Explained: ಸಂತಸಕರ ನೆನಪುಗಳಿಗಿಂತಲೂ ಭಯಗೊಳಿಸುವ ನೆನಪುಗಳೇ ದೀರ್ಘಕಾಲ ಸ್ಮರಿಸುವುದು ಏಕೆ ಗೊತ್ತಾ?

ಮನುಷ್ಯ ಎಂದ ಮೇಲೆ ಆತ ತನ್ನ ಜೀವಮಾನದಲ್ಲಿ ಅನೇಕ ಅನುಭವಗಳನ್ನು ಪಡೆಯುವುದು ಸಹಜ. ಹಲವು ಘಟನೆಗಳು ಆತನಿಗೆ ಸಂತಸದ ಅನುಭವ ನೀಡಿದರೆ ಅದೆಷ್ಟೋ ಪ್ರಸಂಗಗಳಲ್ಲಿ ಆತ ಭಯದ ಅನುಭವಗಳನ್ನೂ ಸಹ ಪಡೆದಿರುತ್ತಾನೆ. ಆದಾಗ್ಯೂ, ಮನುಷ್ಯರು ತಮಗುಂಟಾದ ಸಂತಸಮಯ ಕ್ಷಣಗಳಿಗಿಂತಲೂ ಹೆಚ್ಚು ಸಮಯದವರೆಗೆ ತಾವು ಅನುಭವಿಸಿದ ಕೆಟ್ಟದಾದ ನೆನಪುಗಳನ್ನೇ ಜ್ಞಾಪಕದಲ್ಲಿಟ್ಟುಕೊಂಡಿರುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮನುಷ್ಯ ಎಂದ ಮೇಲೆ ಆತ ತನ್ನ ಜೀವಮಾನದಲ್ಲಿ ಅನೇಕ ಅನುಭವಗಳನ್ನು (Experience)  ಪಡೆಯುವುದು ಸಹಜ. ಹಲವು ಘಟನೆಗಳು ಆತನಿಗೆ ಸಂತಸದ ಅನುಭವ ನೀಡಿದರೆ ಅದೆಷ್ಟೋ ಪ್ರಸಂಗಗಳಲ್ಲಿ ಆತ ಭಯದ ಅನುಭವಗಳನ್ನೂ ಸಹ ಪಡೆದಿರುತ್ತಾನೆ. ಆದಾಗ್ಯೂ, ಮನುಷ್ಯರು (Man) ತಮಗುಂಟಾದ ಸಂತಸಮಯ ಕ್ಷಣಗಳಿಗಿಂತಲೂ ಹೆಚ್ಚು ಸಮಯದವರೆಗೆ ತಾವು ಅನುಭವಿಸಿದ ಕೆಟ್ಟದಾದ ನೆನಪುಗಳನ್ನೇ ಜ್ಞಾಪಕದಲ್ಲಿಟ್ಟುಕೊಂಡಿರುತ್ತಾರೆ. ಉದಾಹರಣೆಗೆ (Example), ಯಾರಿಗಾದರೂ ಅಪಘಾತವಾಗಿದ್ದಲ್ಲಿ (Accident) ಅವರು ತಮ್ಮೊಡನೆ ಆಗಿದ್ದ ಆ ಅಪಘಾತದ ಅನುಭವವನ್ನು ದಶಕಗಳ ಕಾಲ ಮರೆಯಲು ಸಾಧ್ಯವೇ ಆಗುವುದಿಲ್ಲ. ಅದೇ ಅವರಿಗೆ ಯಾವುದಾದರೂ ಸಂತಸದ ನೆನಪುಗಳನ್ನು ಹಂಚಿಕೊಳ್ಳಲು ಕೇಳಿದರೆ ಕಷ್ಟಪಟ್ಟು ನೆನಪು ಮಾಡಿಕೊಳ್ಳುತ್ತಾರೆ.

ಏಕೆ ಹೀಗಾಗುತ್ತದೆ? ಮನುಷ್ಯ ಕೆಟ್ಟದ್ದನ್ನು ಬೇಗ ಮರೆಯಲು ಸಾಧ್ಯ ಆಗುವುದಿಲ್ಲ ಏಕೆ ಎಂಬ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ. ಆದರೆ, ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಂತಾಗಿದೆ.

ಇಲಿಗಳ ಮೇಲೆ ಅಧ್ಯಯನ
ಈ ಪ್ರಶ್ನೆಗೆ ಸಂಬಂಧಿಸಿದಂತೆ ಈಗ ನರಶಾಸ್ತ್ರ ವಿಜ್ಞನಿಗಳ ತಂಡವೊಂದು ಅಧ್ಯಯನ ನಡೆಸಿದ್ದು ವರದಿ ಪ್ರಕಟಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಟುಲೇನ್ ವಿವಿಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕಾಲೇಜು ಹಾಗೂ ಟಫ್ಸ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಕಾಲೇಜುಗಳ ಸಂಶೋಧಕರನ್ನೊಳಗೊಂಡ ತಂಡವೊಂದು ಇಲಿಗಳ ಮೇಲೆ ಅಧ್ಯಯನ ನಡೆಸಿದ್ದು ತನ್ನ ಸಂಶೋಧನಾ ವರದಿಯನ್ನು ಪ್ರಕಟಿಸಿದೆ.

"ಎಮಿಗ್ಡಲಾ" ಭಾವನೆಗಳಿಗೆ ಸಂಬಂಧಿಸಿದ ಒಂದು ಭಾಗ
ಮೆದುಳಿನಲ್ಲಿ ಕಂಡುಬರುವ ಎಮಿಗ್ಡಲಾ ಎಂಬುದು ಭಾವನೆಗಳಿಗೆ ಸಂಬಂಧಿಸಿದ ಒಂದು ಭಾಗವಾಗಿದೆ. ನಮಗಾಗುವ ಹೆದರಿಕೆಗಳಂತಹ ಭಾವನೆಗಳು ಈ ಭಾಗದಲ್ಲೇ ಅಡಕವಾಗಿರುತ್ತವೆ. ಸಂಶೋಧಕರ ತಂಡವು ಈಗ ಎಮಿಗ್ಡಲಾದಲ್ಲಿ ರೂಪಗೊಳ್ಳುವ ಭಯಕ್ಕೆ ಸಂಬಂಧಿಸಿದಂತಹ ಭಾವನೆಗಳ ರಚನೆಯ ಮೇಲೆ ಅಧ್ಯಯನ ನಡೆಸಿದ್ದು ಅದರಿಂದ ಕಂಡುಕೊಳ್ಳಲಾದ ಅಂಶಗಳನ್ನು ತಮ್ಮ ಸಮಾನವಾಗಿ ಪರಿಶೀಲಿಸಲಾದ (ಪೀರ್-ರಿವ್ಯೂಡ್) ವರದಿಯಲ್ಲಿ ಪ್ರಕಟಿಸುವ ಮೂಲಕ ಆ 'ಮುಖ್ಯ' ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.

ಭಯದ ಭಾವನೆಗಳನ್ನು ಸಂಸ್ಕರಿಸಲು ಅನುವು ಮಾಡಿಕೊಡುವ ಇನ್ಹಿಬಿಟರಿ ನ್ಯೂರಾನು
ಸಂಶೋಧಕರಿಂದ ಕಂಡುಕೊಳ್ಳಲಾದ ಅಂಶವೇನೆಂದರೆ, ನೋರಾಡ್ರೆನಲೈನ್ ಎಂತಲೂ ಕರೆಯಲ್ಪಡುವ ಒತ್ತಡವಾಹಕಗಳೆನ್ನಲಾಗುವ ನ್ಯೂರೋಟ್ರಾನ್ಸ್ಮಿಟರ್ ನೋರೆಪಿನೆಫ್ರೈನುಗಳು ಮೆದುಳಿನ ಎಮಿಗ್ಡಲಾದಲ್ಲಿರುವ ಕೆಲವು ಇನ್ಹಿಬಿಟರಿ ನ್ಯೂರಾನುಗಳನ್ನು ಪ್ರಚೋದಿಸುವ ಮೂಲಕ ಭಯದ ಭಾವನೆಗಳನ್ನು ಸಂಸ್ಕರಿಸಲು ಅನುವು ಮಾಡಿಕೊಡುತ್ತವೆ. ಈ ಮೂಲಕ ಪುನರಾವರ್ತನೆಯಗುವ ಸಾಮರ್ಥ್ಯವಿರುವ ಒಂದು ವಿನ್ಯಾಸದ ಎಲೆಕ್ಟ್ರಿಕ್ ಡಿಸ್ಚಾರ್ಜುಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ: World Brain Tumor Day: ಬ್ರೈನ್‌ ಟ್ಯೂಮರ್​ನಿಂದ ಬಚಾವ್​ ಆಗಲು ಈ ಅಂಶಗಳ ಬಗ್ಗೆ ತಿಳಿಯಲೇಬೇಕು

ಈ ವಿನ್ಯಾಸಗಳು ತದನಂತರ ಮೆದುಳಿನಲ್ಲಿ ಸ್ಥಿರವಾದ ವಿಶ್ರಾಂತಿ ಸ್ಥಾನದಲ್ಲಿರುವ ತರಂಗಗಳ ಗತಿಯ ಮೇಲೆ ಪ್ರಭಾವ ಬೀರುವ ಮೂಲಕ ತಟಸ್ಥವಾಗಿರುವ ತರಂಗಗಳ ಗತಿ ಉದ್ರೇಕಗೊಳ್ಳುವಂತೆ ಮಾಡುತ್ತವೆ. ಈ ಮೂಲಕ ಭಯದ ನೆನಪುಗಳ ಭಾವನೆಗಳು ಹೆಚ್ಚು ಮುನ್ನೆಲೆಗೆ ಬರುವಂತೆ ಮಾಡುತ್ತವೆ ಎಂದು ಸಂಶೋಧನಾ ತಂಡದ ವಿಜ್ಞಾನಿಗಳು ಹೇಳಿದ್ದಾರೆ.

ಶಸ್ತ್ರಸಜ್ಜಿತ ದರೋಡೆ ಪ್ರಸಂಗದ ಒಂದು ಉದಾಹರಣೆ
ಈ ವಿಷಯದಲ್ಲಿ ತಂಡದ ಮುಖ್ಯ ಸಂಶೋಧನಾ ಸದಸ್ಯ ಹಾಗೂ ಮಾಲೆಕ್ಯೂಲರ್ ಬಯಾಲಾಜಿಯ ಪ್ರೊಫೆಸರ್ ಆಗಿರುವ ಜೆಫ್ರಿ ಟಾಸ್ಕರ್ ಒಂದು ಅನನ್ಯವಾದಂತಹ ಶಸ್ತ್ರಸಜ್ಜಿತ ದರೋಡೆ ಪ್ರಸಂಗದ ಒಂದು ಉದಾಹರಣೆಯ ಮೂಲಕ ಈ ಒಟ್ಟಾರೆ ವಿದ್ಯಮಾನವನ್ನು ಹೀಗೆ ವಿವರಿಸುತ್ತಾರೆ.

ಇದನ್ನೂ ಓದಿ:  Heart Attack: ಹೃದಯಾಘಾತದಿಂದ ಹಠಾತ್ ಸಾವನ್ನಪ್ಪುವುದನ್ನು ತಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

"ನಿಮ್ಮನ್ನು ಗನ್ ಪಾಯಿಂಟ್ ಮೇಲೆ ಹಿಡಿದಾಗ ನಿಮ್ಮಲ್ಲಿ ಅಡ್ರೆನಲೈನ್ ರಶ್ ಉಂಟಾಗಿ ನಿಮ್ಮ ಮೆದುಳು ಒತ್ತಡ ವಾಹಕಗಳಾದ ನ್ಯೂರೋಟ್ರಾನ್ಸ್ಮಿಟರ್ ನೋರೆಪಿನೆಫ್ರೈನುಗಳನ್ನು ಹೊರಸೂಸುತ್ತದೆ. ಇದರಿಂದಾಗಿ ನಿಮ್ಮ ಮೆದುಳಿನ ಎಮಿಗ್ಡಲಾದಲ್ಲಿ ಭಾವನೆಗಳು ಅಡಕವಾಗಿರುವ ನಿರ್ದಿಷ್ಟ ಭಾಗದಲ್ಲಿ ನಡೆಯುತ್ತಿರುವ ಎಲೆಕ್ಟ್ರಿಕ್ ಡಿಸ್ಚಾರ್ಜ್ ವಿನ್ಯಾಸದ ಮೇಲೆ ಪ್ರಭಾವ ಊಂಟು ಮಾಡಿ ಅದು ಬದಲಾಗುವಂತೆ ಮಾಡುತ್ತದೆ. ಪರಿಣಾಮಸ್ವರೂಪ, ಸ್ಥಿರವಾದ ವಿಶ್ರಾಂತ ಗತಿಯಲ್ಲಿದ್ದ ತರಂಗಗಳು ಉದ್ರೇಕಗೊಂಡು ಈ ನಿರ್ದಿಷ್ಟ ಭಾವನೆಗಳ ಒಂದು ನೆನಪಿನ ರಚನೆಯನ್ನೇ ಸೃಷ್ಟಿಸುತ್ತದೆ. ಈ ಕಾರಣದಿಂದಾಗಿಯೇ ಇದು ಭಯಗೊಳಿಸುತ್ತಿರುತ್ತದೆ" ಎಂದು ವಿವರಿಸುತ್ತಾರೆ ಜೆಫ್ರಿ.
Published by:Ashwini Prabhu
First published: