರೀ ಸುದ್ದಿ ಮಾಡಿತ್ತು. ಟರ್ಕಿ ದೇಶದ ಪ್ರಥಮ ಮಹಿಳೆಯಾದ ಆಕೆ ಹೆಸರು ಎಮಿನ್ ಎರ್ಡೋಗನ್. ಈ ಹಿಂದೆ ಎಮಿನ್ ಎರ್ಡೋಗನ್  ದೆಹಲಿ ಗಲಭೆಯ ಬಗ್ಗೆ ತೀಕ್ಷ್ಮವಾಗಿ ಕಾಮೆಂಟ್ ಮಾಡಿದ್ದರು. ಅದನ್ನು "ಮುಸ್ಲಿಮರ ಹತ್ಯಾಕಾಂಡ" ಎಂದು ಕರೆದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದ ಆಮೀರ್ ಖಾನ್

ಆಮೀರ್ ಖಾನ್ ಈ ಹಿಂದೆ ಭಾರತದಲ್ಲಿ ಅಸಹಿಷ್ಣತೆ ಇದೆ ಅಂತ ಆರೋಪ ಮಾಡಿದ್ದರು. ಅವರ ಮಾಜಿ ಪತ್ನಿ ಕಿರಣ್ ರಾವ್ ಭಾರತದಲ್ಲಿ ಭಯಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಜನರು ದೇಶವಿರೋಧಿ ಎಂದು ಕರೆದಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಪಿಕೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ 

2014 ರಲ್ಲಿ ಬಿಡುಗಡೆಗೆ ಮುಂಚಿತವಾಗಿ, ಅಮೀರ್ ಖಾನ್ ಅಭಿನಯದ ಪಿಕೆ ವಿವಾದದಲ್ಲಿ ಸಿಲುಕಿಕೊಂಡಿತು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಹಿಂದೂ ಸಂಘಟನೆಗಳು ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದವು. ಚಲನಚಿತ್ರವು ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡಿದೆ ಮತ್ತು ಅದರ ವಿಷಯಗಳು "ಹೆಚ್ಚು ಪ್ರಚೋದನಕಾರಿ" ಎಂದು ಆರೋಪಿಸಿ ಸಂಘಟನೆಗಳೊಂದಿಗೆ ದೇಶದ ಹಲವಾರು ಭಾಗಗಳಲ್ಲಿ ದೂರುಗಳನ್ನು ದಾಖಲಿಸಲಾಗಿತ್ತು.ಇದೀಗ ಲಾಲ್ ಸಿಂಗ್ ಚಡ್ಡಾ ವಿರುದ್ಧ ಆಕ್ರೋಶ

ಆಮೀರ್ ಖಾನ್ ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರ ಸಿನಿಮಾಗಳನ್ನು ನೋಡದೇ, ಬಹಿಷ್ಕರಿಸಬೇಕು ಎಂಬ ಕೂಗು ಎದ್ದಿದೆ.

ಇದನ್ನೂ ಓದಿ: Explained: ಕೇವಲ 10 ದಿನಗಳಲ್ಲಿ 3 ಹತ್ಯೆ, ಬಡ ಕುಟುಂಬಗಳ ಕಣ್ಣೀರು ಒರೆಸುವವರು ಯಾರು?

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಬಿಸಿನೆಸ್ ಕ್ಲಾಸ್ ವಿಮಾನದಲ್ಲಿ 1000 ಮೈಲಿ ಪ್ರಯಾಣಿಸಿ, ಟನ್ ಗಟ್ಟಲೆ ಇಂಧನವನ್ನು ಸುಟ್ಟು, ಕಲ್ಲುಗಳನ್ನು ಸಂಗ್ರಹಿಸಿ ಗೋಡೆಗೆ ಎಸೆಯುವ ಆಚರಣೆಗಾಗಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿದ ವ್ಯಕ್ತಿ ಶಿವಲಿಂಗಕ್ಕೆ 10 ರೂಪಾಯಿ ಹಾಲು ಅರ್ಪಿಸುವುದನ್ನು ವ್ಯರ್ಥ ಎಂದು ಭಾವಿಸುತ್ತಾನೆ ಅಂತ ನೆಟ್ಟಿಗರೊಬ್ಬರು ಆಮೀರ್‌ನನ್ನು ಟೀಕಿಸಿದ್ದಾರೆ.
Published by:Annappa Achari
First published: