Explainer: ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ತೆರಳಲು ಆಗಸ್ಟ್ 31 ಡೆಡ್​​ಲೈನ್​ ಏಕೆ? ಹಿಂದಿನ ಕಾರಣವೇನು?

Why is August 31 chosen as deadline: ಅಪ್ಘನ್ ಪಡೆಗಳು ಕೆಲವು ಕಾಲದವರೆಗೆ ತಾಲಿಬಾನ್ ಅನ್ನು ಹಿಡಿದಿಟ್ಟುಕೊಳ್ಳಬಹುದೆಂದು ಅದು ಭಾವಿಸಿತ್ತು. ಅಮೆರಿಕಾ ಸೇನೆ ತೆರಳಿದ ನಂತರ ಸರಕಾರಿ ಪಡೆಗಳನ್ನು ಆರು ತಿಂಗಳ ನಂತರ ತನ್ನ ವಶದಲ್ಲಿರಿಸಿಕೊಳ್ಳಬೇಕೆಂದು ಯುಎಸ್ ಗುಪ್ತಚರ ಸಂಸ್ಥೆ ನಂಬಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  Afghanistan crisis: ಅಪ್ಘಾನ್ ನೆಲದಲ್ಲಿ ಪ್ರಸ್ತುತ ತಾಲಿಬಾನ್ ಆಡಳಿತ ಯಾವುದೇ ನಿರ್ಬಂಧವಿಲ್ಲದೆ ಅವ್ಯಾಗತವಾಗಿ ನಡೆಯುತ್ತಿದ್ದು ಅಪ್ಘನ್ ಪ್ರಜೆಗಳು ವಿಧಿ ಇಲ್ಲದೆ ತಾಲಿಬಾನಿಗಳ ಆಡಳಿತಕ್ಕೆ ತಲೆಬಾಗಬೇಕಾಗಿದೆ. ಪಲಾಯನಗೈದವರು ದೇಶ ತೊರೆದು ಹೋದವರು ಎಲ್ಲಿಯಾದರೂ ತಾವು ಬದುಕಬಹುದೆಂಬ ಆಶಾಭಾವನೆಯಿಂದ ಸಿಕ್ಕ ಸಿಕ್ಕ ವಿಮಾನಗಳನ್ನು ಏರಿ ಸಾಗಿದ್ದು ತಾಲಿಬಾನಿಗಳ ಕೈಯಲ್ಲಿ ಸಿಕ್ಕಿ ನರಳಿ ಸಾಯುವುದಕ್ಕಿಂತ ಬೇಡಿಯಾದರೂ ಬದುಕುತ್ತೇವೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗೆ ಅಪ್ಘನ್ ನಿರಾಶ್ರಿತರಿಗೆ ಭಾರತ ಸೇರಿದಂತೆ ಪ್ರಪಂಚ ಕೆಲವೊಂದು ದೇಶಗಳು ಪ್ರವೇಶವನ್ನು ಒದಗಿಸಿವೆ. ಮಾನವೀಯ ನೆಲೆಯಲ್ಲಿ ಅವರನ್ನು ನಿರಾಶ್ರಿತರಂತೆ ಕಾಣದೇ ಕೆಲವೊಂದು ಅನುಕೂಲಗಳನ್ನು ವ್ಯವಸ್ಥೆಗಳನ್ನು ನಿರ್ಮಿಸಿದೆ.


  ತಾಲಿಬಾನಿಗಳ ಕೈಯಲ್ಲಿ ಜೀವ ಹಿಡಿದುಕೊಂಡು ಬದುಕುತ್ತಿರುವ ಅದೆಷ್ಟೋ ಅಪ್ಘನ್ನರಿಗೆ ಇನ್ನು ಮುಂದೆ ರೌರವ ನರಕವನ್ನೇ ಪ್ರದರ್ಶಿಸು ಸನ್ನಾಹದಲ್ಲಿದ್ದಾರೆ ಈ ಧುರುಳರು. ಅಪ್ಘನ್ ಪ್ರಜೆಗಳಿಗೆ ತಮ್ಮಿಂದ ಯಾವುದೇ ಹಾನಿಯುಂಟಾಗುವುದಿಲ್ಲವೆಂದು ಹೇಳಿದ ತಾಲಿಬಾನಿ ಅಧಿಕಾರಿಗಳು ಪರೋಕ್ಷವಾಗಿ ಅಪ್ಘನ್ ಜನರನ್ನು ಬೇಟೆಯಾಡುತ್ತಿದ್ದಾರೆ. ಅವರಿಗೆ ಹಿಂಸೆಯನ್ನು ನೀಡುತ್ತಿದ್ದಾರೆ. ಮಹಿಳೆಯರಿಗೆ ಶರಿಯಾ ಕಾನೂನಿನ ಹೆಸರಿನಲ್ಲಿ ಕೊಡಬಾರದ ಉಪಟಳವನ್ನುಂಟು ಮಾಡುತ್ತಿದ್ದಾರೆ. ಹೀಗೆ ದೇವರ ಹೆಸರಿನಲ್ಲಿ ಅನೇಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಅಮೆರಿಕಾ ಸೇನೆಗಳ ರಕ್ಷಣೆಯಲ್ಲಿದ್ದ ಈ ದೇಶ ಇಂದು ಚಿದ್ರಚಿದ್ರವಾಗಿ ಹೋಗಿದೆ. ರಕ್ಷಕರಿಲ್ಲದೆ ಬಿಕೋ ಎನ್ನುತ್ತಿದೆ. ಹಠಾತ್ ಅಮೆರಿಕಾ ಸೇನೆಯು ಅಪ್ಘನ್ ನೆಲವನ್ನು ತೊರೆದಿರುವುದು, ಆಧುನಿಕ ಶಸ್ತ್ರಾಸ್ತಗಳನ್ನು ದೇಶದಲ್ಲಿಯೇ ತ್ಯಜಿಸಿರುವುದು ಅನೇಕ ಊಹಪೋಹಗಳಿಗೆ ಕಾರಣವಾಗಿದೆ. ಸಂಪೂರ್ಣ ವಿಶ್ವವೇ ಅಪ್ಘನ್‌ನ ಇಂದಿನ ಸ್ಥತಿಗೆ ಅಮೆರಿಕಾ ಕೂಡ ಕಾರಣವಾಗಿದೆ ಎಂದು ಬೊಟ್ಟು ಮಾಡುತ್ತಿದೆ. ತಾಲಿಬಾನಿಗಳು ಕೂಡ ಅಮೆರಿಕಾಕ್ಕೆ ತನ್ನ ಸೇನೆಯನ್ನು ವಾಪಾಸು ಕರೆದುಕೊಳ್ಳಲು ಆಗಸ್ಟ್ 31 ರವರೆಗೆ ಕಾಲಾವಕಾಶವನ್ನು ನೀಡಿದ್ದು ಇದರ ನಂತರ ಅಪ್ಘಾನಿಸ್ತಾನದಲ್ಲಿ ಒಬ್ಬನೇ ಒಬ್ಬ ಅಮೆರಿಕಾ ಸೇನೆಯ ವ್ಯಕ್ತಿ ಕಾಣಬಾರದೆಂದು ತಾಕೀತು ಮಾಡಿದೆ. ಈ ಸುದ್ದಿಯ ಕುರಿತು ಮತ್ತಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.


  ಇಪ್ಪತ್ತು ವರ್ಷಗಳ ಕಾಲ ಅಪ್ಘಾನಿಸ್ತಾನದಲ್ಲಿ ತನ್ನ ಸೇನಾ ತುಕಡಿಯನ್ನು ನೇಮಿಸಿದ್ದ ಅಮೆರಿಕಾ ತಾಲಿಬಾನ್‌ನೊಂದಿಗೆ ನಡೆಸಿದ್ದ ಒಪ್ಪಂದದ ಅನ್ವಯ ಆಗಸ್ಟ್ 31 ರೊಳಗೆ ಒಬ್ಬನೇ ಒಬ್ಬ ಅಮೆರಿಕಾ ಸೇನಾ ಸದಸ್ಯರು ಇರಬಾರದೆಂಬ ಷರತ್ತಿನ ಅನ್ವಯ ನಡೆದುಕೊಳ್ಳಹೊರಟಿದೆ. ಸತತವಾಗಿ ತಾಲಿಬಾನಿಗಳೊಂದಿಗೆ ಯುದ್ಧ ನಡೆಸಿದ್ದ ಅಮೆರಿಕಾ ದೇಶಕ್ಕೆ ತಗಲಿರುವ ಖರ್ಚು 2 ಟ್ರಿಲಿಯನ್ ಯುಎಸ್ ಡಾಲರ್ ಎಂಬುದನ್ನು ಸ್ವತಃ ಅಮೆರಿಕಾವೇ ಬಹಿರಂಗಪಡಿಸಿದ್ದು ಅಂದಾಜು 3,000 ಅಮೆರಿಕಾ ಸೇನಾ ಸಿಬ್ಬಂದಿಗಳು ಯುದ್ಧದಲ್ಲಿ ಅಸುನೀಗಿದ್ದಾರೆ ಎಂಬ ಮಾಹಿತಿಯನ್ನು ನೀಡಿತ್ತು. ಹೀಗೆ ಅಮೆರಿಕಾ ಸೇನೆಯ ಹಠಾತ್ ನಿರ್ಗಮನ ವಿಶ್ವದೆಲ್ಲೆಡೆ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ. ಇಪ್ಪತ್ತು ವರ್ಷಗಳ ಕಾಲ ತಾಲಿಬಾನ್‌ನೊಂದಿಗಿನ ಹೋರಾಟದಲ್ಲಿ ಅಪ್ಘಾನಿಸ್ತಾನಕ್ಕೆ ಬೆಂಬಲವಾಗಿದ್ದ ಅಮೆರಿಕಾ ಆಗಸ್ಟ್ 31 ರಿಂದ ದೇಶದಲ್ಲಿ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಆದೇಶಕ್ಕೆ ಬದ್ಧವಾಗಿದೆ.


  ಆಗಸ್ಟ್ 31 ಅನ್ನು ಅಮೆರಿಕಾ ಆರಿಸಿಕೊಂಡಿದ್ದೇಕೆ?


  ಅಮೆರಿಕಾದ ಮಾಜಿ ಅಧ್ಯಕ್ಷ ಹಾಗೂ ಜೋ ಬಿಡೆನ್‌ನ ಪೂರ್ವಾಧಿಕಾರಿಯಾಗಿದ್ದ ಡೊನಾಲ್ಡ್ ಟ್ರಂಪ್ ತಾಲಿಬಾನ್‌ನೊಂದಿಗೆ ನಡೆಸಿದ ಒಪ್ಪಂದದ ಅನ್ವಯ ಮೇ 1, 2021 ರ ಒಳಗೆ ಎಲ್ಲಾ ಯುಎಸ್ ಸೇನಾ ಪಡೆಗಳು ಅಪ್ಘನ್ ನೆಲದಿಂದ ಹಿಂದೆ ಸರಿಯಲಿವೆ ಎಂಬುದಾಗಿತ್ತು.


  ಜೋ ಬೈಡನ್ ಅಮೆರಿಕಾದ ಅಧ್ಯಕ್ಷ ಹುದ್ದೆಯನ್ನಲಂಕರಿಸಿದ ನಂತರ ಹಿಂದಿನ ಆಡಳಿತವು ಆದೇಶಿಸಿದ್ದ ಹಿಂದಿನ ಗಡುವನ್ನು ವಿಸ್ತರಿಸಿ ನಾಲ್ಕು ತಿಂಗಳ ವಿಸ್ತರಣೆಯನ್ನು ಏಪ್ರಿಲ್ 14 ರಂದು ಘೋಷಿಸಿದ್ದರು.


  ಅಮೆರಿಕಾ ಸೇನೆ ಅಪ್ಘಾನಿಸ್ತಾನ ತ್ಯಜಿಸಲು ಕಾರಣವೇನು?


  ಅಫ್ಘಾನಿಸ್ತಾನ ಕೂಡ ತಾಲಿಬಾನಿಗಳೊಂದಿಗಿನ ಸಮರದಲ್ಲಿ ತನ್ನ ಹೋರಾಟವನ್ನು ಇನ್ನಷ್ಟು ಪ್ರಬಲಗೊಳಿಸುವ, ಸಂಘಟಿಸುವ ನಿಟ್ಟಿನಲ್ಲಿ ಅಮೆರಿಕಾ ಅಧಿಕ ಸಮಯವನ್ನು ನೀಡಲು ಬಯಸಿತು, ಯುಎಸ್ ನಿಯಂತ್ರಿತ ನೆಲೆಗಳು ಹಾಗೂ ಉಪಕರಣಗಳನ್ನು ಅಪ್ಘಾನಿಸ್ತಾನಕ್ಕೆ ಒದಗಿಸುವ ಯೋಜನೆ ಕೂಡ ಒಳಗೊಂಡಿದೆ.ಅಪ್ಘನ್ ಪಡೆಗಳು ಕೆಲವು ಕಾಲದವರೆಗೆ ತಾಲಿಬಾನ್ ಅನ್ನು ಹಿಡಿದಿಟ್ಟುಕೊಳ್ಳಬಹುದೆಂದು ಅದು ಭಾವಿಸಿತ್ತು. ಅಮೆರಿಕಾ ಸೇನೆ ತೆರಳಿದ ನಂತರ ಸರಕಾರಿ ಪಡೆಗಳನ್ನು ಆರು ತಿಂಗಳ ನಂತರ ತನ್ನ ವಶದಲ್ಲಿರಿಸಿಕೊಳ್ಳಬೇಕೆಂದು ಯುಎಸ್ ಗುಪ್ತಚರ ಸಂಸ್ಥೆ ನಂಬಿತ್ತು.


  ಇದರಿಂದ ಅಪ್ಘಾನಿಸ್ತಾನದಲ್ಲಿ ನೆಲೆಯೂರಿದ್ದ ಅಮೆರಿಕಾದ ಪ್ರಜೆಗಳಿಗೆ ಹಾಗೂ ಅಮೆರಿಕಾ ಸೇನೆಯ ಪರವಾಗಿ ಕೆಲಸ ಮಾಡಿದ್ದು ಅಪ್ಘನ್ ಪ್ರಜೆಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ದೇಶವನ್ನು ಬಿಟ್ಟುಹೋಗಲು ಸಾಕಷ್ಟು ಸಮಯವನ್ನು ನೀಡುತ್ತದೆ ಹಾಗೂ ಈ ರೀತಿ ವಲಸೆ ಹೋಗುವವರಿಗೆ ‘ವಿಶೇಷ ವಲಸೆ ವೀಸಾ’ ಒದಗಿಸುವುದಾಗಿ ಭರವಸೆಯನ್ನು ನೀಡಲಾಯಿತು.


  ಇದನ್ನೂ ಓದಿ: Explained: ಅಫ್ಘಾನಿಸ್ತಾನ ಬಾಂಬ್ ಸ್ಫೋಟ ಪ್ರಕರಣ: ISIS-K ಅಂದ್ರೆ ಏನು..? ಇವರಿಗೂ ತಾಲಿಬಾನಿಗಳಿಗೂ ಸಂಬಂಧವಿದೆಯಾ..? ಇಲ್ಲಿದೆ ವಿವರ..

  ಆದರೆ ಅಮೆರಿಕಾ ಯೋಜಿಸಿದ ಯೋಜನೆಗಳು ಅದು ಅಂದುಕೊಂಡಂತೆ ನಡೆಯಲಿಲ್ಲ ಹಾಗೂ ಅಪ್ಘನ್ ಪಡೆಗಳು ಹೋರಾಟ ನಡೆಸದೆಯೇ ತಾಲಿಬಾನಿಗಳ ವಶವಾದರು. ಯುಎಸ್ ಸೇನಾ ಪಡೆಯನ್ನು ಅಪ್ಘನ್ ನಿರಾಶ್ರಿತರೊಂದಿಗೆ ತುರ್ತು ಏರ್‌ಲಿಫ್ಟ್ ಮಾಡುವ ಪರಿಸ್ಥಿತಿ ಕೂಡ ಒದಗಿ ಬಂದಿತು.


  ಅಮೆರಿಕಾದ ಸೇನೆಯೊಂದಿಗೆ ವಿದೇಶಿ ಮಿತ್ರ ದೇಶಗಳ ಪಡೆಗಳು ಅಪ್ಘಾನಿಸ್ತಾನದಲ್ಲಿ ಕಾರ್ಯಾಚಣೆ ನಡೆಸುತ್ತಿದ್ದುದರಿಂದ ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿಯ ಸೇನಾ ಅಧಿಕಾರಿಗಳು ಆಗಸ್ಟ್ 31 ರೊಳಗೆ ತಮ್ಮ ಸೇನಾ ತುಕಡಿಯನ್ನು ಮರಳಿ ದೇಶಗಳಿಗೆ ಸ್ಥಳಾಂತರಿಸುವುದು ಕಷ್ಟ ಹಾಗೂ ಸಪ್ಟೆಂಬರ್‌ವರೆಗೆ ಗಡುವನ್ನು ವಿಸ್ತರಿಸಬೇಕೆಂದು ಬಯಸಿದ್ದರು.


  ಮುಂದುವರಿದ ರಾಷ್ಟ್ರಗಳ ನಾಯಕರು ನಡೆಸಿದ ಶೃಂಗ ಸಭೆಯಲ್ಲಿ ಆಗಸ್ಟ್ 31 ರ ನಂತರ ಉಳಿಯುವ ಚರ್ಚೆ ನಡೆಸಿದ ವಿಡಿಯೋ ಸಭೆಯನ್ನು ನಡೆಸಿದರು. ಆದರೆ ತಾವು ಯಾವುದೇ ವಿಸ್ತರಣೆಗೆ ಒಪ್ಪುವುದಿಲ್ಲ ಹಾಗೂ ಆಗಸ್ಟ್ 31 ನಂತರ ಯಾವುದೇ ವಿದೇಶಿ ಸೇನೆಗಳು ಅಪ್ಘನ್ ನೆಲದಲ್ಲಿ ಇರಬಾರದೆಂದು ತಾಲಿಬಾನ್ ಅಧಿಕಾರಿಗಳು ಖಡಾಖಂಡಿತವಾಗಿ ನುಡಿದಿದ್ದಾರೆ.


  ಅನೇಕ ಸುತ್ತಿನ ಚರ್ಚೆಗಳ ವಾದಗಳ ನಂತರ ಅಂತಿಮ ತೀರ್ಮಾನಕ್ಕೆ ಬಂದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಗಸ್ಟ್ ಅಂತ್ಯಕ್ಕೆ ವಿದೇಶಿ ಪಡೆಗಳನ್ನು ಅಪ್ಘನ್ ನೆಲದಿಂದ ಕರೆಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ದಿನಾಂಕದೊಳಗೆ ಯುಎಸ್ ತನ್ನ ಮಿಶನ್ ಅನ್ನು ಮುಗಿಸುವ ತರಾತುರಿಯಲ್ಲಿದೆ ಎಂದು ದೇಶ ಹೇಳಿಕೊಂಡಿದೆ.


  ಅಪ್ಘಾನಿಸ್ತಾನವನ್ನು ಭಯೋತ್ಪಾದಕ ನೆಲೆಯನ್ನಾಗಿಸುವ ಸನ್ನಾಹದಲ್ಲಿರುವ ತಾಲಿಬಾನಿಗಳು ಮತ್ತೊಮ್ಮೆ ದೇಶವನ್ನು ತಮ್ಮ ಅಧಿಪತ್ಯಕ್ಕೆ ತೆಗೆದುಕೊಂಡಿದ್ದಾರೆ. ದೇಶದ ಮಹಿಳೆಯರಿಗೆ ಮನೆಯಿಂದ ಹೊರಗೆ ಬರದಂತೆ ಆದೇಶವನ್ನಿತ್ತಿದ್ದು, ತಾಲಿಬಾನ್‌ ಸೇನೆಯ ಸದಸ್ಯರು ಇನ್ನೂ ಬದಲಾಗಿಲ್ಲ ಹಾಗೂ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕೆಂಬ ಶಿಷ್ಟಾಚಾರವನ್ನು ಕಲಿಸಿಲ್ಲವೆಂದು ಘಂಟಾಘೋಷವಾಗಿ ಹೇಳಿಕೆ ನೀಡಿದೆ.


  ತಮ್ಮ ನೆಲವನ್ನು ಬಿಟ್ಟುಹೋಗಲು ಬಯಸದ ಅಪ್ಘನ್ನರಿಗೆ ತಾಲಿಬಾನಿಗಳು ಕಿರುಕುಳವನ್ನು ನೀಡುತ್ತಿದ್ದಾರೆ. ಅಲ್ಲಿನ ಮಹಿಳೆಯರನ್ನು ಮಕ್ಕಳನ್ನು ಮನುಷ್ಯರು ಎಂಬಂತೆ ಕೂಡ ಕಾಣದೇ ತಮ್ಮ ಪೈಶಾಚಿಕತೆಯನ್ನು ನಡೆಸುತ್ತಿದ್ದಾರೆ. ಅಮೆರಿಕಾ ಸೇನೆಯ ಮರಳುವಿಕೆಯನ್ನು ಅಲ್ಲಿನ ಜನರು ನಿಷೇಧಿಸಿದ್ದು ತಮ್ಮನ್ನು ಬಿಟ್ಟುಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿರುವುದು ಎಂತಹವರ ಹೃದಯವನ್ನು ಕರಗಿಸಬಹುದು. ಅಪ್ಘಾನಿಸ್ತಾನದಲ್ಲಿ ತಮ್ಮ ಭದ್ರಕೋಟೆಯನ್ನು ನಿರ್ಮಿಸುವ ಹುನ್ನಾರದಲ್ಲಿರುವ ತಾಲಿಬಾನಿಗಳಿಗೆ ಪಾಕಿಸ್ತಾನದ ಬೆಂಬಲ ಹಾಗೂ ನೆರವು ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮೊದಲಿನಿಂದಲೂ ಭಯೋತ್ಪಾದನಾ ಸಂಘಟನೆಗಳನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನದ ಕಣ್ಣು ಭಾರತದ ಮೇಲಿದೆ. ಭಾರತವನ್ನು ಸೋಲಿಸುವ ಸಲುವಾಗಿ ಪಾಕಿಸ್ತಾನ ತಾಲಿಬಾನಿಗಳಿಗೆ ಮಣೆಹಾಕಿದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿರುವ ಸುದ್ದಿಯಾಗಿದೆ.


  ಭಾರತ ಕೂಡ ಅಪ್ಘಾನಿಸ್ತಾನದ ಅಭಿವೃದ್ಧಿಗೆ ಆರ್ಥಿಕ ಸಹಾಯ ಹಸ್ತವನ್ನು ಒದಗಿಸಿ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತಂದಿತ್ತು. ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿತ್ತು. ಆದರೆ ತಾಲಿಬಾನ್ ಅಪ್ಘಾನಿಸ್ತಾನದ ಅಭ್ಯುದಯಕ್ಕೆ ಹುಳಿ ಹಿಂಡಿದೆ. ತನ್ನ ಕಪಟ ನಾಟಕದಿಂದ ಪುನಃ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.

  First published: