• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಕೋವಿಡ್​ ಲಸಿಕೆ ಬಗ್ಗೆ ಇನ್ನೂ ಗೊಂದಲವೇ; ಇಲ್ಲಿದೆ ನಿಮ್ಮೆಲ್ಲ ಪ್ರಶ್ನೆಗೆ ವೈದ್ಯರಿಂದ ಉತ್ತರ!

Explained: ಕೋವಿಡ್​ ಲಸಿಕೆ ಬಗ್ಗೆ ಇನ್ನೂ ಗೊಂದಲವೇ; ಇಲ್ಲಿದೆ ನಿಮ್ಮೆಲ್ಲ ಪ್ರಶ್ನೆಗೆ ವೈದ್ಯರಿಂದ ಉತ್ತರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈರಸ್​ ಅನ್ನು ಕೊಲ್ಲಲು ಇರುವ ಆಯ್ಕೆ ಲಸಿಕೆಯಾಗಿದೆ. ಲಸಿಕೆಯಲ್ಲಿನ ರಾಸಾಯನಿಕ ಗುಣ ಈ ಕೋಶವನ್ನು ಕೊಲ್ಲುತ್ತದೆ

  • Share this:

ಕೊರೋನಾ ವೈರಸ್​ ಕಳೆದೊಂದು ವರ್ಷದಿಂದ ಜಗತ್ತನ್ನು ಮಾರಕವಾಗಿ ಕಾಡುತ್ತಿರುವ ಸೋಂಕಾಗಿದೆ. ಈ ಸೋಂಕಿನಿಂದಾಗಿ ಜನರು ಈಗಾಗಲೇ ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ಕೂಡ ಬಳಲಿದ್ದಾರೆ. ಈ ಸೋಂಕಿಗೆ ನಿಖರವಾದ ಔಷಧಿ ಇಲ್ಲದಿರುವುದರಿಂದ ಲಭ್ಯವಿರುವ ಔಷಧಗಳನ್ನು ಬಳಸಿ ವೈದ್ಯರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಮುದಾಯಕ್ಕೆ ಹಬ್ಬಿರುವ ಈ ವೈರಸ್​ ತನ್ನದೇ ಕೋಶ ಒಂದಿಲ್ಲ. ಅಂದರೆ, ಸೋಂಕು ದೇಹದ ಒಳಗೆ ಹೊಕ್ಕ ಮೇಲೆ ಮತ್ತಷ್ಟು ಜೀವ ಕೋಶ ಉತ್ಪಾದಿಸುವ ಸಾಮರ್ಥ್ಯ ಈ ವೈರಸ್​ಗೆ ಇಲ್ಲ. ಈ ಹಿನ್ನಲೆ ಈ ವೈರಸ್​ ಅನ್ನು ಕೊಲ್ಲಲು ಇರುವ ಆಯ್ಕೆ ಲಸಿಕೆಯಾಗಿದೆ. ಲಸಿಕೆಯಲ್ಲಿನ ರಾಸಾಯನಿಕ ಗುಣ ಈ ಕೋಶವನ್ನು ಕೊಲ್ಲುತ್ತದೆ. ಜೊತೆಗೆ ಅದು ಹರಡುವುದನ್ನು ಕೂಡ ತಡೆಗಟ್ಟುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ ಲಭ್ಯವಿದ್ದು, ಸೋಂಕಿನಿಂದ ಪಾರಾಗಲು ಈ ಲಸಿಕೆ ಅನಿವಾರ್ಯವಾಗಿದೆ. ಆದರೆ, ಈ ಲಸಿಕೆ ಬಗ್ಗೆ ಜನರಲ್ಲಿ ಗೊಂದಲವಿದ್ದು, ಅದರ ಕುರಿತ ವಿವರವನ್ನು ವೈದ್ಯರೇ ವಿವರಿಸಿದ್ದಾರೆ.


1. ಲಸಿಕೆ ಪಡೆಯುವುದು ಕಡ್ಡಾಯವೇ?
ಲಸಿಕೆ ಪಡೆಯುವು ಕಡ್ಡಾಯವಲ್ಲ . ಇದು ವ್ಯಕ್ತಿಯ ನಿರ್ಧಾರಕ್ಕೆ ಸಂಬಧಿಸಿದ್ದು, ವೈರಸ್​ ವಿರುದ್ಧ ಹೋರಾಡಲು ಬೇಕಾದ ಶಕ್ತಿಯನ್ನು ಲಸಿಕೆ ನೀಡುತ್ತದೆ. ಅಲ್ಲದೇ ಇದರಿಂದ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇದೆ.


2. ಯಾರು ಲಸಿಕೆ ಪಡೆಯಬಹುದು?
18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು. ಶೀಘ್ರದಲ್ಲಿಯೇ 2 ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ಲಭ್ಯವಾಗಲಿದೆ.
ಹಾಲುಣಿಸುವ ಮತ್ತು ಗರ್ಭಿಣಿ ಮಹಿಳೆಯರು ಕೂಡ ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ.
ಮಧುಮೇಹ, ಬಿಪಿ, ಕ್ಯಾನ್ಸರ್​, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ , ಪಿತ್ತ ಜನಾಕಾಂಗ, ಥೈರಾಯ್ಡ್​ ನಂತಹ ರೋಗದಿಂದ ಬಳಲುತ್ತಿರುವವರು ಲಸಿಕೆ ಪಡೆಯುವುದು ಅವಶ್ಯ. ಲಸಿಕೆ ಪಡೆಯುವ ಸಂದರ್ಭದಲ್ಲಿ ಅವರು ತಮ್ಮ ರೋಗದ ಬಗ್ಗೆ ವಿವರಣೆ ನೀಡುವುದು ಸೂಕ್ತ.


3. ಯಾರು ಲಸಿಕೆ ಪಡೆಯಬಾರದು?
ಮೆಡಿಸಿನ್​ ಆಲರ್ಜಿಇರುವಂತಹವರು ಲಸಿಕೆ ಪಡೆಯಬಾರದು. ಮೊದಲ ಡೋಸ್​ನಲ್ಲಿ ಆಲರ್ಜಿಯಾದವರು ಎರಡನೇ ಡೋಸ್​ ಪಡೆಯದಿರುವುದು ಒಳಿತು.
ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಕೂಡ ಲಸಿಕೆ ಪಡೆಯದಿರುವುದು ಇತ್ತ. ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವವರು ಕೂಡ ಪಡೆಯದಿರುವುದು ಒಳಿತು.


4. ಯಾವ ಲಸಿಕೆ ಸೂಕ್ತ?
ಎರಡೂ ಉತ್ತಮ ಲಸಿಕೆಯಾಗಿದ್ದು, ಅದಕ್ಕಿಂತ ಇದು ಹೆಚ್ಚು ಎನ್ನುವಂತಿಲ್ಲ ಎರಡು ಲಸಿಕೆಗಳು ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿದೆ.


5. ಮೊದಲ ಡೋಸ್​ಗೆ ಒಂದು ಲಸಿಕೆ ಎರಡನೇ ಡೋಸ್​ಗೆ ಮತ್ತೊಂದು ಲಸಿಕೆ ಪಡೆಯಬಹುದಾ?


ಇಲ್ಲ. ಈ ರೀತಿ ಮಾಡುವುದು ತಪ್ಪು ಕ್ರಮ. ಎರಡು ವಿಭಿನ್ನ ಲಸಿಕೆ ಪಡೆಯಬಾರದು


6. ಲಸಿಕೆ ಪಡೆದ ಬಳಿಕ ಕಾರ್ಯ ನಿರ್ವಹಿಸಬಹುದೇ?
ಅವಶ್ಯವಾಗಿ. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗಬಹುದು


7. ಎರಡು ಡೋಸ್​ ಲಸಿಕೆ ಪಡೆಯವುದು ಅವಶ್ಯವೇ?
ಹೌದು. ಎರಡು ಡೋಸ್​ ಲಸಿಕೆ ಪಡೆದರೇ ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರಿಂದ ಸೋಂಕು ತಗಲುವ ಸಾಧ್ಯತೆ ಬಹಳ ಕಡಿಮೆ ಇದೆ.


8. ಎರಡು ಡೋಸ್​ ಲಸಿಕೆ ಮಧ್ಯೆ ಅಂತರ ಎಷ್ಟಿರಬೇಕು
ಕೋವಿಶೀಲ್ಡ್​- 12 ವಾರದಿಂದ -16 ವಾರ
ಕೋವಾಕ್ಸಿನ್​-28ದಿನ


9 . ಮೊದಲ ಮತ್ತು ಎರಡನೇ ಡೋಸ್​ ಲಸಿಕೆ ಪಡೆದ ಬಳಿಕ ದೇಹದಲ್ಲಿ ಆಗುವ ಬದಲಾವಣೆ ಏನು?
ಲಸಿಕೆ ತಮ್ಮ ದೇಹದಲ್ಲಿ ಆಂಟಿಬೋಡಿಸ್ (ಪ್ರತಿಕಾಯ)​ ಉತ್ಪಾದನೆ ಮಾಡುತ್ತದೆ. ಈ ಪ್ರತಿಕಾಯಗಳು ಎರಡನೇ ಡೋಸ್​ ನಂತರ ಹೆಚ್ಚಿರುತ್ತದೆ. ಇದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಇದೆ, ಎರಡು ಡೋಸ್​ ಬಳಿಕವೂ ಸೋಂಕು ಕಂಡು ಬಂದರೇ ಅದು ಅಷ್ಟು ಸಾಮಾನ್ಯ ಸ್ವರೂಪದ್ದಾಗಿರುತ್ತದೆ.
ಲಸಿಕೆ ಪಡೆದ ಬಳಿಕ ಕೆಲವರಿಗೆ ತಲೆ ಸುತ್ತು, ವಾಕರಿಕೆ, ವಾಂತಿ, ತುರಿಕೆ, ದದ್ದು, ಆಯಾಸ, ಜ್ವರ ಹಾಗೂ ನೋವು ಕಂಡು ಬತುತ್ತದೆ, ಈ ಅಡ್ಡ ಪರಿಣಾಮಗಳಿಗೆ ಪ್ಯಾರಸಿಟಮಾಲ್​ ನಂತಹ ಔಷಧ ಪಡೆಬಹುದು. ಇದರಿಂದ ಯಾವುದೇ ತೊಂದರೆಯಿಲ್ಲ


10. ಲಸಿಕೆ ಪಡೆದ ಬಳಿಕವೂ ಮಾಸ್ಕ್​ ಧರಿಸಬೇಕಾ?
ಹೌದು. ಲಸಿಕೆ ವೈರಸ್​ನಿಂದ ಶೇ 100ರಷ್ಟು ಸುರಕ್ಷತೆಯನ್ನು ನೀಡಿದರು ನಾವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈ ಸ್ವಚ್ಛತೆ ಕಾಪಾಡುವುದು ಅಗತ್ಯ. ಲಸಿಕೆ ಪಡೆದ ಬಳಿಕವೂ ಕೈ ಕುಲುಕುವುದು, ತಬ್ಬಿಕೊಳ್ಳುವುದಹ ಪ್ರಕ್ರಿಯೆ ನಡೆಸದಿರುವುದು ಸೂಕ್ತ.


11. ಸೋಂಕಿನ ನಂತರವೂ ಲಸಿಕೆ ಪಡೆಯಬಹುದೇ?
ಹೌದು. ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಬಳಿಕವೂ ಲಸಿಕೆ ಪಡೆಯಬಹುದು. ಮೊದಲ ಡೋಸ್​ ಪಡೆದ ಬಳಿಕ ಸೋಂಕು ಕಂಡು ಬಂದರೆ ಸಂಪೂರ್ಣ ಗುಣಮುಖರಾದ ಬಳಿಕ ಎರಡನೇ ಡೋಸ್​ ಪಡೆಯಬೇಕು. ಯಾವುದೇ ಲಸಿಕೆ ಪಡೆದಿಲ್ಲ ಎಂದರೇ ಸೋಂಕಿನಿಂದ ಗುಣಮುಖರಾದ 90 ದಿನದ ಬಳಿಕ ಮೊದಲ ಡೋಸ್​ ಮತ್ತು ಎರಡನೇ ಡೋಸ್​ ಪಡೆಯಬೇಕು.


12. ಆಲ್ಕೋಹಾಲ್​ ಮತ್ತು ಸಿಗರೇಟ್​ ಸೇವನೆದಾರರಿಗೆ ಲಸಿಕೆಯಿಂದ ಸಮಸ್ಯೆಯೇ?
ಇಲ್ಲ. ಆಲ್ಕೋಹಾಲ್​ ಮತ್ತು ಸಿಗರೇಟ್​ ಸೇವನೆದಾರರು ಲಸಿಕೆ ಪಡೆಯಬಹುದು. ಅವರಿಗೆ ಲಸಿಕೆಯಿಂದ ಸಮಸ್ಯೆ ಎಂಬ ಬಗ್ಗೆ ಯಾವುದೇ ದತ್ತಾಂಶ ತಿಳಿಸಿಲ್ಲ. ಆದರೆ, ಧೂಮಪಾನಿಗಳು ಆಲ್ಕೋಹಾಲ್​ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಅದನ್ನು ನಿಲ್ಲಿಸಬೇಕು. ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಿನ್ನಲೆ ಅದನ್ನು ನಿಲ್ಲಿಸುವುದು ಉತ್ತಮ


ಡಾ| ನಿಕೇತ್​ ರೈ
ಅಸೋಸಿಯೇಟ್​ ಪ್ರೊಫೆಸರ್​
ಔಷಧಶಾಸ್ತ್ರ ವಿಭಾಗ

First published: