Explained: ಪ್ಲಾನ್ ದರಗಳನ್ನು Netflix ಕಡಿತಗೊಳಿಸಿರುವ ಹಿಂದಿನ ಉದ್ದೇಶವೇನು?

ಜಾಗತಿಕವಾಗಿ 214 ಮಿಲಿಯನ್ ಪಾವತಿ ಸಬ್‌ಸ್ಕ್ರೈಬರ್‌ಳನ್ನು ನೆಟ್‌ಫ್ಲಿಕ್ಸ್ ಹೊಂದಿದ್ದು, 30 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಏಷ್ಯಾ ಒಂದರಲ್ಲಿಯೇ ಸ್ಟ್ರೀಮಿಂಗ್ ತಾಣ ಹೊಂದಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೇರಿಕಾದ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್(platform) ನೆಟ್‌ಫ್ಲಿಕ್ಸ್ (Netflix) ಭಾರತದಲ್ಲಿ ತನ್ನ ಸಬ್‌ಸ್ಕ್ರಿಪ್ಶನ್ ಬೆಲೆಗಳನ್ನು ಕಡಿತಗೊಳಿಸಿದೆ. ಈ ಹಿಂದೆ 199 ರೂಗಳ ಪ್ಲಾನ್ ಇನ್ನು ಮುಂದೆ ಭಾರತೀಯರಿಗೆ(India) 149 ರೂ.ಗಳಲ್ಲಿ ಲಭ್ಯವಿದೆ. ಸಬ್‌ಸ್ಕ್ರಿಪ್ಶನ್ ಬೆಲೆಗಳಲ್ಲಿ ಕಡಿತಗೊಳಿಸಿದರೂ ಭಾರತದಲ್ಲಿರುವ ಅದರ ಹೆಚ್ಚಿನ ಸ್ಪರ್ಧಿಗಳಿಗಿಂತ (Competitors) ಬೆಲೆಗಳು ಇನ್ನೂ ಹೆಚ್ಚಾಗಿಯೇ ಇದೆ. ತನ್ನ ಸಬ್‌ಸ್ಕ್ರೈಬರ್ (Subscriber )ಸಂಖ್ಯೆಗಳನ್ನು ಹೆಚ್ಚಿಸುವ ಸಲುವಾಗಿ ಬೆಲೆ ಕಡಿತಗಳನ್ನು (Price cuts ) ಮಾಡಲಾಗಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ.

ನೆಟ್‌ಫ್ಲಿಕ್ಸ್‌ಗಾಗಿ ಹೊಸ ಸಬ್‌ಸ್ಕ್ರಿಪ್ಶನ್ ದರಗಳೇನು?
ಮೊಬೈಲ್-ಮಾತ್ರ ಪ್ಲಾನ್‌ಗಾಗಿ ಸಬ್‌ಸ್ಕ್ರಿಪ್ಶನ್ ದರಗಳನ್ನು ಈ ಹಿಂದೆ ಇದ್ದ 199 ರೂ.ಗಳಿಗೆ ಬದಲಾಗಿ 149 ಕ್ಕೆ ಇಳಿಸಲಾಗಿದೆ. ಮೊಬೈಲ್-ಪ್ಲಾನ್ ಬಳಕೆದಾರರು ನೆಟ್‌ಫ್ಲಿಕ್ಸ್ ಕಂಟೆಂಟ್‌ಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಮಾತ್ರವೇ ವೀಕ್ಷಿಸಬಹುದಾಗಿದೆ ಹಾಗೂ ಟ್ಯಾಬ್ಲೆಟ್‌ಗಳಲ್ಲಿ 480ಪಿ ವಿಡಿಯೋ ರೆಸಲ್ಯೂಶನ್‌ನಲ್ಲಿ ಕಂಟೆಂಟ್ ವೀಕ್ಷಿಸಬಹುದು.

ಇದನ್ನೂ ಓದಿ: Netflix: ಭಾರತದಲ್ಲಿ ಇದೀಗ ಅಗ್ಗವಾದ ನೆಟ್‌ಫ್ಲಿಕ್ಸ್; ಹೊಸ ಬೆಲೆ ಹಾಗೂ ಪ್ಲಾನ್ ಮಾಹಿತಿ ಇಲ್ಲಿದೆ

ಇನ್ನು ಬೇಸಿಕ್ ಪ್ಲಾನ್‌ಗಳ ದರವನ್ನು 499 ರೂಗಳಿಂದ 199 ಕ್ಕೆ ಕಡಿಮೆ ಮಾಡಲಾಗಿದೆ. ಈ ಪ್ಲಾನ್‌ನಲ್ಲಿ ಕೂಡ 480 ಪಿ ರೆಸಲ್ಯೂಶನ್‌ನಲ್ಲಿ ಮಾತ್ರವೇ ವಿಡಿಯೋಗಳು ಲಭ್ಯವಿದ್ದು ಬಳಕೆದಾರರು ತಮ್ಮ ಕಂಪ್ಯೂಟರ್‌ಗಳು, ಟಿವಿ, ಹಾಗೂ ಹೆಚ್ಚುವರಿಯಾಗಿ ಮೊಬೈಲ್ ಡಿವೈಸ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

ನಾಲ್ಕು ವಿಭಿನ್ನ ಡಿವೈಸ್‌
ಸ್ಟ್ಯಾಂಡರ್ಡ್ ಪ್ಲಾನ್ ಈ ಹಿಂದೆ ತಿಂಗಳಿಗೆ 649 ರೂಗಳಲ್ಲಿ ಲಭ್ಯವಿತ್ತು ಇದೀಗ ಬೆಲೆ 499 ರೂಗಳಾಗಿದೆ. ಈ ಪ್ಲಾನ್‌ನಲ್ಲಿ 1080 ಪಿ ರೆಸಲ್ಯೂಶನ್‌ನಲ್ಲಿ ಬಳಕೆದಾರರು ವಿಡಿಯೋಗಳನ್ನು ವೀಕ್ಷಿಸಬಹುದಾಗಿದ್ದು ಎಲ್ಲಾ ಡಿವೈಸ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಮೊಬೈಲ್-ಮಾತ್ರ ಹಾಗೂ ಬೇಸಿಕ್ ಪ್ಲಾನ್‌ಗಳಿಗಿಂತ ಭಿನ್ನವಾಗಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ಡಿವೈಸ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಟಾಪ್ ಎಂಡ್ ಪ್ರೀಮಿಯಮ್ ಪ್ಲಾನ್ ತಿಂಗಳಿಗೆ 799 ರೂ.ಗಳ ಬದಲಿಗೆ 649 ರೂಗಳಲ್ಲಿ ಲಭ್ಯವಾಗಲಿದೆ. ನೀವು ಈ ಬೆಲೆಯಲ್ಲಿ 4K+HDR ರೆಸಲ್ಯೂಶನ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ಲಾನ್‌ನಲ್ಲಿ ನಾಲ್ಕು ವಿಭಿನ್ನ ಡಿವೈಸ್‌ಗಳಲ್ಲಿ ಒಂದೇ ಸಮಯದಲ್ಲಿ ಬಳಕೆದಾರರಿಗೆ ಕಂಟೆಂಟ್ ವೀಕ್ಷಿಸಬಹುದಾಗಿದೆ.

ಇತರ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದಾಗ ಈ ಸಬ್‌ಸ್ಕ್ರಿಪ್ಶನ್ ದರಗಳಿಗಿರುವ ಭಿನ್ನತೆಗಳೇನು?
ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಶನ್ ದರಗಳಲ್ಲಿ ಕಡಿಮೆ ಮಾಡಿರುವ ಬೆನ್ನಲ್ಲೇ ಅಮೆಜಾನ್ ಪ್ರೈಮ್ ಭಾರತದಲ್ಲಿ ತನ್ನ ಸಬ್‌ಸ್ಕ್ರಿಪ್ಶನ್ ಬೆಲೆಗಳನ್ನು ಏರಿಸಿದೆ. ವಾರ್ಷಿಕ ಪ್ಯಾಕೇಜ್‌ನಲ್ಲಿ ಅಮೆಜಾನ್ ಪ್ರೈಮ್ 1,499 ರೂಗಳಲ್ಲಿ 500 ಹೆಚ್ಚು ಮಾಡಿದೆ. ಇನ್ನು ಮಾಸಿಕ ಪ್ಯಾಕ್‌ನಲ್ಲಿ ಅಮೆಜಾನ್ ಪ್ರೈಮ್ 129 ರೂ ಗಳ ಬದಲಿಗೆ 179 ರೂಗಳ ಪ್ಲಾನ್ ಅನ್ನು ಪರಿಚಯಿಸಿದೆ. ಇನ್ನು ತ್ರೈಮಾಸಿಕ ಪ್ಲಾನ್ ಈ ಹಿಂದೆ ಇದ್ದ 329 ರೂಗಳ ಬದಲಿಗೆ 459 ರೂಗಳಲ್ಲಿ ಲಭ್ಯವಾಗಲಿದೆ. ಅದಾಗ್ಯೂ ಅಮೆಜಾನ್‌ನ ಪ್ರೈಮ್ ಸಬ್‌ಸ್ಕ್ರಿಪ್ಶನ್ ಶಾಪಿಂಗ್ ಪ್ರಯೋಜನಗಳು ಮತ್ತು ವಿಡಿಯೋ ಸ್ಟ್ರೀಮಿಂಗ್ ಸೇವೆಯ ಜೊತೆಗೆ ಅದರ ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ.

ಡಿಸ್ನಿ+ಹಾಟ್‌ಸ್ಟಾರ್ ಕೂಡ ಸಪ್ಟೆಂಬರ್ 1 ರಿಂದ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದ್ದು ವರ್ಷಕ್ಕೆ ಅತಿ ಕಡಿಮೆ 499 ರೂಗಳ ಪ್ಲಾನ್‌ನಲ್ಲಿ ಸೀಮಿತ ಗುಣಮಟ್ಟದಲ್ಲಿ ಮೊಬೈಲ್ ಡಿವೈಸ್‌ಗಳಲ್ಲಿ ಮಾತ್ರವೇ ಬಳಕೆಯನ್ನು ಅನುಮತಿಸುತ್ತದೆ. ಇನ್ನು 899 ರೂಗಳು ಹಾಗೂ 1,499 ರೂಗಳ ವರ್ಷದ ಇತರ ಎರಡು ಯೋಜನೆಗಳು ಹೆಚ್ಚಿನ ಡಿವೈಸ್‌ಗಳಲ್ಲಿ ಹೆಚ್ಚು ಗುಣಮಟ್ಟದ ವಿಡಿಯೋವನ್ನು ಬಳಕೆದಾರರಿಗೆ ಅನುಮತಿಸುತ್ತದೆ.

ಭಾರತದ ಮಾರುಕಟ್ಟೆಗೆ ಸ್ಪರ್ಧೆಯೊಡ್ಡಿದ ನೆಟ್‌ಫ್ಲಿಕ್ಸ್
ವಿಶ್ಲೇಷಕರು ತಿಳಿಸಿರುವಂತೆ, ಮನಿ ಹೀಸ್ಟ್ ಮತ್ತು ಸ್ಕ್ವಿಡ್ ಗೇಮ್ಸ್‌ನಂತಹ ಹಿಟ್ ಶೋಗಳನ್ನು ಆಯೋಜಿಸುವ ನೆಟ್‌ಫ್ಲಿಕ್ಸ್ ಭಾರತದಲ್ಲಿ ಹೆಚ್ಚು ಪಾವತಿ ಮಾಡುವ ಬಳಕೆದಾರರನ್ನು ಆಕರ್ಷಿಸುವ ಸಲುವಾಗಿ ಬೆಲೆಗಳನ್ನು ಕಡಿತಗೊಳಿಸಿರಬಹುದು ಎಂದು ಹೇಳಿದೆ. ಭಾರತವನ್ನು ಸ್ಟ್ರೀಮಿಂಗ್ ಸೇವೆಗಳಿಗೆ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲಾಗಿದೆ. ಅಗ್ಗದ ಡೇಟಾ, ಯುವ ಪ್ರೇಕ್ಷಕರು ಹಾಗೂ ಸಣ್ಣ ನಗರಗಳು ಮತ್ತು ಪಟ್ಟಣಗಳನ್ನು ಕೇಂದ್ರವಾಗಿಸಿಕೊಂಡು ಬೆಳವಣಿಗೆಯ ಅವಕಾಶಗಳನ್ನು ಪರಿಗಣಿಸಿ ನೆಟ್‌ಫ್ಲಿಕ್ಸ್ ಮಾರುಕಟ್ಟೆಯಲ್ಲಿ ಆಕ್ರಮಣಕಾರಿಯಾಗಿ ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ ಭಾರತದ ಮೇಲೆ ಹೆಚ್ಚಿನ ಗಮನವನ್ನು ಹೊಂದಿದೆ ಎಂಬುದಾಗಿ ವಿಶ್ಲೇಷಕರಾದ ಟೌರಾನಿ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮದತ್ತ
ಜಾಗತಿಕವಾಗಿ 214 ಮಿಲಿಯನ್ ಪಾವತಿ ಸಬ್‌ಸ್ಕ್ರೈಬರ್‌ಳನ್ನು ನೆಟ್‌ಫ್ಲಿಕ್ಸ್ ಹೊಂದಿದ್ದು, 30 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಏಷ್ಯಾ ಒಂದರಲ್ಲಿಯೇ ಸ್ಟ್ರೀಮಿಂಗ್ ತಾಣ ಹೊಂದಿದೆ ಎನ್ನಲಾಗಿದೆ. ಪಾವತಿ ಮಾಡಿದ ಬಳಕೆದಾರರ ಸಂಖ್ಯೆಯಲ್ಲಿ ನೆಟ್‌ಫ್ಲಿಕ್ಸ್ ಹೆಚ್ಚಳವಾಗಿರುವುದನ್ನು 2020 ರಲ್ಲಿ ವರದಿ ಮಾಡಿದ್ದು, ಚಂದಾದಾರರು ಈ ವರ್ಷ ಸೇರ್ಪಡೆಗೊಳ್ಳುತ್ತಿರುವುದು ನಿಧಾನವಾಗಿದೆ ಹಾಗಾಗಿ ಸಂಸ್ಥೆ ಬೆಲೆ ಯೋಜನೆ ಬದಲಾವಣೆಗಳನ್ನು ನಿರ್ಧರಿಸಿದೆ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್ ಇಂಡಿಯಾದ ಆದಾಯವು FY21 ರಲ್ಲಿ ವರ್ಷದಿಂದ ವರ್ಷಕ್ಕೆ 65% ದಷ್ಟು ಏರಿಕೆಯಾಗಿದೆ, ಏಕೆಂದರೆ ಸಾಂಕ್ರಾಮಿಕವು ಡಿಜಿಟಲ್ ಮಾಧ್ಯಮದತ್ತ ಬದಲಾವಣೆಯನ್ನು ವೇಗಗೊಳಿಸಿತು ಎಂದು ಟೌರಾನಿ ಹೇಳಿದರು. NV ಕ್ಯಾಪಿಟಲ್‌ನ ಸಹ ಸಂಸ್ಥಾಪಕರಾದ ನಿತಿನ್ ಮೆನನ್, ಮಾಧ್ಯಮ ಮತ್ತು ಮನರಂಜನಾ ವಲಯದ ಕ್ರೆಡಿಟ್ ಫಂಡ್, ನೆಟ್‌ಫ್ಲಿಕ್ಸ್‌ನ ಯೋಜನೆಯು ಸಣ್ಣ ನಗರಗಳು ಮತ್ತು ಪಟ್ಟಣಗಳಿಗೆ ಪರಿಚಯಿಸುವುದು ಮತ್ತು ಇದು ಭಾರತದಲ್ಲಿ ಆಕ್ರಮಣಕಾರಿ ಆಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಆದಾಯ ಹಂಚಿಕೆ:
ನೆಟ್‌ಫ್ಲಿಕ್ಸ್ ದೇಶದ OTT ಚಂದಾದಾರರಲ್ಲಿ ಅಂದಾಜು 5%ವನ್ನು ಮಾತ್ರ ಹೊಂದಿದ್ದರೂ, ಚಂದಾದಾರರ ಆದಾಯದಿಂದ ಇದು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ನೆಟ್‌ಫ್ಲಿಕ್ಸ್ ಭಾರತದ ಸಬ್‌ಸ್ಕ್ರಪ್ಶನ್ ವಿಡಿಯೋ ಆನ್-ಡಿಮಾಂಡ್ (SVOD) ಮಾರುಕಟ್ಟೆಯಲ್ಲಿ 36% ದಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಇದು ಪ್ಯೂರ್‌ಪ್ಲೇ ವೀಡಿಯೊ OTT ಸೇವೆಯಲ್ಲಿ ಅತ್ಯಂತ ಪ್ರಬಲ ಆಟಗಾರನಾಗಿ ಉಳಿದಿದೆ ಎಂದು ತೌರಾನಿ ತಿಳಿಸಿದ್ದಾರೆ.

ಸಲಹಾ ಮತ್ತು ಸಂಶೋಧನಾ ಸೇವೆಗಳ ಸಂಸ್ಥೆ, ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾ ಉಲ್ಲೇಖಿಸಿರುವಂತೆ SVOD ಆದಾಯದ ಹಂಚಿಕೆ ವಿಷಯದಲ್ಲಿ ನೆಟ್‌ಫ್ಲಿಕ್ಸ್ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನವನ್ನು ಡಿಸ್ನಿ + ಹಾಟ್‌ಸ್ಟಾರ್ 25% ಮತ್ತು ಅಮೆಜಾನ್ ಪ್ರೈಮ್ 22% ದಂತೆ ಹೊಂದಿದೆ.

ಸಬ್​ಸ್ಕ್ರೈಬರ್ಸ್ ಹೆಚ್ಚಿಸಲು
ನೆಟ್‌ಫ್ಲಿಕ್ಸ್‌ಗಿಂತ ಕಡಿಮೆ ಸಬ್‌ಸ್ಕ್ರಿಪ್ಶನ್ ಬೆಲೆಯನ್ನು ಹೊಂದಿರುವ ಡಿಸ್ನಿ+ ಹಾಟ್‌ಸ್ಟಾರ್ ಅತಿ ಹೆಚ್ಚು ಸಬ್‌ಸ್ಕೈಬರ್‌ಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ 50% ಸ್ಥಾನವನ್ನು ಪಡೆದಿದೆ. ತದನಂತರ ಅಮೆಜಾನ್ ಪ್ರೈಮ್ 19% ಹಾಗೂ ನೆಟ್‌ಫ್ಲಿಕ್ಸ್ 5% ಸ್ಥಾನವನ್ನು ಪಡೆದುಕೊಂಡಿದೆ.

MPA ಯ ಜುಲೈ 2021 ರ ವರದಿಯ ಪ್ರಕಾರ, ಡಿಸ್ನಿ+ ಹಾಟ್‌ಸ್ಟಾರ್ ಈ ವರ್ಷದ ಜೂನ್‌ನಲ್ಲಿ 35.1 ಮಿಲಿಯನ್ ಚಂದಾದಾರರನ್ನು ಹೊಂದಿತ್ತು (ಡಿಸೆಂಬರ್ 2020 ರಲ್ಲಿ 26.3 ಮಿಲಿಯನ್), ಅಮೆಜಾನ್ ಪ್ರೈಮ್ ವಿಡಿಯೋ 18 ಮಿಲಿಯನ್ (17 ಮಿಲಿಯನ್) ಮತ್ತು ನೆಟ್‌ಫ್ಲಿಕ್ಸ್ 4.6 ಮಿಲಿಯನ್ (4.2 ಮಿಲಿಯನ್). ಡಿಸೆಂಬರ್ ಅಂತ್ಯದ ವೇಳೆಗೆ ಡಿಸ್ನಿ+ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ಗಾಗಿ ಚಂದಾದಾರರ ಸಂಖ್ಯೆಯು ಕ್ರಮವಾಗಿ 46 ಮಿಲಿಯನ್, 21.8 ಮಿಲಿಯನ್ ಮತ್ತು 5.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಚಂದಾದಾರರಿಗೆ ಪ್ರತಿಬಂಧಕ
ಇನ್ನು ನೆಟ್‌ಫ್ಲಿಕ್ಸ್ ತನ್ನ ಯೋಜನೆಗಳ ಬೆಲೆಗಳಲ್ಲಿ ಮಾರ್ಪಾಡುಗಳನ್ನು ಮಾಡಿರುವುದರಿಂದ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಕಂಡುಕೊಳ್ಳಬಹುದು ಎಂದು ಮೆನನ್ ಅಂದಾಜು ಮಾಡಿದ್ದಾರೆ. ಭಾರತೀಯ SVOD ಮಾರುಕಟ್ಟೆಯಲ್ಲಿ 100 ಮಿಲಿಯನ್ ಸಬ್‌ಸ್ಕ್ರೈಬರ್‌ಗಳಿರುವುದರಿಂದ ನೆಟ್‌ಫ್ಲಿಕ್ಸ್‌ಗೆ ಈ ದಿಸೆಯಲ್ಲಿ ಅದೃಷ್ಟ ಒದಗಿ ಬರಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಸ್ಟ್ರೀಮಿಂಗ್ ತಾಣವು ಹೆಚ್ಚಳವನ್ನು ಕಂಡುಕೊಳ್ಳಲಿದ್ದು ಪಾವತಿಸಿದ ಬಳಕೆದಾರರನ್ನು ಹೆಚ್ಚಿಸಲು ಬೆಲೆಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ನಡೆಸಲಿದ್ದಾರೆ ಎಂದು ಮೆನನ್ ತಿಳಿಸಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೆಚ್ಚಿನ ಬೆಲೆಯು ಸಂಭಾವ್ಯ ಚಂದಾದಾರರಿಗೆ ಪ್ರತಿಬಂಧಕವಾಗಿದೆ ಎಂದು ಓರ್ಮ್ಯಾಕ್ಸ್‌ನ ಕಪೂರ್ ಹೇಳಿದ್ದಾರೆ.

ಮಿತಿಮೀರಿದ ತರ್ಕಬದ್ಧಗೊಳಿಸುವಿಕೆ
ನೆಟ್‌ಫ್ಲಿಕ್ಸ್ ಪ್ರೀಮಿಯಂ ಪ್ಲಾಟ್‌ಫಾರ್ಮ್ ಆಗಿದ್ದರೂ, ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಡಿಸ್ನಿ+ ಹಾಟ್‌ಸ್ಟಾರ್‌ಗೆ ಹೋಲಿಸಿದಾಗ ಇದರ ಬೆಲೆಗಳು ಇನ್ನೂ ಹೆಚ್ಚಾಗಿಯೇ ಇದೆ ಎಂದು ಕಪೂರ್ ತಿಳಿಸಿದ್ದಾರೆ. ಬೆಲೆಯಲ್ಲಿ ಏರಿಳಿತ ನಡೆಸುವುದು ಬಹಳ ಹಿಂದಿನಿಂದಲೇ ಇತ್ತು ಹಾಗೂ ಇದು ಬುದ್ಧಿವಂತ ಕ್ರಮವಾಗಿದೆ ಎಂದು ಕಪೂರ್ ತಿಳಿಸಿದ್ದಾರೆ.

ಇದನ್ನೂ ಓದಿ: Netflix: ಕೋವಿಡ್ ಲಸಿಕೆಯಿಂದ 2021ರಲ್ಲಿ ಸಬ್‌ಸ್ಕ್ರೈಬರ್​ಗಳನ್ನು ಕಳೆದುಕೊಳ್ಳುತ್ತಿದೆ ನೆಟ್‌ಫ್ಲಿಕ್ಸ್; ಹೇಗೆ ಅಂತೀರಾ?

ಬೆಲೆ ಕಡಿತವು ಭಾರತದಲ್ಲಿ ಚಂದಾದಾರರನ್ನು ಮತ್ತು ಜೊತೆಗೆ ಆದಾಯವನ್ನು ಹೆಚ್ಚಿಸಬೇಕು. ಅಂದಾಜು ಪ್ರಕಾರ, ನೆಟ್‌ಫ್ಲಿಕ್ಸ್ ಪ್ರಸ್ತುತ ಭಾರತದಲ್ಲಿ ಸುಮಾರು 6 ಮಿಲಿಯನ್ ಪಾವತಿಸಿದ ಚಂದಾದಾರರನ್ನು ಹೊಂದಿದೆ, ಇದು ಅಮೆಜಾನ್ ಪ್ರೈಮ್ ವಿಡಿಯೋದ ಮೂರನೇ ಒಂದು ಭಾಗದಷ್ಟು ಚಂದಾದಾರರನ್ನು ಹೊಂದಿದೆ. ಬೆಲೆ ಕಡಿತವು ಈ 6 ಮಿಲಿಯನ್ ಸಂಖ್ಯೆಯನ್ನು ಹೆಚ್ಚಿಸಬೇಕು, ”ಎಂದು ಅವರು ಹೇಳಿದರು. ನೆಟ್‌ಫ್ಲಿಕ್ಸ್ ಮುಂದಿನ ಕೆಲವು ವರ್ಷಗಳಲ್ಲಿ ಫ್ಲ್ಯಾಶ್ ಸೇಲ್ ಹಾಗೂ ಕಡಿಮೆ ದರದ ವಾರದ ಟಿಕೆಟ್ ಯೋಜನೆಗಳನ್ನು ಜಾರಿಗೆ ತರುವ ಕುರಿತು ನಿರೀಕ್ಷೆಗಳನ್ನು ಹೊಂದಿದ್ದು, ದೇಶವು ಡಿಜಿಟಲ್ ಕಂಟೆಂಟ್‌ಗಾಗಿ ಬೆಲೆ ಸೂಕ್ಷ್ಮತೆ ಹಾಗೂ ಮೌಲ್ಯ-ಕೇಂದ್ರಿತ ಮಾರುಕಟ್ಟೆಯಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
Published by:vanithasanjevani vanithasanjevani
First published: