• Home
  • »
  • News
  • »
  • explained
  • »
  • Explained: ಅಕ್ಷಯ್ ಕುಮಾರ್ ಅಭಿನಯದ ಸಿನಿಮಾಕ್ಕೂ ವಿರೋಧ! 'ರಾಮ್ ಸೇತು'ನಲ್ಲಿ ವಿವಾದಾತ್ಮಕ ವಿಚಾರ ಏನಿದೆ?

Explained: ಅಕ್ಷಯ್ ಕುಮಾರ್ ಅಭಿನಯದ ಸಿನಿಮಾಕ್ಕೂ ವಿರೋಧ! 'ರಾಮ್ ಸೇತು'ನಲ್ಲಿ ವಿವಾದಾತ್ಮಕ ವಿಚಾರ ಏನಿದೆ?

ರಾಮ್ ಸೇತು ಸಿನೆಮಾ

ರಾಮ್ ಸೇತು ಸಿನೆಮಾ

'ರಾಮಸೇತು' ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದೇ ತಡ ವಿವಾದಕ್ಕೆ ಕಾರಣವಾಗಿದೆ. ಲಂಕೆಗೆ ನಿರ್ಮಿಸಿದ ಸೇತುವೆ ಎಂದೇ ರಾಮಾಯಣದಲ್ಲಿ ಉಲ್ಲೇಖಿಸಲಾದ ಹಾಗೂ ಆಧ್ಯಾತ್ಮಿಕ ನಂಬಿಕೆಯ ತಳಹದಿ ಎಂದೆನಿಸಿರುವ ಭಾರತದ ಆಗ್ನೇಯ ಕರಾವಳಿಯ ಸುತ್ತಲಿನ ಸರಪಳಿಯ ಸಾಲು ಈಗ ವಿವಾದದ ಕೇಂದ್ರಬಿಂದುವಾಗಿದೆ. ಹಾಗಿದ್ದರೆ ರಾಮ್ ಸೇತು ಸಿನಿಮಾದ ವಿವಾದವೇನು?

ಮುಂದೆ ಓದಿ ...
  • Share this:

ಅಕ್ಷಯ್ ಕುಮಾರ್ (Akshay Kumar) ಅಭಿನಯದ ರಾಮ್ ಸೇತು (Ram Sethu) ಚಿತ್ರದ ಟೀಸರ್ ಸಪ್ಟೆಂಬರ್ 26 ರಂದು ಬಿಡುಗಡೆಯಾಯಿತು, ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದೇ ತಡ ಈ ಮೂಲಕ ಲಂಕೆಗೆ ನಿರ್ಮಿಸಿದ ಸೇತುವೆ ಎಂದೇ ರಾಮಾಯಣದಲ್ಲಿ ಉಲ್ಲೇಖಿಸಲಾದ ಹಾಗೂ ಆಧ್ಯಾತ್ಮಿಕ ನಂಬಿಕೆಯ ತಳಹದಿ ಎಂದೆನಿಸಿರುವ ಭಾರತದ ಆಗ್ನೇಯ ಕರಾವಳಿಯ ಸುತ್ತಲಿನ ಸರಪಳಿಯ ಸಾಲು ಈಗ ವಿವಾದದ (Controversy) ಕೇಂದ್ರಬಿಂದುವಾಗಿದೆ ಹಾಗೂ ಕೋಲಾಹಲಕ್ಕೆ ಕಾರಣವಾಗಿದೆ. ಹಾಗಿದ್ದರೆ ರಾಮ್ ಸೇತು ಅದರ ನಡುವೆ ಹುಟ್ಟಿಕೊಂಡಿರುವ ವಿವಾದಗಳೇನು ಅಂತೆಯೇ ರಾಮ್ ಸೇತು ಕಾನೂನು ಪ್ರಕರಣಗಳ ಕೇಂದ್ರಬಿಂದುವಾಗಿ ಹೇಗೆ ಹೊರಹೊಮ್ಮಿದೆ ಎಂಬುದನ್ನು ತಿಳಿದುಕೊಳ್ಳೋಣ.


ರಾಮ್ ಸೇತು
ಆಡಮ್ಸ್ ಬ್ರಿಡ್ಜ್ ಎಂದೂ ರಾಮ್ ಸೇತುವನ್ನು ಕರೆಯುತ್ತಾರೆ. ಭಾರತದ ಆಗ್ನೇಯ ಕರಾವಳಿಯಲ್ಲಿರುವ ರಾಮೇಶ್ವರ ಹಾಗೂ ಶ್ರೀಲಂಕಾದ ವಾಯವ್ಯ ಕರಾವಳಿಯ ಸಮೀಪ ಮನ್ನಾರ್ ದ್ವೀಪದ ನಡುವೆ ನಿರ್ಮಿಸಲಾದ 48 ಕಿ.ಮೀ ಉದ್ದದ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ. ಸೇತುವೆ ರಚನೆಯು ಹಿಂದೂ ಹಾಗೂ ಮುಸ್ಲಿಂ ಪುರಾಣಗಳೆರಡರಲ್ಲೂ ಪ್ರಾಮುಖ್ಯತೆಯನ್ನು ಹೊಂದಿದೆ. ಲಂಕೆಯನ್ನು ತಲುಪಿ ರಾವಣನೊಂದಿಗೆ ಹೋರಾಡಲು ಭಗವಾನ್ ಶ್ರೀರಾಮನು ತನ್ನ ವಾನರ ಸೇನೆಯೊಂದಿಗೆ ನಿರ್ಮಿಸಿದ ಸೇತುವೆ ಎಂದು ಹಿಂದೂಗಳು ನಂಬಿದರೆ, ಒಂಟಿ ಕಾಲಿನ ಮೇಲೆ 1,000 ವರ್ಷಗಳ ಕಾಲ ನಿಂತ ಲಂಕಾದಲ್ಲಿರುವ ಆಡಮ್ ಶಿಖರವನ್ನು ತಲುಪಲು ಆಡಮ್ ಬಳಸಿದ ಸೇತುವೆ ಎಂಬುದು ಮುಸ್ಲಿಂ ಸಮುದಾಯದವರು ನಂಬುತ್ತಾರೆ.


ವಿಜ್ಞಾನಿಗಳ ಅಭಿಪ್ರಾಯವೇನು?
ಇನ್ನು ವಿಜ್ಞಾನಿಗಳು ಹೇಳುವಂತೆ ಟೆಕ್ಟೋನಿಕ್ ಚಲನೆಗಳು ಹಾಗೂ ಮರಳು ಹರಳುಗಳಲ್ಲಿ ಸಿಲುಕಿಕೊಂಡು ರೂಪುಗೊಂಡ ನೈಸರ್ಗಿಕ ರಚನೆ ಎಂದಿದ್ದಾರೆ. ಅದಾಗ್ಯೂ ಹಲವಾರು ವರ್ಷಗಳಲ್ಲಿ ಈ ಸೇತುವೆ ಮಾನವ ನಿರ್ಮಿತ ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಲಾಯಿತು. ಸೇತುವೆ ಸಂಪೂರ್ಣವಾಗಿ ನೈಸರ್ಗಿಕವಲ್ಲ ಎಂಬುದು ಹಿಂದೂ ಬಲಪಂಥೀಯ ಸಂಘಟನೆಗಳು ವಾದಿಸುತ್ತಿದ್ದು, ಇದು ಭಗವಾನ್ ಶ್ರೀರಾಮನಿಂದ ನಿರ್ಮಿತವಾದುದು ಎಂದಾಗಿಯೇ ಸಾಬೀತುಪಡಿಸುತ್ತದೆ


ಹಿಂದೂ ಭಾವನೆಗಳ ಮೇಲಿನ ದಾಳಿ
UPA I ಸರಕಾರದ ಅವಧಿಯಲ್ಲಿ ಸೇತುವಿನ ಸುತ್ತಲಿನ ಹೂಳೆತ್ತುವ ಸೇತುಸಮುದ್ರ ಯೋಜನೆಯನ್ನು ಪ್ರಸ್ತಾವಿಸಿದಾಗ, ಬಲಪಂಥೀಯ ಸಂಸ್ಥೆಗಳು ಮತ್ತು ಆಗಿನ ಪ್ರತಿಪಕ್ಷ ಬಿಜೆಪಿಯು ಹಿಂದೂ ಭಾವನೆಗಳ ಮೇಲಿನ ದಾಳಿ ಎಂದು ಆರೋಪಿಸಿ ರಾಮ್ ಸೇತು ವಿಷಯವನ್ನು ವಿವಾದದ ಕೇಂದ್ರಬಿಂದುವಾಗಿಸಿತು.


ರಾಮ್ ಸೇತು ಕುರಿತು ಹಲವಾರು ಅಧ್ಯಯನಗಳನ್ನು ಪ್ರಸ್ತಾವಿಸಲಾಗಿದ್ದು, 2021 ರಲ್ಲಿ ತೀರಾ ಇತ್ತೀಚಿನ ಸಂಶೋಧನಾ ಯೋಜನೆಯನ್ನು ಸರಕಾರ ಅನುಮೋದಿಸಿದೆ.


ಸೇತುಸಮುದ್ರ ಯೋಜನೆ
ಸೇತುಸಮುದ್ರಂ ಶಿಪ್ಪಿಂಗ್ ಕಾಲುವೆ ಯೋಜನೆಯು 83-ಕಿಮೀ ಉದ್ದದ ಆಳವಾದ ನೀರಿನ ಕಾಲುವೆಯನ್ನು ನಿರ್ಮಿಸುವ ಮೂಲಕ ಭಾರತ ಮತ್ತು ಶ್ರೀಲಂಕಾ ನಡುವೆ ಹಡಗು ಮಾರ್ಗವನ್ನು ರಚಿಸುವ ಗುರಿ ಹೊಂದಿದ್ದು ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಹಡಗುಗಳು ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ನಡುವೆ ಪ್ರಯಾಣಿಸಲು ಶ್ರೀಲಂಕಾಕ್ಕೆ ಸುತ್ತುಹಾಕುವ ಅಗತ್ಯವಿರುವುದಿಲ್ಲ. ಈ ಯೋಜನೆಯನ್ನು 1860 ದಶಕದಷ್ಟು ಹಿಂದೆಯೇ ಪ್ರಸ್ತಾಪಿಸಲಾಗಿದೆ.


ಇದನ್ನೂ ಓದಿ: Ghost-Shiva Rajkumar: ಶಿವಣ್ಣ ಚಿತ್ರಕ್ಕೆ ಕೋಟಿ ಬೆಲೆಯ ಸೆಟ್ ಹಾಕಿದ ಘೋಸ್ಟ್ ತಂಡ!

ಪ್ರಸ್ತುತ ಯೋಜನೆಯು NDA I ಸರ್ಕಾರದ ಅಡಿಯಲ್ಲಿ ಪ್ರಾರಂಭವಾಯಿತು ಹಾಗೂ ವಾಜಪೇಯಿ ಆಡಳಿತ ಸರಕಾರವು ಯೋಜನೆಗಾಗಿ 2004 ರಲ್ಲಿ ರೂ 3,500 ಕೋಟಿ ಬಜೆಟ್ ಅನ್ನು ಅನುಮೋದಿಸಿತು. ಯೋಜನೆಯ ಉದ್ಘಾಟನೆಯನ್ನು 2005 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮಾಡಿದರು. ನ್ಯಾಯಾಲಯದಲ್ಲಿ ಯೋಜನೆಯ ಕುರಿತು ವಾದವಿವಾದಗಳು ನಡೆದವು ಹೀಗೆ ವಿವಾದ ಭುಗಿಲೆದ್ದಿತು.


ರಾಮಸೇತುವೆಯ ಅಸ್ತಿತ್ವ ತಳ್ಳಿಹಾಕಿದ ಪುರಾತತ್ವ ಇಲಾಖೆ
ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ, ಅಫಿಡವಿಟ್ ಪ್ರಸ್ತಾವಿಸಿ ನ್ಯಾಯಾಲಯದಲ್ಲಿ ರಾಮ್ ಸೇತು ಅಸ್ತಿತ್ವನ್ನು ತಿರಸ್ಕರಿಸಿತು ಹಾಗೂ ವಾಲ್ಮೀಕಿ ರಾಮಾಯಣದ ವಿಷಯಗಳು, ತುಳಸಿದಾಸರ ರಾಮಚರಿತಮಾನಸ ಮತ್ತು ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿರುವ ವಿಷಯಗಳು ಭಾರತೀಯ ಸಾಹಿತ್ಯದ ಪ್ರಮುಖ ಭಾಗವೆಂದು ಪರಿಚಯಿಸಿರುವ ಅಂಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು ಈ ಹೇಳಿಕೆಯು ಕೋಲಾಹಲಕ್ಕೆ ಕಾರಣವಾಯಿತು, ಅಫಿಡವಿಟ್ ಹಿಂಪಡೆದಿದ್ದಲ್ಲದೆ, ಇಬ್ಬರು ಎಎಸ್‌ಐ ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು.


ಅಂದಿನಿಂದ ಯೋಜನೆಯು ಸಾಮುದಾಯಿಕ ರಂಗು ಪಡೆದುಕೊಳ್ಳಲಾರಂಭಿಸಿತು. ರಾಮ ಅಥವಾ ಯಾವುದೇ ಐತಿಹಾಸಿಕ ಸೇತುವೆ ಇರಲಿಲ್ಲ ಎಂಬ ಆಧಾರದ ಮೇಲೆ ರಾಮ್ ಸೇತು ಚಾನಲ್ ಅನ್ನು ಹೂಳೆತ್ತುವುದು ಕೇವಲ ಅತಿರೇಕದ ಸಂಗತಿಯಾಗಿದೆ. ಸಂಪೂರ್ಣ ನಾಗರೀಕತೆಯ ತಳಹದಿಯ ಬೇರುಗಳನ್ನು ನಿರಾಕರಿಸುವ ಮೂಲಕ ಅನಾಥಗೊಳಿಸುವುದಕ್ಕೆ ಸಮ ಎಂದು ಉಲ್ಲೇಖಿಸಿ ಆರೆಸ್ಸೆಸ್ ಸಂಸ್ಥೆಯ ಪ್ರಕಟಣೆ ಆರ್ಗನೈಸರ್ 2007 ರಲ್ಲಿ ಗೌತಮ್ ಸೇನ್ ಅವರ ಲೇಖನವನ್ನು ಪ್ರಕಟಿಸಿತು.


2008 ರಲ್ಲಿ, ಹಿರಿಯ ವಕೀಲ ಕೆ ಪರಾಸರನ್ ಸುಪ್ರೀಂ ಕೋರ್ಟ್‌ನಲ್ಲಿ ಬಾಬರಿ ಮಸೀದಿ ಧ್ವಂಸವು ಆಳವಾದ ವೇದನೆಗೆ ಕಾರಣವಾಗಿದೆ ಎಂದು ವಾದಿಸಿದರು. ಗಾಯ ಮಾಸಿದರೂ ಆ ಗುರುತು ಹಾಗೆಯೇ ಇದೆ ಆದ್ದರಿಂದ ಇಂತಹ ಗಾಯಗಳಾಗದಂತೆ ತಪ್ಪಿಸಬೇಕು. ಇಂತಹ ಗಾಯದ ಗುರುತಿಗೆ ಕಾರಣವಾಗುವ ಆಳವಾದ ಗಾಯ ಹಿಂದೂಗಳಲ್ಲಿಯೂ ಉಂಟಾಗಬೇಕೇ ಎಂದು ವಾದಿಸಿದ್ದರು.


ಪರಿಸರ ವಾದಿಗಳು ನೀಡುತ್ತಿರುವ ಕಾರಣಗಳೇನು?
ಸೇತುಸಮುದ್ರಂ ಯೋಜನೆಯು ಪರಿಸರದ ಆಧಾರವನ್ನು ಅವಲಂಬಿಸಿ ಕೂಡ ವಿರೋಧಕ್ಕೆ ಒಳಗಾಗಿದೆ. ಇದು ಸಮುದ್ರ ಜೀವಿಗಳಿಗೆ ಹಾನಿ ಮಾಡುತ್ತದೆ ಎಂದು ಪರಿಸರವಾದಿಗಳು ತಿಳಿಸಿದ್ದು ಸರಪಳಿಯ ರೇಖೆಯ ಹೂಳುತ್ತುವಿಕೆಯು ಭಾರತದ ಕರಾವಳಿಯನ್ನು ಸುನಾಮಿಗಳಿಗೆ ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: PS1-Kamal Hassan: ಚೋಳರ ಕಾಲದಲ್ಲಿ ಹಿಂದು ಧರ್ಮವೇ ಇರಲಿಲ್ಲ ಎಂದ ನಟ ಕಮಲ್ ಹಾಸನ್!

ಯೋಜನೆಯ ಪ್ರಸ್ತುತ ಸ್ಥಿತಿ ಏನಾಗಿದೆ?
ಮಾರ್ಚ್ 2018 ರಲ್ಲಿ, ಸೇತುಸಮುದ್ರಂ ಶಿಪ್ಪಿಂಗ್ ಕಾಲುವೆ ಯೋಜನೆಯ ಅನುಷ್ಠಾನದಲ್ಲಿ ರಾಮ್ ಸೇತು ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ರಾಮ್ ಸೇತು ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮತ್ತೊಂದು ಮನವಿ ಸುಪ್ರೀಂ ಕೋರ್ಟ್‌ನಲ್ಲಿದೆ.


NASA ಚಿತ್ರಗಳು ಮತ್ತು ಇತರ 'ಪುರಾವೆ'
ನಾಸಾ ಕ್ಲಿಕ್ಕಿಸಿರುವ ರಾಮ್ ಸೇತುವಿನ ಚಿತ್ರಗಳು ಮಾನವ ನಿರ್ಮಿತ ಸೇತುವೆಯ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ ಎಂಬುದನ್ನು ಉಲ್ಲೇಖಿಸಲು ಪದೇ ಪದೇ ಬಳಸಲಾಗಿದೆ. ಈ ಉಲ್ಲೇಖಗಳನ್ನು ನಾಸಾ ಅಂಗೀಕರಿಸುವುದಿಲ್ಲವೆಂದು ಸ್ಪಷ್ಟಪಡಿಸಿದೆ.


ನಾಸಾ ಏನು ಸ್ಪಷ್ಟಪಡಿಸಿದೆ?
2002 ರಲ್ಲಿ, NASA ಅಧಿಕಾರಿ ಮಾರ್ಕ್ ಹೆಸ್ ತಿಳಿಸಿರುವಂತೆ ರಿಮೋಟ್ ಸೆನ್ಸಿಂಗ್ ಚಿತ್ರಗಳು ದ್ವೀಪಗಳ ಸರಪಳಿಯ ಮೂಲ ಅಥವಾ ವಯಸ್ಸಿನ ಕುರಿತು ನೇರ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಹಾಗೂ ನೋಡಿರುವ ಸೇತುವೆಯ ಮಾದರಿಗಳಲ್ಲಿ ಮಾನವರನ್ನು ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.


ಹನ್ನೊಂದು ವರ್ಷಗಳ ನಂತರ 2013 ರಲ್ಲಿ NASA ವಕ್ತಾರ ಮೈಕೆಲ್ ಬ್ರೌಕಸ್ ಇದೇ ಹೇಳಿಕೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಕೆಲವು ಜನರು ತಮ್ಮ ಹೇಳಿಕೆಗಳನ್ನು ಖಾತ್ರಿಪಡಿಸಲು ನಮ್ಮ ಗಗನಯಾತ್ರಿಗಳು ತೆಗೆದಿರುವ ಛಾಯಾಚಿತ್ರಗಳನ್ನು ಬಳಸಿಕೊಂಡಿದ್ದಾರೆ. ಈ ಛಾಯಾಚಿತ್ರಗಳನ್ನು ಆಧರಿಸಿ ಯಾವುದೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಗಗನಯಾತ್ರಿಗಳ ಛಾಯಾಚಿತ್ರಗಳಿಂದ ಪಾಕ್ ಜಲಸಂಧಿಯಲ್ಲಿನ ಸಮುದ್ರದ ತಳದ ವಯಸ್ಸು, ತಲಾಧಾರ, ಭೂವೈಜ್ಞಾನಿಕ ರಚನೆ ಅಥವಾ ಮಾನವಶಾಸ್ತ್ರದ ಸ್ಥಿತಿಯನ್ನು ನಿರ್ಧರಿಸಲಾಗುವುದಿಲ್ಲ. ಹಾಗಾಗಿ ಈ ಕ್ಲೈಮ್‌ಗಳು ಹುರುಳಿಲ್ಲದ್ದು ಎಂದು ತಿಳಿಸಿದ್ದಾರೆ.


ರಾಮ್ ಸೇತು ಟೀಸರ್ ಹಾಗೂ ಚಿತ್ರದ ಕುರಿತು
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ರಾಮ್ ಸೇತು ಟೀಸರ್ ಬಿಡುಗಡೆಯಾಗಿದ್ದು ಪ್ರೇಕ್ಷಕರು ಚಿತ್ರದ ಅದ್ಭುತ ಹಿನ್ನಲೆ ಸಂಗೀತಕ್ಕೆ ಮನಸೋತಿದ್ದು ವಿಡಿಯೋ ತುಣುಗಳನ್ನು ಆಸ್ವಾದಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಟೀಸರ್ ಅನ್ನು ಅಕ್ಷಯ್ ಕುಮಾರ್ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು ರಾಮ್ ಸೇತು ಕಿ ಪೆಹ್ಲಿ ಝಲಕ್ (ರಾಮ ಸೇತುವಿನ ಮೊದಲ ಝಲಕ್) ನಿಮಗಾಗಿ ಮಾತ್ರ ಟೀಸರ್ ಅನ್ನು ಪ್ರೀತಿಯಿಂದ ಮಾಡಿದ್ದು ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ ಬೇಗ ಹೇಳಿ ಎಂದು ಬರೆದುಕೊಂಡಿದ್ದಾರೆ.


ಅಕ್ಟೋಬರ್ 25 ಕ್ಕೆ ಚಿತ್ರ ಬಿಡುಗಡೆ ಮುಹೂರ್ತ
ಚಿತ್ರವು ಅಕ್ಟೋಬರ್ 25 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನದ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ ಭರುಚ್ಚ ಹಾಗೂ ಸತ್ಯದೇವ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ʼರಾಮ ಸೇತುʼ ಕಥೆಯು ನಾಸ್ತಿಕ ಪುರಾತತ್ತ್ವ ಶಾಸ್ತ್ರಜ್ಞ ಆರ್ಯನ್ ಕುಲಶ್ರೇಷ್ಠ (ಅಕ್ಷಯ್ ಕುಮಾರ್) ಸುತ್ತ ಸುತ್ತುತ್ತದೆ. ರಾಮಸೇತುವಿನ ನಿಜವಾದ ಅಸ್ತಿತ್ವವನ್ನು ಸಾಬೀತುಪಡಿಸಲು ಕೆಟ್ಟ ಶಕ್ತಿಗಳ ವಿರುದ್ಧ ಅಕ್ಷಯ್‌ ಹೋರಾಡುವ ಥೀಮ್‌ ಟೀಸರ್‌ನಲ್ಲಿದೆ.


ಇದನ್ನೂ ಓದಿ: Darling Krishna: ಅವಳು ದಿಲ್ ಇವಳು ಪಸಂದ್- ಈ ಕೃಷ್ಣನೇ ಅಲ್ವೆ ಲಕ್ಕಿ ಮ್ಯಾನ್

ರಾಮ್ ಸೇತು ಚಿತ್ರದ ಕುರಿತಾಗಿ ಸುಂದರವಾದ ಪೋಸ್ಟರ್‌ಗಳು ಹಾಗೂ ವಿಡಿಯೋಗಳನ್ನು ನಿರ್ಮಿಸಿದ್ದಕ್ಕಾಗಿ ಅಕ್ಷಯ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಚಿತ್ರದ ಮೊದಲನೆಯ ಪೋಸ್ಟರ್ ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

Published by:Ashwini Prabhu
First published: