• Home
  • »
  • News
  • »
  • explained
  • »
  • Siddaramaiah: ಸಿದ್ದರಾಮಯ್ಯನವರ ಆಯ್ಕೆ ಕೋಲಾರವೇ ಏಕೆ? ಮಾಜಿ ಸಿಎಂಗೆ ಸಿಗುತ್ತಾ ಗೆಲುವಿನ ಗಣಿ?

Siddaramaiah: ಸಿದ್ದರಾಮಯ್ಯನವರ ಆಯ್ಕೆ ಕೋಲಾರವೇ ಏಕೆ? ಮಾಜಿ ಸಿಎಂಗೆ ಸಿಗುತ್ತಾ ಗೆಲುವಿನ ಗಣಿ?

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

“ನಾನು ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ” ಅಂತ ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತ ಕೇಂದ್ರದ ನಾಯಕರತ್ತ ಬೊಟ್ಟು ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ಸೋಲಿನ ಭೀತಿ ಕಾಡುತ್ತಿದೆಯೇ? ಅವರ ಮುಂದಿನ ಆಯ್ಕೆ ಕೋಲಾರವೇ ಯಾಕೆ?

ಮುಂದೆ ಓದಿ ...
  • Share this:

ಮಾಜಿ ಸಿಎಂ (Former CM), ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು (opposition leader Siddaramaiah) ಕ್ಷೇತ್ರ ಬದಲಾವಣೆಗೆ ಸಜ್ಜಾಗಿದ್ದಾರೆ. ಈ ಹಿಂದೆ ಚಾಮುಂಡೇಶ್ವರಿ (Chamundeshwari), ಬದಾಮಿ ವಿಧಾನಸಭಾ ಕ್ಷೇತ್ರದಿಂದ (Badami Assembly Constituency) ಗೆದ್ದಿದ್ದ ಸಿದ್ದರಾಮಯ್ಯ, ಈ ಬಾರಿ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನಲಾಗಿತ್ತು. ಕೋಲಾರದಿಂದ (Kolar) ಸ್ಪರ್ಧಿಸುತ್ತಾರೆ, ವರುಣಾದಿಂದ (Varuna) ಕಣಕ್ಕಿಳಿಯುತ್ತಾರೆ, ಚಾಮರಾಜಪೇಟೆಯಿಂದ (Chamarajpet) ಸ್ಪರ್ಧೆ ಮಾಡಬಹುದು ಎನ್ನಲಾಗಿತ್ತು. ಆದರೆ ಈ ಅಂತೆ ಕಂತೆಗಳಿಗೆ ಇದೀಗ ತೆರೆ ಬಿದ್ದಂತಾಗಿದೆ. “ನಾನು ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ” ಅಂತ ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ ಹೈಕಮಾಂಡ್ (High Command) ನಿರ್ಧಾರವೇ ಅಂತಿಮ ಅಂತ ಕೇಂದ್ರದ ನಾಯಕರತ್ತ ಬೊಟ್ಟು ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರಿಗೆ ಬಾದಾಮಿಯಲ್ಲಿ ಸೋಲಿನ ಭೀತಿ ಕಾಡುತ್ತಿದೆಯೇ? ಅವರ ಮುಂದಿನ ಆಯ್ಕೆ ಕೋಲಾರವೇ ಯಾಕೆ? ಕೋಲಾರದಲ್ಲಿ ಅವರು ಗೆಲ್ಲುವ ಸಾಧ್ಯತೆ ಇದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…   


ಕೋಲಾರದಲ್ಲಿ ಈ ಬಾರಿ ಸಿದ್ದರಾಮಯ್ಯ ಸ್ಪರ್ಧೆ


ಸಿದ್ದರಾಮಯ್ಯ ಅವರು ಈ ಬಾರಿ ಬದಾಮಿ ವಿಧಾನಸಭಾ ಕ್ಷೇತ್ರದ ಬದಲು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಸಜ್ಜಾದಂತೆ ತೋರುತ್ತಿದೆ. ನಾನು ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಅಂತ ಸಿದ್ದರಾಮಯ್ಯನವರೇ ಘೋಷಿಸಿದ್ದಾರೆ.
ಕೋಲಾರ ಆಯ್ಕೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?


''ಬಾದಾಮಿಯಲ್ಲಿ ನನ್ನ ಮತದಾರರಿಗೆ ಸೂಕ್ತ ಗಮನ ನೀಡಲು ಸಾಧ್ಯವಾಗಿಲ್ಲ. ನನಗೆ 75 ವರ್ಷ, ನನ್ನಲ್ಲಿ ಸಾಕಷ್ಟು ಶಕ್ತಿ ಉಳಿದಿದ್ದರೂ, ಬಾದಾಮಿ ಮತ್ತು ಬೆಂಗಳೂರಿನ ನನ್ನ ನಿವಾಸದ ನಡುವಿನ ಅಂತರವು ತುಂಬಾ ಹೆಚ್ಚಾಗಿದೆ. ನಾನು ಅಲ್ಲಿಗೆ ನಿಯಮಿತವಾಗಿ ಹೋಗಲು ಸಾಧ್ಯವಾಗಲಿಲ್ಲ. ನಾನು ನಿಯಮಿತವಾಗಿ ಭೇಟಿ ನೀಡಬಹುದಾದ ಮತ್ತು ನನ್ನ ಸಂಪೂರ್ಣ ಗಮನವನ್ನು ನೀಡಬಹುದಾದ ಆಸನವನ್ನು ನಾನು ನಿರ್ಧರಿಸುವುದು ನ್ಯಾಯಯುತವಾಗಿದೆ” ಅಂಚ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಕೋಲಾರ ಆಯ್ಕೆ ಮಾಡಿಕೊಂಡೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಕೋಲಾರವನ್ನೇ ಆಯ್ಕೆ ಮಾಡಿದ್ದು ಏಕೆ?


ಕೋಲಾರ ವಿಧಾನಸಭಾ ಕ್ಷೇತ್ರವು ದಲಿತರು, ಮುಸ್ಲಿಂ ಮತ್ತು ಕುರುಬ ಮತದಾರರನ್ನು ಹೊಂದಿದೆ. ಈ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಇನ್ನು ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಬೆಂಬಲ ಹೊಂದಿದ್ದು, ಆ ಸಮುದಾಯಗಳ ನೆಚ್ಚಿನ ನಾಯಕರಾಗಿದ್ದಾರೆ. ಅವರು ಲಿಂಗಾಯತರು ಹಾಗೂ ಒಕ್ಕಲಿಗರ ನಂತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದು ಕೋಲಾರದಲ್ಲಿ ಜಯವನ್ನು ನಿರ್ಧಾರ ಮಾಡುವ ಸಮುದಾಯಗಳಲ್ಲಿ ಒಂದಾಗಿದೆ. ಕೋಲಾರದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದುಳಿದ ವರ್ಗಗಳ ಸಮುದಾಯಗಳ ಜೊತೆಗೆ ಮುಸ್ಲಿಂ ಮತದಾರರು ಪ್ರಮುಖ ನಿರ್ಣಾಯಕ ಅಂಶವಾಗಿದ್ದಾರೆ. ಇವು ಎರಡು ಪ್ರಮುಖ ಅಂಶಗಳಾಗಿವೆ. ಹೀಗಾಗಿ ಕೋಲಾರ ಸಿದ್ದರಾಮಯ್ಯನವರ ನೆಚ್ಚಿನ ಆಯ್ಕೆಯಾಗಿದೆ.


ಇದನ್ನೂ ಓದಿ: Karnataka Assembly Elections: ದಾವಣಗೆರೆ ಉತ್ತರದಲ್ಲಿ ಮತ್ತೆ ಸ್ಪರ್ಧಿಸ್ತಾರಾ ಹಾಲಿ ಶಾಸಕ? ಮರಳಿ 'ಕೈ' ವಶವಾಗುತ್ತಾ ಕ್ಷೇತ್ರ?


ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಜೆಡಿಎಸ್ ಶಾಸಕ!


ಕೋಲಾರ ಕ್ಷೇತ್ರ ಸದ್ಯ ಜೆಡಿಎಸ್‌ ಸುಪರ್ದಿಯಲ್ಲಿತ್ತು. ಜೆಡಿಎಸ್‌ನ ಕೆ. ಶ್ರೀನಿವಾಸ ಗೌಡ ಶಾಸಕರಾಗಿದ್ದುರು. 2018ರಲ್ಲಿ ಭಾರೀ ಅಂತರದಿಂದ ಗೆದ್ದು 4ನೇ ಬಾರಿ ಶಾಸಕನಾಗಿರುವ ಕೆ. ಶ್ರೀನಿವಾಸಗೌಡ ಕಳೆದ ಬಾರಿಯ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರು. “ಐ ಲವ್ ಕಾಂಗ್ರೆಸ್, ಅದಕ್ಕೆ ಕಾಂಗ್ರೆಸ್‌ಗೆ ವೋಟ್ ಮಾಡಿದ್ದೇನೆ” ಅಂತ ಹೇಳಿದ್ದರು. ಸದ್ಯ ಕಾಂಗ್ರೆಸ್ ಪಾಳಯದಲ್ಲಿರುವ ಅವರು ತಾನು ಕ್ಷೇತ್ರ ಬಿಟ್ಟುಕೊಡುತ್ತೇನೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದ್ದರು. ಸದ್ಯ ಜೆಡಿಎಸ್‌ನಿಂದ ಉಚ್ಟಾಟನೆಗೊಂಡು, ಕಾಂಗ್ರೆಸ್‌ನಲ್ಲಿರುವ ಶ್ರೀನಿವಾಸ ಗೌಡ ಸಿದ್ದರಾಮಯ್ಯ ಗೆಲುವಿಗಾಗಿ ಶ್ರಮಿಸೋದಾಗಿ ಹೇಳಿದ್ದಾರೆ.
ಈ ಬಾರಿಯೂ 2 ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ?


ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಬಾದಾಮಿ ಕ್ಷೇತ್ರದಲ್ಲಿ 1,696 ಮತಗಳ ಅಲ್ಪ ಅಂತರದಿಂದ ಗೆದ್ದರು ಮತ್ತು ಚಾಮುಂಡೇಶ್ವರಿಯಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿ ಜೆಡಿಎಸ್‌ನ ಜಿಟಿ ದೇವೇಗೌಡರ ವಿರುದ್ಧ ಸೋತರು. 2018 ರ ವಿಧಾನಸಭಾ ಚುನಾವಣೆಯಂತೆ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂದು ಕಾಂಗ್ರೆಸ್ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.  ಅವರು ಕೋಲಾರದ ಜೊತೆಗೆ ಮೈಸೂರಿನ ವರುಣಾ ಕ್ಷೇತ್ರ ಅಥವಾ ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ರಾಜಕೀಯ ಮರುಜನ್ಮ ನೀಡಿದ ಚಾಮುಂಡೇಶ್ವರಿ


ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಿ ಮರುಜನ್ಮ ನೀಡಿದ ಕ್ಷೇತ್ರ. 2006ರ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಂದ ಜೆಡಿಎಸ್‌ನಿಂದ ಉಚ್ಛಾಟನೆಗೊಂಡ ನಂತರ ಅವರು ಸ್ಪರ್ಧಿಸಿದ ಕ್ಷೇತ್ರವಿದು. ಜೆಡಿಎಸ್ ವರಿಷ್ಠರು ಸಿದ್ದರಾಮಯ್ಯ ಅವರಿಗೆ ತೀವ್ರ ಪೈಪೋಟಿ ನೀಡಿದರೂ 257 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.


ಚಾಮುಂಡೇಶ್ವರಿಯಿಂದ ವರುಣಾಗೆ ಶಿಫ್ಟ್


ಬಳಿಕ 2008 ಮತ್ತು 2013 ರ ಚುನಾವಣೆಗಳಲ್ಲಿ ಹೊಸದಾಗಿ ರೂಪುಗೊಂಡ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ಎರಡೂ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದರು. ಆದಾಗ್ಯೂ, 2018 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ರಾಜಕೀಯ ಪ್ರವೇಶಕ್ಕಾಗಿ ವರುಣಾ ಕ್ಷೇತ್ರ ತ್ಯಜಿಸಿ, ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದರು. ಆದರೆ ಅಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದಿದ್ದರು.


ಇದನ್ನೂ ಓದಿ: Karnataka Assembly Elections: ಮತ್ತೊಮ್ಮೆ ಸ್ಪರ್ಧೆಯ ಉತ್ಸಾಹದಲ್ಲಿ ಶಾಮನೂರು! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲುವವರಾರು?


ಸಿದ್ದುಗೆ ಕಾಡುತ್ತಿದೆಯೇ ಸೋಲಿನ ಭೀತಿ?


ರಾಜಕೀಯ ವಿಶ್ಲೇಷಕ ರಾಮಕೃಷ್ಣ ಉಪಾಧ್ಯಾಯ ಹೇಳುವಂತೆ “ಸಿದ್ದರಾಮಯ್ಯ ಅವರು ಮಾಜಿ ಸಿಎಂ ಆಗಿದ್ದರೂ, ಹಿರಿಯ ರಾಜಕಾರಣಿಯಾಗಿದ್ದರೂ ಯಾವುದೇ ಸ್ಥಿರತೆಯನ್ನು ಬೆಳೆಸಿಕೊಂಡಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ನಾಲ್ಕನೇ ಬಾರಿಗೆ ತಮ್ಮ ಕ್ಷೇತ್ರವನ್ನು ಬದಲಾಯಿಸುತ್ತಿದ್ದಾರೆ, ಇದು ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿ ಬಿಂಬಿತವಾದ ನಂತರವೂ ಅವರಲ್ಲಿರುವ ಆತಂಕವನ್ನು ತೋರಿಸುತ್ತದೆ. ಸದ್ಯ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯನ್ನು ಗಮನಿಸಿದರೆ ಅವರು ಕೋಲಾರದಿಂದ ಗೆಲುವು ಸಾಧಿಸುವುದು ಸುಲಭವಲ್ಲ ಅಂತ ಹೇಳಿದ್ದಾರೆ. ರಾಜ್ಯ ರಾಜಕೀಯದಲ್ಲಿ ಏನಾಗಲಿದೆ? ಕೋಲಾರದಲ್ಲಿ ಏನಾಗಲಿದೆ ಎಂಬ ಪ್ರಶ್ನೆಗೆ ಕೆಲವೇ 20231ರ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

Published by:Annappa Achari
First published: