Explained: ಎಲಾನ್‌ ಮಸ್ಕ್ ಬಲೆಗೆ ಬಿದ್ದಿದ್ದು ಹೇಗೆ ಟ್ವಿಟರ್? ಹೇಗಿರಲಿದೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಭವಿಷ್ಯ?

ಟ್ವಿಟರ್ ಸೇಲ್ ಆಗಿದೆ, ಬರೋಬ್ಬರಿ 44 ಬಿಲಿಯನ್‌ ಅಮೆರಿಕ ಡಾಲರ್‌ (US Dollar) ಅಂದರೆ ಭಾರತೀಯ ರೂಪಾಯಿ (Indian Rupees) ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಹಾಗಿದ್ರೆ ಟ್ವಿಟರ್‌ ಮೇಲೆಕೆ ಬಿತ್ತು ಎಲಾನ್ ಮಸ್ಕ್ ಕಣ್ಣು? ಎಲಾನ್ ಮಸ್ಕ್ ಪ್ರವೇಶದಿಂದ ಟ್ವಿಟರ್ ಭವಿಷ್ಯ ಏನಾಗಲಿದೆ? ಈ ಬಗ್ಗೆ ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ…

ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್ (ಚಿತ್ರ ಕೃಪೆ: Internet)

ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್ (ಚಿತ್ರ ಕೃಪೆ: Internet)

  • Share this:
ಇಂದು ಜಗತ್ತಿನ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಅದಕ್ಕೆ ಕಾರಣ ಟ್ವಿಟರ್ (Twitter) ಮತ್ತು ಜಗತ್ತಿನ ಶ್ರೀಮಂತ ಉದ್ಯಮಿ (World’s Richest Industrialist) ಎಲಾನ್ ಮಸ್ಕ್ (Elon Musk). ಹೌದು, ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ (Microblogging platforms) ಟ್ವಿಟರ್ ಅನ್ನು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ್ದಾರೆ.  ಖ್ಯಾತ ಕಾರು ಕಂಪನಿ 'ಟೆಸ್ಲಾ'ದ (Tesla) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಹಾಗು ವಿನ್ಯಾಸಗಾರ ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯ ಶೇಕಡಾ 9.1ರಷ್ಟು ಶೇರು ಖರೀದಿಸಿದ್ದಾರೆ. ಇದರೊಂದಿಗೆ ಬರೋಬ್ಬರಿ 44 ಬಿಲಿಯನ್‌ ಅಮೆರಿಕ ಡಾಲರ್‌ (US Dollar) ಅಂದರೆ ಭಾರತೀಯ ರೂಪಾಯಿ (Indian Rupees) ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.  ಹಾಗಿದ್ರೆ ಟ್ವಿಟರ್‌ ಮೇಲೆಕೆ ಬಿತ್ತು ಎಲಾನ್ ಮಸ್ಕ್ ಕಣ್ಣು? ಎಲಾನ್ ಮಸ್ಕ್ ಪ್ರವೇಶದಿಂದ ಟ್ವಿಟರ್ ಭವಿಷ್ಯ ಏನಾಗಲಿದೆ? ಈ ಬಗ್ಗೆ ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ…

2006ರಲ್ಲಿ ಪ್ರಾರಂಭವಾದ ಟ್ವಿಟರ್

2006ರಲ್ಲಿ ಟ್ವಿಟರ್ ಎಂಬ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಆರಂಭವಾಯಿತು. ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ 2006 ರಲ್ಲಿ ಹೊಂದಿದ್ದ ಕಲ್ಪನೆಯಂತೆ ಟ್ವಿಟರ್ ಆರಂಭವಾಯಿತು. ಡಾರ್ಸೆ ಮೂಲತಃ ಟ್ವಿಟರ್ ಅನ್ನು ಎಸ್‌ಎಂಎಸ್ ಆಧಾರಿತ ಸಂವಹನ ವೇದಿಕೆಯಾಗಿ ಕಲ್ಪಿಸಿಕೊಂಡಿದ್ದರು. ಸ್ನೇಹಿತರ ಗುಂಪುಗಳು ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳ ಆಧಾರದ ಮೇಲೆ ಪರಸ್ಪರ ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ತಿಳಿಯುವ ಸಲುವಾಗಿ ಆರಂಭದಲ್ಲಿ ಬಳಕೆ ಮಾಡುವಂತಾಗಿತ್ತು.

‘twttr’ನಿಂದ ‘twitter’ ಆಗಿ ಬದಲಾವಣೆ

ಆದರೆ ಪಾಡ್‌ಕಾಸ್ಟಿಂಗ್ ಕಂಪನಿ Odeo ನಲ್ಲಿ ಮೊದಲು Dorsey ಈ ಎಸ್‌ಎಂಎಸ್‌ ಆಧಾರಿತ ವೇದಿಕೆಯನ್ನು Odeo ನ ಸಹ-ಸಂಸ್ಥಾಪಕ ಇವಾನ್ ವಿಲಿಯಮ್ಸ್ ಗೆ ಪ್ರಸ್ತಾಪ ಮಾಡಿದ್ದರು. ಇವಾನ್ ಹಾಗೂ ಸಹ-ಸಂಸ್ಥಾಪಕ ಬಿಜ್ ಸ್ಟೋನ್ ಇದನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡಿದರು. ಅದರ ಆರಂಭಿಕ ದಿನಗಳಲ್ಲಿ, ಟ್ವಿಟರ್ ಅನ್ನು twttr ಎಂದು ಉಲ್ಲೇಖಿಸಲಾಗಿದೆ. ಸಾಫ್ಟ್‌ವೇರ್ ಡೆವಲಪರ್ ನೋಹ್ ಗ್ಲಾಸ್ ಮೂಲ ಹೆಸರು twttr ಅನ್ನುTwitter ಆಗಿ ಬದಲಾವಣೆ ಮಾಡಿದರು.

ಸದ್ಯ 280 ಅಕ್ಷರಗಳ ಮಿತಿ

ಸದ್ಯ ಬಳಕೆದಾರರು 280 ಅಕ್ಷರಗಳ ಮಿತಿಯ ಸಂದೇಶಗಳನ್ನು ಕಳುಹಿಸಬಹುದ ಮತ್ತು ಓದಬಹುದ ಆನ್‍ಲೈನ್ ಸೇವೆ ಟ್ವಿಟರ್ ಆಗಿದೆ.. ನೋಂದಾಯಿಸದ ಬಳಕೆದಾರರು ಅವುಗಳನ್ನು ಕೇವಲ ಓದಬಹುದು. ಬಳಕೆದಾರರು ಜಾಲತಾಣ ಅಂತರಸಂಪರ್ಕ, ಅಥವಾ ಮೊಬೈಲ್ ಸಾಧನ ಅಪ್ಲಿಕೇಶನ್ ಮೂಲಕ ಟ್ವಿಟರ್ ಅನ್ನು ಸಂಪರ್ಕಿಸಬಹುದು. ಟ್ವಿಟರ್ ಇಂಕ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಮೂಲ ಹೊಂದಿದೆ ಮತ್ತು ನ್ಯೂಯಾರ್ಕ್ ಸಿಟಿ, ಬೋಸ್ಟನ್, ಸ್ಯಾನ್ ಆಂಟೋನಿಯೊ ಮತ್ತು ಡೆಟ್ರಾಯಿಟ್‍ನಲ್ಲಿ ಕಚೇರಿಗಳನ್ನು ಹೊಂದಿದೆ.

ಇದನ್ನೂ ಓದಿ: Twitter Sale: ಹಠ ಬಿಡದೇ ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್, 3.36 ಲಕ್ಷ ಕೋಟಿ ರೂಪಾಯಿಗೆ ಸೇಲ್!

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ಲಾಟ್‌ಫಾರ್ಮ್

ಟ್ವಿಟರ್ ಸೈಟ್ ಬಿಡುಗಡೆಯಾದ ನಂತರ ಸೇವೆ ವೇಗವಾಗಿ ಬೆಳೆದು 2012ರಲ್ಲಿ ದಿನಕ್ಕೆ 340 ಮಿಲಿಯನ್ ಟ್ವಿಟ್ಗಳು ಪೋಸ್ಟ್ ಆದವು. ಇದು 500 ದಶಲಕ್ಷ ನೊಂದಾಯಿತ ಬಳಕೆದಾರರನ್ನು ಹೊಂದಿದ್ದು, ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಟ್ವಿಟರ್ ಪ್ರತಿದಿನ 1.6 ಶತಕೋಟಿ ಶೋಧ ಪ್ರಶ್ನೆಗಳನ್ನು ನಿಭಾಯಿಸುತ್ತದೆ. ಈಗ ಇದು ಹತ್ತು ಅತ್ಯಂತ ಭೇಟಿಮಾಡಲಾದ ಜಾಲತಾಣಗಳಲ್ಲಿ ಒಂದಾಗಿದೆ, ಮತ್ತು "ಅಂತರ್ಜಾಲದ ಎಸ್ ಎಮ್ ಎಸ್" ಎಂದು ವಿವರಿಸಲಾಗಿದೆ.

ಯಾರು ಈ ಎಲಾನ್ ಮಸ್ಕ್‌?

ಎಲಾನ್ ಮಸ್ಕ್ ಪೂರ್ಣ ಹೆಸರು ಎಲಾನ್ ರೀವ್ ಮಸ್ಕ್ (Elon Reeve Musk) ಒಬ್ಬ ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ ಹಾಗು ಉದ್ದಿಮೆದಾರ. ಖಾಸಗಿ ಬಾಹ್ಯಾಕಾಶ ನೌಕೆ ಸ್ಪೇಕ್ ಎಕ್ಸ್‌ನ ಸಂಸ್ಥಾಪಕ, ಕಾರ್ಯ ನಿರ್ವಾಹಕ ಅಧ್ಯಕ್ಷ ಹಾಗು ಮುಖ್ಯ ವಿನ್ಯಾಸಗಾರ ಕೂಡ. ಖ್ಯಾತ ಕಾರು ಕಂಪನಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹೂಡಿಕೆದಾರ ಹಾಗು ವಿನ್ಯಾಸಗಾರ. ದಿ ಬೋರಿಂಗ್ ಕಂಪನಿ, ನ್ಯೂರೋಲಿಂಕ್, ಓಪನ್ ಎಐ ಮುಂತಾದ ಕಂಪನಿಗಳ ಪ್ರಮುಖ ಸ್ಥಾಪಕರಲ್ಲೊಬ್ಬರಾದ ಇವರು ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟ್ವಿಟರ್ ಮೇಲೆ ಎಲಾನ್‌ ಮಸ್ಕ್‌ಗೆ ಒಲವೇಕೆ?

ಎಲಾನ್ ಮಸ್ಕ್ ಓರ್ವ ಸಾಹಸಗಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. Twitter ಅನ್ನು ಖರೀದಿಸಲು ಮೊದಲ ಸಂಭವನೀಯ ಕಾರಣವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡಲು ವೇದಿಕೆಯ ಮೇಲೆ ಪ್ರಭಾವ ಬೀರುವುದು ಅವರ ಉದ್ದೇಶ.  ಟ್ವಿಟರ್‌ನ ಅಲ್ಗಾರಿದಮ್ ಓಪನ್ ಸೋರ್ಸ್ ಆಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ, ಅವರ ಅನುಯಾಯಿಗಳು ಮಂಡಳಿಯಲ್ಲಿರುವಂತೆ ತೋರುವ ಮತ್ತೊಂದು ಕಲ್ಪನೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಿಡಿತ ಹೊಂದಿದ್ದರೆ ಮುಂದೆ ತಮ್ಮ ವ್ಯವಹಾರಕ್ಕೆ ಸಹಾಯವಾಗಬಹುದು ಎನ್ನುವುದು ಅವರ ದೂರದೃಷ್ಟಿ.

ಅಪಾರ ಫಾಲೋವರ್ಸ್ ಹೊಂದಿರುವ ಮಸ್ಕ್

8.3 ಕೋಟಿಗೂ ಹೆಚ್ಚು ಟ್ವಿಟ್ಟರ್‌ ಅನುಯಾಯಿಗಳನ್ನು ಹೊಂದಿರುವ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಶೇ. 9ರಷ್ಟು ಷೇರನ್ನು ಖರೀದಿಸಿರುವುದಾಗಿ ಕೆಲ ದಿನಗಳ ಹಿಂದೆ ಘೋಷಿಸಿದ್ದರು. ನಂತರ ನಂತರ ಟ್ವಿಟ್ಟರ್‌ ಆಡಳಿತ ಮಂಡಳಿ ಸೇರುವ ಪ್ರಸ್ತಾಪ ತಿರಸ್ಕರಿಸಿದ್ದ ಅವರು, ನೇರವಾಗಿ ಖರೀದಿ ಪ್ರಸ್ತಾಪವನ್ನೇ ಮುಂದಿಟ್ಟಿದ್ದು, ಇದೀಗ ನುಡಿದಂತೆ ನಡೆದ್ದಾರೆ. ಕಂಪನಿಯ ಅಲ್ಗಾರಿದಮ್‌ಗಳು ಪಕ್ಷಪಾತದಿಂದ ಕೂಡಿದ್ದು, ಸ್ವಯಂಚಾಲಿತ ಜಂಕ್ ಪೋಸ್ಟ್‌ಗಳೊಂದಿಗೆ ಫೀಡ್‌ಗಳು ಅಸ್ತವ್ಯಸ್ತಗೊಂಡಿವೆ ಎಂದು ಆರೋಪಿಸಿದ್ದ ಮಸ್ಕ್‌, ಕಂಪನಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕಿದೆ ಎಂದು ಒತ್ತಿ ಹೇಳಿದ್ದರು.

ನಗದಿನ ಮೂಲಕವೇ ಖರೀದಿಸಿದ ಮಸ್ಕ್

ಟ್ವಿಟರ್ ಖರೀದಿಸಲು ಎಲಾನ್‌ ಮಸ್ಕ್ 25.5 ಬಿಲಿಯನ್ ಡಾಲರ್‌ ಸಂಪೂರ್ಣ ಬದ್ಧ ಸಾಲ ಮತ್ತು ಮಾರ್ಜಿನ್ ಲೋನ್ ಫೈನಾನ್ಸಿಂಗ್ ಅನ್ನು ಪಡೆದುಕೊಂಡಿದ್ದಾರೆ ಹಾಗೂ ಸರಿಸುಮಾರು 21 ಬಿಲಿಯನ್ ಅಮೆರಿಕ ಡಾಲರ್‌ ಈಕ್ವಿಟಿ ಬದ್ಧತೆಯನ್ನು ಒದಗಿಸುತ್ತಿದ್ದಾರೆ. ಈ ಮಧ್ಯೆ, ತನ್ನ ಮೊದಲ ತ್ರೈಮಾಸಿಕ ಆರ್ಥಿಕ ವರ್ಷ 2022 ಫಲಿತಾಂಶಗಳನ್ನು ಏಪ್ರಿಲ್ 28, 2022 ರಂದು ಮಾರುಕಟ್ಟೆ ತೆರೆಯುವ ಮೊದಲು ಬಿಡುಗಡೆ ಮಾಡಲು ಟ್ವಿಟ್ಟರ್‌ ಪ್ಲ್ಯಾನ್‌ ಮಾಡುತ್ತಿದೆ ಎಂದೂ ತಿಳಿದುಬಂದಿದೆ.

ಟ್ವಿಟರ್ ಶೇರು ಮೌಲ್ಯ ಏರಿಕೆ

ಈ ಖರೀದಿ ಹಿನ್ನೆಲೆಯಲ್ಲಿ ಹೂಡಿಕೆದಾರರು ತಾವು ಹೊಂದಿರುವ ಪ್ರತಿ ಟ್ವಿಟ್ಟರ್‌ ಷೇರಿಗೆ 54.2 ಡಾಲರ್‌ ಪಡೆಯಲಿದ್ದಾರೆ ಎಂದು ಕಂಪನಿಯು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಇದು ಏ. 1ರ ಷೇರು ಪೇಟೆ ಮುಕ್ತಾಯದ ವೇಳೆ ಟ್ಟಿಟ್ಟರ್‌ ಷೇರು ಹೊಂದಿದ್ದ ಬೆಲೆಗಿಂತ ಶೇ. 38ರಷ್ಟು ಹಚ್ಚಿನದಾಗಿದೆ. ಆದರೆ ಮಸ್ಕ್ ಟ್ವಿಟ್ಟರ್‌ನಲ್ಲಿ ದೊಡ್ಡ ಪಾಲು ಷೇರನ್ನು ಖರೀದಿಸಿರುವುದಾಗಿ ಕೆಲ ದಿನಗಳ ಹಿಂದೆ ಘೋಷಿಸಿದ ಬಳಿಕ ಷೇರುಗಳು ಭಾರೀ ಏರಿಕೆ ಕಂಡಿದ್ದವು.

ಮುಂದೆ ಟ್ವಿಟರ್‌ನಲ್ಲಿ ಆಗುತ್ತಾ ಬದಲಾವಣೆ?

ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ತಾನು ಇಷ್ಟಪಡದ ಹಾಗೂ ತಾನು ಬಯಸುವ ಬದಲಾವಣೆಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಈ ಬದಲಾವಣೆಗಳ ಬಗ್ಗೆ ಉಲ್ಲೇಖ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಇದಕ್ಕಾಗಿ ಪೋಲ್ ಮೂಲಕ ಜನರ ಅಭಿಪ್ರಾಯವನ್ನು ಕೂಡಾ ಪಡೆಯುತ್ತಿದ್ದಾರೆ. ವರ್ಷಗಳಲ್ಲಿ ಟ್ವೀಟ್‌ಗಳು ಮತ್ತು ಸಮೀಕ್ಷೆಗಳ ಸರಣಿಯಲ್ಲಿ ಎಲಾನ್ ಮಸ್ಕ್ ತಮ್ಮ 83 ಮಿಲಿಯನ್ ಫಾಲೋವರ್ಸ್ ಬಳಿ ಟ್ವಿಟರ್ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಎಡಿಟ್ ಅವಕಾಶ ನೀಡುವ ಸಾಧ್ಯತೆ

ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಎಪ್ರಿಲ್ 4 ರಂದು ನಡೆಸಿದ ಟ್ವಿಟರ್ ಸಮೀಕ್ಷೆಯಲ್ಲಿ ಎಡಿಟ್ ಬಟನ್‌ನ ಕಲ್ಪನೆಯನ್ನು ಒತ್ತಿ ಹೇಳಿದ್ದಾರೆ. "ಟ್ವಿಟ್ಟರ್‌ನಲ್ಲಿ ನಿಮಗೆ ಎಡಿಟ್ ಬಟನ್ ಬೇಕೇ?," ಎಂದು ಎಲಾನ್ ಮಸ್ಕ್ ತನ್ನ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಇದಕ್ಕಾಗಿ ಹೌದು ಹಾಗೂ ಇಲ್ಲ ಎಂಬ ಎರಡು ಆಯ್ಕೆಗಳನ್ನು ನೀಡಿದ್ದಾರೆ. ಆದರೆ ಅದನ್ನು ತಪ್ಪಾಗಿ ಬರೆಯಲಾಗಿದೆ. yes ಬದಲಿಗೆ yse ಹಾಗೂ no ಬದಲಿಗೆ on ಎಂದು ಬರೆಯಲಾಗಿದೆ. ತಪ್ಪಾಗಿ ಬರೆಯುವ ಮೂಲಕವೇ ತಪ್ಪಾಗಿ ಟ್ವೀಟ್ ಮಾಡಿದರೆ ಎಡಿಟ್ ಆಯ್ಕೆ ಬೇಕೇ ಎಂಬ ಪ್ರಶ್ನೆ ಕೇಳಿದ್ದಾರೆ. ಹೆಚ್ಚಿನ ಬಳಕೆದಾರರು ಇದಕ್ಕೆ yes ಎಂಬ ಆಯ್ಕೆಯನ್ನು ಒತ್ತಿದ್ದಾರೆ. ಸುಮಾರು 82.7 ಜನರು ಎಡಿಟ್ ಬಟನ್ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಪ್ಯಾಮ್‌ ಟ್ವೀಟ್ ಡಿಲೀಟ್ ಆಗುತ್ತಾ?

ಇನ್ನು ಮಸ್ಕ್‌ ಟ್ವೀಟರ್‌ ನಲ್ಲಿರುವ ಸ್ಪಾಮ್‌ ಅಕೌಂಟ್‌ ಅಥವಾ ಸ್ಪಾಮ್‌ ಬೋಟ್‌ (ವಂಚಕರ ಖಾತೆ) ಗಳ ನ್ನುತಗೆದು ಹಾಕುವ ನಿರೀಕ್ಷೆಯಿದೆ. ಏಕೆಂದರೆ ಮಸ್ಕ್‌ ಇದನ್ನು “ಅತ್ಯಂತ ಕಿರಿಕಿರಿ ವಿಷಯ” ಎಂದು ದೂರಿದ್ದರು. 2020 ರಲ್ಲಿ, ಬಿಟ್‌ಕಾಯಿನ್ ಹಗರಣದಲ್ಲಿ ಹ್ಯಾಕ್ ಮಾಡಲಾದ ಹೈ-ಪ್ರೊಫೈಲ್ ಟ್ವಿಟರ್ ಖಾತೆಗಳಲ್ಲಿ ಮಸ್ಕ್ ಅವರ ಖಾತೆಯೂ ಸೇರಿತ್ತು. ಕೊನೆಯದಾಗಿ, ಮಸ್ಕ್ ಈಗ ಮಾಲೀಕರಾಗಿರುವುದರಿಂದ ಟ್ವೀಟರ್ ಹೆಚ್ಚು ತೆರೆದ ಮೂಲದ (ಓಪನ್‌ ಸೊರ್ಸ್‌) ವೇದಿಕೆಯಾಗಿ ಮಾರ್ಪಾಡಾಗಬಹುದು.

ಇದನ್ನೂ ಓದಿ: Explained: ಬಜ್ಜಿ, ಬೋಂಡಾ ಇನ್ನು ನೆನಪು ಮಾತ್ರ! ಏ.28ರಿಂದಲೇ ಮತ್ತಷ್ಟು 'ಬಿಸಿ'ಯಾಗಲಿದೆ ಅಡುಗೆ ಎಣ್ಣೆ! ಇದಕ್ಕೆ ಕಾರಣವೇನು?

ಹೊರ ಹೋಗುತ್ತಾರಾ ಪರಾಗ್ ಅಗ್ರವಾಲ್?

ಹೀಗೊಂದು ಅನುಮಾನ ಈಗ ಕಾಡುತ್ತಿದೆ. ಆದರೆ ಟ್ವಿಟರ್‌ ಮಾಲಿಕತ್ವ ನಿಯಂತ್ರಣ ಬದಲಾವಣೆಗೊಂಡ 12 ತಿಂಗಳೊಳಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್‌ ಅಗರವಾಲ್‌ ಅವರನ್ನೇನಾದರೂ ಅವರ ಸ್ಥಾನದಿಂದ ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು $42 ದಶಲಕ್ಷ, ಅಂದರೆ, 321 ಕೋಟಿಗಳನ್ನು ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ‘ಈಕ್ವಿಲರ್’ ತಿಳಿಸಿದೆ.
Published by:Annappa Achari
First published: