Sunday: ಭಾನುವಾರವೇ ಸಾರ್ವತ್ರಿಕ ರಜೆ ಇರುವುದೇಕೆ? ಸಂಡೆ ಫನ್‌ ಡೇ ಏನಿದರ ವಿಶೇಷತೆ?

ಸಂಡೇ ಅಂದ್ರೆ ಫನ್ ಡೇ ಎನ್ನುವುದು ಎಲ್ಲರಿಗೂ ಗೊತ್ತು. ಎಲ್ಲಾ ಕೆಲಸಗಳಿಗೆ, ವಾರದ ಜಂಜಾಟಗಳಿಗೆ ಭಾನುವಾರವೇ ಮುಕ್ತಿ. ಅಂದಹಾಗೆ ಭಾನುವಾರವೇ ಎಲ್ಲರಿಗೂ ರಜೆ ಕೊಡ್ತಾರಲ್ಲ, ಅದ್ಯಾಕೆ ಅಂತ ಒಮ್ಮೆಯಾದ್ರೂ ಯೋಚನೆ ಮಾಡಿದ್ದೀರಾ? ಭಾನುವಾರಕ್ಕೆ ಯಾಕೆ ಅಷ್ಟೊಂದು ಮಹತ್ವ ಅಂತ ಗೊತ್ತಿದೆಯಾ? ಹಾಗಿದ್ರೆ ನಾವ್ ಹೇಳ್ತೀವಿ ಭಾನುವಾರದ ಮಹತ್ವ ಮತ್ತು ಭಾನುವಾರ ಯಾಕೆ ಸಾರ್ವತ್ರಿಕ ರಜೆ ಎಂಬ ಬಗ್ಗೆ ಮಾಹಿತಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಭಾನುವಾರ (Sunday).. ನೀವೆಲ್ಲ ಆಫೀಸ್ ಕೆಲಸಕ್ಕೆ (Office Work) ಗುಡ್ ಬೈ ಹೇಳಿ ಆರಾಮಾಗಿ ಟಿವಿ (TV) ನೋಡ್ತಾ, ಪೇಪರ್ (Paper) ಓದುತ್ತಾ, ಬೇಕಾದ ಅಡುಗೆ ಮಾಡುತ್ತಾ, ಶಾಪಿಂಗ್ (Shopping) ಮಾಡ್ತಾ, ಸಿನಿಮಾ (Cinema) ನೋಡ್ತಾ, ಫ್ರೆಂಡ್ಸ್ (Friends) ಜೊತೆ ಹರಟೆ ಹೊಡೆಯುತ್ತಾ ಸಂಡೇ ಟೈಮ್ ಪಾಸ್ (Time Pass) ಮಾಡುತ್ತಾ ಇದ್ದೀರಿ. ಅಂದಹಾಗೆ ಭಾನುವಾರವೇ ಎಲ್ಲರಿಗೂ ರಜೆ (Holiday) ಕೊಡ್ತಾರಲ್ಲ, ಅದ್ಯಾಕೆ ಅಂತ ಒಮ್ಮೆಯಾದ್ರೂ ಯೋಚನೆ ಮಾಡಿದ್ದೀರಾ? ಭಾನುವಾರಕ್ಕೆ ಯಾಕೆ ಅಷ್ಟೊಂದು ಮಹತ್ವ ಅಂತ ಗೊತ್ತಿದೆಯಾ? ಹಾಗಿದ್ರೆ ನಾವ್ ಹೇಳ್ತೀವಿ ಭಾನುವಾರದ ಮಹತ್ವ ಮತ್ತು ಭಾನುವಾರ ಯಾಕೆ ಸಾರ್ವತ್ರಿಕ ರಜೆ ಎಂಬ ಬಗ್ಗೆ ಮಾಹಿತಿ…

ಕ್ರಿಶ್ಚಿಯನ್ನರಿಂದ ಶುರುವಾಯ್ತು ಭಾನುವಾರದ ರಜೆ

ಕ್ರಿಶ್ಚಿಯನ್ ಧರ್ಮದ ಪ್ರಕಾರ ದೇವರು ಜಗತ್ತನ್ನು 6 ದಿನಗಳಲ್ಲಿ ಸೃಷ್ಟಿಸಿದನಂತೆ. ಸೃಷ್ಟಿ ಕ್ರಿಯೆಯಿಂದ ಸುಸ್ತಾದ ಆತ, ಭಾನುವಾರ ವಿಶ್ರಾಂತಿ ಪಡೆದನಂತೆ. ಹೀಗಾಗಿ ಕ್ರಿಶ್ಚಿಯನ್ನರಿಗೆ ಭಾನುವಾರ ವಿಶೇಷ ದಿನವಾಯ್ತು. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳಾದ ಬ್ರಿಟಿಷರು ಹಿಂದೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಆಳುತ್ತಿದ್ದರು. ಹೀಗಾಗಿ ಅವರು ಬಹುತೇಕ ಎಲ್ಲಾ ಕಡೆ ಭಾನುವಾರದ ರಜೆ ಜಾಲ್ತಿಗೆ ತಂದರು. ಇದಾದ ಬಳಿಕ ಬ್ರಿಟಿಷರು 1843 ರಿಂದ ಭಾರತದಲ್ಲಿ ರಜಾದಿನವಾಗಿ ಭಾನುವಾರವನ್ನು ಪ್ರಾರಂಭಿಸಿದರು.

ಮೊದಲು ಭಾನುವಾರ ರಜೆ ಘೋಷಿಸಿದ ರೋಮನ್ ರಾಜ

ಇತಿಹಾಸದ ಪ್ರಕಾರ 7 ಮಾರ್ಚ್ 321 ರಂದು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ ಮೊದಲ ರೋಮನ್ ಆಡಳಿತಗಾರ ಚಕ್ರವರ್ತಿ ಕಾನ್ಸ್ಟಂಟೈನ್‌ ಭಾನುವಾರವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದರು, ಇದರಿಂದಾಗಿ ಜನರು ಚರ್ಚ್‌ಗಳಿಗೆ ಹೋಗಬಹುದು ಎನ್ನುವುದು ಆತನ ಉದ್ದೇಶವಾಗಿತ್ತು.

ಶಾಲಾ ಮಕ್ಕಳಿಗಾಗಿ ಭಾನುವಾರದ ರಜೆ

ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ (ISO) 8601 ರ ಪ್ರಕಾರ, ಭಾನುವಾರ 7 ನೇ ಮತ್ತು ವಾರದ ಕೊನೆಯ ದಿನವಾಗಿದೆ. 1844 ರಲ್ಲಿ, ಬ್ರಿಟಿಷರ ಗವರ್ನರ್ ಜನರಲ್ ಅವರು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ 'ಭಾನುವಾರ ರಜೆ'ಯನ್ನು ಪರಿಚಯಿಸಿದರು. ಈ ದಿನದಂದು ವಿದ್ಯಾರ್ಥಿಗಳು ಕೆಲವು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ದಿನನಿತ್ಯದ ಶಿಕ್ಷಣದಿಂದ ವಿರಾಮ ತೆಗೆದುಕೊಳ್ಳಲು ಅವಕಾಶ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಇದನ್ನೂ ಓದಿ: Monkeypox ನಿಮ್ಮನ್ನು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕಾಡುತ್ತದೆಯಂತೆ!

ಭಾರತದ ಕಾರ್ಮಿಕರಿಗೆ ಇರಲಿಲ್ಲ ಭಾನುವಾರದ ರಜೆ

ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ, ಭಾರತದಲ್ಲಿನ ಗಿರಣಿ ಕಾರ್ಮಿಕರು ವಾರದ ಎಲ್ಲಾ ಏಳು ದಿನಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ವಿಶ್ರಾಂತಿ ಪಡೆಯಲು ಅವರಿಗೆ ಯಾವುದೇ ರಜೆ ಇರಲಿಲ್ಲ. ಆದರೆ ಬ್ರಿಟಿಷ್ ಅಧಿಕಾರಿಗಳು ಮತ್ತು ಕಾರ್ಮಿಕರು ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು, ಆದರೆ ಭಾರತೀಯ ಗಿರಣಿ ಕಾರ್ಮಿಕರಿಗೆ ಅಂತಹ ಸಂಪ್ರದಾಯ ಇರಲಿಲ್ಲ.

ನಾರಾಯಣ ಮೇಘಾಜಿ ಲೋಖಂಡೆ ಅಂಚೆ ಚೀಟಿ


ಭಾನುವಾರದ ರಜೆಗಾಗಿ ಕಾರ್ಮಿಕ ನಾಯಕನ ಒತ್ತಾಯ

ಆ ಸಮಯದಲ್ಲಿ, ನಾರಾಯಣ ಮೇಘಾಜಿ ಲೋಖಂಡೆ ಅವರು ಗಿರಣಿ ಕಾರ್ಮಿಕರ ನಾಯಕರಾಗಿದ್ದರು, ಅವರು ಬ್ರಿಟಿಷರ ಮುಂದೆ ವಾರದ ರಜೆಯ ಪ್ರಸ್ತಾಪವನ್ನು ಮಂಡಿಸಿದರು. ಆರು ದಿನಗಳ ಕಾಲ ಶ್ರಮವಹಿಸಿ ದುಡಿದ ಕಾರ್ಮಿಕರು ದೇಶ, ಸಮಾಜ ಸೇವೆ ಮಾಡುವ ದಿನ ಸಿಗಬೇಕು ಎಂದರು. ಭಾನುವಾರ ಹಿಂದೂ ದೇವತೆ 'ಖಂಡೋಬಾ' ದಿನ. ಹೀಗಾಗಿ ಭಾನುವಾರವನ್ನು ರಜೆ ಎಂದು ಘೋಷಿಸಬೇಕು ಅಂತ ಒತ್ತಡ ಹೇರಿದರು. ಆದರೆ ಬ್ರಿಟಿಷ್ ಅಧಿಕಾರಿಗಳು ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು.

ಲೋಖಂಡೆ ಒತ್ತಡಕ್ಕೆ ಕೊನೆಗೂ ಮಣಿದ ಬ್ರಿಟೀಷರು

ಸೋಲನ್ನು ಒಪ್ಪಿಕೊಳ್ಳದ ಲೋಖಂಡೆ ತಮ್ಮ ಹೋರಾಟವನ್ನು ಮುಂದುವರೆಸಿದರು. 7 ವರ್ಷಗಳ ಸುದೀರ್ಘ ಹೋರಾಟದ ನಂತರ ಬ್ರಿಟೀಷರು ಅವರ ಹೋರಾಟಕ್ಕೆ ಮಣಿದರು. ಜೂನ್ 10, 1890 ರಂದು, ಬ್ರಿಟಿಷ್ ಸರ್ಕಾರವು ಭಾನುವಾರವನ್ನು ರಜಾದಿನವೆಂದು ಘೋಷಿಸಿತು.

ಹಿಂದೂ ಧರ್ಮಗಳಲ್ಲಿ ಭಾನುವಾರಕ್ಕೆ ಮಹತ್ವ

ಹಿಂದೂ ಕ್ಯಾಲೆಂಡರ್ ಪ್ರಕಾರ, ವಾರವು ಭಾನುವಾರದಿಂದ ಪ್ರಾರಂಭವಾಗುತ್ತದೆ. ಇದು 'ಸೂರ್ಯ ದೇವತಾ' ದಿನವಾಗಿದೆ, ಹಿಂದೂ ಸಂಪ್ರದಾಯದ ಪ್ರಕಾರ, ಇದು ಸೂರ್ಯ ಮತ್ತು ಇತರ ಎಲ್ಲಾ ದೇವರು ಮತ್ತು ದೇವತೆಗಳನ್ನು ಪೂಜಿಸುವ ದಿನವಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಮತ್ತು ಆರಾಧಕರು ತಮ್ಮ ಸಂಪ್ರದಾಯವನ್ನು ಅನುಸರಿಸುವಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಭಾನುವಾರದ ದಿನವನ್ನು ರಜಾದಿನವೆಂದು ಪರಿಗಣಿಸಲಾಗಿದೆ.

ಕ್ರಿಶ್ಚಿಯನ್‌, ಮುಸ್ಲಿಮರಿಗೂ ಈ ದಿನ ಪವಿತ್ರ

ಇಸ್ಲಾಮಿನಂತೆ ಶುಕ್ರವಾರ ಎಂದರೆ ಜುಮ್ಮಾ. ಅದೇ ರೀತಿ, ರೋಮನ್ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಕ್ರಿಶ್ಚಿಯನ್ನರು ಭಾನುವಾರವನ್ನು ದೇವರ ದಿನವೆಂದು ಪರಿಗಣಿಸುತ್ತಾರೆ ಮತ್ತು ಯುರೋಪ್ ಸೇರಿದಂತೆ ಹೆಚ್ಚಿನ ಕ್ರಿಶ್ಚಿಯನ್ ದೇಶಗಳಲ್ಲಿ ಜನರು ಭಾನುವಾರ ಚರ್ಚ್‌ಗೆ ಹೋಗುತ್ತಾರೆ.

ಇದನ್ನೂ ಓದಿ: Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

ಕೆಲ ದೇಶಗಳಲ್ಲಿ ಭಾನುವಾರ ಕೆಲಸ, ಬೇರೆ ವಾರ ರಜೆ!

ಹೆಚ್ಚಿನ ಮುಸ್ಲಿಂ ದೇಶಗಳಲ್ಲಿ ಶುಕ್ರವಾರವನ್ನು ಆರಾಧನೆಯ ದಿನವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಭಾನುವಾರದ ಬದಲು ಶುಕ್ರವಾರ ರಜೆ ಇದೆ. ಇನ್ನುಳಿದಂತೆ ನೇಪಾಳ, ಇರಾನ್, ಬಹ್ರೇನ್, ಇರಾಕ್, ಯೆಮೆನ್, ಜೋರ್ಡಾನ್, ಅರಬ್ ರಾಷ್ಟ್ರಗಳು, ಕುವೈತ್, ಇಸ್ರೇಲ್, ಲಿಬಿಯಾ, ಸಿರಿಯಾ, ಮಾಲ್ಡೀವ್ಸ್, ಸುಡಾನ್, ಮಲೇಷ್ಯಾ, ಸೌದಿ ಅರಬ್, ಓಮನ್, ಸರತಿ, ಪ್ಯಾಲೆಸ್ಟೈನ್, ಈಜಿಪ್ಟ್, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಅಲ್ಜೀರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾನುವಾರ ರಜೆ ಇರುವುದಿಲ್ಲ.
Published by:Annappa Achari
First published: