• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು ಭಾರತಕ್ಕೆ ಸವಾಲಾಗಿದ್ದು ಹೇಗೆ?

Explained: ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು ಭಾರತಕ್ಕೆ ಸವಾಲಾಗಿದ್ದು ಹೇಗೆ?

ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು

ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು

ಭಾರತದ ಉಪಖಂಡದ ಪಂಜಾಬ್ ಹಾಗೂ ಬಂಗಾಳ ಪ್ರಾಂತ್ಯಗಳನ್ನು ಭಾರತ ಹಾಗೂ ಪಾಕಿಸ್ತಾನದ ನಡುವೆ ಹೇಗೆ ವಿಭಜಿಸಬೇಕೆಂದು ಶಿಫಾರಸು ಮಾಡಲು ಸಮಾಲೋಚನಾ ಸಮಿತಿಯನ್ನು ರಚಿಸಲಾಯಿತು. ವಿಭಜನೆಯ ನಂತರ ಭಾರತದ ಭಾಗದಲ್ಲಿ ಲಕ್ಷಾಂತರ ಮುಸ್ಲೀಮರು ಅಂತೆಯೇ ಪಾಕಿಸ್ತಾನ ಭಾಗದಲ್ಲಿ ಅಷ್ಟೇ ಪ್ರಮಾಣದ ಹಿಂದೂಗಳ ಉಳಿಯುವಿಕೆಗೆ ಕಾರಣವಾಯಿತು.

ಮುಂದೆ ಓದಿ ...
  • Share this:

ಭಾರತದ ಉಪಖಂಡದ ಪಂಜಾಬ್ (Panjab) ಹಾಗೂ ಬಂಗಾಳ (Bengal) ಪ್ರಾಂತ್ಯಗಳನ್ನು ಭಾರತ (India)  ಹಾಗೂ ಪಾಕಿಸ್ತಾನದ (Pakistan) ನಡುವೆ ಹೇಗೆ ವಿಭಜಿಸಬೇಕೆಂದು ಶಿಫಾರಸು ಮಾಡಲು ಸಮಾಲೋಚನಾ ಸಮಿತಿಯನ್ನು ರಚಿಸಲಾಯಿತು. ವಿಭಜನೆಯ (Partition) ನಂತರ ಭಾರತದ ಭಾಗದಲ್ಲಿ ಲಕ್ಷಾಂತರ ಮುಸ್ಲೀಮರು ಅಂತೆಯೇ ಪಾಕಿಸ್ತಾನ ಭಾಗದಲ್ಲಿ ಅಷ್ಟೇ ಪ್ರಮಾಣದ ಹಿಂದೂಗಳ ಉಳಿಯುವಿಕೆಗೆ ಕಾರಣವಾಯಿತು. ಸ್ವಾತಂತ್ರ್ಯದ ಎರಡು ದಿನಗಳ ನಂತರ ಅಂದರೆ ಆಗಸ್ಟ್ 17, 1947 ರಂದು ಪಂಜಾಬ್ ಹಾಗೂ ಬಂಗಾಳದ ವಿಭಜನೆಗಾಗಿ ಗಡಿ ಆಯೋಗಗಳ ತೀರ್ಪನ್ನು (judgment) ಘೋಷಿಸಲಾಯಿತು. ಈ ತೀರ್ಪು ಎರಡು ಪ್ರಾಂತ್ಯಗಳ ಜನರಿಗೆ ಅಂತೆಯೇ ಭಾರತ ಹಾಗೂ ಪಾಕಿಸ್ತಾನ ಸರಕಾರಗಳಿಗೆ ನೋವನ್ನುಂಟು ಮಾಡಿತು.


ಭಾರತದ ಆಗಿನ ಕಾನೂನು ಸಚಿವರಾಗಿದ್ದ ಬಿ.ಆರ್ ಅಂಬೇಡ್ಕರ್ ಮತ್ತು ಕೈಗಾರಿಕೆ ಮತ್ತು ಪೂರೈಕೆ ಸಚಿವ ಶ್ಯಾಮ ಪ್ರಸಾದ್ ಮುಖರ್ಜಿಯವರು ಚಿತ್ತಗಾಂಗ್ ಗುಡ್ಡಗಾಡು ಪ್ರದೇಶಗಳ ವಿಷಯವನ್ನು ಯುಎನ್ (UNO) ಕೈಗೆತ್ತಿಕೊಳ್ಳುವಂತೆ ಹೇಳಿಕೆ ನೀಡಿರುವುದನ್ನು ದಾಖಲೆಗಳ ಪ್ರವೇಶಾನುಮತಿ ಪಡೆದುಕೊಂಡಿದ್ದ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಪ್ರಸ್ತಾಪಿಸಿವೆ.


ತೀರ್ಪಿಗೆ ಪ್ರಮುಖ ಆಕ್ಷೇಪಣೆಗಳು ಏನಾಗಿತ್ತು ಮತ್ತು ಭಾರತ ಮತ್ತು ಪಾಕಿಸ್ತಾನದ ರಾಜಕೀಯ ನಾಯಕರ ಪ್ರತಿಕ್ರಿಯೆ ಏನು? ಎಂಬುದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ


ಎರಡು ಗಡಿ ಆಯೋಗಗಳು ಯಾವುವು?
1947 ರಲ್ಲಿ ಪಂಜಾಬ್ ಹಾಗೂ ಬಂಗಾಳದ ಗಡಿ ಆಯೋಗಗಳ ಅಧ್ಯಕ್ಷರನ್ನಾಗಿ ಸರ್ ಸಿರಿಲ್ ಜಾನ್ ರಾಡ್‌ಕ್ಲಿಫ್ ಎಂಬ ಬ್ರಿಟಿಷ್ ವಕೀಲರನ್ನು ನೇಮಿಸಲಾಯಿತು. ಇವರಿಗೆ ಭಾರತ ಹಾಗೂ ಪಾಕ್‌ನ ಹೊಸ ಗಡಿಗಳನ್ನು ನಿರ್ಮಿಸುವ ಕೆಲಸವನ್ನು ವಹಿಸಲಾಯಿತು. ಇದಕ್ಕಾಗಿ ಐದು ವಾರಗಳ ಗಡುವನ್ನು ನೀಡಲಾಯಿತು. ಜುಲೈ 1947 ರಂದು ಭಾರತಕ್ಕೆ ಆಗಮಿಸಿದರು. ಜುಲೈ 1947 ರಲ್ಲಿ ಭಾರತಕ್ಕೆ ಆಗಮಿಸಿದರು.


ಪಂಜಾಬ್ ಮತ್ತು ಬಂಗಾಳದ ಗಡಿ ಆಯೋಗಗಳು ಕ್ರಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ತಲಾ ಇಬ್ಬರು ನಾಮನಿರ್ದೇಶಿತರನ್ನು ಒಳಗೊಂಡಿವೆ. ಪಂಜಾಬ್ ಆಯೋಗದಲ್ಲಿ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್, ನ್ಯಾಯಮೂರ್ತಿ ತೇಜಾ ಸಿಂಗ್, ನ್ಯಾಯಮೂರ್ತಿ ದಿನ್ ಮೊಹಮ್ಮದ್ ಮತ್ತು ನ್ಯಾಯಮೂರ್ತಿ ಮುಹಮ್ಮದ್ ಮುನೀರ್ ಸದಸ್ಯರಾಗಿದ್ದರು. ಬಂಗಾಳ ಆಯೋಗವು ನ್ಯಾಯಮೂರ್ತಿ ಸಿಸಿ ಬಿಸ್ವಾಸ್, ನ್ಯಾಯಮೂರ್ತಿ ಬಿಕೆ ಮುಖರ್ಜಿ, ನ್ಯಾಯಮೂರ್ತಿ ಅಬು ಸಲೇಹ್ ಅಕ್ರಮ್ ಮತ್ತು ನ್ಯಾಯಮೂರ್ತಿ ಎಸ್‌ಎ ರೆಹಮಾನ್ ಅವರನ್ನು ಒಳಗೊಂಡಿತ್ತು. ಗಡಿ ಆಯೋಗಗಳ ಪ್ರಶಸ್ತಿಯನ್ನು ಆಗಸ್ಟ್ 17, 1947 ರಂದು ಸಾರ್ವಜನಿಕಗೊಳಿಸಲಾಯಿತು.


ಭಾರತದ ಹಾಗೂ ಪಾಕ್‌ನ ಉನ್ನತ ರಾಜಕೀಯ ಮುಖಂಡರು ತೀರ್ಪಿನ ಕುರಿತು ಯಾವಾಗ ಚರ್ಚಿಸಿದರು?


ತೀರ್ಪಿನ ಸಾರ್ವಜನಿಕ ಘೋಷಣೆಗೆ ಒಂದು ದಿನ ಮೊದಲು, ಆಗಸ್ಟ್ 16, 1947 ರಂದು ಸಂಜೆ 5 ಗಂಟೆಗೆ ನವದೆಹಲಿಯ ಸರ್ಕಾರಿ ಭವನದಲ್ಲಿ ನಡೆದ ಮಿನಿಟ್ಸ್ ಆಫ್ ಮೀಟಿಂಗ್‌ನ ವಿವರಗಳನ್ನು ನ್ಯಾಶನಲ್ ಆರ್ಕೈವ್‌ಗಳಲ್ಲಿರುವ ದಾಖಲೆಗಳು ಒಳಗೊಂಡಿವೆ.


ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ


ಈ ಸಮಯದಲ್ಲಿ ಸಭೆಯಲ್ಲಿ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್, ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್, ಭಾರತದ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್, ಪಾಕಿಸ್ತಾನದ ಆಂತರಿಕ ಸಚಿವ ಫಜಲ್-ಉರ್-ರಹಮಾನ್, ಭಾರತದ ರಕ್ಷಣಾ ಸಚಿವ ಸರ್ದಾರ್ ಬಲದೇವ್ ಸಿಂಗ್, ಭಾರತದ ರಾಜ್ಯಗಳ ಇಲಾಖೆಯ ಕಾರ್ಯದರ್ಶಿ, ವಿ.ಪಿ.ಮೆನನ್ ಮತ್ತು ಸಂಪುಟ ಕಾರ್ಯದರ್ಶಿ ಪಾಕಿಸ್ತಾನ್ ಮೊಹಮ್ಮದ್ ಅಲಿ ಉಪಸ್ಥಿತರಿದ್ದರು. ಉಪಸ್ಥಿತರಿದ್ವರಿಗೆ ತೀರ್ಪಿನ ಪ್ರತಿಗಳನ್ನು ಮೊದಲೇ ವಿತರಿಸಲಾಯಿತು.


ತೀರ್ಪಿಗೆ ಸಂಬಂಧಿಸಿದಂತೆ ಯಾವ ಚರ್ಚೆ ನಡೆಯಿತು?


ಪಂಡಿತ್ ಜವಾಹರಲಾಲ್ ನೆಹರೂ ಅವರು ಚಿತ್ತಗಾಂಗ್ ಗುಡ್ಡಗಾಡು ಪ್ರದೇಶವನ್ನು ಪಾಕಿಸ್ತಾನಕ್ಕೆ (ಪೂರ್ವ ಪಾಕಿಸ್ತಾನ, ಈಗ ಬಾಂಗ್ಲಾದೇಶ) ನೀಡುವುದರ ತೀರ್ಪಿನ ವಿರುದ್ಧ ಪ್ರತಿಭಟಿಸಿದರು ಎಂದು ಮಿನಿಟ್ಸ್ ಆಫ್ ಮೀಟಿಂಗ್ ತೋರಿಸುತ್ತವೆ. ಗಡಿ ಆಯೋಗದ ನಿಯಮಗಳ ಅಡಿಯಲ್ಲಿ ಪೂರ್ವ ಬಂಗಾಳಕ್ಕೆ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶಗಳ ಹಂಚಿಕೆ ಸಾಧ್ಯವಿದೆ ಎಂಬುದಾಗಿ ಅವರು ಎಂದಿಗೂ ಪರಿಗಣಿಸಲಿಲ್ಲ ನೆಹರು ತಿಳಿಸಿದರು. ಈ ಪ್ರದೇಶದಲ್ಲಿ ಬೌದ್ಧರು ಮತ್ತು ಹಿಂದೂಗಳ ಜನಸಂಖ್ಯೆಯ ಪ್ರಮಾಣವು 97% ದಷ್ಟಿದೆ ಅಂತೆಯೇ ತಾವು ಮತ್ತು ಕಾಂಗ್ರೆಸ್‌ನ ಇತರ ಕಾರ್ಯಕರ್ತರು ಈ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಶ್ನೆಯೇ ಇಲ್ಲವೆಂದು ಬೆಟ್ಟ ಪ್ರದೇಶದ ಮುಖ್ಯಸ್ಥರಿಗೆ ಭರವಸೆ ನೀಡಿರುವುದಾಗಿ ತಿಳಿಸಿದರು. ಈ ಪ್ರದೇಶವನ್ನು ಸುಪರ್ದಿಗೆ ತೆಗೆದುಕೊಳ್ಳುವ ಅಧಿಕಾರ ಸರ್ ಸಿರಿಲ್ ರಾಡ್‌ಕ್ಲಿಫ್ ಅವರಿಗಿಲ್ಲವೆಂದು ನೆಹರೂ ಉಲ್ಲೇಖಿಸಿದ್ದಾರೆ.


ಇದೇ ಸಂದರ್ಭದಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ತೀರ್ಪನ್ನು ಸಮರ್ಥಿಸಿಕೊಂಡಿದ್ದು ಚಿತ್ತಗಾಂಗ್ ಜಿಲ್ಲೆಯು ಬೆಟ್ಟದ ಪ್ರದೇಶಗಳೊಂದಿಗೆ ನಿಕಟ ಆರ್ಥಿಕ ಸಂಬಂಧವನ್ನು ಹೊಂದಿದೆ ಮತ್ತು ಬಂದರಿಗೆ ಬೆಟ್ಟದ ಪ್ರದೇಶಗಳ ಮೂಲಕ ಹರಿಯುವ ಕರ್ಣಫುಲಿ ನದಿಯ ಸರಿಯಾದ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ತಿಳಿಸಿದರು ಅಂತೆಯೇ ನೆಹರು ಮತ್ತು ಲಿಯಾಕತ್ ಅಲಿ ಖಾನ್ ತಿರಸ್ಕರಿಸಿದ ಭೂಪ್ರದೇಶವನ್ನು ಮರು ಹೊಂದಾಣಿಕೆ ಮಾಡುವ ಮೂಲಕ ರಾಜಿ ಮಾಡಿಕೊಳ್ಳುವ ಸಲಹೆಯನ್ನು ಅವರು ನೀಡಿದರು. ಜಿಲ್ಲೆಯನ್ನು ಪ್ರತ್ಯೇಕಿಸಿದಲ್ಲಿ ಗುಡ್ಡಗಾಡುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಗಡಿ ಆಯೋಗಗಳ ಉಲ್ಲೇಖದ ನಿಯಮಗಳ 'ಗಡಿಗಳನ್ನು ನೇರ ಸಂಪರ್ಕದಲ್ಲಿರಿಸುವ ಸ್ಥಿತಿ' ಷರತ್ತು ಪೂರ್ವ ಬಂಗಾಳಕ್ಕೆ ಅವುಗಳ ಹಂಚಿಕೆಗೆ ಅನುಮತಿ ನೀಡಿದೆ ಎಂದು ಹೇಳಿದರು. ಡಾರ್ಜಿಲಿಂಗ್ ಮತ್ತು ಜಲ್ಪೈಗುರಿ ಜಿಲ್ಲೆಗಳನ್ನು ಭಾರತಕ್ಕೆ ಸೇರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.


ಇದನ್ನೂ ಓದಿ:  Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು


ಪಂಜಾಬ್


ಪಂಜಾಬ್‌ನಲ್ಲಿ ಗಡಿ ಆಯೋಗದ ತೀರ್ಪು ಸಿಖ್ಖರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದಾಗಿ ನೆಹರು ಅವರು ಪರಿಗಣಿಸಿದ್ದರು, ಸರ್ದಾರ್ ಬಲದೇವ್ ಸಿಂಗ್ ಅವರು ತೀರ್ಪಿನ ಪ್ರತಿಕ್ರಿಯೆಯು ಸಿಖ್ಖರ ಮನಸ್ಸಿನಲ್ಲಿ ಬಹಳ ಪ್ರತಿಕೂಲವಾಗಿರುತ್ತದೆ ಎಂದು ಹೇಳಿದರು. ಲಿಯಾಖತ್ ಅಲಿ ಖಾನ್ ಅವರು ಮುಸ್ಲಿಮರೂ ಕೂಡ ಇದೇ ರೀತಿಯ ಪ್ರತಿಕೂಲ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ ಎಂದು ಹೇಳಿದರು. ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ, ಪೂರ್ವ ಪಂಜಾಬ್‌ನಲ್ಲಿ ಭಾರತೀಯ ನಾಯಕರು ತಮ್ಮ ಹಕ್ಕುಗಳಿಗಾಗಿ ಹೋರಾಡಿದಂತೆ ಪಶ್ಚಿಮ ಪಂಜಾಬ್‌ನಲ್ಲಿ ಸಿಖ್ಖರ ಹಕ್ಕುಗಳಿಗಾಗಿ ಬೆಂಬಲವಾಗಿ ನಿಲ್ಲುವುದು ತನ್ನ ಕರ್ತವ್ಯವೆಂದು ಪರಿಗಣಿಸಿರುವುದಾಗಿ ಸ್ಪಷ್ಟನೆ ನೀಡಿದರು. ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಮತಿಸಲಾಗುವುದು ಎಂಬ ಅಂಶಕ್ಕೂ ಪ್ರಾಶಸ್ತ್ಯ ನೀಡಿದರು


ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ ಕುರಿತಂತೆ ನೆಹರೂ ಅವರೊಂದಿಗೆ ಮೌಂಟ್‌ಬ್ಯಾಟನ್‌ರ ಮುಂದಿನ ಮಧ್ಯಸ್ಥಿಕೆ ಏನಾಗಿತ್ತು?


ಆಗಸ್ಟ್ 19, 1947 ರ ಲಾರ್ಡ್ ಮೌಂಟ್‌ಬ್ಯಾಟನ್ ಮತ್ತು ನೆಹರೂ ನಡುವಿನ ಸಂದರ್ಶನದ ಸಾರವನ್ನು ದಾಖಲೆಗಳು ಒಳಗೊಂಡಿವೆ. ಮೌಂಟ್‌ಬ್ಯಾಟನ್ ತಿಳಿಸಿರುವಂತೆ ಜಿಲ್ಲೆಯ ಜನರ ಅಭ್ಯುದಯ ಹಾಗೂ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ತಗಾಂಗ್ ಗುಡ್ಡಗಾಡು ಪ್ರದೇಶವನ್ನು ಭಾರತಕ್ಕೆ ಬಿಟ್ಟುಕೊಡುವಂತೆ ಒತ್ತಾಯಿಸಿ 16 ರಂದು ಅವರೊಂದಿಗೆ ತಂಗಿದ್ದ ಲಿಯಾಖತ್ ಅಲಿ ಖಾನ್‌ರೊಂದಿಗೆ ಕೊನೆಯದಾಗಿ ಸುದೀರ್ಘ ಮಾತುಕತೆ ನಡೆಸಿರುವುದಾಗಿ ಅಂತೆಯೇ ಬೆಟ್ಟಗಳ ಪ್ರಮುಖ ಭಾಗಗಳಾದ ರೋವರ್ ಕರ್ಣಫುಲಿ ಮತ್ತು ಎರಡೂ ದಂಡೆಯಲ್ಲಿನ ಸುಮಾರು ಹತ್ತುಮೈಲಿಗಳಷ್ಟು ಸ್ಥಳವು ಪಾಕ್‌ಗೆ ನಿಜವಾಗಿಯೂ ಅಗತ್ಯವಿದೆ ಎಂಬುದಾಗಿ ಲಿಯಾಖತ್ ಅಲಿ ಖಾನ್ ಒಪ್ಪಿಕೊಂಡಿರುವುದಾಗಿ ನೆಹರೂ ಅವರಿಗೆ ಮೌಂಟ್‌ಬ್ಯಾಟನ್ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.


ಅವುಗಳನ್ನು ಡಾರ್ಜಿಲಿಂಗ್ ಮತ್ತು ಜಲ್ಪೈಗುರಿಗೆ ಪ್ರದೇಶಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಸಂತಸವಾಗುತ್ತಿದೆ ಎಂಬುದನ್ನೂ ತಿಳಿಸಿದ್ದಾರೆ. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಪ್ರಧಾನಿಯವರು (ನೆಹರು) ಈ ಎರಡೂ ಪ್ರಾಂತ್ಯಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲವೆಂಬುದಾಗಿ ಪಟ್ಟುಹಿಡಿದಿರುವುದನ್ನೂ ತಿಳಿಸಿದ್ದಾರೆ.


ವಿನಿಮಯಕ್ಕಾಗಿ ಬೇರೆ ಏನನ್ನು ನೀಡಬಹುದು ಎಂಬುದಾಗಿ ನೆಹರೂ ಅವರಲ್ಲಿ ಕೇಳಲು ಲಿಯಾಖತ್ ಅವರಿಗೆ ಸಲಹೆ ಮಾಡಿರುವುದಾಗಿ ಮೌಂಟ್‌ಬ್ಯಾಟನ್ ಹೇಳಿಕೊಂಡಿದ್ದಾರೆ. ಗಡಿಆಯೋಗದ ತೀರ್ಪಿನಿಂದ ಮುಸ್ಲಿಮರು ಬಹುವಾಗಿ ಪರಿಣಾಮಕ್ಕೊಳಗಾಗಿದ್ದು ನ್ಯಾಯ ದೊರಕಬೇಕೆಂಬುದಾಗಿ ನೆಹರೂ ಅವರೊಂದಿಗೆ ವಿನಂತಿಸಿರುವ ಅಂಶವನ್ನು ಮೌಂಟ್‌ಬ್ಯಾಟನ್ ತಿಳಿಸಿದ್ದಾರೆ. ಚಿತ್ತಗಾಂಗ್ ಗುಡ್ಡಗಾಡು ಪ್ರದೇಶಗಳ ಕುರಿತು ಸೌಹಾರ್ದ ಚರ್ಚೆ ನಡೆಸಲು ಪಾಕಿಸ್ತಾನ ಸರ್ಕಾರವನ್ನು ಆಹ್ವಾನಿಸುವುದನ್ನು ಬಿಟ್ಟು ಬೇರೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದೆ ಮತ್ತು ಅವರು ಒಪ್ಪಿಕೊಂಡರು ಎಂಬುದು ದಾಖಲೆಗಳಲ್ಲಿ ಮುದ್ರಿತವಾಗಿದೆ.


ಬೆಂಗಾಲ್ ತೀರ್ಪಿನ ಕುರಿತಂತೆ ಬಿಆರ್ ಅಂಬೇಡ್ಕರ್ ಮತ್ತು ಎಸ್‌ಪಿ ಮುಖರ್ಜಿಯವರ ಅನಿಸಿಕೆಗಳೇನು?


ಇಬ್ಬರೂ ಮಂತ್ರಿಗಳು ಜಂಟಿಯಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು, ತೀರ್ಪಿನ ನಿರ್ಧಾರವು ಕೆಲವೊಂದೆಡೆಗಳಲ್ಲಿ ಪಕ್ಷಪಾತ ಹಾಗೂ ನ್ಯಾಯವಲ್ಲದ ಅಂಶಗಳನ್ನು ಎತ್ತಿಹಿಡಿದಿದ್ದು ವಿಭಜನೆಯ ಮೂಲಭೂತ ನೀತಿ ಮತ್ತು ಉಲ್ಲೇಖದ ನಿಯಮಗಳಿಗೆ ವಿರುದ್ಧವಾಗಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ. ಗೃಹ ಸಚಿವರು, ಆಹಾರ ಮತ್ತು ಕೃಷಿ ಸಚಿವರು ಮತ್ತು ರಕ್ಷಣಾ ಸಚಿವರನ್ನು ಒಳಗೊಂಡಿದ್ದ ಗಡಿ ತೀರ್ಪಿನ ಕಾನೂನು ಮತ್ತು ಇತರ ಪರಿಣಾಮಗಳಿಗಾಗಿ ಆಗಸ್ಟ್ 25 ರಂದು ರಚಿಸಲಾದ ವಿಶೇಷ ಸಮಿತಿಗೆ ಈ ಅನಿಸಿಕೆಯ ಪ್ರತಿಯನ್ನು ಕ್ಯಾಬಿನೆಟ್ ಸೆಕ್ರೆಟರಿಯೇಟ್ ವಿತರಿಸಿತು


ಸಿರಿಲ್ ರಾಡ್‌ಕ್ಲಿಫ್ ಗಡಿ ಆಯೋಗಗಳ ಅಧ್ಯಕ್ಷರಾಗಿದ್ದರು ಮತ್ತು ಇದು ಇತರ ನ್ಯಾಯಾಧೀಶರನ್ನು ಒಳಗೊಂಡಿತ್ತು ರಾಡ್‌ಕ್ಲಿಫ್ ತಾವು ನೀಡಿದ ತೀರ್ಪನ್ನು ಬೆಂಬಲಿಸಲು ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಟಿಪ್ಪಣಿಯಲ್ಲಿ ಸೂಚಿಸಲಾಗಿದೆ. "ಅವರು ತಮ್ಮ ನಿರ್ಧಾರಗಳನ್ನು ಆಧರಿಸಿದ ತತ್ವಗಳನ್ನು ಎಲ್ಲಿಯೂ ಹೊಂದಿಸಿಲ್ಲ. ಹಾಗಾಗಿ ಸರ್ ಸಿರಿಲ್ ರಾಡ್‌ಕ್ಲಿಫ್ ಅವರು ಮಾರ್ಗದರ್ಶನ ನೀಡಿದ ತತ್ವಗಳನ್ನು ಉಲ್ಲೇಖಿಸದೆ ಮಾಡಿದ ನಿರ್ಧಾರವನ್ನು ಶೂನ್ಯವೆಂದು ಪರಿಗಣಿಸಬಹುದು ಎಂದು ಟಿಪ್ಪಣಿ ಹೇಳುತ್ತದೆ.


ಇದನ್ನೂ ಓದಿ:  India@75: ಇವರೇ ನೋಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 7 ವಿದೇಶಿಯರು


ಜಂಟಿ ಟಿಪ್ಪಣಿಯು ಬಂಗಾಳ, ಚಿತ್ತಗಾಂಗ್ ಗುಡ್ಡಗಾಡು ಪ್ರದೇಶಗಳು, ಜಲ್ಪೈಗುರಿ, ಖುಲ್ನಾ, ಫರೀದ್‌ಪುರ ಮತ್ತು ಬಾರಿಸಾಲ್‌ನ ಪ್ರದೇಶ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ತೀರ್ಪಿನ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತದೆ. ಬಂಗಾಳದಲ್ಲಿ ತೀರ್ಪು ಅನ್ಯಾಯ ಮತ್ತು ಅನಿಯಂತ್ರಿತವಾಗಿದೆ ಮತ್ತು ಭವಿಷ್ಯದಲ್ಲಿ ಕಹಿ ಮತ್ತು ಕಲಹದ ಮೂಲವಾಗಿದೆ ಎಂದು ಇಬ್ಬರೂ ಮಂತ್ರಿಗಳು ತೀರ್ಮಾನಿಸಿರುವುದು ತಿಳಿದುಬಂದಿದೆ. ಇಬ್ಬರೂ ಮಂತ್ರಿಗಳು ತೀರ್ಪಿನ ವಿರುದ್ಧ ಪ್ರತಿಭಟನೆಯನ್ನು ಸಲ್ಲಿಸಿದ್ದು ಇದನ್ನು ಅಂತಿಮ ಹಾಗೂ ನಿರ್ಣಾಯಕವೆಂದು ಸ್ವೀಕರಿಸಲು ಸಾಧ್ಯವಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.

top videos


    ಪಾಕಿಸ್ತಾನದ ಆಡಳಿತವು ಈ ವಿಷಯವನ್ನು ಕೂಡಲೇ ಕೈಗೆತ್ತಿಕೊಳ್ಳಲು ಸೂಚಿಸುತ್ತೇವೆ ಹಾಗ ಸೌಹಾರ್ಯುತವಾದ ಇತ್ಯರ್ಥ ನಡೆಸಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸುವುದಾಗಿ ಮಂತ್ರಿಗಳು ತಿಳಿಸಿದ್ದಾರೆ. ಇಲ್ಲದಿದ್ದರೆ ಈ ತೀರ್ಪನ್ನು ಅಂತರ್ ಪ್ರಭುತ್ವ ವಿವಾದವೆಂದು ಪರಿಗಣಿಸುವ ಹಕ್ಕನ್ನು ಕಾಯ್ದಿರಿಸಿದ್ದು, ಇದನ್ನು UNO ಗೆ ಉಲ್ಲೇಖಿಸಿ, ಪಶ್ಚಿಮ ಬಂಗಾಳಕ್ಕೆ ಮೇಲೆ ವಿವರಿಸಿದ ಪ್ರದೇಶಗಳ ಸೇರ್ಪಡೆಗೆ ಕ್ಲೈಮ್ ಮಾಡುತ್ತೇವೆ ಎಂಬುದಾಗಿ ಟಿಪ್ಫಣಿಯಲ್ಲಿನ ಹೇಳಿಕೆಯು ಅಂತ್ಯಗೊಂಡಿದೆ.

    First published: