Explained: ಪ್ರತಿ ಬಾರಿಯೂ ಕೋವಿಡ್‌ಗೆ ಬೆಂಗಳೂರೇ ಟಾರ್ಗೆಟ್ ಆಗುವುದೇಕೆ? ಈ ಬಾರಿಯೂ ಇದೆಯಾ 'ಹೆಣ'ಗಾಟ?

ತಿ ಬಾರಿ ಕೋವಿಡ್ ಬಂದಾಗ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಇನ್ನಿಲ್ಲದಂತೆ ಪರದಾಡಿ ಬಿಡುತ್ತದೆ. ಈ ಬಾರಿಯೂ ಅದೇ ರೀತಿ ಆಗುತ್ತಾ ಎನ್ನುವ ಆತಂಕ ಶುರುವಾಗಿದೆ. ಹಾಗಿದ್ರೆ ಬೆಂಗಳೂರಿನ ಈ ಪರಿಸ್ಥಿತಿಗೆ ಕಾರಣವೇನು? ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರು ಎಡವುತ್ತಿರೋದೆಲ್ಲಿ? ಈ ಬಗ್ಗೆ ಇಲ್ಲಿದೆ ಮಾಹಿತಿ…

ಕೋವಿಡ್‌ ಎಚ್ಚರಿಕೆಯ ಸಂಗ್ರಹ ಫಲಕ

ಕೋವಿಡ್‌ ಎಚ್ಚರಿಕೆಯ ಸಂಗ್ರಹ ಫಲಕ

  • Share this:
ಕೋವಿಡ್ (Covid) ಮಹಾಮಾರಿ ಮತ್ತೆ ಅಬ್ಬರಿಸೋದಕ್ಕೆ ಶುರುವಾಗಿದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವೆಡೆ ಮತ್ತೆ ಲಾಕ್‌ ಡೌನ್ (Lock Down) ಘೋಷಿಸಲಾಗಿದೆ. ಭಾರತದಲ್ಲೂ ದೆಹಲಿ (Delhi), ಕೇರಳ (Kerala) ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೊರೋನಾ ಮತ್ತೆ ಉಲ್ಬಣಿಸುತ್ತಿದೆ. ಕರ್ನಾಟಕದಲ್ಲೂ (Karnataka) ಕೋವಿಡ್ 4ನೇ ಅಲೆಯ (4th Wave) ಆತಂಕ ಮತ್ತೆ ಶುರುವಾಗಿದೆ. ಕರ್ನಾಟಕದಲ್ಲಿ ಇದುವರೆಗೆ 39,47,363 ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 39,05,513 ಮಂದಿ ಗುಣಮುಖರಾಗಿದ್ದಾರೆ. ಇನ್ನು 40,057 ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾಗೆಯೇ ಸದ್ಯ 1751 ಮಂದಿ ಸೋಕಿಂಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪ್ರತಿ ಬಾರಿ ಕೋವಿಡ್ ಬಂದಾಗ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಇನ್ನಿಲ್ಲದಂತೆ ಪರದಾಡಿ ಬಿಡುತ್ತದೆ. ಈ ಬಾರಿಯೂ ಅದೇ ರೀತಿ ಆಗುತ್ತಾ ಎನ್ನುವ ಆತಂಕ ಶುರುವಾಗಿದೆ. ಹಾಗಿದ್ರೆ ಬೆಂಗಳೂರಿನ ಈ ಪರಿಸ್ಥಿತಿಗೆ ಕಾರಣವೇನು? ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರು ಎಡವುತ್ತಿರೋದೆಲ್ಲಿ? ಈ ಬಗ್ಗೆ ಇಲ್ಲಿದೆ ಮಾಹಿತಿ…

ಬೆಂಗಳೂರಿನಲ್ಲಿ ಏರುತ್ತಿದೆ ಕೋವಿಡ್ ಸೋಂಕು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ದಿಢೀರ್ ಸೋಂಕು ಏರುಗತಿಗೆ ಬಂದಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಗುರುವಾರ ಒಂದೇ ದಿನ ರಾಜ್ಯಾದ್ಯಂತ 100 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಬೆಂಗಳೂರು ಒಂದೇ ನಗರದಲ್ಲಿ 91 ಹೊಸ ಕೋವಿಡ್ ಪ್ರಕರಣಗಳಿವೆ. ಇದಕ್ಕೂ ಹಿಂದಿನ ವಾರದಲ್ಲಿ, ಅಂದರೆ ಏಪ್ರಿಲ್ 12ರಿಂದ 19ನೇ ತಾರೀಖಿನ ಅವಧಿಯಲ್ಲಿ ನಿತ್ಯ 41-55 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು.

ಇದೇ ರೇಖೆ ಮುಂದುವರಿಯಬಹುದು. ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊನ್ನೆ ಮಾಮೂಲಿಗಿಂತ 35 ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಜನಸಾಮಾನ್ಯರಿಗೆ ತುಸು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಸೋಂಕಿನ ಉತ್ಪತ್ತಿ ದರ ಶೇ. 1.04 ಇದೆ. ಅದರಲ್ಲಿ ಯಾವುದೇ ಏರಿಕೆ ಆಗಿಲ್ಲ. ಆದರೂ ಸೋಂಕಿನ ಸಂಖ್ಯೆ ದಿಢೀರ್ ಹೆಚ್ಚಿದೆ.

ಇದು ಆತಂತಕಾರಿ ವಿಚಾರ

ಬಿಬಿಎಂಪಿಯ ಸ್ಪೆಷಲ್ ಕಮಿಷನಲ್ ಡಾ. ಕೆ.ವಿ. ತ್ರಿಲೋಕ್ ಚಂದ್ರ ಅವರು, 'ನಿರಾಳವಾಗಿಯಂತೂ ಇರಲು ಸಾಧ್ಯವಿಲ್ಲ. ಯಾಕೆಂದರೆ ಇದೇ ರೀತಿ ಸೋಂಕಿನ ಗತಿ ಐದಾರು ದಿನಗಳ ಕಾಲ ಏರುತ್ತಲೆ ಇದ್ದರೆ ಆಗ ಆತಂಕ ಪಡಬೇಕಾಗಬಹುದು,' ಎಂದು ಹೇಳಿದ್ದಾರೆ. "ಗುರುವಾರ ರಾಜ್ಯದಲ್ಲಿ 100 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಸುಮಾರು 91 ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿದೆ. ಹಾಗೆಯೇ ರಾಜ್ಯದಲ್ಲಿ ಕೋವಿಡ್ ದೈನಂದಿನ ಪಾಸಿಟಿವಿಟಿ ದರವು ಶೇಕಡ 1ಕ್ಕಿಂತ ಅಧಿಕವಾಗಿದೆ," ಎಂದು ತಜ್ಞರು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: Mask Must: ಮಾಸ್ಕ್ ಹಾಕೊಳ್ಳಿ, ದೂರ ನಿಂತ್ಕೊಳ್ಳಿ! ಮೇ 2ರಿಂದ ಬೆಂಗಳೂರಲ್ಲಿ 'ದಂಡಂ' ದಶಗುಣಂ!

ಬೆಂಗಳೂರಿಗೆ ಎರಡನೇ ಸ್ಥಾನ!

ದೇಶದಲ್ಲಿ ಮಹಾಮಾರಿ ಕೊರೊನಾ(Coronavirus) ನಾಲ್ಕನೇ ಅಲೆ ಹಾವಳಿ ಶುರುವಾಗಿದೆ. ಐದು ಮಹಾನಗರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ.2 ಮಹಾನಗರಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಕೇಸ್ ದಾಖಲಾಗುತ್ತಿವೆ. ದೇಶದ ಐದು ಮಹಾನಗರಗಳ ಪೈಕಿ ದೆಹಲಿ ಮೊದಲ ಸ್ಥಾನ ಪಡೆದಿದ್ದು ಬೆಂಗಳೂರು 2ನೇ ಸ್ಥಾನ ಪಡೆದಿದೆ. ಹಾಗೂ ಕ್ರಮವಾಗಿ ಮುಂಬೈ, ಚೆನ್ನೈ, ಕೋಲ್ಕತ್ತಾ 3,4,5ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 4,508 ಸಕ್ರಿಯ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಲ್ಲಿ 1,648 ಸಕ್ರಿಯ ಕೊವಿಡ್ ಪ್ರಕರಣಗಳು ಸಿಕ್ಕಿದ್ದು ಮುಂಬೈ-549 ಸಕ್ರಿಯ ಕೇಸ್, ಚೆನ್ನೈ-255 ಸಕ್ರಿಯ ಕೇಸ್, ಕೋಲ್ಕತ್ತಾದಲ್ಲಿ 272 ಆಕ್ಟಿವ್ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

10 ಏರಿಯಾಗಳು ಡೇಂಜರ್ ಡೇಂಜರ್

ರಾಜ್ಯದಲ್ಲಿನ ಶೇಕಡಾ 90 ರಷ್ಟು ಕೇಸ್‌ಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಆದ್ರೆ ಈ ಕೇಸ್‌ಗಳ ಪೈಕಿ ಹೆಚ್ಚಿನ ಕೇಸ್‌ಗಳು ನಗರ 10 ಏರಿಯಾಗಳನ್ನೇ ಕಂಡುಬರ್ತಿವೆ. ಬೆಳ್ಳಂದೂರು, ಹೊಂಗಸಂದ್ರ, ಕೋರಮಂಗಲ, ಹೆಚ್‌ಎಸ್‌ಆರ್‌ಲೇಔಟ್, ವರ್ತೂರು, ಹೂಡಿ, ಕಾಡುಗೋಡಿ ಸೇರಿದಂತೆ ಒಟ್ಟು ಹತ್ತು ವಾರ್ಡ್‌ಗಳಲ್ಲೇ ಹೆಚ್ಚಾಗಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಬೆಂಗಳೂರಲ್ಲೇ ಅತೀ ಹೆಚ್ಚು ಕಾರ್ಮಿಕರ ವಾಸ

ಬೆಂಗಳೂರಲ್ಲಿ ಮೂಲ ಬೆಂಗಳೂರಿಗರಿಗಿಂತ ಬೇರೆ ಊರಿನವರದ್ದೇ ಕಾರುಬಾರು. ರಾಜ್ಯದ ಎಲ್ಲಾ ಜಿಲ್ಲೆಗಳ ಜನರಷ್ಟೇ ಅಲ್ಲದೇ, ಬೇರೆ ಬೇರೆ ರಾಜ್ಯಗಳ ಜನರೂ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರು ಅತೀ ಹೆಚ್ಚು ಇಲ್ಲಿಯೇ ಇದ್ದಾರೆ. ಇವರೆಲ್ಲ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇರುವುದು ಕೋವಿಡ್ ಸೋಂಕು ಮತ್ತಷ್ಟು ಏರಿಕೆಗೆ ಕಾರಣವಾಗುತ್ತಿದೆ.

ಅನ್‌ಲಾಕ್ ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲ

ಇನ್ನು, ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗಲು ಅನ್​​ಲಾಕ್  ಸರಿಯಾಗಿ ನಿಭಾಯಿಸದೇ ಇದ್ದದ್ದೇ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ರಾಜಧಾನಿಯಲ್ಲಿ ಅತೀಹೆಚ್ಚು ಕೇಸು ದಾಖಲಾಗುತ್ತಿದೆ. ವಿವಿಧ ರಾಜ್ಯ ಹಾಗೂ ವಿದೇಶಗಳಿಂದ ಬಂದವರಿಂದಲೂ ಕೊರೋನಾ ಜಾಸ್ತಿಯಾಗಿದೆ. ಈ  ಹಿಂದೆ ದೇಶಿ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಕೊರೊನಾ ಹೆಚ್ಚಳವಾಗಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಸಂಪರ್ಕದಿಂದ ಶೇ. 2.13ರಷ್ಟು, ಐಎಲ್​​ಐ ಹಾಗೂ ಸಾರಿ ತೊಂದರೆಯಿಂದ ಶೇ.7.49 ದಾಖಲಾಗಿದೆ.

ಮಾಸ್ಕ್ ಹಾಕದೇ ಇದ್ದರೆ 250 ರೂಪಾಯಿ ದಂಡ

ಪ್ರತಿ ಸಲ ಕೋವಿಡ್ ಸೋಂಕು ಉಲ್ಬಣವಾದಾಗ ಬೆಂಗಳೂರಲ್ಲಿ ಕಂಟ್ರೋಲ್ ತಪ್ಪುತ್ತದೆ. ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಿಬಿಎಂಪಿ, ಮಾಸ್ಕ್ ಹಾಕದವರ ಮೇಲೆ ಮತ್ತೆ ದಂಡ ವಿಧಿಸಲು ನಿರ್ಧಾರ ಮಾಡಿದೆ. ಸೋಮವಾರದಿಂದಲೇ ಅಂದರೆ ಮೇ 2ರಿಂದಲೇ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ಇದ್ದರೆ 25 ರೂಪಾಯಿ ದಂಡ ವಿಧಿಸಲಾಗುತ್ತದೆ.

ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ

ಬೆಂಗಳೂರಿನ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಹೊರ ರಾಜ್ಯದಿಂದ ಬರುವ ವಾಹನ ಸವಾರರ ತಪಾಸಣೆ  ಜೊತೆಗೆ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ  ಮಾಡಿಕೊಡಲಾಗುತ್ತದೆ. ಅದೇ ರೀತಿ ಕೈಗಾರಿಕಾ ಪ್ರದೇಶಗಳಲ್ಲಿ ರ್ಯಾಂಡಂ ಆಗಿ ಕರೋನಾ ಟೆಸ್ಟಿಂಗ್ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸೂಚನೆ ನೀಡಿದ್ದಾರೆ.

ಟೆಸ್ಟಿಂಗ್ ಟ್ರೇಸಿಂಗ್ ಮೊರೆ ಹೋದ ಸರ್ಕಾರ

ಕೊರೊನಾ ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಟೆಸ್ಟಿಂಗ್ ಟ್ರೇಸಿಂಗ್ ಟ್ರೀಟ್ಮೆಂಟ್ ಮೊರೆ ಹೋಗಿದೆ. ಬೆಂಗಳೂರು ನಗರದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಳ‌ ಮಾಡಲು ಸೂಚನೆ ನೀಡಲಾಗಿದೆ. ಒಂದನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಟೆಸ್ಟ್ ಗಳನ್ನು ಮಾಡಲಾಗುತ್ತಿತ್ತು, ಆದರೆ ಮೂರನೆ ಅಲೆಯ ಕೇಸ್ ಗಳು ಕಡಿಮೆಯಾದ ಹಿನ್ನೆಲೆ ಟೆಸ್ಟಿಂಗ್ ಸಂಖ್ಯೆ ಕಡಿಮೆಗೊಳಿಸಲಾಗಿತ್ತು. ಇದೀಗ ಆದ್ರೀಗ ಮತ್ತೆ ರ್ಯಾಡಂ ಟೆಸ್ಟಿಂಗ್ ಮೊರೆ ಹೋಗಲಾಗಿದೆ.

ಎಲ್ಲೆಲ್ಲಿ ನಡೆಯಲಿದೆ ಟೆಸ್ಟಿಂಗ್?

ಬೆಂಗಳೂರು ನಗರ ಜಿಲ್ಲೆಯ 36 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ನಡೆಸಲು ಸೂಚನೆ ನೀಡಲಾಗಿದೆ. ಮೂರು ತಾಲೂಕು ಆಸ್ಪತ್ರೆ, ಮೂರು ಪಿಹೆಚ್ ಸಿ ಗಳಲ್ಲಿಯೂ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ  ನೀಡಲಾಗಿದ್ದು, ಬೇರೆ ರಾಜ್ಯಗಳಿಂದ ಬರುವವರ ಮೇಲೆ ಜಿಲ್ಲಾಡಳಿತದ ಕಣ್ಣಿಟ್ಟಿದೆ. ಇನ್ನು ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿಯೂ ರ್ಯಾಡಂ ಟೆಸ್ಟಿಂಗ್  ನಡೆಯಲಿದೆ. ಜೊತೆಗೆ ಪೀಣ್ಯ ಇಂಡಸ್ಟ್ರಿ, ಅತ್ತಿಬೆಲೆ ಇಂಡಸ್ಟ್ರಿ ಕಾರ್ಮಿಕರಿಗೆ ರ್ಯಾಡಂ ಕೋರೊನಾ  ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ.

ನಿಯಮ ಪಾಲನೆ ಕಡ್ಡಾಯ

ಕೋವಿಡ್‌ ನಿಯಮಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್‌ ಅಳವಡಿಕೆ ಹಾಗೂ ಥರ್ಮಲ್‌ ಸ್ಟ್ರೀನಿಂಗ್‌ ಮಾಡುವುದನ್ನು ನಿಲ್ಲಿಸುವಂತೆ ಪಾಲಿಕೆಯಿಂದ ಸೂಚಿಸಿಲ್ಲ. ನಗರದ ಎಲ್ಲ ಶಾಪಿಂಗ್‌ ಮಾಲ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಮತ್ತು ಎಲ್ಲ ಮಾರುಕಟ್ಟೆಗಳಲ್ಲಿ ಮಾಸ್‌್ಕ ಧರಿಸುವುದು ಪುನಃ ಕಡ್ಡಾಯಗೊಳಿಸಲಾಗುತ್ತದೆ. ಈಗಾಗಲೇ ಮಾರ್ಷಲ್‌ಗಳು ಎಲ್ಲೆಡೆ ಭೇಟಿ ನೀಡಿ ಸರ್ಕಾರದ ಆದೇಶವನ್ನು ತೋರಿಸಿ ಸೂಚನೆ ನೀಡುತ್ತಿದ್ದಾರೆ.

ಇದನ್ನೂ ಓದಿ: Booster Dose: ಕೋವಿಡ್ 4ನೇ ಅಲೆ ಆತಂಕದ ಮಧ್ಯೆ ಮತ್ತೊಂದು ಶಾಕ್, ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಬೂಸ್ಟರ್ ಡೋಸ್!

ಬಿಬಿಎಂಪಿಯಿಂದ ಸಕಲ ಸಿದ್ಧತೆ

ಚಿಕಿತ್ಸೆಗೆ ನಾಲ್ಕು ಆಸ್ಪತ್ರೆಯಲ್ಲಿ 1165 ಸಾಮಾನ್ಯ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಐಸಿಯು, ವೆಂಟಿಲೇಟರ್ ಸೇರಿದಂತೆ ಒಟ್ಟು 2392 ಬೆಡ್ ರೆಡಿ ಮಾಡಲಾಗಿದೆ. ಇನ್ನು ಮೂರನೇ ಅಲೆ ವೇಳೆ ಜನ್ರಿಗೆ ವ್ಯಾಕ್ಸಿನ್ ದೊರಕಿದ್ರಿಂದ, ಸೋಂಕಿತನ ತೀವ್ರತೆ ಕಡಿಮೆಯಾಗಿತ್ತು. ಹೀಗಾಗಿ ನಾಲ್ಕನೇ ಅಲೆ ಎದುರಿಸಲು ಎಲ್ಲೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂತಾ ಪಾಲಿಕೆ ಹೇಳಿದೆ. ಜತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಜನರಲ್ಲಿ ಮನವೊಲಿಸುತ್ತಿದೆ.
Published by:Annappa Achari
First published: