Why China Backs Taliban| ಚೀನಾ ಏಕೆ ತಾಲಿಬಾನ್ ಬೆನ್ನಿಗೆ ನಿಂತಿದೆ; ಇದು ಭಾರತಕ್ಕೆ ಹೇಗೆ ಅಪಾಯಕಾರಿ?

ಮೂಲಭೂತವಾದಿ ಉಗ್ರಗಾಮಿಗಳ ತವರಾದ ಅಫ್ಘಾನಿಸ್ತಾನವನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಪರೋಕ್ಷ ಯುದ್ಧ ಮಾಡುವ, ಭಾರತ ವಿರೋಧಿ ಉಗ್ರಗಾಮಿಗಳಿಗೆ ಸಹಕರಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ತಾಲಿಬಾನ್.

ತಾಲಿಬಾನ್.

 • Share this:
  ತಾಲಿಬಾನ್ ಸತತ 20 ವರ್ಷಗಳ ಹೋರಾಟದ ನಂತರ ಮತ್ತೆ ಅಫ್ಘಾನಿಸ್ತಾನದಲ್ಲಿ (Afghanistan) ಅಧಿಕಾರವನ್ನು ಹಿಡಿದಿದೆ. ಆದರೆ, ತಾಲಿಬಾನ್​ನ (Taliban) ಈ ಗೆಲುವಿನಲ್ಲಿ ಪಾಕಿಸ್ತಾನ (Pakistan) ಮತ್ತು ಚೀನಾ (China) ಸಮಾನ ಪಾಲು ಹೊಂದಿದೆ. ಈ ಎರಡೂ ದೇಶಗಳ ಸಹಾಯಹಸ್ತ ಇಲ್ಲದೆ ತಾಲಿಬಾನ್ ಗೆಲುವು ಸಾಧಿಸುವುದು ಸಾಧ್ಯವೇ ಇರಲಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆಲುವು ಎಂಬುದು ಪಾಕಿಸ್ತಾನ ಮಾತ್ರವಲ್ಲದೇ ಚೀನಾದ ಗೆಲುವೂ ಹೌದು. 2019 ರಲ್ಲೇ ತಾಲಿಬಾನ್ ಪಾಲಿಗೆ ಚೀನಾ ಸ್ನೇಹಪರ 'ಬಿಗ್ ಬ್ರದರ್' ಆಗಿ ಹೊರಹೊಮ್ಮಿತು. ಏಕೆಂದರೆ 2019 ರಲ್ಲಿ ತಾಲಿಬಾನ್ ನಿಯೋಗವು ಬೀಜಿಂಗ್‌ಗೆ ಭೇಟಿ ನೀಡಿ ಅಫ್ಘಾನಿಸ್ತಾನದ ಚೀನಾದ ವಿಶೇಷ ಪ್ರತಿನಿಧಿ ಡೆಂಗ್ ಕ್ಸಿಜುನ್ ಅವರನ್ನು ಭೇಟಿ ಮಾಡಿತ್ತು. ಆಗಲೇ ಇಡೀ ಜಗತ್ತು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿತ್ತು. ಆದರೆ, ಈ ಎಲ್ಲಾ ಪ್ರಸಂಗಗಳೂ ತಾಲಿಬಾನ್​ಗೆ ಈಗ ಫಲ ನೀಡಿದೆ. ಆದರೆ, ಚೀನಾ ಏಕೆ ತಾಲಿಬಾನ್ ಬೆನ್ನಿಗೆ ನಿಂತಿದೆ ಎಂಬುದು ಪ್ರಶ್ನೆ?

  ತಾಲಿಬಾನ್ ಮುನ್ನೆಲೆಗೆ ಬರಲು ಚೀನಾ ಸಹಕಾರ:

  ಕಳೆದ 20 ವರ್ಷಗಳಿಂದ ನಾಗರೀಕ ಸಮಾಜದಿಂದ ಉಗ್ರಗಾಮಿ ಪಟ್ಟ ಹೊತ್ತು ತಲೆಮರೆಸಿಕೊಂಡು ಯುದ್ಧ ಹೂಡಿದ್ದ ತಾಲಿಬಾನ್​ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ಬರಲು ಸಹಕರಿಸಿದ್ದೇ ಚೀನಾ ಎಂಬುದು ಈಗ ಗುಟ್ಟಾಗೇನು ಉಳಿದಿಲ್ಲ. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಅವರೇ ಇತ್ತೀಚೆಗೆ ಟ್ವೀಟ್ ಮಾಡಿದ್ದು, "ಅಫಘಾನ್ ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ ಚೀನಾ ಉತ್ತಮ ಚೌಕಟ್ಟನ್ನು ನಿರ್ಮಿಸಿಕೊಟ್ಟಿದೆ" ಎಂಬ ಹೇಳಿಕೆ ಇದಕ್ಕೆ ಪುರಾವೆ ನೀಡುತ್ತದೆ.

  ಕತಾರ್‌ನ ದೋಹಾದಲ್ಲಿ ಅಮೆರಿಕದೊಂದಿಗೆ ತಾಲಿಬಾನ್ ಪರವಾಗಿ ಮಾತುಕತೆ ನಡೆಸಿದ್ದ ಮುಲ್ಲಾ ಬರದಾರ್, ಚೀನಾಕ್ಕೆ ಭೇಟಿ ನೀಡಿದ ತಾಲಿಬಾನ್ ನಿಯೋಗದ ಭಾಗವಾಗಿಯೂ ಇದ್ದರು ಎಂದು ಸ್ವತಃ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಖಚಿತಪಡಿಸಿದ್ದಾರೆ.

  ಈಗ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ಕೈಜೋಡಿಸಲು ಮತ್ತು ತಾಲಿಬಾನ್ ಮುಖ್ಯವಾಹಿನಿಗೆ ಇಡೀ ಜಗತ್ತು ಮನ್ನಣೆ ನೀಡಬೇಕು ಎಂದು ತಾಕೀತು ಮಾಡಲು ತಾಲಿಬಾನ್ ಚೀನಾದ ಸಹಕಾರವನ್ನೇ ಕೋರಿದೆ. ಅಲ್ಲದೆ, ತಾಲಿಬಾನ್ ತಮ್ಮ ಸರ್ಕಾರದ ಉದ್ಘಾಟನೆಗೆ ಚೀನಾಕ್ಕೆ ಆಹ್ವಾನ ನೀಡಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

  ಆದರೆ ಚೀನಾ ಏಕೆ ತಾಲಿಬಾನ್ ಅನ್ನು ಬೆಂಬಲಿಸಬೇಕು?

  ರಾಜಕೀಯ ಲಾಭದ ಕಾರಣಕ್ಕೆ ಅನಿವಾರ್ಯವಾಗಿ ಚೀನಾ ಮತ್ತು ತಾಲಿಬಾನ್ ಪರಸ್ಪರ ಸಹಕರಿಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವಾರು ವಿಶ್ಲೇಷಕರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.

  ಉಯ್ಘರ್ ಪ್ರಾಬಲ್ಯವಿರುವ ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಉದ್ಭವವಾಗಿರುವ ಬಂಡಾಯದ ಬಗ್ಗೆ ಚೀನಾ ಚಿಂತಿತವಾಗಿದೆ. ಪೂರ್ವ ತುರ್ಕಮೆನಿಸ್ತಾನ್ ಇಸ್ಲಾಮಿಕ್ ಚಳುವಳಿಯು (ETIM) ಉಯಿಘರ್ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾಗಿದ್ದು ಅದು ಚೀನಾ-ಅಫ್ಘಾನಿಸ್ತಾನ ಗಡಿ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತದೆ.

  ಚೀನಾದ ಪಡೆಗಳಿಂದ ಸಿಕ್ಕಿಬೀಳುವುದನ್ನು ತಪ್ಪಿಸಲು, ಇಟಿಐಎಂ ದಂಗೆಕೋರರು ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡುತ್ತಾರೆ. ಅವರ ಬದಾಕ್ಷನ್ ಪ್ರಾಂತ್ಯವು ಇನ್ನೂ 400-700 ಹೋರಾಟಗಾರರನ್ನು ಹೊಂದಿದೆ ಎಂದು ಹೇಳಲಾಗಿದೆ. ಹೀಗಾಗಿ ಚೀನಾ ದೇಶವು ತಾಲಿಬಾನ್‌ಗೆ ತಾನು ನೀಡುತ್ತಿರುವ ಬೆಂಬಲಕ್ಕೆ ಬದಲಾಗಿ, ಅಫ್ಘಾನಿಸ್ತಾನದಿಂದ ETIM ಕಾರ್ಯನಿರ್ವಹಿಸಂದೆ ತಡೆಯಲು ತಾಲಿಬಾನ್ ಚೀನಾಕ್ಕೆ ಸಹಕರಿಸಲಿದೆ ಎನ್ನಲಾಗಿದೆ.

  ಅಫ್ಘನ್ ಸಂಪತ್ತಿನ ಮೇಲೆ ಚೀನಾ ಕಣ್ಣು;

  ಅಫ್ಘನ್ ಅಪಾರ ಖನಿಜ ಸಂಪತ್ತು ಹೊಂದಿರುವ ದೇಶ. ಇಲ್ಲಿ ಅಪರೂಪದ ಭೂಮಿಯ ಲೋಹಗಳು ಮತ್ತು ಇತರ ಖನಿಜ ಸಂಪನ್ಮೂಲಗಳ ದೊಡ್ಡ ಗಣಿಗಳೇ ಇವೆ. ಇವುಗಳನ್ನು ವಶಪಡಿಸಿಕೊಂಡು ತಮ್ಮ ಆರ್ಥಿಕತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಚೀನಾ ತಾಲಿಬಾನ್ ಬೆಂಬಲಕ್ಕೆ ನಿಂತಿದೆ ಎನ್ನಲಾಗುತ್ತಿದೆ.

  ಅಫ್ಘಾನಿಸ್ತಾನವು $ 1 ಟ್ರಿಲಿಯನ್ ಮೌಲ್ಯದ ಖನಿಜ ನಿಕ್ಷೇಪಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಎತ್ತರದ ಒರಟಾದ ಪರ್ವತಗಳಿಂದ ಖನಿಜಗಳನ್ನು ಗಣಿಗಾರಿಕೆ ಮಾಡುವ ತಂತ್ರಜ್ಞಾನವನ್ನು ಚೀನಾ ಹೊಂದಿದೆ. ಹೀಗಾಗಿ ತಾಲಿಬಾನ್ ಸಹ ಚೀನಾದ ಪೋಷಣೆಯಿಂದ ಉತ್ತಮ ಆದಾಯ ಗಳಿಸುವ ಗುರಿಯನ್ನು ಹೊಂದಿದೆ. ಏಕೆಂದರೆ ತಮ್ಮ ಸರ್ಕಾವನ್ನು ನಡೆಸಲು ತಾಲಿಬಾನ್‌ಗಳಿಗೆ ಅಪಾರ ಪ್ರಮಾಣದ ಆದಾಯದ ಅಗತ್ಯವಿದೆ.

  ಚೀನಾ ಮಾತ್ರ ಏಕೆ?;

  ಚೀನಾ ಬಹುಶಃ ವಿಶ್ವದ ಪ್ರಮುಖ ಶಕ್ತಿಯಾಗಿದ್ದು, ಇದು ತತ್ವಗಳನ್ನು ಸಮರ್ಥವಾಗಿ ಹಿಂಬಾಲಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ನಿರ್ಬಂಧಗಳನ್ನು ನಿರ್ಬಂಧಿಸಿದ ದಾಖಲೆಯನ್ನು ಚೀನಾ ಹೊಂದಿದೆ.

  ತಾಲಿಬಾನ್ ಅನ್ನು ಉತ್ತಮ ನಂಬಿಕೆಯಿಂದ ಇಟ್ಟುಕೊಂಡು, ಚೀನಾ ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅನ್ನು ವಿಸ್ತರಿಸಬಹುದು. ಇದು ಅಫ್ಘಾನಿಸ್ತಾನದ ಮೂಲಕ ಮಧ್ಯ ಮತ್ತು ಪಶ್ಚಿಮ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುತ್ತದೆ.

  ಭಾರತಕ್ಕೆ ಆಪತ್ತು?

  ಮೂಲಭೂತವಾದಿ ಉಗ್ರಗಾಮಿಗಳ ತವರಾದ ಅಫ್ಘಾನಿಸ್ತಾನವನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ಪರೋಕ್ಷ ಯುದ್ಧ ಮಾಡುವ, ಭಾರತ ವಿರೋಧಿ ಉಗ್ರಗಾಮಿಗಳಿಗೆ ಸಹಕರಿಸುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಉಪಸ್ಥಿತಿಯಲ್ಲಿ ಇಂತಹ ಕೆಲಸಗಳಿಗೆ ಕಡಿವಾಣ ಬೀಳುತ್ತದೆ ಎಂಬುದು  ಭಾರತದ ಪಾಲಿಗೆ ಒಂದು ಮಹತ್ವದ ಅಂಶವಾಗಿತ್ತು. ಇದಕ್ಕಾಗಿಯೇ ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹಣ ಹೂಡಿಕೆ ಮಾಡುವ ಮೂಲಕ ಅಫ್ಘನ್ನರ ವಿಶ್ವಾಸವನ್ನೂ ಗಳಿಸಲು ಮುಂದಾಗಿತ್ತು.

  ಅಫ್ಘಾನಿಸ್ತಾನದಲ್ಲಿ ಅಮೆರಿಕದ ಉಪಸ್ಥಿತಿಯು ಚೀನಾದ ಆಕ್ರಮಣಕಾರಿ ವಿನ್ಯಾಸಕ್ಕೆ ತನ್ನದೇ ಆದ ಅಥವಾ ಪಾಕಿಸ್ತಾನದ ಬೆಂಬಲಕ್ಕೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆ (LAC) ಮತ್ತು ಭಾರತದ ಗಡಿಗಳಲ್ಲಿ ದೊಡ್ಡ ತಡೆಯಾಗಿತ್ತು. ಆದರೆ, ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದ ತಕ್ಷಣ, ಚೀನಾವು ಗಡಿಗಳ ಉಸ್ತುವಾರಿ ಮತ್ತು ಎಲ್‌ಎಸಿ ಸೇರಿದಂತೆ ಹಲವಾರು ಮಿಲಿಟರಿ ಕಮಾಂಡರ್‌ಗಳನ್ನು ಭಾರತ ಗಡಿಯಲ್ಲಿ ಬದಲಿಸಿರುವುದು ಕಂಡು ಬಂದಿದೆ.

  ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳಿಂದ ಪಾಕಿಸ್ತಾನ ಕೂಡ ಲಾಭ ಗಳಿಸಿದೆ. ಇದು ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭಾರತದ ಹೂಡಿಕೆಯನ್ನು ಅಪಹಾಸ್ಯ ಮಾಡಿದಂತಾಗಿರುವುದು ಸುಳ್ಳಲ್ಲ. ಇದಲ್ಲದೆ, ಪಾಕಿಸ್ತಾನವು ಭಾರತದ ವಿರುದ್ಧ ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಜಿಹಾದಿ ಸಂಘಟನೆಗಳ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಅಫ್ಘಾನಿಸ್ತಾನವನ್ನೂ, ತಾಲಿಬಾನ್ ಉಗ್ರರನ್ನೂ ಬಳಸಿಕೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

  ಏಕೆಂದರೆ ಪಾಕಿಸ್ತಾನದ ಈಗಾಗಲೇ ಜಮ್ಮು-ಕಾಶ್ಮೀರದ ಕಡೆಗೆ ತಾಲಿಬಾನ್​ಗಳ ಗಮನ ಸೆಳೆಯುವಲ್ಲಿ ಉತ್ಸುಕವಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲು ಚೀನಾ ಮತ್ತು ಪಾಕಿಸ್ತಾನ ತಾಲಿಬಾನ್ ಜೊತೆ ಕೈಜೋಡಿಸಿದರೆ, ಇದರ ಪರಿಣಾಮದಿಂದಾಗಿ ಭಾರತದ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

  ಪಾಕಿಸ್ತಾನ ಸೇನೆಯ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಅಫ್ಘಾನಿಸ್ತಾನದ ತಾಲಿಬಾನ್‌ಗೆ ಈಗಾಗಲೇ ಸಾಕಷ್ಟು ಸಹಕಾರ ನೀಡಿದೆ. ಈ ಪ್ರಸಂಗಗಳೇ ತಾಲಿಬಾನ್ ಮತ್ತು ಪಾಕಿಸ್ತಾನದ ನಂಟಿನ ಬಗ್ಗೆ ವಿವರಿಸುತ್ತದೆ. ಆದರೆ, ತಾಲಿಬಾನ್ ಜೊತೆ ವ್ಯವಹರಿಸುವಾಗ ಭಾರತದ ಆಯ್ಕೆಗಳು ಪ್ರಾಯೋಗಿಕವಾಗಿ ಸೀಮಿತವಾಗಿಯೇ ಇರಲಿವೆ. ಏಕೆಂದರೆ ಭಾರತ - ಚೀನಾದಂತಲ್ಲದೆ - ಅನುಕೂಲಕ್ಕಾಗಿ 'ತತ್ವಗಳನ್ನು' ತ್ಯಾಗ ಮಾಡಲು ಭಾರತ ಎಂದಿಗೂ ಸಿದ್ಧವಿಲ್ಲ.

  ಇದನ್ನೂ ಓದಿ: Stop Hindi Imposition| ಹಿಂದಿ ದಿವಸ್; ಹಿಂದಿ ಹೇರಿಕೆ ವಿರೋಧಿಸಿ ಕನ್ನಡ ರಕ್ಷಣಾ ವೇದಿಕೆಯಿಂದ ಇಂದು ಟ್ವಿಟರ್​ ಅಭಿಯಾನ!

  ಭಾರತವು ತನ್ನ ರಾಯಭಾರ ಕಚೇರಿಯನ್ನು ಮತ್ತು ಅಫ್ಘಾನಿಸ್ತಾನದಲ್ಲಿರುವ ದೂತಾವಾಸವನ್ನು ಏಕೆ ಮುಚ್ಚಿತು ಎಂಬುದನ್ನು ಇದು ವಿವರಿಸುತ್ತದೆ. ಆದಾಗ್ಯೂ, 1996-2001ರ ಹಿಂದಿನ ತಾಲಿಬಾನ್ ನಿಯಮಕ್ಕಿಂತ ಈಗಿನ ತಾಲಿಬಾನ್ ಭಿನ್ನವಾಗಿದೆ ಎನ್ನಲಾಗಿದೆ. ಈಗಾಗಲೇ ತಾಲಿಬಾನ್ ಪಾಕಿಸ್ತಾನ ಮತ್ತು ಭಾರತದ ತಕರಾರಿನ ನಡುವೆ ತಾನು ಮೂಗು ತೂರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೂ, ಕಾಶ್ಮೀರಿ ಮುಸ್ಲಿಂಗಳ ಪರವಾಗಿ ಧ್ವನಿ ಎತ್ತುವ ಹಕ್ಕು ತಮಗಿದೆ ಎಂಬ ತಾಲಿಬಾನಿಗಳ ಪ್ರತಿಪಾದನೆ ಹಲವು ಅರ್ಥಗಳನ್ನು ಧ್ವನಿಸುತ್ತಿದ್ದು, ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ ಎಂದರೆ ತಪ್ಪಾಗಲಾರದು.
  Published by:MAshok Kumar
  First published: