ಇಂದು ಭಾರತದ ಹೊಸ ರಾಷ್ಟ್ರಪತಿಗಳು (New President of India) ಅಧಿಕಾರ ಸ್ವೀಕರಿಸಿದ್ದಾರೆ. 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Draupadi Murmu) ಅವರು ಪ್ರಮಾಣವಚನ (Oath) ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (CIJ) ಎನ್.ವಿ. ರಮಣ (N.V. Ramana) ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಬುಟಕಟ್ಟು ಸಮುದಾಯದ (Tribal Community) ಮೊದಲ ವ್ಯಕ್ತಿ ಹಾಗೂ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಗೌರವಕ್ಕೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ. ಇನ್ನು ನೀವು ಗಮನಿಸಿರಬಹುದು, ಪ್ರತಿ ಅವಧಿಯಲ್ಲಿಯೂ ರಾಷ್ಟ್ರಪತಿಗಳು ಜುಲೈ 25ರಂದೇ (July 25) ಅಧಿಕಾರ ಸ್ವೀಕರಿಸಿರುತ್ತಾರೆ. ಈ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ಅಧಿಕಾರ ಸ್ವೀಕರಿಸಿದ್ದರು. ಇದೀಗ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಜುಲೈ 25ರಂದೇ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾದ್ರೆ ರಾಷ್ಟ್ರಪತಿಗಳ ಪ್ರಮಾಣವಚನ ಜುಲೈ 25ರಂದೇ ಯಾಕೆ? ಈ ದಿನದ ಮಹತ್ವವೇನು? ಈ ಎಲ್ಲ ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರ ಇಲ್ಲಿದೆ ಓದಿ…
ಜುಲೈ 25ರಂದೇ ರಾಷ್ಟ್ರಪತಿಗಳ ಪ್ರಮಾಣ ವಚನ
ಪ್ರತಿ ಬಾರಿಯೂ ಜುಲೈ 25 ರಂದು ಭಾರತದ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ನಡೆಯುತ್ತದೆ. ಈ ದಿನಾಂಕದಂದು ನಡೆಯುವ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭಗಳ ಹಿಂದೆ ಯಾವುದೇ ಲಿಖಿತ ನಿಯಮಗಳಿಲ್ಲದಿದ್ದರೂ, 1977ರ ಹಿಂದಿನ ದಾಖಲೆಗಳು ಸಾಮಾನ್ಯ ವಿಧಾನದಿಂದ ಚುನಾಯಿತರಾದ ಪ್ರತಿಯೊಬ್ಬ ಅಧ್ಯಕ್ಷರು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ತೋರಿಸುತ್ತದೆ. 1977ರಿಂದ ಈ ದಿನಾಂಕದಂದೇ ಪ್ರಮಾಣ ವಚನ ಸಮಾರಂಭ ನಡೆದಿರುವುದನ್ನು ನಾವು ಗಮನಿಸಬಹುದು.
ಇದೇ ದಿನ ಪ್ರಮಾಣವಚನ ಸ್ವೀಕರಿಸಬೇಕೆಂಬ ನಿಯಮ ಇಲ್ಲ
ಅಂದಹಾಗೆ ಜುಲೈ 25 ಅಥವಾ ಇಂಥದ್ದೇ ದಿನ ಪ್ರಮಾಣ ವಚನ ಸ್ವೀಕಾರ ನಡೆಯಬೇಕೆಂದು ಯಾವ ನಿಯಮವೂ ಇಲ್ಲ, ಆದರೆ 1977ರಿಂದ ಈ ದಿನಾಂಕದಂದೇ ಪ್ರಮಾಣ ವಚನ ಸಮಾರಂಭ ನಡೆದಿರುವುದು ಗಮನಾರ್ಹ.
ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು
ಮೊದಲ ಬಾರಿ ಜುಲೈ 25ರಂದು ನೀಲಂ ಸಂಜೀವ ರೆಡ್ಡಿ ಪ್ರಮಾಣವಚನ
ಮೊದಲ ಬಾರಿಗೆ, ದೇಶದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು 25 ಜುಲೈ 1977 ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು. ನಂತರ ಅಧಿಕಾರ ವಹಿಸಿಕೊಂಡ ಜ್ಞಾನಿ ಜೈಲ್‌ಸಿಂಗ್‌ನಿಂದ ಹಿಡಿದು ನಿನ್ನೆ ನಿರ್ಗಮಿತರಾದ ರಾಮನಾಥ್ ಕೋವಿಂದ್‌ವರೆಗೆ ಎಲ್ಲರೂ ಇದೇ ದಿನಾಂಕದಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೂಢನಂಬಿಕೆ ಕಾರಣವೇ?
ಜನವರಿ 26, 1950 ರಂದು ಡಾ.ರಾಜೇಂದ್ರ ಪ್ರಸಾದ್ ಅವರು ದೇಶದ ಪ್ರಥಮ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿ, ಎರಡನೇ ಅವಧಿಗೂ ಅವರೇ ಮುಂದುವರಿದರು. ನಂತರ1962ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಿದರು. ಆದರೆ ಆ ನಂತರ ರಾಷ್ಟ್ರಪತಿ ಹುದ್ದೆಗೆ ಬಂದ ಕೆಲವರು ಪೂರ್ಣಾವಧಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಮೇ 13, 1967 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ.ಜಾಕಿರ್ ಹುಸೇನ್, ನಂತರ ಫಕ್ರುದ್ದೀನ್ ಅಲಿ ಅಹಮದ್ ಕೂಡ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಮೃತಪಟ್ಟರು.
ಜುಲೈ 25ರಂದು ಅಧಿಕಾರ ಸ್ವೀಕರಿಸಿದ್ರೆ ಅವಧಿ ಪೂರ್ಣಗೊಳಿಸ್ತಾರಾ?
ಇದಾದ ಬಳಿಕ ನೀಲಂ ಸಂಜೀವ ರೆಡ್ಡಿ ಅವರು ಜುಲೈ 25, 1977 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದರು. ಹಾಗಾಗಿಯೇ ಅಂದಿನಿಂದ ನಿನ್ನೆ ನಿರ್ಗಮಿತರಾದ ರಾಮನಾಥ್ ಕೋವಿಂದ್‌ವರೆಗೆ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದವರೆಲ್ಲಾ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದೀಗ ದ್ರೌಪದಿ ಮುರ್ಮು ಕೂಡ ಜುಲೈ 25ರಂದೇ ಅಧಿಕಾರ ಸ್ವೀಕರಿಸಿದ್ದಾರೆ.
ಬಹುತೇಕರಿಂದ ಜುಲೈ 25ರಂದೇ ಅಧಿಕಾರ ಸ್ವೀಕಾರ
ಅಲ್ಲಿಂದೀಚೆಗೆ, ಗಿಯಾನಿ ಜೈಲ್ ಸಿಂಗ್, ಆರ್ ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆಆರ್ ನಾರಾಯಣನ್, ಎಪಿಜೆ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮ್ ನಾಥ್ ಕೋವಿಂದ್ ಸೇರಿದಂತೆ ಸತತ ರಾಷ್ಟ್ರಪತಿಗಳೆಲ್ಲರೂ ಇದೇ ದಿನಾಂಕದಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ
ಜುಲೈ 25ರಂದು ಇದುವರೆಗೂ 9 ಅಧ್ಯಕ್ಷರ ಪ್ರತಿಜ್ಞಾವಿಧಿ
ಜುಲೈ 25 ರಂದು ಅಧಿಕಾರ ವಹಿಸಿಕೊಳ್ಳುವುದು. ಐದು ವರ್ಷಗಳ ನಂತರ ಜುಲೈ 24 ರಂದು ಅಧಿಕಾರದಿಂದ ಕೆಳಗಿಳಿಯುವುದು ರೂಢಿಯಾಗಿದೆ. ಈ ದಿನಾಂಕದಂದು ಇಲ್ಲಿಯವರೆಗೆ ಒಂಬತ್ತು ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೊಸದಾಗಿ ಚುನಾಯಿತರಾದ ದ್ರೌಪದಿ ಮುರ್ಮು ಕೂಡ ಇದೇ ದಿನಾಂಕದಂದು ಅಧಿಕಾರ ವಹಿಸಿಕೊಂಡಿದ್ದು, ಈ ಪಟ್ಟಿಗೆ ಸೇರುವ 10 ನೇ ವ್ಯಕ್ತಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ