Explained: ಭಾರತದಲ್ಲಿ ಮಗುವಿನ ಪಾಲನೆ-ಪೋಷಣೆ ದುಬಾರಿ ಏಕೆ? ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತಾ?

ಭಾರತದಲ್ಲಿ ಶಿಕ್ಷಣವು ಒಂದಿಲ್ಲೊಂದು ಸಮಸ್ಯೆಗಳನ್ನುಎದುರಿಸುತ್ತಲೇ ಇದೆ. ಅದಾಗ್ಯೂ ಪಾಲಕರು ಈ ಶಿಕ್ಷಣ ಪದ್ಧತಿಯೊಂದಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ದುಬಾರಿ ಹಾಗೂ ಸಮಯ ನಷ್ಟ ಎಂದೇ ನಂಬಿದ್ದರು. ಇದೀಗ ಈ ನಂಬಿಕೆಗೆ ಪುಷ್ಟಿ ನೀಡುವಂತೆ ET (ಎಕನಾಮಿಕ್ ಟೈಮ್ಸ್) ಆನ್‌ಲೈನ್ ಸಂಶೋಧನೆಯನ್ನು ನಡೆಸಿದ್ದು, ಈ ಪ್ರಕಾರ ಭಾರತದಲ್ಲಿ 3 ರಿಂದ 17 ವರ್ಷದವರೆಗಿನ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ತಗುಲುವ ವೆಚ್ಚ ರೂ 30 ಲಕ್ಷ ಎಂಬುದಾಗಿ ಅಂದಾಜಿಸಿದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದಲ್ಲಿ ಶಿಕ್ಷಣವು (Education) ಒಂದಲ್ಲ ಒಂದು ಸಮಸ್ಯೆಗಳನ್ನುಎದುರಿಸುತ್ತಲೇ ಇದೆ. ಅದಾಗ್ಯೂ ಪಾಲಕರು ಈ ಶಿಕ್ಷಣ ಪದ್ಧತಿಯೊಂದಿಗೆ (Education system) ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ದುಬಾರಿ, ಕಷ್ಟ ಹಾಗೂ ಸಮಯ ನಷ್ಟ ಎಂದೇ ನಂಬಿದ್ದರು. ಆದರೆ ಇದೀಗ ಈ ನಂಬಿಕೆಗೆ ಪುಷ್ಟಿ ನೀಡುವಂತೆ ಸುದ್ದಿ ಮಾಧ್ಯಮವೊಂದು ಆನ್‌ಲೈನ್ ಸಂಶೋಧನೆಯನ್ನು (Online Research) ನಡೆಸಿದ್ದು, ಈ ಪ್ರಕಾರ ಭಾರತದಲ್ಲಿ 3 ರಿಂದ 17 ವರ್ಷದವರೆಗಿನ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ತಗುಲುವ ವೆಚ್ಚ ರೂ 30 ಲಕ್ಷ ಎಂಬುದಾಗಿ ಅಂದಾಜಿಸಿ  ವರದಿ ಮಾಡಿದೆ. 

ಶಿಕ್ಷಣದೊಂದಿಗೆ ಯೋಜನೆ ಕೂಡ ಮುಖ್ಯ:
ಪುಣೆಯ ಮಯೂರಿ ಹಾಗೂ ಆನಂದ್ ದಂಪತಿಗಳು ತಮ್ಮ 8 ರ ಹರೆಯದ ಮಗಳು 25 ನೇ ವಯಸ್ಸಿನವಳಾಗುವವರೆಗಿನ ಶಿಕ್ಷಣದ ಯೋಜನೆಯನ್ನು ನಡೆಸಿದ್ದರು. ತಮ್ಮ ಮಗಳ ಶಾಲಾ ಶುಲ್ಕವನ್ನು ಹೇಗೆ ಯೋಜಿಸುತ್ತೀರಿ ಎಂಬುದಾಗಿ ಮಯೂರಿ ಅವರನ್ನು ಪ್ರಶ್ನಿಸಿದಾಗ ಇದೀಗ ತಮ್ಮ ಯೋಜನೆಗಳು ತಲೆಕೆಳಗಾಗಿವೆ ಎಂಬುದಾಗಿ ಅವರು ಹೇಳಿದ್ದಾರೆ, ಇದಕ್ಕೆ ಕಾರಣ ಅನಿರೀಕ್ಷಿತವಾಗಿ ಏರುತ್ತಿರುವ ವೆಚ್ಚ ಹಾಗೂ ಆಗಾಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆಗಳು ಎಂಬುದು ದಂಪತಿಗಳ ಅಭಿಪ್ರಾಯವಾಗಿದೆ.

"ಶಾಲೆ ಮತ್ತು ಬೋಧನಾ ವೆಚ್ಚವು ಪ್ರತಿ 2-5 ವರ್ಷಗಳಿಗೊಮ್ಮೆ ಬದಲಾಗುತ್ತಲೇ ಇರುತ್ತದೆ. ಆದ್ದರಿಂದ, ಶುಲ್ಕ ಹೆಚ್ಚಳದ ಸಂದರ್ಭದಲ್ಲಿ ನಾವು ಸಂಪೂರ್ಣ ಶಿಕ್ಷಣ ವೆಚ್ಚಕ್ಕಾಗಿ ಹೆಚ್ಚುವರಿ ಹಣವನ್ನು ಇರಿಸಿದ್ದೇವೆ, ”ಎಂದು ಮಯೂರಿ ಹೇಳುತ್ತಾರೆ. ಐಟಿ ಉದ್ಯಮದಲ್ಲಿ ಉದ್ಯೋಗದಲ್ಲಿರುವ ದಂಪತಿಗಳು 20 ವರ್ಷಗಳ ಕಾಲಾವಧಿಯೊಂದಿಗೆ ಪಿಪಿಎಫ್ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಶಿಕ್ಷಣದ ವಿಷಯದಲ್ಲಿ ಬದಲಾವಣೆಯೊಂದಿಗೆ ಹೊಂದಿಕೊಳ್ಳಬೇಕು ಏಕೆ?
ಮಗುವಿನ ಶಿಕ್ಷಣದ ವಿಷಯಕ್ಕೆ ಬಂದಾಗ ತುಂಬಾ ಬಿರುಸಾಗದೇ ಇರುವುದು ವಿವೇಕಯುತವಾಗಿದೆ. ಹಣದುಬ್ಬರವು ಹೆಚ್ಚಾಗಿದ್ದರೂ, ಅರ್ಥಶಾಸ್ತ್ರಜ್ಞರ ಪ್ರಕಾರ, ಏರುತ್ತಿರುವ ಖಾಸಗಿ ಶಿಕ್ಷಣದ ವೆಚ್ಚವನ್ನು ಹಣದುಬ್ಬರ ದತ್ತಾಂಶದಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲಾಗಿಲ್ಲ ಏಕೆಂದರೆ ಇದು ದಶಕದ-ಹಳೆಯ ಮಾದರಿಯ ಆಧಾರದ ಮೇಲೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಕೇವಲ 4.5% ರಷ್ಟಿದೆ.

ಮಗುವನ್ನು ಶಾಲೆಗೆ ದಾಖಲಾತಿ ಮಾಡುವಾಗ ಪ್ರವೇಶಾತಿ ಶುಲ್ಕ ಎಂಬುದು ವೆಚ್ಚದ ಆರಂಭ ಹಂತವಾಗಿ ಪರಿಣಮಿಸುತ್ತದೆ. ಶ್ರೇಣಿ1ರ ವ್ಯಾಪ್ತಿಗೆ ಬರುವ ನಗರಗಳು ಪ್ರವೇಶಾತಿ ಶುಲ್ಕಕ್ಕೆ ನಿಗದಿಪಡಿಸಿರುವ ಮೊತ್ತ ರೂ 25,000 ಹಾಗೂ ರೂ 75,000 ನಡುವೆ ಆಗಿದೆ. ಒಡಹುಟ್ಟಿದವರನ್ನು ಜೊತೆಯಾಗಿ ಶಾಲೆಗೆ ಸೇರಿಸಿದರೆ ಕೆಲವು ಶಾಲೆಗಳು ವಿನಾಯಿತಿಗಳನ್ನು ನೀಡುತ್ತವೆ.

ವೆಚ್ಚದಾಯಕವಾಗಿರುವ ಡೇಕೇರ್‌ಗಳು:
ಈ ರಿಯಾಯಿತಿಗಳು ರೂ 10,000-20,000 ಶ್ರೇಣಿಯಲ್ಲಿವೆ. ಪ್ರಿಸ್ಕೂಲ್ ನರ್ಸರಿ ಮತ್ತು ಕಿಂಡರ್‌ಗಾರ್ಟನ್ ಅನ್ನು ಒಳಗೊಂಡಿದೆ. ಶ್ರೇಣಿ-I ಮತ್ತು II ನಗರಗಳಾದ್ಯಂತ ಹೆಚ್ಚಿನ ಶಾಲೆಗಳಲ್ಲಿ ಸರಾಸರಿ ಬೋಧನಾ ಶುಲ್ಕವು ಶಾಲೆಯ ಬ್ರ್ಯಾಂಡ್‌ಗೆ ಅನುಗುಣವಾಗಿ ವರ್ಷಕ್ಕೆ ರೂ 60,000 ಗಳಿಂದ 1.5 ಲಕ್ಷದವರೆಗೆ ಇರುತ್ತದೆ ಎಂಬುದು ಸತ್ಯವಾದ ಮಾತಾಗಿದೆ. ಪೋಷಕರಿಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳನ್ನು ಡೇಕೇರ್ ಕೇಂದ್ರಗಳಲ್ಲಿ ದಾಖಲಿಸಲಾಗುತ್ತದೆ. ಆನ್‌ಲೈನ್ ವಿಶ್ಲೇಷಣೆಯ ಪ್ರಕಾರ ಮೆಟ್ರೋ ನಗರಗಳಲ್ಲಿರುವ ಡೇ ಕೇರ್‌ಗಳು ದಿನಕ್ಕೆ ರೂ 5,000-8,000 ದವರೆಗೆ ಶುಲ್ಕ ವಿಧಿಸುತ್ತವೆ ಎಂದಾಗಿದೆ. ಐದು ಗಂಟೆಗಳ ಕಾಲ ಮಕ್ಕಳು ಡೇಕೇರ್‌ನಲ್ಲಿದ್ದರೆ ಇದಕ್ಕೆ ತಗುಲುವ ವೆಚ್ಚ ವರ್ಷಕ್ಕೆ ರೂ 2ಲಕ್ಷವಾಗಿದೆ.

ಇದನ್ನೂ ಓದಿ:  PUC ಆಯ್ತು ಮುಂದೇನು ಮಾಡೋದು ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ಬೆಸ್ಟ್ ಫ್ಯೂಚರ್ ಪ್ಲಾನ್

ಪ್ರಾಥಮಿಕ ಶಾಲೆಗೆ ವರ್ಷಕ್ಕೆ ಬೋಧನಾ ಶುಲ್ಕ ರೂ 1.25 ಲಕ್ಷ -1.75 ಲಕ್ಷ. ಪ್ರಾಥಮಿಕ ಶಿಕ್ಷಣಕ್ಕಾಗಿ ಪೋಷಕರು ರೂ 5.50 ಲಕ್ಷ ವನ್ನು ವ್ಯಯಿಸಬೇಕು. ಮಧ್ಯಮ ಶಾಲೆಗೆ ಸರಾಸರಿ ವಾರ್ಷಿಕ ಶುಲ್ಕ ಸುಮಾರು ರೂ 1.6 ಲಕ್ಷ - 1.8 ಲಕ್ಷ ಮತ್ತು ಇಲ್ಲಿ ಒಟ್ಟಾರೆ ವೆಚ್ಚ ಸುಮಾರು 9.5 ಲಕ್ಷವಾಗಿದೆ.

ಶಾಲೆಗಳಿಗಿಂತ ದುಬಾರಿಯಾಗಿರುವ ಕಾಲೇಜು ಶಿಕ್ಷಣ:
ಹೆಚ್ಚಿನ ಮಧ್ಯಮ ವರ್ಗದ ಪೋಷಕರು ಈಗ ಕಾಲೇಜು ಶಿಕ್ಷಣಕ್ಕಾಗಿ ಬಜೆಟ್ ಹೊಂದಿಸುತ್ತಾರೆ, ಇದೀಗ ಕಾಲೇಜುಗಳು ಶಾಲೆಗಿಂತ ಹೆಚ್ಚು ದುಬಾರಿ ಎಂದೆನಿಸಿವೆ. ಕೆಲವರು ವಿದೇಶದ ಕಾಲೇಜುಗಳಲ್ಲಿ ಸ್ಕಾಲರ್‌ಶಿಪ್‌ಗಳ ಮೇಲೆ ತಮ್ಮ ಭರವಸೆಯನ್ನು ಹೊಂದಿದ್ದಾರೆ, ಇನ್ನು ಕೆಲವರು ಶೈಕ್ಷಣಿಕ ಸಾಲದ ಮೇಲೆ ವಿಶ್ವಾಸವನ್ನಿರಿಸಿದ್ದಾರೆ.

ಪುಣೆ ಮೂಲದ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಪೂನಂ ಸಂಘಿ ಅವರು ತಮ್ಮ ಮಗಳ ಕಾಲೇಜು ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್‌ಗಾಗಿ ಲೇವಾದೇವಿ ಮಾಡುತ್ತಿದ್ದಾರೆ. ಪೂನಂ ಮತ್ತು ಅವರ ಪತಿ ರಾಕೇಶ್ 15-18 ವರ್ಷಗಳ ಗುರಿಯೊಂದಿಗೆ ಮೊದಲೇ ಯೋಜಿಸಲು ಪ್ರಾರಂಭಿಸಿದರು. ಅವರು ಸ್ಥಿರ ಠೇವಣಿಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಮತ್ತು ಇತ್ತೀಚೆಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸವಾಲಿನದ್ದಾಗಿದೆ ಏಕೆ?
ಭಾರತದೊಳಗಿನ ಉನ್ನತ ಶಿಕ್ಷಣವು ತುಂಬಾ ಕಠಿಣವಾದುದು. IIT ಅಥವಾ ಯಾವುದೇ ಇತರ ಖಾಸಗಿ ಸಂಸ್ಥೆಗಳಂತಹ ಉನ್ನತ ದರ್ಜೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ 4-ವರ್ಷದ ಬಿಟೆಕ್ ಅಥವಾ 3-ವರ್ಷದ ಬಿಎಸ್‌ಸಿ ಗೆ ಸೇರಲು ಸುಮಾರು 4-20 ಲಕ್ಷ ರೂ ವೆಚ್ಚ ತಗುಲುತ್ತದೆ. JEE, JEE (ಮುಖ್ಯ) ಮತ್ತು ಇತರ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ವೆಚ್ಚವು ರೂ 30,000 ರಿಂದ 5 ಲಕ್ಷ ರೂ ಆಗಿದೆ.

ಇಪ್ಪತ್ತು IIM ಗಳಲ್ಲಿ ಒಂದಾದಂತಹ ಉನ್ನತ ದರ್ಜೆಯ ನಿರ್ವಹಣಾ ಸಂಸ್ಥೆ ಅಥವಾ ದೇಶದ ಯಾವುದೇ ಇತರ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ 8 ಲಕ್ಷ-ರೂ. 23 ಲಕ್ಷ ವೆಚ್ಚವಾಗುತ್ತದೆ. CAT ಅಥವಾ GMAT ನಂತಹ ಅರ್ಹತಾ ಪರೀಕ್ಷೆಗಳಿ ತರಬೇತಿಯು ಹೆಚ್ಚುವರಿ ವೆಚ್ಚವನ್ನು ಹೊಂದಿದೆ.

ಶಿಕ್ಷಣಕ್ಕಾಗಿ ಹೂಡಿಕೆ ಮಾಡುವುದು ಏಕೆ ಅತ್ಯಗತ್ಯ?
ಸಾಂಕ್ರಾಮಿಕ ಅಥವಾ ಆರ್ಥಿಕ ಹಿಂಜರಿತ ಯಾವಾಗ ಬೇಕಾದರೂ ಉಂಟಾಗುತ್ತದೆ ಹಾಗಾಗಿ ಪೋಷಕರು ಸಾಧ್ಯವಾದಷ್ಟು ಬೇಗ ಮಗುವಿನ ಶಿಕ್ಷಣ ಯೋಜನೆಯನ್ನು ಆರಂಭಿಸಬೇಕು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಮಗುವಿನ ಭವಿಷ್ಯದ ಯೋಜನೆಗೆ ಉತ್ತಮ ವಿಧಾನವೆಂದರೆ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ಮದುವೆಯಂತಹ ಮಗುವಿನ ಜೀವನದ ಪ್ರಮುಖ ಹಂತಗಳನ್ನು ಪರಿಗಣಿಸಿ ಮತ್ತು ಸಾಧ್ಯವಾದಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸುವುದು. ಅಲ್ಪಾವಧಿಯ ಇಲ್ಲವೇ ದೀರ್ಘಾವಧಿಯ ಗುರಿಗಳನ್ನು ಪರಿಗಣಿಸಿ ಸರಿಯಾದ ಮಾಧ್ಯಮಗಳಲ್ಲಿ ಹೂಡಿಕೆ ಮಾಡಬೇಕು ಎಂಬುದಾಗಿ ತಜ್ಞರು ತಿಳಿಸುತ್ತಾರೆ.

ತುರ್ತು ಸಂಗ್ರಹಣೆಯನ್ನು ಯೋಜಿಸಿ:
“ಮಕ್ಕಳನ್ನು ಹೊಂದುವ ಮೊದಲು, 3-6 ತಿಂಗಳ ವೆಚ್ಚಗಳ ತುರ್ತು ನಿಧಿ ಸಾಕು. ಆದರೆ ಮಕ್ಕಳಾದ ನಂತರ, 6 ತಿಂಗಳಿಂದ ಒಂದು ವರ್ಷದ ವೆಚ್ಚವನ್ನು ನಗದು ಅಥವಾ ಎಫ್‌ಡಿಗಳು, ಲಿಕ್ವಿಡ್ ಫಂಡ್‌ಗಳು ಮತ್ತು ಅಲ್ಟ್ರಾ-ಶಾರ್ಟ್ ಟರ್ಮ್ ಫಂಡ್‌ಗಳಂತಹ ಸಮಾನವಾದ ಹೂಡಿಕೆಗಳಲ್ಲಿ ಹಣವನ್ನಿರಿಸುವುದು ಉತ್ತಮ ಎಂಬುದಾಗಿ ಆರ್ಥಿಕ ತಜ್ಞ ಬಿರಾನಿ ಹೇಳುತ್ತಾರೆ.

ಇದನ್ನೂ ಓದಿ:  Jio Institute: ಜಿಯೋ ಇನ್ಸ್ಟಿಟ್ಯೂಟ್ ನ ಮೊದಲ ಬ್ಯಾಚ್ ಆರಂಭ, ಇದು ನಮ್ಮ ಕನಸಿನ ಕೇಂದ್ರ ಎಂದ ನೀತಾ ಅಂಬಾನಿ

ಪಾಲಕರು ಮಗುವನ್ನು ಕೌಟುಂಬಿಕ ಆರೋಗ್ಯ ವಿಮೆಗೆ ಸೇರ್ಪಡೆಗೊಳಿಸುವುದು ಉತ್ತಮ ಮತ್ತು ಆರೋಗ್ಯ ವಿಮಾ ರಕ್ಷಣೆಯನ್ನು ಕನಿಷ್ಠ ರೂ 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ದರಕ್ಕೆ ಏರಿಸಬಹುದು. ದೀರ್ಘಾವಧಿಯ ಗುರಿಗಳು ಪದವಿ ವೆಚ್ಚಗಳು, ಉನ್ನತ ಶಿಕ್ಷಣ ಮತ್ತು ಮದುವೆಯನ್ನು ಒಳಗೊಂಡಿರುತ್ತದೆ. "ಪೋಷಕರು 85% ಈಕ್ವಿಟಿ ಮತ್ತು 15% ಸಾಲದ ಪೋರ್ಟ್‌ಫೋಲಿಯೊದಲ್ಲಿ ದೀರ್ಘಾವಧಿಯ ಗುರಿಗಳನ್ನು (10 ವರ್ಷಗಳಿಗಿಂತ ಹೆಚ್ಚು) ಹೂಡಿಕೆ ಮಾಡಬಹುದು,'' ಎಂದು ಬಿರಾನಿ ಹೇಳುತ್ತಾರೆ.
Published by:Ashwini Prabhu
First published: