Explained: ಪೆಟ್ರೋಲ್ ಬೆಲೆ ಇಳಿಕೆಯಾಗ್ತಿರೋದು ಖುಷಿ ಪಡುವ ವಿಚಾರನಾ? ಭಾರತದ ಮೇಲೆ ಇದರ ಪರಿಣಾಮ ಏನು ಗೊತ್ತಾ?

ಕಚ್ಚಾ ತೈಲಗಳ ಬೆಲೆ ಇಳಿಕೆಯಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಇಳಿಕೆ ಕಾಣುತ್ತಿದೆ. ಇದಕ್ಕೆ ಜನಸಾಮಾನ್ಯರು ಸಂತಸ ಪಡುತ್ತಿದ್ದಾರೆ. ಆದರೆ ಇದು ಸಂತಸ ಪಡುವ ವಿಚಾರವಲ್ಲ ಅಂತಿದ್ದಾರೆ ತಜ್ಞರು! ಹಾಗಿದ್ರೆ ತೆೈಲ ಬೆಲೆ ಇಳಿಕೆಗೆ ಕಾರಣವೇನು? ಇದು ಯಾಕೆ ಸಂತಸಪಡುವ ವಿಚಾರವಲ್ಲ? ಭಾರತದ ಮೇಲೆ ಇದರ ಪರಿಣಾಮವೇನು? ಇಲ್ಲಿದೆ ಸಂಪೂರ್ಣ ಮಾಹಿತಿ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ರಷ್ಯಾ - ಉಕ್ರೇನ್‌ ಯುದ್ಧ (Russia - Ukraine War) ಆರಂಭವಾದಾಗಿನಿಂದ ಕಚ್ಚಾ ತೈಲ ಬೆಲೆ (Crude Oil Price) ತೀವ್ರ ಏರಿಕೆಯಾಗುತ್ತಿತ್ತು. ಈ ಹಿನ್ನೆಲೆ ಕಚ್ಚಾ ತೈಲ ದರ ಕಳೆದ 14 ವರ್ಷಗಳಲ್ಲೇ ಗರಿಷ್ಠ ಬೆಲೆಯಾದ ಪ್ರತಿ ಬ್ಯಾರೆಲ್‌ಗೆ (Barrel) $ 139 ಕ್ಕೆ ಏರಿಕೆ ಕಂಡಿತ್ತು. ಆದರೆ, ಈ ದಾಖಲೆ ಏರಿಕೆಯ ಒಂದೆರಡು ವಾರಗಳಲ್ಲೇ ಮಂಗಳವಾರ ಕಚ್ಚಾ ತೈಲದ ಬೆಲೆಯು ಒಂದು ಬ್ಯಾರೆಲ್‌ಗೆ $100 ಗಡಿಗಿಂತ ಕೆಳಗಿಳಿಯಿತು. ಬ್ರೆಂಟ್ (Brent) ಕಚ್ಚಾ ತೈಲವು ಬುಧವಾರದಂದು ಪ್ರತಿ ಬ್ಯಾರೆಲ್‌ಗೆ 102.7 ಡಾಲರ್‌ ತಲುಪಿದೆ. ಆದರೂ, ವರ್ಷದ ಆರಂಭದಲ್ಲಿ ಒಂದು ಬ್ಯಾರೆಲ್‌ಗೆ ಕಚ್ಚಾ ತೈಲ ದರ 78.11 ಡಾಲರ್‌ನಿಂದ ಇನ್ನೂ ಶೇ. 32ರಷ್ಟು ಹೆಚ್ಚಿದೆ.

  ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಏಕೆ ಕಡಿಮೆಯಾಗುತ್ತಿದೆ..?

  ಚೀನಾದಲ್ಲಿ (China) ಇತ್ತೀಚೆಗೆ ಮತ್ತೆ ಕೋವಿಡ್ - 19 ಪ್ರಕರಣಗಳ ಉಲ್ಬಣವಾಗುತ್ತಿರುವ ವರದಿಗಳನ್ನು ನೀವು ಓದಿರುತ್ತೀರಾ ಅಥವಾ ಟಿವಿಗಳಲ್ಲಿ ನೋಡಿರುತ್ತೀರಾ.. ಹಾಗಾದ್ರೆ, ಇದಕ್ಕೂ ಕಚ್ಚಾ ತೈಲ ಬೆಲೆ ಕುಸಿತಕ್ಕೂ ಏನು ಸಂಬಂಧ ಅಂತೀರಾ..? ಚೀನಾ ಕಚ್ಚಾ ತೈಲದ ಅತಿದೊಡ್ಡ ಆಮದುದಾರವಾಗಿದೆ. ಆದರೆ, ಕೋವಿಡ್ - 19 ಪ್ರಕರಣ ಹೆಚ್ಚಳದಿಂದ ದೇಶದಲ್ಲಿ ಹಲವೆಡೆ ಲಾಕ್‌ಡೌನ್‌ ವಿಧಿಸಲಾಗುತ್ತಿದೆ. ಇದೂ ಸಹ ಬೆಲೆ ಕುಸಿತಕ್ಕೆ ಒಂದು ಕಾರಣ.

  ಇರಾನ್ ಒಪ್ಪಂದದ ಪರಿಣಾಮ

  ಇರಾನ್‌ನೊಂದಿಗಿನ ಪರಮಾಣು ಒಪ್ಪಂದವು ಜಾಗತಿಕ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಬಹುದು ಎಂಬ ಆಶಾದಾಯಕವೂ ತೈಲ ಬೆಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಿದೆ. ಈ ಹಿನ್ನೆಲೆ ವರ್ಷದ ಆರಂಭದಿಂದಲೂ ಸ್ಥಿರವಾಗಿ ಏರುತ್ತಿರುವ ಕಚ್ಚಾ ತೈಲ ದರ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆಯೂ ಈ ವಾರ ಮತ್ತೆ ಕುಸಿಯುತ್ತಿದೆ.

  ಚೀನಾದಲ್ಲಿ ಮತ್ತೆ ಲಾಕ್‌ ಡೌನ್ ಘೋಷಣೆ ಪರಿಣಾಮ

  ಕೋವಿಡ್ -19 ಸೋಂಕುಗಳ ಹರಡುವಿಕೆಯನ್ನು ತಡೆಯಲು ಚೀನಾ ಹೊಸ ಲಾಕ್‌ಡೌನ್‌ಗಳನ್ನು ಘೋಷಿಸಿದೆ. ಡ್ರ್ಯಾಗನ್‌ ರಾಷ್ಟ್ರದಲ್ಲಿ ಕೊರೊನಾ ಸೋಂಕುಗಳು 2 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಹಿನ್ನೆಲೆ ಕಚ್ಚಾ ತೈಲ ಬೇಡಿಕೆಯ ಮೇಲೆ ಚೀನಾದಲ್ಲಿನ ಉಲ್ಬಣದ ಪ್ರಭಾವದ ಬಗ್ಗೆ ಕಳವಳವುಂಟಾಗಿರುವುದು ಕಚ್ಚಾ ತೈಲ ಬೆಲೆ ಕಡಿಮೆಯಾಗಲು ಸಹಾಯ ಮಾಡಿತು.

  ಪ್ರತ್ಯೇಕವಾಗಿ, 2015 ರ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಯುಎಸ್, ರಷ್ಯಾ ಮತ್ತು ಇರಾನ್ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆಯ ಕಳವಳವನ್ನು ಕಡಿಮೆ ಮಾಡಿದೆ.

  ಇದನ್ನೂ ಓದಿ: Explained: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವಿಷಯವಾಗುವುದೇ Hijab ವಿವಾದ?

  ಇರಾನ್, 2015 ರ ಒಪ್ಪಂದದ ಅಡಿಯಲ್ಲಿ, ಇರಾನ್ ತೈಲ ರಫ್ತುಗಳನ್ನು ನಿರ್ಬಂಧಿಸುವ ಆರ್ಥಿಕ ನಿರ್ಬಂಧಗಳಲ್ಲಿನ ಸಡಿಲಿಕೆಗಳಿಗೆ ಬದಲಾಗಿ ತನ್ನ ಪರಮಾಣು ಕಾರ್ಯಕ್ರಮವನ್ನು ಮಿತಿಗೊಳಿಸಲು ಒಪ್ಪಿಕೊಂಡಿತು. ಆದರೆ, ದೇಶದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳು ಇರಾನ್‌ನೊಂದಿಗಿನ ದೇಶದ ಆರ್ಥಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಖಾತರಿಯನ್ನು ಕೋರಿ ರಷ್ಯಾದೊಂದಿಗೆ ಮಾತುಕತೆ ಸ್ಥಗಿತಗೊಂಡಿತು.

  ಆದರೂ, ಒಪ್ಪಂದದ ಅಡಿಯಲ್ಲಿ ತನ್ನ ಕೆಲಸವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ರಷ್ಯಾಗೆ ಅವಕಾಶ ನೀಡಲಾಗುವುದು ಎಂಬ ಲಿಖಿತ ಖಾತರಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮಂಗಳವಾರ ಹೇಳಿದ್ದಾರೆ.

  ಇನ್ನು, ಒಂದು ವೇಳೆ ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದರೆ ಕೆಲವು ತಿಂಗಳುಗಳಲ್ಲಿ ಇರಾನ್ ತನ್ನ ಕಚ್ಚಾ ತೈಲ ಉತ್ಪಾದನೆಯನ್ನು ದಿನಕ್ಕೆ ಸುಮಾರು 1.5 ಮಿಲಿಯನ್ ಬ್ಯಾರೆಲ್‌ಗಳಷ್ಟು ಹೆಚ್ಚಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

  ರಷ್ಯಾ - ಉಕ್ರೇನ್‌ ಮಾತುಕತೆಯ ಪರಿಣಾಮ..!

  ಕ್ರೆಮ್ಲಿನ್ ಜೊತೆಗಿನ ಮಾತುಕತೆಗಳು ಹೆಚ್ಚು ರಚನಾತ್ಮಕವಾಗಿವೆ ಎಂದು ಉಕ್ರೇನಿಯನ್ ಅಧ್ಯಕ್ಷರ ಸಲಹೆಗಾರರೊಬ್ಬರು ಹೇಳಿದ ನಂತರ, ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಭರವಸೆಯಿಂದಲೂ ಕಚ್ಚಾ ತೈಲ ಬೆಲೆಗಳು ಸೋಮವಾರದಿಂದ ಕುಸಿತ ಕಾಣುತ್ತಿವೆ ಎಂದೂ ಹೇಳಲಾಗಿದೆ.

  ಇದು ರಾಜತಾಂತ್ರಿಕ ಪ್ರಯತ್ನದ ಫಲವೇ?

  ಯುದ್ದ ಮುಂದುವರಿದಿದ್ದರೂ, ರಾಜತಾಂತ್ರಿಕ ಪ್ರಯತ್ನಗಳು ತೈಲ ಮಾರುಕಟ್ಟೆಯನ್ನು ಶಾಂತಗೊಳಿಸಿವೆ ಎಂದು ವಿಶ್ಲೇಷಕರು ಊಹಿಸಿದ್ದಾರೆ.

  ಈ ಮಧ್ಯೆ, ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, "ನಾವು ಯಾವುದೇ ಸ್ಥಾನಗಳಲ್ಲಿ ತಾತ್ವಿಕವಾಗಿ ಒಪ್ಪಿಕೊಳ್ಳುವುದಿಲ್ಲ. ರಷ್ಯಾ ಈಗ ಇದನ್ನು ಅರ್ಥಮಾಡಿಕೊಂಡಿದೆ. ರಷ್ಯಾ ಈಗಾಗಲೇ ರಚನಾತ್ಮಕವಾಗಿ ಮಾತನಾಡಲು ಪ್ರಾರಂಭಿಸಿದೆ" ಎಂದು ಉಕ್ರೇನಿಯನ್ ಸಮಾಲೋಚಕ ಮತ್ತು ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದರು.

  ಇದರ ಜತೆಗೆ, ಕೆಲ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳು ಮತ್ತೆ ಉಲ್ಬಣಗೊಳ್ಳುತ್ತಿರುವುದು ಸಹ ತೈಲ ಬೇಡಿಕೆಯ ಕಾಳಜಿಯನ್ನು ಉಂಟುಮಾಡಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

  ಭಾರತದ ಮೇಲೆ ಪರಿಣಾಮವೇನು..?

  ಭಾರತವು ತನ್ನ ತೈಲ ಬೇಡಿಕೆಯ 85% ಅನ್ನು ಆಮದು ಮಾಡಿಕೊಳ್ಳುವುದರಿಂದ ಹೆಚ್ಚಿನ ತೈಲ ಬೆಲೆಗಳು ಭಾರತಕ್ಕೆ ಕಳವಳಕ್ಕೆ ಕಾರಣವಾಗಿದ್ದವು. ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯಾಗಿರುವುದು ಓಮನ್, ದುಬೈ ಮತ್ತು ಬ್ರೆಂಟ್ ಕಚ್ಚಾ ತೈಲವನ್ನು ಒಳಗೊಂಡಿರುವ ಭಾರತೀಯ ಇಂಧನ ಆಮದಿನ ಬೆಲೆಯನ್ನು ಹೆಚ್ಚಿಸಿದೆ. ಮತ್ತು ಕಚ್ಚಾ ತೈಲ ಬೆಲೆಗಳು ಹೆಚ್ಚಿದಂತೆ ಸಾಮಾನ್ಯವಾಗಿ ದೇಶದ ಪೆಟ್ರೋಲ್‌ ಪಂಪ್‌ ಅಥವಾ ಬಂಕ್‌ನಲ್ಲೂ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯನ್ನು ಹೆಚ್ಚಿಸುತ್ತದೆ.

  ಸ್ಥಿರವಾಗಿದೆ ಪೆಟ್ರೋಲ್, ಡೀಸೆಲ್ ಬೆಲೆ

  ಆದರೆ, ಈ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 27 ರಷ್ಟು ಏರಿಕೆಯಾಗಿದ್ದರೂ ಸಹ, ನವೆಂಬರ್ 4 ರಿಂದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಹುತೇಕ ಸ್ಥಿರವಾಗೇ ಇರಿಸಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ವಾಣಿಜ್ಯ ರಾಜಧಾನಿ ಮುಂಬೈ, ಕೋಲ್ಕತ್ತ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ವರ್ಷದಿಂದ ಬೆಲೆಯಲ್ಲಿ ವ್ಯತ್ಯಾಸವೇ ಆಗಿಲ್ಲ ಎನ್ನಬಹುದು.

  ಪೆಟ್ರೋಲಿಯಂ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಬೆಲೆಗಳಿಗೆ ಅನುಗುಣವಾಗಿ OMC ಗಳು ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದರು.

  ಇನ್ನು, ಕಚ್ಚಾ ತೈಲ ಬೆಲೆಗಳು ಹೆಚ್ಚಿದಂತೆ ಚಾಲ್ತಿ ಖಾತೆ ಕೊರತೆಯ (CAD) ಮೇಲೆ ಪ್ರಭಾವ ಬೀರುತ್ತವೆ, ಅದರ ಇಂಧನ ಶಕ್ತಿಯ ಅವಶ್ಯಕತೆಗಳಿಗಾಗಿ ಭಾರತದ ಆಮದು ಅವಲಂಬನೆ ನಿರ್ಧಾರವಾಗುತ್ತದೆ. ಭಾರತೀಯ ಕಚ್ಚಾ ಬ್ಯಾಸ್ಕೆಟ್‌ನ ಸರಾಸರಿ ಬೆಲೆಯಲ್ಲಿ ಒಂದು ಬ್ಯಾರೆಲ್‌ಗೆ ಪ್ರತಿ 10 ಡಾಲರ್‌ ಏರಿಕೆಗೆ CAD 14-15 ಬಿಲಿಯನ್‌ ಡಾಲರ್‌ (GDP ಯ 0.4%) ರಷ್ಟು ವಿಸ್ತರಿಸುವ ಸಾಧ್ಯತೆಯಿದೆ ಎಂದು ICRA ವರದಿ ಹೇಳುತ್ತದೆ.

  "FY2023 ರಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್‌ಗೆ ಸರಾಸರಿ 130 ಡಾಲರ್‌ ಆದ್ದರೆ, CAD ಜಿಡಿಪಿಯ 3.2% ಗೆ ವಿಸ್ತರಿಸುತ್ತದೆ. ಹೀಗೆ ಆದಲ್ಲಿ ಒಂದು ದಶಕದಲ್ಲಿ ಮೊದಲ ಬಾರಿಗೆ ಸಿಎಡಿ 3% ಅನ್ನು ದಾಟುತ್ತದೆ" ಎಂದೂ ICRA ಹೇಳಿದೆ.

  ರಷ್ಯಾದೊಂದಿಗೆ ಮಾತುಕತೆ..!

  ಇನ್ನೊಂದೆಡೆ, ಕಚ್ಚಾ ತೈಲವನ್ನು ಸಂಗ್ರಹಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

  “ಸದ್ಯಕ್ಕೆ ಚರ್ಚೆಗಳು ನಡೆಯುತ್ತಿವೆ. ಎಷ್ಟು ತೈಲ ಲಭ್ಯವಿದೆ ಎಂಬುದು ಸೇರಿ ಈ ವಿಚಾರದಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಕೇಮದ್ರ ಸಚಿವ ಪುರಿ ಸಂಸತ್ತಿನಲ್ಲಿ ಹೇಳಿದ್ದರು.

  ಕಚ್ಚಾ ತೈಲ ಸರಕುಗಳಿಗೆ ರಿಯಾಯಿತಿ ದರ

  SWIFT ಹಣಕಾಸು ವಹಿವಾಟು ಸಂದೇಶ ವ್ಯವಸ್ಥೆಯಿಂದ 7 ರಷ್ಯಾದ ಬ್ಯಾಂಕ್‌ಗಳನ್ನು ನಿರ್ಬಂಧಿಸಲು EU ನಿರ್ಧರಿಸಿದಾಗಿನಿಂದ ರಷ್ಯಾ ಕಚ್ಚಾ ತೈಲ ಸರಕುಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದೆ.

  ಇದನ್ನೂ ಓದಿ: Explained: ಯುದ್ಧದಾಹಿ ರಷ್ಯಾಕ್ಕಿಲ್ಲ 'ನೆಚ್ಚಿನ ರಾಷ್ಟ್ರ'ದ ಸ್ಥಾನಮಾನ! ಇದರಿಂದ ಲಾಭವೋ? ನಷ್ಟವೋ?

  ರಷ್ಯಾದ ತೈಲ ಸರಕುಗಳಿಗೆ ಖರೀದಿದಾರರನ್ನು ಹುಡುಕಲು ಕಷ್ಟಕರವಾಗಿರುವುದರಿಂದ ರಷ್ಯಾ ಈ ನಿರ್ಧಾರ ಮಾಡಿದೆ. ಭಾರತಕ್ಕೂ ಸಹ ಕಡಿಮೆ ಬೆಲೆಗೆ ಅಥವಾ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡೋದಾಗಿಯೂ ರಷ್ಯಾ ಆಫರ್‌ ಮಾಡಿದೆ.

  ಉಕ್ರೇನ್‌ ಅನ್ನು ರಷ್ಯಾ ಆಕ್ರಮಣ ಮಾಡಿರುವ ಸಮಯದಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದರಿಂದ ಸಂಭಾವ್ಯ ಪ್ರತಿಷ್ಠೆಯ ಹಾನಿಯಾಗುತ್ತದೆಂದು ಹಲವು ರಾಷ್ಟ್ರಗಳು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ನಿರ್ಧಾರದಿಂದ ಹಿಂದೆ ಸರಿದಿವೆ.
  Published by:Annappa Achari
  First published: