• Home
  • »
  • News
  • »
  • explained
  • »
  • Explained: ಅಪಾಯಕಾರಿ ಲಿವ್-ಇನ್ ರಿಲೇಶನ್‌ಶಿಪ್‌ನಿಂದ ಹೊರಬರಲು ಯಾಕಷ್ಟು ಕಷ್ಟ? ಅಡ್ಡಿಯಾಗೋದು ಇದೇ ನೋಡಿ!

Explained: ಅಪಾಯಕಾರಿ ಲಿವ್-ಇನ್ ರಿಲೇಶನ್‌ಶಿಪ್‌ನಿಂದ ಹೊರಬರಲು ಯಾಕಷ್ಟು ಕಷ್ಟ? ಅಡ್ಡಿಯಾಗೋದು ಇದೇ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ ಅಮೀನ್ ಪೂನವಾಲಾ ಪ್ರಕರಣವನ್ನೇ ನೋಡಿದಾಗ ಲಿವ್-ಇನ್ ರಿಲೇಶನ್‌ಶಿಪ್‌  ವಿಚಾರವಾಗಿ ಹಲವಾರು ಪ್ರಶ್ನೆಗಳು ಉದ್ಭವವಾಗುವುದು ಖಂಡಿತ.

  • Trending Desk
  • Last Updated :
  • New Delhi, India
  • Share this:

    ಇಂದಿನ ಆಧುನಿಕ ಯುಗದಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ (Live-in relationships) ಹೆಚ್ಚು ಸಾಮಾನ್ಯವಾಗಿದ್ದು, ಪ್ರಣಯದಲ್ಲಿರುವ ವ್ಯಕ್ತಿಗಳು ವಿವಾಹದ ಬಂಧನಕ್ಕೆ ಒಳಪಡದೇ ಒಂದೇ ಸೂರಿನಡಿ ಜೊತೆಯಾಗಿ ವಾಸಿಸುವ ಪದ್ಧತಿಯೇ ಲಿವ್ ಇನ್ ರಿಲೇಶನ್‌ಶಿಪ್. ಈ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದರೂ ಇತ್ತೀಚೆಗೆ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ (Shraddha Walker Murder Case) ಭಾಗಿಯಾಗಿದ್ದ ಆಕೆಯ ಲಿವ್ ಇನ್ ಸಂಗಾತಿ ಅಫ್ತಾಬ್ ಅಮೀನ್ ಪೂನಾವಾಲಾ (Aaftab Ameen Poonawala) ಪ್ರಕರಣವನ್ನೇ ನೋಡಿದಾಗ ಲಿವ್-ಇನ್ ರಿಲೇಶನ್‌ಶಿಪ್‌  ವಿಚಾರವಾಗಿ ಹಲವಾರು ಪ್ರಶ್ನೆಗಳು ಉದ್ಭವವಾಗುವುದು ಖಂಡಿತ.


    ತಮಗೆ ಪ್ರಾಣಕ್ಕೆ ಅಪಾಯವಿದೆ ಎಂದು ಶ್ರದ್ಧಾರಿಗೆ ಮೊದಲೇ ಗೊತ್ತಿತ್ತೇ?


    ಸಂಬಂಧ ಎಂಬುದು ಪ್ರೀತಿಯ ಸಂಕೇತವಾಗಿರಬೇಕೇ ಹೊರತು ಅದೊಂದು ಉರುಳಾಗಬಾರದು ಎಂಬುದು ಶ್ರದ್ಧಾ ಅವರ ಉದಾಹರಣೆಯಿಂದ ತಿಳಿದುಕೊಳ್ಳಬಹುದಾಗಿದೆ. ಶ್ರದ್ಧಾ ಪ್ರಕರಣದಲ್ಲಿ ಆಕೆ ಲಿವ್-ಇನ್ ಸಂಬಂಧದಿಂದ ಹೊರಬರಲು ಎದುರಿಸುತ್ತಿರುವ ತೊಂದರೆಗಳು ಒಳಗೊಂಡಂತೆ ಹಲವಾರು ಅಂಶಗಳನ್ನು ಬೆಳಕಿಗೆ ತಂದಿದೆ.


    ಶ್ರದ್ಧಾ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಖುಷಿಯಾಗಿರಲಿಲ್ಲ ಎಂದು ತಿಳಿಸಿರುವ ಆಕೆಯ ಸ್ನೇಹಿತರಲ್ಲಿ ಒಬ್ಬರಾದ ರಜತ್ ಶುಕ್ಲಾ, ಆ ಸಂಬಂಧದಿಂದ ಹೊರಬರಲು ಪ್ರಯತ್ನಿಸಿದ್ದರೂ ಆಕೆ ವಿಫಲಳಾಗಿದ್ದಳು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆಕೆ ಅಕ್ಷರಶಃ ನರಕದಲ್ಲಿ ಜೀವಿಸುತ್ತಿದ್ದಳು ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.


    ಸುದ್ದಿ ಮಾಧ್ಯಮಕ್ಕೆ ಕೆಲವೊಂದು ಮಾಹಿತಿ ನೀಡಿದ ರಜತ್


    ಸುದ್ದಿ ಮಾಧ್ಯಮಕ್ಕೆ ಕೆಲವೊಂದು ಮಾಹಿತಿ ನೀಡಿದ ರಜತ್, ಅಫ್ತಾಬ್ ಹಾಗೂ ಶ್ರದ್ಧಾ ಸಾಕಷ್ಟು ಜಗಳವಾಡಿದ್ದರು ಹಾಗೂ ಆ ದಿನ ಅವರಿಬ್ಬರ ಜಗಳ ತಾರಕಕ್ಕೇರಿತ್ತು ಮತ್ತು ಶ್ರದ್ಧಾ ನನಗೆ ವಾಟ್ಸ್‌ ಆ್ಯಪ್ ಮಾಡಿ ತನ್ನನ್ನು ಎಲ್ಲಿಗಾದರೂ ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಳು, ಆ ದಿನ ತಾನು ಅಲ್ಲಿಯೇ ಇದ್ದರೆ ಆತ ತನ್ನನ್ನು ಕೊಲ್ಲುವುದು ಖಂಡಿತ ಎಂದು ತಿಳಿಸಿದ್ದಾಗಿ ರಜತ್ ಹೇಳಿದ್ದಾರೆ.




    ಶ್ರದ್ಧಾ ತಮ್ಮ ಲಿವ್ ಇನ್ ಸಂಬಂಧದಲ್ಲಿ ಖುಷಿಯಾಗಿಲ್ಲದಿದ್ದರೆ ಆಕೆ ಆ ಸಂಬಂಧವನ್ನು ಏಕೆ ಕೊನೆಗೊಳಿಸಲಿಲ್ಲ ಎಂಬುದು ಕಾಡುವ ಪ್ರಶ್ನೆ. ಕೆಲವೊಂದು ಅಂಶಗಳು ಈ ಹಿನ್ನಲೆಯಲ್ಲಿ ರಿಲೇಶನ್‌ಶಿಪ್‌ನಲ್ಲಿರುವವರ ಪಾಲಿಗೆ ಅಡ್ಡಡ್ಡಿಯಾಗಿರುತ್ತದೆ. ಹೀಗಾಗಿತಾವಿರುವ ಸಂಬಂಧ ಅಪಾಯವನ್ನುಂಟು ಮಾಡುತ್ತದೆ, ಸಂತಸಕರವಲ್ಲ ಎಂದು ತಿಳಿದಿದ್ದರೂ ಅದರಿಂದ ಹೊರಬರಲಾಗುವುದಿಲ್ಲ. ಆ ಅಂಶಗಳೇನು? ಮುಂದಿದೆ ವಿವರ


    ಲಿವ್-ಇನ್ ರಿಲೇಶನ್‌ಶಿಪ್‌ನಿಂದ ಹೊರಬರಲು ಏಕೆ ಕಷ್ಟವಾಗುತ್ತಿದೆ?


    ಪ್ರೀತಿಸುತ್ತಿರುವಾಗ ವ್ಯಕ್ತಿಗಳ ನಕಾರಾತ್ಮಕ ವಿಷಯಕ್ಕೆ ಆದ್ಯತೆ ನೀಡುವುದು ಕಡಿಮೆಯಾಗಿರುತ್ತದೆ. ಇದೇ ಕಾರಣಕ್ಕಾಗಿಯೇ ಜನರು ವಿಷಕಾರಿ ಸಂಬಂಧಗಳಿಂದ ಹೊರಬರಲು ಕಷ್ಟಪಡುತ್ತಾರೆ. ಪರಸ್ಪರ ಜೊತೆಯಾಗಿ ವಾಸಿಸುವ ಸಂಗಾತಿಗಳು ವಿವರಗಳನ್ನು ತಿಳಿದುಕೊಂಡಿರುತ್ತಾರೆ ಹೀಗಾಗಿ ಒಂದು ರೀತಿಯ ಮಾನಸಿಕ ಅವಲಂಬನೆ ಅಲ್ಲಿ ಏರ್ಪಟ್ಟಿರುತ್ತದೆ.


    ಹೊಂದಾಣಿಕೆಯಲ್ಲಿ ಇರಬಹುದು ಎಂಬ ಆಶಾಭಾವನೆ


    ಭಾವನಾತ್ಮಕ ಪರಿಣಾಮ ಕೂಡ ರಿಲೇಶನ್‌ಶಿಪ್‌ನಿಂದ ಹೊರಬರದಂತೆ ಸಂಗಾತಿಯನ್ನು ತಡೆಯುತ್ತದೆ. ಸಂಗಾತಿ ಎಷ್ಟೇ ಕೆಟ್ಟವನಾಗಿದ್ದರೂ ಇಂದಲ್ಲ ನಾಳೆ ಆತ/ಆಕೆ ಸರಿಹೋಗಬಹುದು ತಮ್ಮೊಂದಿಗೆ ಹೊಂದಾಣಿಕೆಯಲ್ಲಿ ಇರಬಹುದು ಎಂಬ ಆಶಾಭಾವನೆಯೇ ಸಂಬಂಧದಲ್ಲಿ ಉಳಿಯುವಂತೆ ಮಾಡುತ್ತದೆ. ಇನ್ನು ಇಂತಹ ಸಂಬಂಧವನ್ನು ತ್ಯಜಿಸಿ ಹೊರಗಿನ ಸಮಾಜಕ್ಕೆ ಬರುವಾಗ ಜನರು ತಮ್ಮನ್ನು ಹೇಗೆ ಸ್ವೀಕರಿಸಬಹುದು ಎಂಬ ತೊಳಲಾಟ ಸಂದಿಗ್ಧತೆ ಸಂಬಂಧದಲ್ಲಿ ಉಳಿಯುವಂತೆ ಮಾಡುತ್ತದೆ.


    ವಿಷಕಾರಿ ಸಂಬಂಧವನ್ನು ತ್ಯಜಿಸುವುದು ಹೇಗೆ?


    ಆತ/ಆಕೆ ತಾವಿರುವ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ ಎಂಬುದು ಅರಿವಾದೊಡನೆ ಅದನ್ನು ಯಾರಿಗಾದರೂ ತಿಳಿಸುವುದು ಮುಖ್ಯವಾಗಿದೆ. ಇದರಿಂದ ಆ ವ್ಯಕ್ತಿ ಅಂತಹ ಸಂಬಂಧದಿಂದ ಹೊರಬರಲು ನೆರವು ನೀಡಬಹುದು. ನೀವಿರುವ ಸಂಬಂಧ ನಿಂದನೀಯ ಹಾಗೂ ಅಪಾಯದ್ದು ಎಂಬುದು ಮನವರಿಕೆಯಾದಲ್ಲಿ ವೃತ್ತಿಪರರ ಸಹಾಯವನ್ನು ಪಡೆದುಕೊಂಡು ಇಂತಹ ಸಂಬಂಧವನ್ನು ಕೊನೆಗೊಳಿಸಬಹುದು. ಹೀಗೆ ಮಾನಸಿಕ ಚಿಕಿತ್ಸಕರ ನೆರವನ್ನು ಪಡೆದುಕೊಂಡು ವಿಷಕಾರಿ ಸಂಬಂಧದ ವಿಷ ವರ್ತುಲದಿಂದ ಹೊರಬರಬಹುದು ಹಾಗೂ ಅದಕ್ಕೆ ಅಗತ್ಯವಿರುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳಬಹುದು.


    Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


    ಹವ್ಯಾಸ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಿ


    ನಿಮಗೆ ಇಷ್ಟವಿರುವ ಯಾವುದೇ ಹವ್ಯಾಸ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಿ. ಇದಕ್ಕಾಗಿ ಸಮಯವನ್ನು ಮೀಸಲಿರಿಸಿದರೆ ಸಂಬಂಧದಲ್ಲಿ ಹೊರಬರಲು ನಿಮಗೆ ಸಹಾಯವಾಗುತ್ತದೆ ಹಾಗೂ ಆ ಸಂಬಂಧದ ನೆನಪು ನಿಮ್ಮನ್ನು ಕಾಡುವುದಿಲ್ಲ.


    ನಿಮ್ಮನ್ನು ನೀವು ಹೆಚ್ಚು ಹೆಚ್ಚು ಪ್ರೀತಿಸಿದಂತೆ ಜೀವನದ ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆಯಬಹುದಾಗಿದೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಶ್ರೇಹಾ ಧರಗಲ್ಕರ್, ಅಫ್ತಾಬ್ ತಮಗೆ ಮೋಸ ಮಾಡುತ್ತಿರುವುದಾಗಿ ಶ್ರದ್ಧಾ ಶಂಕಿಸಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    Published by:Precilla Olivia Dias
    First published: