Explained: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಪ್ರಧಾನಿ ಮೋದಿ ಯುರೋಪ್‌ಗೆ ಭೇಟಿ ನೀಡುತ್ತಿರುವುದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಮೇ 2ರಿಂದ ಅಂದರೆ ಇಂದಿನಿಂದ ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಹಾಗಿದ್ರೆ ರಷ್ಯಾ, ಉಕ್ರೇನ್ ಯುದ್ಧದ ಈ ಹೊತ್ತಲ್ಲ ಮೋದಿ ಪ್ರವಾಸ ಎಷ್ಟು ಮಹತ್ವ ಪಡೆದಿದೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ನರೇಂದ್ರ ಮೋದಿ ಯುರೋಪ್ ಪ್ರವಾಸ

ನರೇಂದ್ರ ಮೋದಿ ಯುರೋಪ್ ಪ್ರವಾಸ

 • Share this:
  ರಷ್ಯಾ (Russia) ಉಕ್ರೇನ್‌ (Ukeraine) ಯುದ್ಧ (War) ಆರಂಭವಾಗಿ 2 ತಿಂಗಳು ಕಳೆದಿದ್ದು, ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಆದರೆ, ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಯುರೋಪ್‌ ಪ್ರವಾಸಕ್ಕೆ (Europe Tour) ತೆರಳುತ್ತಿದ್ದಾರೆ. ಇದು ಭಾರತ ಸೇರಿದಂತೆ ಜಗತ್ತಿನಾದ್ಯಂತ ಹಲವರಿಗೆ ಕುತೂಹಲ ಮೂಡಿಸಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಮೇ 2 ರಿಂದ ಅಂದರೆ ಇಂದಿನಿಂದ ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸವನ್ನು ಕೈಗೊಳ್ಳುತ್ತಿದ್ದು, ಅಲ್ಲಿ ಅವರು ಜರ್ಮನಿ (Germany), ಡೆನ್ಮಾರ್ಕ್ (Denmark) ಮತ್ತು ಫ್ರಾನ್ಸ್‌ನೊಂದಿಗಿನ (France) ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಲವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ರೆ ರಷ್ಯಾ, ಉಕ್ರೇನ್ ಯುದ್ಧದ ಈ ಹೊತ್ತಲ್ಲ ಮೋದಿ ಪ್ರವಾಸ ಎಷ್ಟು ಮಹತ್ವ ಪಡೆದಿದೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

  ಬರ್ಲಿನ್ ಮೂಲಕ ಪ್ರವಾಸ ಆರಂಭಿಸಿದ ಪ್ರಧಾನಿ

  ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ತಮ್ಮ ಯುರೋಪ್‌ ಪ್ರವಾಸದ ಆರಂಭವನ್ನು ಆ ದೇಶದ ರಾಜಧಾನಿ ಬರ್ಲಿನ್‌ ಮೂಲಕ ಪ್ರಾರಂಭಿಸಲಿದ್ದಾರೆ. ನಂತರ, ಡ್ಯಾನಿಶ್ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಆಹ್ವಾನದ ಮೇರೆಗೆ ಮೇ 3-4 ರಿಂದ ಪ್ರಧಾನಿ ಮೋದಿ ಡೆನ್ಮಾರ್ಕ್‌ ರಾಜಧಾನಿ ಕೋಪೆನ್‌ಹ್ಯಾಗೆನ್‌ನಲ್ಲಿರಲಿದ್ದಾರೆ. ಆ ವೇಳೆ ಅವರು ಡೆನ್ಮಾರ್ಕ್‌ ಸರ್ಕಾರದ ಜತೆ ಹಲವು ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಭಾರತಕ್ಕೆ ವಾಪಸಾಗುವ ಮೊದಲು ಪ್ಯಾರಿಸ್‌ಗೂ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರು, ಇತ್ತೀಚೆಗಷ್ಟೇ ಫ್ರಾನ್ಸ್‌ ಅಧ್ಯಕ್ಷರಾಗಿ ಮರು ಆಯ್ಕೆಯಾದ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರನ್ನು ಭೇಟಿ ಮಾಡಲಿದ್ದಾರೆ.

  ಸಂಬಂಧ ಬಲಪಡಿಸುವ ಉದ್ದೇಶ

  ಭಾರತವು ಈ ಮೇಲಿನ 3 ದೇಶಗಳೊಂದಿಗೆ ತನ್ನ ಬಹುಮುಖಿ ಸಂಬಂಧವನ್ನು ಬಲಪಡಿಸುವುದನ್ನು ಮುಂದುವರಿಸುವುದು ಪ್ರಧಾನಿ ಮೋದಿಯ ಭೇಟಿಯ ಪ್ರಮುಖ ಉದ್ದೇಶ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಹೇಳಿದ್ದಾರೆ.

  ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ನಡೆಯುತ್ತಾ ಚರ್ಚೆ?

  ರಷ್ಯಾ - ಉಕ್ರೇನ್‌ ಯುದ್ಧದ ಬಗ್ಗೆ, ಅದರಲ್ಲೂ ಉಕ್ರೇನ್‌ ವಿಚಾರವಾಗಿ ಭಾರತದ ನಿಲುವನ್ನು ವಿವಿಧ ಅಂತಾರಾಷ್ಟ್ರೀಯ ಸಭೆಗಳಲ್ಲಿ, ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿದೆ, ಈ ಕುರಿತು ಈಗಾಗಲೇ ಚರ್ಚೆಯನ್ನೂ ನಡೆಸಲಾಗಿದೆ. ಈ ಮಧ್ಯೆ, ಯುದ್ಧದ ನಿಲುಗಡೆ ಮತ್ತು ಸಂಘರ್ಷದ ಪರಿಹಾರದ ಮಾರ್ಗವು ರಾಜತಾಂತ್ರಿಕತೆ ಮತ್ತು ಸಂಭಾಷಣೆಯ ಮೂಲಕ ಮಾತ್ರ ಸಾಧ್ಯ ಎಂಬುದು ಭಾರತದ ನಿಲುವಾಗಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ತಮ್ಮ ಯುರೋಪ್‌ ರಾಷ್ಟ್ರಗಳ ಭೇಟಿಯ ವೇಳೆ ಉಕ್ರೇನ್ ಕುರಿತು ಭಾರತದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ: Explained: ಪಿ.ಸಿ.ಜಾರ್ಜ್ ಯಾರು? ಮುಸ್ಲಿಮರ ವಿರುದ್ಧ ಅವರು ಹೇಳಿದ್ದೇನು? ಅವರ ಬಂಧನಕ್ಕೆ ಕಾರಣವೇನು?

  ಈ ಪ್ರದೇಶವು ಹಲವು ಸವಾಲುಗಳು ಮತ್ತು ಆಯ್ಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ತಮ್ಮ ಯುರೋಪ್ ಭೇಟಿಯು ಜರುಗುತ್ತದೆ ಎಂದು ಭಾರತದಿಂದ ಯುರೋಪ್‌ ರಾಷ್ಟ್ರಗಳಿಗೆ ತೆರಳುವ ಮುನ್ನ ಪ್ರಧಾನಿ ಮೋದಿ ಹೇಳಿದರು.

  ಶಾಂತಿ-ಸಮೃದ್ಧಿಗೆ ಸಹಕಾರ ಎಂದ ಮೋದಿ

  "ನನ್ನ ಸಭೆ, ಚರ್ಚೆಗಳ ಮೂಲಕ, ಶಾಂತಿ ಮತ್ತು ಸಮೃದ್ಧಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಸಹಚರರಾಗಿರುವ ನಮ್ಮ ಯುರೋಪಿಯನ್ ಪಾಲುದಾರರೊಂದಿಗೆ ಸಹಕಾರದ ಮನೋಭಾವವನ್ನು ಬಲಪಡಿಸಲು ನಾನು ಉದ್ದೇಶಿಸಿದ್ದೇನೆ" ಎಂದೂ ಪ್ರಧಾನಿ ಮೋದಿ ಈ ವೇಳೆ ಹೇಳಿದರು.

  ಬರ್ಲಿನ್ ಕಾರ್ಯಸೂಚಿ

  ತಮ್ಮ ಬರ್ಲಿನ್ ಭೇಟಿಯು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವಿವರವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲು ಒಂದು ಅವಕಾಶವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ನಿರ್ಗಮನದ ಪೂರ್ವ ಹೇಳಿಕೆ ವೇಳೆ ತಿಳಿಸಿದರು.

  ಇನ್ನು, ಸ್ಕೋಲ್ಜ್‌ ಅವರನ್ನು ಪ್ರಧಾನಿ ಮೋದಿ ಈ ಹಿಂದೆಯೇ ಭೇಟಿ ಆಗಿದ್ದಾರೆ. 2021 ರಲ್ಲಿ ಜರ್ಮನಿಯ ವೈಸ್‌ ಚಾನ್ಸೆಲರ್‌ ಹಾಗೂ ಹಣಕಾಸು ಸಚಿವರಾಗಿದ್ದಾಗ ನರೇಂದ್ರ ಮೋದಿ ಅವರು ಓಲಾಫ್ ಸ್ಕೋಲ್ಜ್ ಅವರನ್ನು G20 ಶೃಂಗಸಭೆ ವೇಳೆ ಭೇಟಿ ಮಾಡಿದ್ದರು.

  ಇನ್ನು, ಪ್ರಧಾನಿ ಮೋದಿ ಹಾಗೂ ಜರ್ಮನಿ ಚಾನ್ಸೆಲರ್‌ ಓಲಾಫ್ ಸ್ಕೋಲ್ಜ್ ಶೇರಿ ಉಭಯ ನಾಯಕರು ದ್ವೈವಾರ್ಷಿಕ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ ಸಹ-ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿದುಬಂದಿದೆ.

  ಪ್ರಧಾನಿ ಜೊತೆಗೆ ಪ್ರವಾಸದಲ್ಲಿದ್ದಾರೆ ಹಲವರು

  ಈ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್, ಜೈಶಂಕರ್ ಮತ್ತು ವಿಜ್ಞಾನ ಹಾಗೂ ಪರಿಸರ ರಾಜ್ಯಗಳ ಸಚಿವ ಡಾ. ಜಿತೇಂದ್ರ ಸಿಂಗ್ ಸೇರಿದಂತೆ ಹಲವಾರು ಭಾರತೀಯ ಮಂತ್ರಿಗಳು ಸಹ ಪ್ರಧಾನ ಮಂತ್ರಿಯೊಂದಿಗೆ ಇರುತ್ತಾರೆ ಮತ್ತು ಅವರ ಜರ್ಮನ್ ಸಹವರ್ತಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಯುರೋಪ್‌ ಪ್ರವಾಸದಲ್ಲಿ ಅವರ ಕೆಲ ಸಂಪುಟ ಸಹೋದ್ಯೋಗಿಗಳೂ ಸೇರಿದ್ದಾರೆ.

  ದುಂಡು ಮೇಜಿನ ಸಭೆಯಲ್ಲಿ ಮೋದಿ ಭಾಗಿ

  ಬರ್ಲಿನ್‌ನಲ್ಲಿರುವ ವೇಳೆ, ಎರಡೂ ದೇಶಗಳಲ್ಲಿ ಕೋವಿಡ್ ನಂತರದ ಆರ್ಥಿಕ ಚೇತರಿಕೆಗೆ ಅನುಕೂಲವಾಗುವಂತೆ ಉದ್ಯಮದ ಸಹಕಾರಕ್ಕೆ ಉದ್ಯಮಕ್ಕೆ ಶಕ್ತಿ ತುಂಬುವ ಪ್ರಯತ್ನದಲ್ಲಿ ಪ್ರಧಾನಿ ಮೋದಿ ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವ್ಯಾಪಾರ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಲಿದ್ದಾರೆ ಎಂದೂ ತಿಳಿದುಬಂದಿದೆ.

  ಅಲ್ಲದೆ, ಬರ್ಲಿನ್‌ನಲ್ಲಿರುವ ಭಾರತೀಯ ಮೂಲದ ಸದಸ್ಯರನ್ನುಸಹ ಮೋದಿ ಭೇಟಿ ಮಾಡಲಿದ್ದಾರೆ. ಜರ್ಮನಿಯಲ್ಲಿ ಭಾರತೀಯ ಮೂಲದವರು ಗಮನಾರ್ಹ ಪ್ರಮಾಣವನ್ನು ಹೊಂದಿದೆ.

  ಕೋಪನ್ ಹ್ಯಾಗನ್ ಕಾರ್ಯಸೂಚಿ

  ಇನ್ನೊಂದೆಡೆ, ಜರ್ಮನಿ ಬಳಿಕ ಡೆನ್ಮಾರ್ಕ್‌ಗೆ ತೆರಳಲಿರುವ ಮೋದಿ, ಆ ವೇಳೆ ಕೋಪನ್ ಹ್ಯಾಗನ್‌ನಲ್ಲಿ ಆ ದೇಶದ ಪ್ರಧಾನ ಮಂತ್ರಿ ಫ್ರೆಡೆರಿಕ್ಸನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಉಭಯ ನಾಯಕರ ನಡುವೆ ಚರ್ಚಿಸಲಾಗುವ ಅಂಶಗಳಲ್ಲಿ 'ಹಸಿರು ಕಾರ್ಯತಂತ್ರದ ಸಹಭಾಗಿತ್ವ'ದಲ್ಲಿ ಮಾಡಿದ ಪ್ರಗತಿಯ ಪರಾಮರ್ಶೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

  ಭಾರತದಿಂದ ನಿರ್ಗಮಿಸುವ ಮುನ್ನ ಈ ಬಗ್ಗೆ ಮಾತಾಡಿದ ಮೋದಿ, ಡಿಜಿಟಲೀಕರಣ, ಸುಸ್ಥಿರತೆ, ನವೀಕರಿಸಬಹುದಾದ ಇಂಧನ ಮತ್ತು ನಾವೀನ್ಯತೆಗಳಲ್ಲಿ ನಾರ್ಡಿಕ್ ದೇಶಗಳು ಭಾರತಕ್ಕೆ ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಹೇಳಿದರು. ಹಾಗೂ, ತಮ್ಮ ಭೇಟಿಯು ನಾರ್ಡಿಕ್ ಪ್ರದೇಶದೊಂದಿಗೆ ಭಾರತದ ಬಹುಮುಖಿ ಸಹಕಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದೂ ಹೇಳಿದ್ದಾರೆ.

  ಇದಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ಡೆನ್ಮಾರ್ಕ್, ಐಸ್ಲ್ಯಾಂಡ್, ಫಿನ್ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳೊಂದಿಗೆ 2 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ, 2018 ರಲ್ಲಿ ನಡೆದ ಮೊದಲ ಭಾರತ-ನಾರ್ಡಿಕ್ ಶೃಂಗಸಭೆಯ ನಂತರ ಭಾರತದ ಸಹಕಾರವನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿದುಬಂದಿದೆ.

  ಹಲವು ಮಹತ್ವದ ವಿಚಾರಗಳ ಚರ್ಚೆ

  ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶವನ್ನು ಚರ್ಚಿಸುವುದರ ಜೊತೆಗೆ, ಈ ಶೃಂಗಸಭೆಯು ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಮಧ್ಯೆ, ಪ್ರಧಾನಿ ಮೋದಿ ಅವರು ಭಾರತ-ಡೆನ್ಮಾರ್ಕ್ ವ್ಯಾಪಾರ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.

  ಪ್ಯಾರಿಸ್ ಕಾರ್ಯಸೂಚಿ

  ಜರ್ಮನಿ ಹಾಗೂ ಡೆನ್ಮಾರ್ಕ್‌ ಪ್ರವಾಸದ ಬಳಿಕ ತವರಿಗೆ ಹಿಂದಿರುಗುವ ಮುನ್ನ ಪ್ರಧಾನಿ ಮೋದಿ ಪ್ಯಾರಿಸ್‌ನಲ್ಲಿ ತಮ್ಮ "ಸ್ನೇಹಿತ" ಹಾಗೂ ಅಲ್ಲಿನ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ. ಮ್ಯಾಕ್ರನ್‌ ಇತ್ತೀಚೆಗೆ ಫ್ರಾನ್ಸ್‌ ಅಧ್ಯಕ್ಷ ಹುದ್ದೆಗೆ ಮರು ಆಯ್ಕೆಯಾಗಿದ್ದಾರೆ.

  ಇನ್ನು, ತಾವು ಭಾರತದಿಂದ ನಿರ್ಗಮನಕ್ಕೆ ಮುನ್ನ ಪ್ಯಾರಿಸ್‌ ಕಾರ್ಯಸೂಚಿಯ ಬಗ್ಗೆಯೂ ಮಾತನಾಡಿದ ಮೋದಿ, ತಮ್ಮ ಭೇಟಿಯು ವೈಯಕ್ತಿಕವಾಗಿ ತಮ್ಮ ಅಭಿನಂದನೆಗಳನ್ನು ತಿಳಿಸಲು ಅವಕಾಶ ನೀಡುವುದಲ್ಲದೆ, ಪ್ಯಾರಿಸ್‌ಗೆ ಭೇಟಿ ನೀಡುವುದರಿಂದ ಉಭಯ ದೇಶಗಳ ನಡುವಿನ ನಿಕಟ ಸ್ನೇಹವನ್ನು ಪುನರುಚ್ಚರಿಸುತ್ತದೆ. ಮತ್ತು ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಮುಂದಿನ ಹಂತಕ್ಕೆ ಈ ಸಭೆ ಟೋನ್ ಅನ್ನು ಹೊಂದಿಸುತ್ತದೆ ಎಂದು ಪ್ರಧಾನಿ ಹೇಳಿದರು.

  ಇದನ್ನೂ ಓದಿ: Explained: ಭಾರತದಲ್ಲಿ ಬಿಸಿ ಅಲೆ ಉಂಟಾಗಲು ಕಾರಣವೇನು? ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?

  ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ಉಭಯ ನಾಯಕರು ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ ಮತ್ತು ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸುತ್ತಾರೆ ಎಂದೂ ತಿಳಿದುಬಂದಿದೆ.
  Published by:Annappa Achari
  First published: