Explained: ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು ಏಕೆ? ಮುಂದಿನ ಪಂಜಾಬ್ ಸಿಎಂ ಯಾರು?

ಯಾರು ಮುಂದಿನ ಸಿಎಂ ಎಂಬುದು ಗಾಂಧಿ ಕುಟುಂಬದ ಮೂವರು ಸದಸ್ಯರಿಗೆ ಮಾತ್ರವೇ ಗೊತ್ತಿರೋದು… ಆದರೆ ಸಿಖ್ ಪೇಟ ಇರುವ ನಾಯಕನೇ ಸಿಎಂ ಆಗುವುದು ನಿಶ್ಚಿತ. ಯಾಕೆಂದರೆ ಪಂಜಾಬ್​ನಲ್ಲಿ ಇದು ಬಿಟ್ಟರೆ ಬೇರೆ ಆಯ್ಕೆ ಕಷ್ಟ” ಎಂದು ಕಾಂಗ್ರೆಸ್ ನಾಯಕರು ನ್ಯೂಸ್ 18 ನೆಟ್ ವರ್ಕ್ ಜೊತೆ (News18 Network) ಮಾತನಾಡಿ ಸುಳಿವು ನೀಡಿದ್ದಾರೆ.

ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್

ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್

  • Share this:
ಅಮೃತಸರ್, ಸೆ. 18: ಬಹಳ ದಿನಗಳಿಂದ ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ (Punjab Congress Uni) ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ನಡುವಿನ ಜಟಾಪಟಿ ತಾರ್ಕಿಕ ಅಂತ್ಯ ತಲುಪಿದೆ. ಮೊದಲಿಗೆ ರಾಜೀನಾಮೆ ನೀಡಲು ನಿರಾಕರಿಸಿದ್ದ ಅಮರೀಂದರ್ ಸಿಂಗ್ ಅವರು ಶನಿವಾರ‌‌ ಕಾಂಗ್ರೆಸ್ ಹೈಕಮಾಂಡ್ (High Command) ಸೂಚನೆ ಮೇರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ‌. ಈಗ ಪಂಜಾಬಿನ ಹೊಸ ಮುಖ್ಯಮಂತ್ರಿ ಯಾರು ಎಂಬುದು ನಿರ್ಧಾರ ಆಗಬೇಕಿದೆ. 

ರಾಜೀನಾಮೆ ನೀಡಿದ ಬಳಿಕ ಅಮೃತಸರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು 'ರಾಜೀನಾಮೆ ನೀಡುತ್ತೇನೆ ಎಂದು ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಹೇಳಿದ್ದೇನೆ. ನನಗೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬ ಅನುಮಾನ ಇದೆ‌. ಅಲ್ಲದೆ ನನಗೆ ಅವಮಾನವಾಗುತ್ತಿದೆ. ಅವರು (ಹೈಕಮಾಂಡ್) ಯಾರನ್ನು ನಂಬಿದ್ದಾರೋ ಅವರನ್ನು (ಮುಖ್ಯಮಂತ್ರಿ) ಮಾಡಬಹುದು' ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಪಂಜಾಬ್ ಹೊಸ ಮುಖ್ಯಮಂತ್ರಿಯನ್ನು ಸ್ವೀಕರಿಸುತ್ತೀರಾ? ಎಂಬ‌ ಪ್ರಶ್ನೆಗೆ ಉತ್ತರಿಸಿದ ಅಮರೀಂದರ್ ಸಿಂಗ್, ' ಅವರು (ಪಕ್ಷದ ಹೈಕಮಾಂಡ್) ಯಾರ ಮೇಲೆ ನಂಬಿಕೆ ಇಟ್ಟಿದ್ದಾರೋ ಅವರನ್ನು (ಪಂಜಾಬ್ ಸಿಎಂ) ಮಾಡಬಹುದು' ಎಂದಷ್ಟೇ ಹೇಳಿದರು. ಆ ಮೂಲಕ 'ತಟಸ್ಥ' ನಿಲುವು ಪ್ರತಿಪಾದಿಸಿದರು.

ಸಿಧುಗೆ ಒಲಿಯುತ್ತಾ ಸಿಎಂ ಸ್ಥಾನ?

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿರುವುದರಿಂದ ಸಹಜವಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಂಜಾಬಿನ ನೂತನ ಮುಖ್ಯಮಂತ್ರಿ ಆಗಬಹುದು ಎಂದು ಹೇಳಲಾಗುತ್ತಿದೆ‌. ಆದರೆ ಗುಜರಾತಿನಲ್ಲಿ (Gujarat) ಬಿಜೆಪಿ (BJP) ಅಚ್ಚರಿಯ ರೀತಿಯಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದಂತೆ ಕಾಂಗ್ರೆಸ್ ಪಂಜಾಬಿನಲ್ಲಿ ಅಚ್ಚರಿಯಾಗಿ ಬೇರೆ ಯಾರನ್ನಾದರೂ ಮುಖ್ಯಮಂತ್ರಿ ಮಾಡಬಹುದು. ಅದು ನವಜೋತ್ ಸಿಂಗ್ ಸಿಧು ಸೂಚಿಸಿದ್ದ ಅಥವಾ ವಿರೋಧಿಸದ ಹೆಸರಾಗಬಹುದು. ಅಥವಾ ಚುನಾವಣೆ ಹತ್ತಿರ ಆಗುತ್ತಿರುವ ಹೊತ್ತಿನಲ್ಲಿ ರಿಸ್ಕ್ ಬೇಡ ಎಂದು ಸಿಧು ಅವರಿಗೆ ಮಣೆ ಹಾಕಬಹುದು ಎನ್ನಲಾಗುತ್ತಿದೆ‌.

“ಕ್ಯಾಪ್ಟನ್ ಕೈಯಿಂದ ರಾಜೀನಾಮೆ ಕೊಡಿಸುವುದು ಸದ್ಯದ ದೊಡ್ಡ ಕೆಲಸ. ಅವರು ಪ್ರತಿರೋಧ ತೋರದೇ ಕೆಳಗಿಳಿಯುವುದಿಲ್ಲ. ಯಾರು ಮುಂದಿನ ಸಿಎಂ ಎಂಬುದು ಗಾಂಧಿ ಕುಟುಂಬದ ಮೂವರು ಸದಸ್ಯರಿಗೆ ಮಾತ್ರವೇ ಗೊತ್ತಿರೋದು… ಆದರೆ ಸಿಖ್ ಪೇಟ ಇರುವ ನಾಯಕನೇ ಸಿಎಂ ಆಗುವುದು ನಿಶ್ಚಿತ. ಯಾಕೆಂದರೆ ಪಂಜಾಬ್​ನಲ್ಲಿ ಇದು ಬಿಟ್ಟರೆ ಬೇರೆ ಆಯ್ಕೆ ಕಷ್ಟ” ಎಂದು ಕಾಂಗ್ರೆಸ್ ನಾಯಕರು ನ್ಯೂಸ್ 18 ನೆಟ್ ವರ್ಕ್ ಜೊತೆ (News18 Network) ಮಾತನಾಡಿ ಸುಳಿವು ನೀಡಿದ್ದಾರೆ. ಈಗ ಅದೇ ರೀತಿ ಆಗಿದೆ‌.

ಇದನ್ನು ಓದಿ: Punjab Congress Crisis: ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ

ಸಿಖ್ ವ್ಯಕ್ತಿ ಇಲ್ಲದೇ ಪಂಜಾಬ್ ರಾಜಕೀಯದಲ್ಲಿ ಏಳಿಗೆ ಇಲ್ಲ ಎಂಬುದಕ್ಕೆ ಈ ನಾಯಕರು ಎಎಪಿ ಉದಾಹರಣೆ ಕೊಡುತ್ತಾರೆ. “ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸಿಖ್ ನಾಯಕರೊಬ್ಬರನ್ನು ಸಿಎಂ ಸ್ಥಾನಕ್ಕೆ ಬಿಂಬಿಸಲಿಲ್ಲ. ಇದರಿಂದ ಆ ಪಕ್ಷ ಸೋತಿತು. ಈಗ ಕೇಜ್ರಿವಾಲ್ ಅವರು ಸಿಎಂ ಅಭ್ಯರ್ಥಿಯನ್ನ ಪ್ರಕಟಿಸಲು ಮನಸು ಮಾಡಿದ್ದಾರೆ” ಎಂದು ಅವರು ಹೇಳುತ್ತಾರೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸ್ಥಾನಕ್ಕೆ ಯಾರು ಎಂದು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಮುಂದಿನ ಸಿಎಂ ಯಾರೇ ಆದರೂ ಮುಂಬರುವ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷಕ್ಕೆ ಕೆಟ್ಟ ಸುದ್ದಿಯಂತೂ ಇರುತ್ತದೆ ಎಂದು ನ್ಯೂಸ್18ಗೆ ಹೇಳಿದ ಮೊದಲ ನಾಯಕ, ಹಲವು ವಾರಗಳ ಕಾಲ ತಾನು ಎಐಸಿಸಿ ಅಥವಾ ಹೈಕಮಾಂಡ್ ಜೊತೆ ಸಂಪರ್ಕದಲ್ಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
Published by:HR Ramesh
First published: