• Home
  • »
  • News
  • »
  • explained
  • »
  • Explained: ಶಸ್ತ್ರಸಜ್ಜಿತ ರಷ್ಯಾದ ವಾಯುಪಡೆ ಉಕ್ರೇನ್‌ನಲ್ಲಿ ವಿಫಲವಾಗಿದ್ದೇಕೆ? ಇದರಿಂದ ಭಾರತದ ವಾಯುಪಡೆ ಕಲಿಯಬೇಕಾಗಿರುವುದೇನು?

Explained: ಶಸ್ತ್ರಸಜ್ಜಿತ ರಷ್ಯಾದ ವಾಯುಪಡೆ ಉಕ್ರೇನ್‌ನಲ್ಲಿ ವಿಫಲವಾಗಿದ್ದೇಕೆ? ಇದರಿಂದ ಭಾರತದ ವಾಯುಪಡೆ ಕಲಿಯಬೇಕಾಗಿರುವುದೇನು?

ರಷ್ಯಾದ ವಾಯುಪಡೆ

ರಷ್ಯಾದ ವಾಯುಪಡೆ

ಆಧುನಿಕ ಯುದ್ಧ ಪರಿಕರಗಳು ಹಾಗೂ ವ್ಯವಸ್ಥೆಗಳು ಭಯಾನಕ ಪ್ರಮಾಣದಲ್ಲಿ ಹತ್ಯೆಯನ್ನು ಹೆಚ್ಚಿಸುವುದಷ್ಟೇ ಹೊರತು ಬೇರಾವುದೇ ರೀತಿಯ ಪ್ರಯೋಜನವನ್ನುಂಟು ಮಾಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಯುದ್ಧದ ಸಮಯದಲ್ಲಿ ಸಾಮರ್ಥ್ಯದೊಂದಿಗೆ ಕ್ರಿಯಾತ್ಮಕವಾಗಿಯೂ ಕೆಲಸ ಮಾಡಬೇಕು ಎಂಬುದು ತಂತ್ರಜ್ಞರ ಕಿವಿಮಾತಾಗಿದೆ.

ಮುಂದೆ ಓದಿ ...
  • Share this:

ಉಕ್ರೇನ್ (Ukraine) ಹಾಗೂ ರಷ್ಯಾ ಯುದ್ಧದಲ್ಲಿ ರಷ್ಯಾದ ಮಿಲಿಟರಿ ವೈಫಲ್ಯದಿಂದ (Russia's military failure) ವಿಶ್ವದ ಇತರ ರಾಷ್ಟ್ರಗಳು ಕಲಿಯಬೇಕಾದ್ದು ಬಹಳಷ್ಟಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆಧುನಿಕ ಯುದ್ಧ ಪರಿಕರಗಳು ಹಾಗೂ ವ್ಯವಸ್ಥೆಗಳು ಭಯಾನಕ ಪ್ರಮಾಣದಲ್ಲಿ ಹತ್ಯೆಯನ್ನು ಹೆಚ್ಚಿಸುವುದಷ್ಟೇ ಹೊರತು ಬೇರಾವುದೇ ರೀತಿಯ ಪ್ರಯೋಜನವನ್ನುಂಟು ಮಾಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಯುದ್ಧದ ಸಮಯದಲ್ಲಿ ಸಾಮರ್ಥ್ಯದೊಂದಿಗೆ ಕ್ರಿಯಾತ್ಮಕವಾಗಿಯೂ ಕೆಲಸ ಮಾಡಬೇಕು ಎಂಬುದು ತಂತ್ರಜ್ಞರ ಕಿವಿಮಾತಾಗಿದೆ. ಭಾರತಕ್ಕೆ  (India)ಇದೇ ನೀತಿಯನ್ನು ಅನ್ವಯಿಸುವುದಾದಲ್ಲಿ ಚೀನಾ (China) ಹಾಗೂ ಪಾಕ್‌ನಂತಹ ದೇಶಗಳನ್ನು ಹಿಮ್ಮೆಟ್ಟಿಸುವಷ್ಟು ಪ್ರಾಬಲ್ಯ ತನ್ನಲ್ಲಿದೆ ಎಂದು ಭಾವಿಸುವ ಮೊದಲು ರಷ್ಯಾ ಏಕೆ ವಾಯುಶಕ್ತಿಯಲ್ಲಿ ಹಿಮ್ಮೆಟ್ಟಿದೆ ಎಂಬುದನ್ನು ಅರಿಯಬೇಕಾಗಿದೆ.


ರಷ್ಯಾದ ವಾಯುಪಡೆ ಎಡವಿದ್ದೆಲ್ಲಿ?
ರಷ್ಯಾದ ವಾಯುಪಡೆಯು – VKS ಅನ್ನು 2015 ರಲ್ಲಿ ವಾಯು ಮತ್ತು ಬಾಹ್ಯಾಕಾಶ ಪಡೆಗಳು ಎಂದು ಮರುನಾಮಕರಣ ಮಾಡಲಾಯಿತು. ರಷ್ಯಾ ಉಕ್ರೇನ್ ಯುದ್ಧದಲ್ಲಿ ಪ್ರಮುಖ ಮುಂಚೂಣಿಯಾಗಿ ಯುದ್ಧದ ಅಭಿಯಾನವನ್ನು ಮುನ್ನಡೆಸಲು ಉದ್ದೇಶಿಸಲಾಗಿತ್ತು. ಏಕೆಂದರೆ ರಷ್ಯಾ ಅಗಾಧವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳ ಮೇಲ್ವಿಚಾರಣೆಯನ್ನು ವಾಯುಪಡೆ ನಿರ್ವಹಿಸುತ್ತದೆ.


ಫೆಬ್ರವರಿಯಲ್ಲಿ ಅಂಕಿಅಂಶಗಳನ್ನು ನೋಡಿದಾಗ ಉಕ್ರೇನಿಯನ್ ವಾಯುಪಡೆಯನ್ನು ಅಥವಾ ಪೊವಿಟ್ರಿಯಾನಿ ಸೈಲಿ ಉಕ್ರೈನಿ (ಪಿಎಸ್‌ಯು) ಅನ್ನು ನೆಲದಲ್ಲಿ ನಾಶಮಾಡಲು ಮತ್ತು ಅದರ ವಾಯು ರಕ್ಷಣಾ ಮತ್ತು ಕಮಾಂಡ್ ಸೆಂಟರ್‌ಗಳನ್ನು ನಾಶಮಾಡಲು ರಷ್ಯಾ ಉತ್ತಮ ಕಾರ್ಯತಂತ್ರವನ್ನೇ ಹೊಂದಿತ್ತು. ರಷ್ಯಾದ VKS 722 ಫೈಟರ್ ಜೆಟ್‌ಗಳನ್ನು ಹೊಂದಿದ್ದರೆ ಉಕ್ರೇನ್‌ನ PSU 69 ಫೈಟರ್ ಜೆಟ್‌ಗಳನ್ನು ಮಾತ್ರವೇ ಹೊಂದಿತ್ತು.


ಇದನ್ನೂ ಓದಿ: Explained: ನಿಜಕ್ಕೂ ಪರಮಾಣು ಪ್ರಯೋಗಿಸುತ್ತಾರಾ ಪುಟಿನ್? ರಷ್ಯಾದ ಎಚ್ಚರಿಕೆಯ ಪರಿಣಾಮಗಳೇನು?


ಹೆಲಿಕಾಪ್ಟರ್‌ಗಳ ಸಂಖ್ಯೆಯಲ್ಲಿನ ವ್ಯತ್ಯಾಸ ಗಮನಿಸುವುದಾದರೆ 544 ಮತ್ತು 34 ಮತ್ತು ಮೀಸಲಾದ ನೆಲದ-ದಾಳಿ ವಿಮಾನಗಳು, 739 ಮತ್ತು 29 ಹೀಗಿದ್ದವು. ಎರಡು ದೇಶಗಳು, ಒಂದೇ ರೀತಿಯ ಸಾಧನಗಳನ್ನು ಯುದ್ಧದಲ್ಲಿ ನಿರ್ವಹಿಸಿದವು. ನೂರಾರು ಕ್ಷಿಪಣಿಗಳು Tu-95 'ಬೇರ್' ಮತ್ತು Tu-160 'ಬ್ಲ್ಯಾಕ್‌ಜಾಕ್' ಬಾಂಬರ್‌ಗಳಿಂದ ನಿಯೋಜಿಸಲಾದ Kh-101 ಕ್ರೂಸ್ ಕ್ಷಿಪಣಿಗಳು ಸೇರಿದಂತೆ ರಷ್ಯಾ ಪಡೆಯಲ್ಲೇ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳು ಯುದ್ಧದ 10 ದಿನಗಳಲ್ಲಿ ಉಕ್ರೇನ್ ನೆಲದಲ್ಲಿ ದಾಳಿಮಾಡಿದವು.


ಯುದ್ಧದ ಬದಲಾವಣೆಗೆ ಸಾಕ್ಷಿಯಾದ ವೈಮಾನಿಕ ಯುದ್ಧ
ಉಕ್ರೇನ್ ಪಡೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಕ್ರೂಸ್ ಮತ್ತು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಖ್ಯೆಯು ಮೂರು ಪಟ್ಟು ಹೆಚ್ಚು ಅಂದರೆ 3,650 ಕ್ಕೆ ಏರಿತು. ಇದು ಭಾರತದ ಸಂಪೂರ್ಣ ಶಸ್ತ್ರಾಗಾರದ ಗಾತ್ರಕ್ಕಿಂತ ಎಂಟು ಪಟ್ಟು ಹೆಚ್ಚಾಗಿದೆ. ಎಂಬುದು ತಜ್ಞರ ಅಂದಾಜಾಗಿದೆ. ಕ್ಷಿಪಣಿ ಹಾಗೂ ಯುದ್ಧ ಶಸ್ತ್ರಾಸ್ತ್ರಗಳು 90% ದಾಳಿ ನಡೆಸಿದವು ಆದರೆ ಇದು ಉಕ್ರೇನ್‌ನ ವಾಯು ರಕ್ಷಣೆ ಅಥವಾ ಕಮಾಂಡ್ ಸೆಂಟರ್‌ಗಳನ್ನು ಧ್ವಂಸಗೊಳಿಸಲು ಸಾಧ್ಯವಾಗಲಿಲ್ಲ. ಉದ್ದೇಶಿತ ರನ್‌ವೇಗಳು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆಗೆ ಮರಳಿದವು. ರಷ್ಯಾದ ಸೇನೆಯ ವಿರುದ್ಧ ಕೈವ್ ಹೋರಾಟ ನಡೆಸಿತು.


ರಷ್ಯಾ-ಉಕ್ರೇನ್ ವೈಮಾನಿಕ ಯುದ್ಧವು ಯುದ್ಧದ ಬದಲಾವಣೆಗೆ ಸಾಕ್ಷಿಯಾಗಿದೆ. ಸುಧಾರಿತ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (AESA) ರಾಡಾರ್‌ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳು ಯುದ್ಧಭೂಮಿಯಲ್ಲಿ ಝೇಂಕರಿಸಿವೆ. ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳು ಶತ್ರು ಪಡೆಯ ರಾಡಾರ್‌ಗಳು ಹಾಗೂ ಕ್ಷಿಪಣಿಗಳನ್ನು ಹತ್ತಿಕ್ಕುವಷ್ಟು ಸಾಮರ್ಥ್ಯವನ್ನು ಪಡೆದುಕೊಂಡಿವೆ. ರಷ್ಯಾ-ಉಕ್ರೇನ್ ಯುದ್ಧವು ವಾಯು ನಿಯಂತ್ರಣ ಅಥವಾ ವಾಯು ಪ್ರಾಬಲ್ಯದ ಈ ಪಾಶ್ಚಿಮಾತ್ಯ ಸಿದ್ಧಾಂತದ ವಿರುದ್ಧ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೇ ನೀತಿ ಭಾರತೀಯ ವಾಯುಪಡೆಗೂ ಅನ್ವಯಿಸುತ್ತದೆ.


ಇದನ್ನೂ ಓದಿ:  Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


ಭವಿಷ್ಯದಲ್ಲಿ ಭಾರತ ಚೀನಾ ಯುದ್ಧಕ್ಕಿಳಿದರೆ ಇದೇ ರೀತಿಯ ಪೈಪೋಟಿ ನಿರ್ಮಾಣವಾಗುತ್ತದೆ. ಅದೂ ಅಲ್ಲದೆ ಎರಡೂ ದೇಶಕ್ಕೂ ಸಂಪೂರ್ಣ ವಾಯುನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ ಎಂದು ವಾಯು ಕೇಂದ್ರದ ಮಹಾನಿರ್ದೇಶಕ ಏರ್ ಮಾರ್ಷಲ್ ಅನಿಲ್ ಚೋಪ್ರಾ ತಿಳಿಸಿದ್ದಾರೆ. ಶತ್ರುಗಳ ಮೇಲೆ ಗುಂಡು ಹಾರಿಸುವ ಕಡೆಯಿಂದ ಮಾತ್ರವಲ್ಲದೆ ಶತ್ರುವನ್ನು ಮೊದಲು ಗುರುತಿಸುವವರಿಂದ ಭವಿಷ್ಯದಲ್ಲಿ ಯುದ್ಧಗಳು ಗೆಲ್ಲುತ್ತವೆ ಎಂಬುದು ಅನಿಲ್ ಚೋಪ್ರಾ ಹೇಳಿಕೆಯಾಗಿದೆ.


ವಾಯು ಶಕ್ತಿ ತಂತ್ರಜ್ಞಾನದಲ್ಲಿ ಕ್ರಾಂತಿ
ಉಕ್ರೇನ್ ಯುದ್ಧಕ್ಕೆ ಬಹಳ ಹಿಂದೆಯೇ, ರಷ್ಯಾದ ತಂತ್ರಜ್ಞಾನದ ಮಿತಿಗಳನ್ನು ಅರಿತುಕೊಂಡ ಭಾರತವು ತನ್ನ ರಷ್ಯಾ ನಿರ್ಮಿತ Su-30 ಫ್ಲೀಟ್ ಅನ್ನು ಇಸ್ರೇಲಿ ಎಲೆಕ್ಟ್ರಾನಿಕ್ಸ್-ವಾರ್ಫೇರ್ ಸೂಟ್‌ಗಳೊಂದಿಗೆ ಹೊಂದಿಸಲು ಮುಂದಾಯಿತು. ಬಾಲಾಕೋಟ್ ದಾಳಿಯ ನಂತರದ ವಾಯು ದಾಳಿಯ ನಂತರ, ದೇಶದ Su-30 MKI ಗಳನ್ನು ಪಾಕಿಸ್ತಾನಿ F16 ಗಳು ದೀರ್ಘ-ಶ್ರೇಣಿಯ AAMRAM ಕ್ಷಿಪಣಿಗಳನ್ನು ಹೊಡೆದುರುಳಿಸಿದವು .ಭಾರತವು ಇಸ್ರೇಲಿ ನಿರ್ಮಿತ ಡರ್ಬಿ ಕ್ಷಿಪಣಿಗಳನ್ನು ಯುದ್ಧವಿಮಾನಗಳಿಗೆ ಸಮಾನವಾಗುವಂತೆ ಮರುಹೊಂದಿಸಲು ಪ್ರಯತ್ನಿಸಿದೆ. ಮತ್ತು ಇದಕ್ಕಾಗಿಯೇ ಐಎಎಫ್ ಅತ್ಯಾಧುನಿಕ ರಫೇಲ್‌ನಂತಹ ಪಾಶ್ಚಿಮಾತ್ಯ ನಿರ್ಮಿತ ವಿಮಾನಗಳನ್ನು ಬಹಳ ಹಿಂದಿನಿಂದಲೂ ಅನ್ವೇಷಿಸುತ್ತಿದೆ.


ವಾಯು ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆ ಇನ್ನಷ್ಟು ಯುದ್ಧವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳ ದಾಸ್ತಾನುಗಳನ್ನು ಹೊಂದಿರಬೇಕು ಎಂಬುದೇ ತಜ್ಞರ ಅಭಿಪ್ರಾಯವಾಗಿದೆ. ಉಕ್ರೇನ್‌ನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಅತ್ಯಂತ ಕಡಿಮೆ ಸೇನಾ ಶಕ್ತಿಯನ್ನು ಆರಂಭದಲ್ಲಿ ಹೊಂದಿದ್ದರೂ ತದನಂತರ ಉಕ್ರೇನ್ ಕ್ಷಿಪಣಿ, ಶಸ್ತ್ರಾಸ್ತ್ರ ಬಲವನ್ನು ವೃದ್ಧಿಸಿಕೊಂಡಿದೆ. ಉಕ್ರೇನಿಯನ್ ಸಶಸ್ತ್ರ ಪಡೆಗಳು ಈಗ 6,000 ಸಣ್ಣ ಡ್ರೋನ್‌ಗಳನ್ನು ನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ಈ ಡ್ರೋನ್‌ಗಳು ರಷ್ಯಾದ ರಕ್ಷಾಕವಚದ ಮೇಲೆ ನಿಖರವಾದ ದಾಳಿಗಳನ್ನು ನಡೆಸುವುದರಿಂದ ಹಿಡಿದು, ದೀರ್ಘ-ಶ್ರೇಣಿಯ ಫಿರಂಗಿ ನಿಖರವಾದ ನಿರ್ದೇಶಾಂಕಗಳನ್ನು ಒದಗಿಸುವವರೆಗೆ, ರಷ್ಯಾದ ಪ್ರಸಿದ್ಧ ಮಿಲಿಟರಿ ತಂತ್ರಗಳಿಗೆ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಪಡೆದುಕೊಂಡಿವೆ.


ಇದನ್ನೂ ಓದಿ:  Explained: ವಾಯುಪಡೆಗೆ ಲಘು ಯುದ್ಧ ವಿಮಾನ ಸೇರ್ಪಡೆ: 'ಪ್ರಚಂಡ್' ವಿಶೇಷತೆ ಏನು? ಸೇನೆಗೆ ಆಗೋ ಲಾಭವೇನು?


ಟರ್ಕಿ-ನಿರ್ಮಿತ ಬೈರಕ್ತರ್ TB2 ನಂತಹ ಡ್ರೋನ್‌ಗಳು ವಾಯು ರಕ್ಷಣೆಗೆ ಹೆಚ್ಚು ದುರ್ಬಲವಾಗಿದ್ದರೂ TB2 ಅಗ್ಗವಾಗಿದೆ, ಪ್ರತಿಯೊಂದಕ್ಕೂ $5 ಮಿಲಿಯನ್‌ಗಿಂತಲೂ ಕಡಿಮೆ ವೆಚ್ಚವಾಗುತ್ತದೆ ಮತ್ತು ವಾಣಿಜ್ಯ ಏರೋಸ್ಪೇಸ್ ಅಪ್ಲಿಕೇಶನ್‌ಗಳಿಗಾಗಿ ತಯಾರಿಸಲಾದ ಘಟಕಗಳನ್ನು ಬಳಸುವುದರಿಂದ ಮರುಪೂರಣ ಮಾಡುವುದು ಸುಲಭವಾಗಿದೆ. ಭವಿಷ್ಯದ ಯುದ್ಧ ಮಾದರಿಗಳ ಬಗ್ಗೆ ತುಲನಾತ್ಮಕ ವಿಶ್ಲೇಷಣೆಯನ್ನು ನೀಡಿರುವ ತಂತ್ರಜ್ಞ ಪೀಟರ್ ವಿಲ್ಸನ್, ರೊಬೋಟಿಕ್ ವ್ಯವಸ್ಥೆಯನ್ನು ದೇಶಗಳು ಬಳಸುವುದನ್ನು ನೋಡಬಹುದು ಎಂದು ತಿಳಿಸಿದ್ದಾರೆ. ಈ ರೊಬೋಟ್‌ಗಳನ್ನು ಮುಂದೆ ಅಪಾಯಕಾರಿ ಬಾಂಬ್ ದಾಳಿ ಹಾಗೂ ಉದ್ದೇಶಿತ ದಾಳಿಗೆ ಸಹಾಯಕವಾಗಿ ಬಳಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.


ಏರ್‌ಮಾರ್ಷಲ್ ಅನಿಲ್ ಚೋಪ್ರಾ ಹೇಳುವಂತೆ ಅಗ್ಗದ ಮದ್ದುಗುಂಡುಗಳು ಮಾರಣಾಂತಿಕವಾಗಿದೆ ಎಂದು ತಿಳಿಸಿದ್ದಾರೆ. ದೊಡ್ಡ ಡ್ರೋನ್‌ಗಳನ್ನು ಶಸ್ತ್ರಗಳು ಪತ್ತೆಹಚ್ಚಿದರೂ ಸಣ್ಣ ಡ್ರೋನ್‌ಗಳನ್ನು ಪತ್ತೆಹಚ್ಚುವುದು ಇದೀಗ ಕಷ್ಟವಾಗಿದೆ ಎಂದೇ ತಿಳಿಸಿದ್ದಾರೆ. ಡ್ರೋನ್ ಅಭಿವೃದ್ಧಿಗೆ ಭಾರತವು ಹಣವನ್ನು ವಿನಿಯೋಗಿಸಿದೆ. ಡ್ರೋನ್ ಸ್ವಾರ್ಮ್‌ಗಳು, ಅಟೊನೊಮಸ್ ವಿಂಗ್‌ಮ್ಯಾನ್ ಹಾಗೂ ಸರ್ವಿಯಲನ್ಸಿ ಮೊದಲಾದ ಡ್ರೋನ್ ಸೌಲಭ್ಯಗಳನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ನ್ಯೂಸ್ಪೇಸ್ ಹಾಗೂ ಐಡಿಯಾಫೋರ್ಜ್ ಕಾರ್ಯನಿರ್ವಹಿಸುತ್ತಿದೆ. ಆದರೆ ತಜ್ಞರು ಹೇಳುವಂತೆ ಭಾರತೀಯ ಸೇನಾ ಸಂಗ್ರಹಣೆ ವ್ಯವಸ್ಥೆಗಳು ನಿಧಾನವಾಗಿವೆ ಹಾಗೂ ಇನ್ನಷ್ಟು ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಾಗಿದೆ ಎನ್ನಲಾಗಿದೆ.


ಸಂಕಷ್ಟದ ಸಮಯದಲ್ಲಿ ತಲೆದೋರುವ ಕಠಿಣ ಸಮಸ್ಯೆಗಳು
ಭಾರತೀಯ ವಾಯುಸೇನೆ ಇಂತಹ ಕಠಿಣ ಸವಾಲುಗಳನ್ನು ಎದರಿಸುತ್ತಿರುವ ಸಮಯದಲ್ಲಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2019 ರ ಕೊನೆಯಲ್ಲಿ, ಮಾಜಿ ರಕ್ಷಣಾ ಸಿಬ್ಬಂದಿ ಬಿಪಿನ್ ರಾವತ್ ತಿಳಿಸಿರುವಂತೆ ಪಾಕಿಸ್ತಾನದೊಂದಿಗೆ 10 ದಿನಗಳ ತೀವ್ರವಾದ ಯುದ್ಧಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದಾರೆ ಮತ್ತು ಚೀನಾದೊಂದಿಗೆ 30 ದಿನಗಳ ಸಂಘರ್ಷಕ್ಕೆ ಯುದ್ಧ ದಾಸ್ತಾನುಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದಾಗಿದೆ. ಈ ಬಗ್ಗೆ ಭಾರತೀಯ ಸೇನೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ.


ಯುದ್ಧ ಶಸ್ತ್ರಾಸ್ತ್ರಗಳಿಗೆ ತಗಲುವ ವೆಚ್ಚಗಳು ಹಾಗೂ ನಿಧಾನಗತಿಯ ಬೆಳವಣಿಗೆಯನ್ನು ಗಮನಿಸಿದಾಗ ಚೀನಾಕ್ಕೆ ಹೊಂದಿಕೆಯಾಗುವ ಯುದ್ಧ ಸಂಪನ್ಮೂಲಗಳನ್ನು ಅನ್ವೇಷಿಸುವುದು ಅಸಂಭವ ಅದರಲ್ಲೂ ದೀರ್ಘಾವಧಿಯ ಸಂಘರ್ಷದಲ್ಲಿ ಇದು ಸಾಧ್ಯವಿಲ್ಲದೇ ಇರುವಂತಹದ್ದು ಎಂದು ತಂತ್ರಜ್ಞರ ನುಡಿಯಾಗಿದೆ. ಇನ್ನು ಕೆಲವೊಂದು ಅಂಕಿಅಂಶಗಳ ಪ್ರಕಾರ ಭಾರತ ಯುದ್ಧದ ಸಿದ್ಧತೆಗಾಗಿ ಕೆಲವೊಂದು ತಪ್ಪು ಹೆಜ್ಜೆಗಳನ್ನು ಇಟ್ಟಿದೆ ಎಂದಾಗಿದೆ. ಈ ತಿಂಗಳ ಆರಂಭದಲ್ಲಿ, ಐಎಎಫ್ ಸ್ಥಳೀಯವಾಗಿ ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್‌ನ ಮೊದಲ ಸ್ಕ್ವಾಡ್ರನ್ ಅನ್ನು ಹೆಚ್ಚಿಸಿತು.


ಇದನ್ನೂ ಓದಿ: Explained: ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದ್ಯಾ ತೈವಾನ್‌ ಮೇಲಿನ ಚೀನಾದ ಆಕ್ರಮಣ


ಸೇನೆಯು ಇನ್ನೂ ಹಲವಾರು ದಾಳಿಮಾಡುವ ಹೆಲಿಕಾಪ್ಟರ್‌ಗಳನ್ನು ಸೇರಿಸುವ ಯೋಜನೆಯನ್ನು ಹೊಂದಿದೆ. ಆದರೆ ತಜ್ಞರು ಹೇಳುವಂತೆ ಫೈಟರ್ ಜೆಟ್‌ಗಳು ಹಾಗೂ ಸ್ಟೆಲ್ತ್ ಬಾಂಬರ್‌ನಂತಹ ದುಬಾರಿ ಯುದ್ಧ ಶಸ್ತ್ರಾಸ್ತ್ರಗಳಿಗೆ ಮಹತ್ವ ನೀಡುವ ಬದಲಿಗೆ ಸಣ್ಣ ಹಾಗೂ ಕಡಿಮೆ ವೆಚ್ಚದ ಡ್ರೋನ್‌ಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಈ ಡ್ರೋನ್‌ಗಳು ಮಾನರಹಿತವಾಗಿದ್ದು ಸ್ವಾಯತ್ತ ವ್ಯವಸ್ಥೆಗಳಾಗಿವೆ ಮತ್ತು ಇಂತಹ ಸಮೂಹ ತಂತ್ರಗಳ ಕಡೆಗೆ ಹೆಚ್ಚು ಸುಧಾರಣೆಯನ್ನು ಕಂಡುಕೊಳ್ಳಬೇಕು ಎಂದು ಸಲಹೆ ಇತ್ತಿದ್ದಾರೆ. ದೀರ್ಘಾವಧಿಯ ಯುದ್ಧದ ಸಮಯದಲ್ಲಿ ಶಕ್ತಿಯ ಅಸಮರ್ಪಕ ಬಳಕೆಯಿಂದ ಅಪಾಯ ಉಂಟಾಗುವುದು ನಿಜ ಎಂದೇ ಅವರು ವಾದಿಸಿದ್ದಾರೆ.

Published by:Ashwini Prabhu
First published: