Explained: ಭಾರತದಲ್ಲಿ ಬಿಸಿ ಅಲೆ ಉಂಟಾಗಲು ಕಾರಣವೇನು? ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?

ಈಗಾಗಲೇ ಜನ ಬಿಸಿಲ ಬೇಗೆಗೆ (sunburn) ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ 36-37 ಡಿಗ್ರಿ ಸೆಲ್ಶಿಯಸ್ ಇರುವಾಗಲೇ ತಾಪಮಾನ ತಡೆಯುವುದು ಕಷ್ಟವಾಗುತ್ತದೆ. ಅಂತಹದರಲ್ಲಿ 40 ಡಿಗ್ರಿ ಸೆಲ್ಶಿಯಸ್ಗಿಂತ ತಾಪಮಾನ ಹೆಚ್ಚಾದರೆ ಜನರ ಪರಿಸ್ಥಿತಿ ಏನಾಗಬಹುದು. ವಿಜ್ಞಾನಿಗಳು (scientist) ಅಂದಾಜಿಸಿರುವ ಪ್ರಕಾರ ಈ ವರ್ಷ ದೇಶದ ಹಲವು ರಾಜ್ಯಗಳು ಗರಿಷ್ಠ ಉಷ್ಣಾಂಶ ಮಟ್ಟ ತಲುಪಿದೆ ಎಂದಿದ್ದಾರೆ. ಹಾಗಾದರೆ ಬಿಸಿ ಅಲೆ (Heat Wave) ಎಂದರೆ ಏನು? ಇದಕ್ಕೆ ಕಾರಣವೇನು? ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳೇನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಭಾರತದಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ದೆಹಲಿ (Delhi), ಹರಿಯಾಣ (Haryana), ಮಧ್ಯಪ್ರದೇಶ (Madhya Pradesh) ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ ದಾಟಿ ಹೋಗುತ್ತಿದೆ. ಉಷ್ಣಾಂಶ 36-37 ಡಿಗ್ರಿ ಸೆಲ್ಶಿಯಸ್‌ ಇರುವಾಗಲೇ ತಾಪಮಾನ ತಡೆಯುವುದು ಕಷ್ಟವಾಗುತ್ತದೆ. ಅಂತಹದರಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ತಾಪಮಾನ ಹೆಚ್ಚಾದರೆ ಜನರ ಪರಿಸ್ಥಿತಿ ಏನಾಗಬಹುದು. ಈಗಾಗಲೇ ಜನ ಬಿಸಿಲ ಬೇಗೆಗೆ (Sunburn) ತತ್ತರಿಸಿ ಹೋಗಿದ್ದಾರೆ. ವಿಜ್ಞಾನಿಗಳು (Scientist) ಅಂದಾಜಿಸಿರುವ ಪ್ರಕಾರ ಈ ವರ್ಷ ದೇಶದ ಹಲವು ರಾಜ್ಯಗಳು ಗರಿಷ್ಠ ಉಷ್ಣಾಂಶ ಮಟ್ಟ ತಲುಪಿದೆ ಎಂದಿದ್ದಾರೆ. ಹಾಗಾದರೆ ಬಿಸಿ ಅಲೆ (Heat Wave) ಎಂದರೆ ಏನು? ಇದಕ್ಕೆ ಕಾರಣವೇನು? ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳೇನು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

  ಭಾರತದಲ್ಲಿ ಬಿಸಿ ಅಲೆಯ ಅಬ್ಬರ

  ಭಾರತದಲ್ಲಿ ಮುಂದಿನ 24ರಿಂದ 48 ಗಂಟೆಗಳ ಕಾಲ ತೀವ್ರವಾದ ಶಾಖದ ಅಲೆಯು ಮುಂದುವರಿಯುವ ನಿರೀಕ್ಷೆಯಿದೆ ಎಂದು ಹಿರಿಯ ಐಎಂಡಿ ವಿಜ್ಞಾನಿ ಆರ್‌.ಕೆ ಜೆನಮಣಿ ಮಾಹಿತಿ ನೀಡಿದ್ದಾರೆ, ಇಂದು ದೆಹಲಿಯ ತಾಪಮಾನ 0.5-1 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು ಕೆಲವು ಸ್ಥಳಗಳಲ್ಲಿ 46° C ವರೆಗೆ ತಲುಪುತ್ತದೆ ಎಂದಿದ್ದಾರೆ. ಹರಿಯಾಣದಲ್ಲಿ ತಾಪಮಾನವು 46 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

  ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

  ಭಾರತೀಯ ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳವರೆಗೆ ದೆಹಲಿಯಲ್ಲಿ ಹಳದಿ ಅಲರ್ಟ್ ಮತ್ತು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಶಾಖದ ಅಲೆಯು (ಹೀಟ್ ವೇವ್) ಮೇ 2ರವರೆಗೆ ಮುಂದುವರಿಯುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

  ಇದನ್ನೂ ಓದಿ: Explained: ಪ್ರತಿ ಬಾರಿಯೂ ಕೋವಿಡ್‌ಗೆ ಬೆಂಗಳೂರೇ ಟಾರ್ಗೆಟ್ ಆಗುವುದೇಕೆ? ಈ ಬಾರಿಯೂ ಇದೆಯಾ 'ಹೆಣ'ಗಾಟ?

  ಹಲವು ರಾಜ್ಯಗಳಲ್ಲಿ ಅತ್ಯಧಿಕ ಉಷ್ಣಾಂಶ

  ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ ಮತ್ತು ಬಿಹಾರ ಸೇರಿದಂತೆ ಉತ್ತರ ಹಾಗೂ ಪೂರ್ವ ಭಾರತದಾದ್ಯಂತ ತಾಪಮಾನವು ಕನಿಷ್ಠ 2-3 ಡಿಗ್ರಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಚಳಿಗಾಲದ ರಾಜಧಾನಿ ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 27 ರಂದು ತಾಪಮಾನವು 40 ಡಿಗ್ರಿ ಸೆಲ್ಶಿಯಸ್‌ ಅನ್ನು ಮುಟ್ಟಿದೆ. ಈ ಮೂಲಕ ಬೇಸಿಗೆಯಲ್ಲಿ ಅತ್ಯಂತ ಬಿಸಿಯಾದ ದಿನವೆಂದು ದಾಖಲೆ ಬರೆದಿದೆ.

  ಶಾಖದ ಅಲೆ (ಹೀಟ್ ವೇವ್) ಎಂದರೇನು?

  ಹೀಟ್ ವೇವ್ ಎನ್ನುವುದು ಅತಿಯಾದ ಬಿಸಿ ವಾತಾವರಣದ ಅವಧಿಯಾಗಿದ್ದು, ಅದು ಎರಡು ದಿನಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಹೀಟ್‌ವೇವ್‌ಗಳು ಜನರನ್ನು ಅಪಾಯಕಾರಿ ಶಾಖದ ಪರಿಸ್ಥಿತಿಗಳಿಗೆ ಒಡ್ಡುತ್ತದೆ, ಇದು ಅತಿಯಾದ ಶಾಖ, ನಿರ್ಜಲೀಕರಣ ಮತ್ತು ಶಾಖದ ಬಳಲಿಕೆಗೆ ಕಾರಣವಾಗಬಹುದು.

  ಭಾರತದಲ್ಲಿ ಶಾಖದ ಅಲೆಗೆ ಕಾರಣವೇನು?

  ಜಾಗತಿಕ ತಾಪಮಾನದಲ್ಲಿನ ಏರಿಕೆ ಮತ್ತು ಶಾಖದ ಅಲೆಗಳ ಆವರ್ತನ ಮತ್ತು ತೀವ್ರತೆ, ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹವಾಮಾನ ಬದಲಾವಣೆ ಹೆಚ್ಚಿನ ತಾಪಮಾನಕ್ಕೆ ಕಾರಣವಾಗಿದೆ. ಮಾನವ ನಿರ್ಮಿತ ಇಂಗಾಲ ಸೂಸುವಿಕೆ, ಕಡಿಮೆ ಮಳೆ ಸಹ ಪ್ರಮುಖ ಕಾರಣವಾಗಿದೆ.

  ಇಲ್ಲಿಯವರೆಗೆ ದಾಖಲಾದ ಅತ್ಯಂತ ಬಿಸಿಯಾದ ದಿನ ಯಾವುದು?

  ಜುಲೈ 10, 1913ರಂದು ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ 134.1 ಡಿಗ್ರಿ ಫ್ಯಾರನ್‌ಹೀಟ್ (56.7 ಡಿಗ್ರಿ ಸೆಲ್ಸಿಯಸ್) ತಾಪಮಾನವನ್ನು ದಾಖಲಿಸುವ ಮೂಲಕ ವಿಶ್ವದ ಅತ್ಯಂತ ಬಿಸಿಯಾದ ದಿನ ಎಂದು ಹೇಳಲಾಗಿದೆ.

  ಭಾರತದಲ್ಲಿ ಅತ್ಯಂತ ಬಿಸಿಯಾದ ದಿನ ಯಾವುದು?

  ಮೇ 19, 2016ರಂದು ರಾಜಸ್ಥಾನದ ಫಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ (123.8 ಎಫ್) ತಾಪಮಾನ ದಾಖಲಾಗಿತ್ತು.

   ಬಿಸಿ ಅಲೆಯಿಂದ ರಕ್ಷಿಸಿಕೊಳ್ಳುವುದು ಹೇಗೆ?

  ಬೇಸಿಗೆಯಲ್ಲಿ ಆದಷ್ಟೂ ಒಳಾಂಗಣದಲ್ಲಿ ಮತ್ತು ಹೆಚ್ಚು ಬಿಸಿಲು ಬೀಳದ ಸ್ಥಳಗಳಲ್ಲಿ ಉಳಿಯಿರಿ. ಹೊರಗಡೆ ಇರುವಾಗ ಛತ್ರಿ, ಟೋಪಿ ಅಥವಾ ಶಾಲ್ ಬಳಸಿ. ತೆಳುವಾದ, ಸಡಿಲವಾದ ಹತ್ತಿ, ತಿಳಿ ಬಣ್ಣದ ಉಡುಪುಗಳನ್ನು ಧರಿಸಿ.

  ನೀರು ಕುಡಿಯುವ ಬಗ್ಗೆ ಗಮನ ಇರಲಿ

  ಆಗಾಗ ನೀರು ಮತ್ತು ಉಪ್ಪುಸಹಿತ ಪಾನೀಯಗಳನ್ನು ಕುಡಿಯಿರಿ. ಲಸ್ಸಿ, ನಿಂಬೆ ನೀರು, ಹಣ್ಣಿನ ರಸಗಳು ಅಥವಾ ORS ಕುಡಿಯಿರಿ. ಕಲ್ಲಂಗಡಿ, ಸೌತೆಕಾಯಿ, ನಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳನ್ನು ಸೇವಿಸಿ. ಆಗಾಗ ತಂಪಾದ ಸ್ನಾನ ಮಾಡಿ ಮತ್ತು ಕೋಣೆಯ ಉಷ್ಣಾಂಶವನ್ನು ಕಡಿಮೆ ಮಾಡಿ, ಕಿಟಕಿಯ ಪರದೆಗಳನ್ನು ಹಾಕಿರಿ.

  ಗಾಳಿ ಬಗ್ಗೆ ಗಮನ ಕೊಡಿ

  ಮನೆ ಅಥವಾ ಎಲ್ಲಾದರೂ ಒಳಗಡೆ ಇದ್ದಾಗ ಫ್ಯಾನ್, ಕೂಲರ್, ಹವಾನಿಯಂತ್ರಣ, ಕ್ರಾಸ್ ವೆಂಟಿಲೇಟ್ ಕೊಠಡಿ, ನೀರು ಚಿಮುಕಿಸುವುದು ಒಳಾಂಗಣ ಸಸ್ಯಗಳನ್ನು ಇಟ್ಟುಕೊಳ್ಳುವುದು  ತ್ಯಾದಿಗಳನ್ನು ಮಾಡಿದರೆ ರೂಮಿನ ವಾತಾವರಣ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ.

  ಆರಾಮದಾಯಕ ಬಟ್ಟೆ ಧರಿಸಿ

  ವಿಶೇಷವಾಗಿ ವಯಸ್ಸಾದವರು, ಮಕ್ಕಳು, ಗರ್ಭಿಣಿಯರು, ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಹೊಂದಿರುವವರು ಮತ್ತು ಹೊರಾಂಗಣ ಕೆಲಸಗಾರರು ಈ ಬಿಸಿ ಗಾಳಿಯಿಂದ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಇವರು ಆರಾಮದಾಯಕ ಬಟ್ಟೆ ಧರಿಸಬೇಕು. ಗಿಡ್ಡನೆಯ ಬಟ್ಟೆ ಅಥವಾ ಗಾಳಿಯಾಡುವ ಬಟ್ಟೆ ಧರಿಸಿದರೆ ಉತ್ತಮ.

  ಈ ವೇಳೆ ಏನು ಮಾಡಬಾರದು?

  ಈ ಸಂದರ್ಭಗಳಲ್ಲಿ ಬಿಸಿಲಿನಲ್ಲಿ ಹೋಗುವುದು, ವಿಶೇಷವಾಗಿ ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಬಿಸಿಲಲ್ಲಿ ಓಡಾಡಬೇಡಿ.  ಮಧ್ಯಾಹ್ನ ಹೊರಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬೇಡಿ.

  ಇದನ್ನೂ ಓದಿ: Explained: ಸಿಡಿಲು-ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅತ್ಯುತ್ತಮ ಮಾಹಿತಿ

  ಉಷ್ಣವಿರುವ ಪಾನೀಯಗಳ ಸೇವನೆ ಬೇಡ

  ವಿಶೇಷವಾಗಿ ಬೇಸಿಗೆಯಲ್ಲಿ ಮದ್ಯ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಕಡಿಮೆ ಮಾಡುವುದು ಒಳಿತು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ಗಾಢ ಬಣ್ಣದ, ಸಿಂಥೆಟಿಕ್ ಮತ್ತು ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ಕಡಿಮೆ ಮಾಡಿ.
  Published by:Annappa Achari
  First published: