Elephants Death in India: ವಿದ್ಯುತ್ ಬೇಲಿಗಳಿಂದ ಕಾಡಾನೆಗಳ ಮಾರಣಹೋಮ.. ಭಾರತಕ್ಕೆ ಕಾದಿದೆ ಆಪತ್ತು!

Elephants dies of electrocution: ಅಸ್ಸಾಂ ರಾಜ್ಯ ಮೊದಲ ಸ್ಥಾನದಲ್ಲಿದ್ದು, ವಿದ್ಯುತ್​ ಬೇಲಿಗೆ 90 ಆನೆಗಳು ಬಲಿಯಾಗಿವೆ.  ಒಡಿಶಾ 73, ತಮಿಳುನಾಡು 68 ಮತ್ತು ಕರ್ನಾಟಕ 65 , ಕೇರಳದಲ್ಲಿ 24 ಆನೆಗಳು ಸಾವನ್ನಪ್ಪಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Explained: ಭಾರತ ಸುಮಾರು 27,300 ಕಾಡು ಆನೆಗಳಿಗೆ ನೆಲೆಯಾಗಿದೆ. ಏಪ್ಯಾದಲ್ಲಿರುವ ಕಾಡಾನೆಗಳ ಶೇ.50ರಷ್ಟು ಆನೆಗಳ ತವರು ಭಾರತವೇ ಆಗಿದೆ. ಆರ್‌ಟಿಐನಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನೀಡಿರುವ ಮಾಹಿತಿಗಳ ಪ್ರಕಾರ, ಇತ್ತೀಚಿನ ಸಮೀಕ್ಷೆಗಳು ಮತ್ತು ಮಾಹಿತಿ ಆಧಾರದಲ್ಲಿ ಆನೆಗಳ ಸಂತತಿ ಅಳಿವಿನ ಹಾದಿಯಲ್ಲಿದೆ. ಆನೆಗಳು ನಿರಂತರವಾಗಿ ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಳ್ಳುತ್ತಿವೆ ಎಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಈ ಹಿಂದೆ ಬೇಟೆಯಾಡುವುದು ಕಾಡಾನೆಗಳ ಸಂಖ್ಯೆ ಕುಸಿತಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಈಗ ಅತಿ ಹೆಚ್ಚು ಆನೆಗಳ ಸಾವಿಗೆ ಕಾರಣವಾಗಿರೋದು ವಿದ್ಯುತ್​ ಬೇಲಿಗಳು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಕಾರ 2014 ಮತ್ತು 2020 ರ ನಡುವೆ 474 ಆನೆಗಳು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿವೆ. ಅಸ್ಸಾಂ ರಾಜ್ಯ ಮೊದಲ ಸ್ಥಾನದಲ್ಲಿದ್ದು, ವಿದ್ಯುತ್​ ಬೇಲಿಗೆ 90 ಆನೆಗಳು ಬಲಿಯಾಗಿವೆ.  ಒಡಿಶಾ 73, ತಮಿಳುನಾಡು 68 ಮತ್ತು ಕರ್ನಾಟಕ 65 , ಕೇರಳದಲ್ಲಿ 24 ಆನೆಗಳು ಸಾವನ್ನಪ್ಪಿವೆ. ಇತ್ತೀಚಿನ ದಿನಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳು ತೀವ್ರಗೊಂಡಿವೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಬೆಳೆ ಮಾದರಿಗಳು ಮತ್ತು ಕೃಷಿ ನಿರ್ವಹಣೆಯಲ್ಲಿನ ಬದಲಾವಣೆಗಳು, ಬೇಜವಾಬ್ದಾರಿಯುತ ವನ್ಯಜೀವಿ ಪ್ರವಾಸೋದ್ಯಮ, ಜಾಗತಿಕ ತಾಪಮಾನದ ಪ್ರಭಾವ ಮತ್ತು ಅರಣ್ಯ ಪ್ರದೇಶಗಳಿಗೆ ವಲಸೆ ಹೋಗುವುದು ಎಲ್ಲವೂ ಆನೆಗಳ ಸಂತತಿ ಕ್ಷೀಣಿಸಲು ಕಾರಣವಾಗಿವೆ.

ಕಾಡಾನೆಗಳ ಸಂಖ್ಯೆ ಆತಂಕಕಾರಿಯಾಗಿ ಕಡಿಮೆಯಾಗುತ್ತಿರುವುದು ಭಾರತದಲ್ಲಿ ರಾಜಕೀಯ ಮಹತ್ವದ ಸಮಸ್ಯೆಯಲ್ಲ. ಏಕೆಂದರೆ ಪ್ರಾಣಿಗಳಿಗೆ ವೋಟ್​ ಇಲ್ಲವಲ್ಲ. ಅರಣ್ಯ ಸಂರಕ್ಷಕರು ಹೇಳುವಂತೆ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾದ ಸಮಯದಲ್ಲಿ  ದೇಶಾದ್ಯಂತ ಕಾಡಾನೆಗಳನ್ನು ಕೊಲ್ಲಲಾಗುತ್ತದೆ,.ಆವಾಸಸ್ಥಾನಗಳನ್ನು ಉಳಿಸಲು ಸರ್ಕಾರ ಮತ್ತು ಸಮುದಾಯ ಮಟ್ಟದಲ್ಲಿ ಅರಣ್ಯ ನಿರ್ವಹಣಾ ನೀತಿಗಳ ಪರಿಶೀಲನೆ ಅಗತ್ಯವಾಗಿದೆ.

ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾದ ಪ್ರದೇಶಗಳಲ್ಲಿ ಕಾಡಾನೆಗಳನ್ನು ತಡೆಯಲು ವಿದ್ಯುತ್ ಬೇಲಿವೊಂದನ್ನೇ ಇತ್ತೀಚಿನ ಅವಲಂಬಿಸಲಾಗಿದೆ ಎಂದು ಏಷಾ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್‌ನ ಸದಸ್ಯರಾದ ಈಸಾ ಆತಂಕ ವ್ಯಕ್ತಪಡಿಸಿದ್ದಾರೆ. ಇವರು ನಾಲ್ಕು ದಶಕಗಳ ಕಾಲ ಕಾಡು ಆನೆಗಳ ನಡವಳಿಕೆಯನ್ನು ಮಾಡಿದ್ದಾರೆ. ವಲಸೆಯ ಮಟ್ಟಗಳು ಹೆಚ್ಚಾದಂತೆ, ಈ ಸಂಘರ್ಷವು ಭವಿಷ್ಯದಲ್ಲಿ ಹೆಚ್ಚಾಗಬಹುದು. ಈ ಬೆಳವಣಿಗೆ ಆಘಾತಕಾರಿ ಎಂದಿದ್ದಾರೆ.

ಪರಿಸರ ಪರಿಣಾಮಗಳನ್ನು ಪರಿಹರಿಸದೆ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಭಾರತದ ವನ್ಯಜೀವಿಗಳ ಆವಾಸಸ್ಥಾನಗಳಿಗೆ ಇನ್ನಷ್ಟು ಹಾನಿಯನ್ನುಂಟುಮಾಡುತ್ತಿವೆ. ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ವಿವಿಧ ಕ್ರಮಗಳ ಮೂಲಕ ಸಮಸ್ಯೆಯನ್ನು ತಗ್ಗಿಸಲು ಪ್ರಯತ್ನಿಸಿದೆ. ಮಾನವ ವನ್ಯಜೀವಿ ಸಂಘರ್ಷಗಳನ್ನು ಕಡಿಮೆ ಮಾಡಲು ಇಲಾಖೆಯು 584 ಕಿಮೀ ಆನೆ ಪ್ರೂಫ್ ಕಂದಕಗಳನ್ನು, 1,501 ಕಿಮೀ ಸೌರಶಕ್ತಿಯ ಬೇಲಿಗಳನ್ನು, 35 ಕಿಮೀ ಆನೆ ಪ್ರೂಫ್ ಗೋಡೆಗಳನ್ನು, 3.5 ಕಿಮೀ ಕಲ್ಲಿನ ಕಂದಕಗಳನ್ನು, 259 ಕಿಮೀ ಕಯ್ಯಾಲಾ ಮತ್ತು 43 ಕಿಮೀ ಜೈವಿಕ ಬೇಲಿಗಳನ್ನು ಸ್ಥಾಪಿಸಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣದ ಕ್ರಮಕ್ಕಾಗಿ ಮತ್ತು ಕಾಡಾನೆ ಸಮಸ್ಯೆ ಪೀಡಿತ ಸಮುದಾಯಗಳೊಂದಿಗೆ ಕೆಲಸ ಮಾಡಲು ಅರಣ್ಯ ಇಲಾಖೆಯು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ರಚಿಸಿದೆ.

ಇದನ್ನೂ ಓದಿ: Explained: ತಾಲಿಬಾನಿಗಳಿಗೆ ಹೆದರಿ ದೇಶ ತೊರೆಯುತ್ತಿರುವ ಅಫ್ಘನ್ನರನ್ನು ಯಾವೆಲ್ಲಾ ದೇಶಗಳು ಬರಮಾಡಿಕೊಳ್ಳುತ್ತಿವೆ?

ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಧನಸಹಾಯದೊಂದಿಗೆ, ಕೇರಳ ಸರ್ಕಾರವು ಅರಣ್ಯ-ಗಡಿಗಳಾದ ತಿರುವನಂತಪುರ, ತೆನ್ಮಲ, ಪುನಲೂರು, ಪಾಲಕ್ಕಾಡ್, ಮನ್ನಾರ್‌ಕಾಡ್, ನಿಲಂಬೂರು ದಕ್ಷಿಣ, ವಯನಾಡ್ ವನ್ಯಜೀವಿ ಅಭಯಾರಣ್ಯ ಮತ್ತು ವಯನಾಡ್ ಉತ್ತರದಲ್ಲಿ ಅರಣ್ಯ-ಬೇಲಿಗಳನ್ನು ಸ್ಥಾಪಿಸಿದೆ.  ಮತ್ತಷ್ಟು ಸಂಘರ್ಷಗಳನ್ನು ಸೀಮಿತಗೊಳಿಸಲು ಸುಮಾರು 220.5 ಕಿಮೀ ಸೋಲಾರ್ ಫೆನ್ಸಿಂಗ್, 2.91 ಕಿಮೀ ಆನೆ-ಪ್ರೂಫ್ ಗೋಡೆಗಳು ಮತ್ತು 11.35 ಕಿಮೀ ರೈಲು ಬೇಲಿಗಳ ನಿರ್ಮಾಣವನ್ನು ಪ್ರಸ್ತಾಪಿಸಿದೆ.

ಆದಾಗ್ಯೂ ಇದು ಸಾಕಾಗುವುದಿಲ್ಲ ಎಂದು ಹೇಳುತ್ತಾರೆ ಡಾ ಇ.ಕೆ. 17 ವರ್ಷಗಳ ಕಾಲ ಕೇರಳದಲ್ಲಿ ಕಾಡು ಪ್ರಾಣಿಗಳ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ಕೆಲಸ ಮಾಡಿದ ಐಯುಸಿಎನ್‌ನ ಏಷ್ಯನ್ ಆನೆಗಳ ತಜ್ಞ ಗುಂಪಿನ ಸದಸ್ಯ  ಪ್ರಕಾರ, ಗ್ರಾಮೀಣ ಅಭಿವೃದ್ಧಿಯತ್ತ ಗಮನಹರಿಸುವಾಗ ನಾವು ಆನೆಗಳಿಗೆ ಸುರಕ್ಷಿತ ಆವಾಸಸ್ಥಾನಗಳನ್ನು ಒದಗಿಸಲು ವಿಫಲರಾಗಿದ್ದೇವೆ. ವಾಸ್ತವವಾಗಿ ಯಾವುದೇ ಸರ್ಕಾರಿ ಅಧಿಕಾರಿ ಉನ್ನತ ಮಟ್ಟದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದ್ದರಿಂದ, ನಾವು ನಮ್ಮ ಅನುಕೂಲವನ್ನು ಆಧರಿಸಿ ನೀತಿಗಳನ್ನು ರೂಪಿಸಿದ್ದೇವೆ. ಮಾನವ-ವನ್ಯಜೀವಿ ಸಂಘರ್ಷಗಳನ್ನು ಭಾರತ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Published by:Kavya V
First published: